Ashes: 116 ವರ್ಷಗಳಲ್ಲಿ ಇದೇ ಮೊದಲು!; ಎಂಸಿಜಿಯಲ್ಲಿ 20 ವಿಕೆಟ್ ಪತನ
Australia vs England: ಟಾಸ್ ಗೆದ್ದು ಬೌಲಿಂಗ್ ಆಯುಕೊಂಡ ಇಂಗ್ಲೆಂಡ್ ಘಾತಕ ಬೌಲಿಂಗ್ ಮೂಲಕ ಆಸ್ಟ್ರೇಲಿಯಾವನ್ನು 152ರನ್‌ಗಳಿಕೆ ಕಟ್ಟಿಹಾಕಿದರು. ಆಸೀಸ್ ಬೌಲರ್‌ಗಳು ಕೂಡ ತಿರುಗಿ ಬಿದ್ದರು. ಆಂಗ್ಲರನ್ನು 110 ರನ್‌ಗೆ ಕೆಡವಿ 42 ರನ್ ಮುನ್ನಡೆ ಸಾಧಿಸಿದರು.
Australia Team -
ಮೆಲ್ಬರ್ನ್, ಡಿ.26: ಶುಕ್ರವಾರ ಇಲ್ಲಿ ಆರಂಭವಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್(Australia vs England) ನಡುವಣ ಆ್ಯಷಸ್(Ashes) ಟೆಸ್ಟ್‌ನ 4ನೇ ಪಂದ್ಯದ ಮೊದಲ ದಿನವೇ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಮೊಲ ದಿನವೇ 20 ವಿಕೆಟ್‌ಗಳು ಉರುಳಿವೆ. 1909 ರ ನಂತರ ಮೊದಲ ಬಾರಿಗೆ, ಆಶಸ್ ಟೆಸ್ಟ್‌ನ ಮೊದಲ ದಿನದಂದು 20 ಅಥವಾ ಹೆಚ್ಚಿನ ವಿಕೆಟ್‌ಗಳು ಪತನಗೊಂಡವು.
ಟಾಸ್ ಗೆದ್ದು ಬೌಲಿಂಗ್ ಆಯುಕೊಂಡ ಇಂಗ್ಲೆಂಡ್ ಘಾತಕ ಬೌಲಿಂಗ್ ಮೂಲಕ ಆಸ್ಟ್ರೇಲಿಯಾವನ್ನು 152ರನ್‌ಗಳಿಕೆ ಕಟ್ಟಿಹಾಕಿದರು. ಆಸೀಸ್ ಬೌಲರ್‌ಗಳು ಕೂಡ ತಿರುಗಿ ಬಿದ್ದರು. ಆಂಗ್ಲರನ್ನು 110 ರನ್‌ಗೆ ಕೆಡವಿ 42 ರನ್ ಮುನ್ನಡೆ ಸಾಧಿಸಿದರು. ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ದಿನದಾಟದ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 4 ರನ್ ಕಲೆಹಾಕಿ ಒಟ್ಟು 46 ರನ್ ಮುನ್ನಡೆಯಲ್ಲಿದೆ.
ಮೊದಲ ದಿನ ದಾಖಲೆಯ 93,442 ಅಭಿಮಾನಿಗಳು ಹಾಜರಾಗಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ದಿನ ಅತಿಹೆಚ್ಚು ಪ್ರೇಕ್ಷಕರು ಭಾಗವಹಿಸಿದ ದಾಖಲೆ ನಿರ್ಮಾಣವಾಯಿತು. 2015ರಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೆಲ್ಬರ್ನ್ ಮೈದಾನದಲ್ಲೆ 93,013 ಪ್ರೇಕ್ಷಕರು ಭಾಗವಹಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.
ಆಸೀಸ್ vs ಇಂಗ್ಲೆಂಡ್ ಟೆಸ್ಟ್ ಪಂದ್ಯಗಳಲ್ಲಿ ಮೊದಲ ದಿನದಂದು ಅತಿ ಹೆಚ್ಚು ವಿಕೆಟ್‌ಗಳು
25 - ಮೆಲ್ಬೋರ್ನ್, 1901/02
22 - ದಿ ಓವಲ್, 1890
20 - ದಿ ಓವಲ್, 1882
20 - ಮೆಲ್ಬೋರ್ನ್, 1894/95
20 - ಓಲ್ಡ್ ಟ್ರಾಫರ್ಡ್, 1909
20 - ಮೆಲ್ಬೋರ್ನ್, 2025/26
19 - ಪರ್ತ್, 2025/26
ಇದನ್ನೂ ಓದಿ ರಾಷ್ಟ್ರೀಯ ಬಾಲ ಪುರಸ್ಕಾರ ಗೌರವ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಮೊದಲು ಬ್ಯಾಟಿಂಗ್ ನೆಡೆಸಿದ ಆಸೀಸ್‌ಗೆ ಯುವ ಬೌಲರ್ ಜೋಶ್ ಟಂಗ್ ಘಾತಕ ಬೌಲಿಂಗ್ ಮೂಲಕ ಇನ್ನಿಲ್ಲದಂತೆ ಕಾಡಿದರು. ಅವರ ಬೌಲಿಂಗ್ ದಾಳಿಗೆ ಬೆದರಿದ ಆಸೀಸ್ ಬ್ಯಾಟರ್‌ಗಳು ತರಗೆಲೆಯಂತೆ ಉದುರಿದರು. ಕೇವಲ 45 ರನ್ ವೆಚ್ಚದಲ್ಲಿ ಜೋಶ್ ಟಂಗ್ 5 ಪ್ರಮುಖ ವಿಕೆಟ್ ಬೇಟೆಯಾಡಿದರು.
ಸಣ್ಣ ಮೊತ್ತವನ್ನು ಹಿಂಬಾಲಿಸಿದ ಆಂಗ್ಲರಿಗೆ ಆಸೀಸ್ ಬೌಲರ್‌ಗಳು ಕೂಡ ಬಲವಾದ ಪೆಟ್ಟು ನೀಡಿದರು. ಆರಂಭಿಕ ನಾಲ್ವರು ಬ್ಯಾಟರ್‌ಗಳನ್ನು ಒಂದಂಕಿಗೆ ಪೆವಿಲಿಯನ್‌ಗೆ ಅಟ್ಟಿದರು. ಆಸೀಸ್ ಬೌಲಿಂಗ್ ಎಷ್ಟರ ಮಟ್ಟಿಗೆ ಘಾತಕವಾಗಿತ್ತೆಂದರೆ 16 ರನ್ ಗಳಿಸುವಲ್ಲಷ್ಟರಲ್ಲಿ ಆಂಗ್ಲರ 4 ವಿಕೆಟ್ ಉದುರಿಹೋಗಿತ್ತು. ಹ್ಯಾರಿ ಬ್ರೂಕ್(48) ಮತ್ತು ಗಸ್ ಅಟ್ಕಿನ್ಸನ್(28) ಸಣ್ಣ ಬ್ಯಾಟಿಂಗ್ ಹೋರಾಟದಿಂದ ತಂಡ ಕನಿಷ್ಠ 100ರ ಗಡಿ ದಾಟಿತು. ಆಸೀಸ್ ಪರ ವೇಗಿ ಮೈಕೆಲ್ ನೆಸರ್ 4 ವಿಎಟ್ ಕಿತ್ತರೆ, ಸ್ಕಾಟ್ ಬೋಲ್ಯಾಂಡ್(3) ಮತ್ತು ಮಿಚೆಲ್ ಸ್ಟಾರ್ಕ್(2) ವಿಕೆಟ್ ಪಡೆದರು.