ನವದೆಹಲಿ: ಭಾರತದ (Indian Cricket Team) ಟೆಸ್ಟ್ ವಿಶೇಷ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ (Cheteshwar Pujara) ಅವರು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಆ ಮೂಲಕ 14 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿ ಜೀವನ ಸೇರಿದಂತೆ ಎರಡು ದಶಕಗಳ ತಮ್ಮ ವೃತ್ತಿಪರ ಜೀವನಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಟೆಸ್ಟ್ ವಿಶೇಷ ಬ್ಯಾಟ್ಸ್‌ಮನ್ ಆಗಿ ಭಾರತ ತಂಡದ ಪರ 104 ಪಂದ್ಯಗಳನ್ನು ಆಡಿರುವ ಅವರು ಐದು ಏಕದಿನ ಪಂದ್ಯಗಳನ್ನು ಕೂಡ ಆಡಿದ್ದಾರೆ. ಅಂದ ಹಾಗೆ ಇತ್ತೀಚೆಗೆ ಅವರು ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ನಾಲ್ವರು ಕಠಿಣ ವೇಗಿಗಳನ್ನು ಹೆಸರಿಸಿದ್ದಾರೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡದೇ ಇದ್ದರೂ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ದೀರ್ಘಾವಧಿ ಆಡಿದ್ದಾರೆ. ಅವರು 104 ಪಂದ್ಯಗಳಿಂದ 43.60ರ ಸರಾಸರಿಯಲ್ಲಿ 7195 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 19 ಶತಕಗಳನ್ನು ಬಾರಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಮಾತನಾಡಿದ ಚೇತೇಶ್ವರ್ ಪೂಜಾರ, ತಮ್ಮ ವೃತ್ತಿ ಜೀವನದಲ್ಲಿ ತಾವು ಎದುರಿಸಿದ ನಾಲ್ವರು ಕಠಿಣ ಬೌಲರ್‌ಗಳನ್ನು ಆರಿಸಿದ್ದಾರೆ. ಇವರು ಆಯ್ಕೆ ಮಾಡಿದ ಬೌಲರ್‌ಗಳೆಲ್ಲರೂ ವೇಗದ ಬೌಲರ್‌ಗಳಾಗಿದ್ದಾರೆ ಆದರೆ, ಏಕೈಕ ಸ್ಪಿನ್ನರ್ ಅನ್ನು ಅವರು ಆರಿಸಿಲ್ಲ. ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್, ಮಾರ್ನೆ ಮಾರ್ಕೆಲ್ ಹಾಗೂ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಇಂಗ್ಲೆಂಡ್ ಮಾಜಿ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನು ಆರಿಸಿದ್ದಾರೆ.
Asia Cup 2025: ಏಷ್ಯಾಕಪ್‌ಗೆ ಪ್ರಕಟಗೊಂಡ ತಂಡಗಳ ಪಟ್ಟಿ ಹೀಗಿದೆ
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ, "ತಮ್ಮ ವೃತ್ತಿ ಜೀವನದಲ್ಲಿ ಡೇಲ್ ಸ್ಟೇನ್, ಮಾರ್ನೆ ಮಾರ್ಕೆಲ್, ಜೇಮ್ಸ್ ಆಂಡರ್ಸನ್ ಹಾಗೂ ಪ್ಯಾಟ್ ಕಮಿನ್ಸ್ ಅವರ ಎದುರು ಅತ್ಯಂತ ಕಠಿಣ ಸವಾಲನ್ನು ಎದುರಿಸಿದ್ದೇನೆ," ಎಂದು ಚೇತೇಶ್ವರ್ ಪೂಜಾರ ತಿಳಿಸಿದ್ದಾರೆ.
ನೀವು ಆಡಿದ ನಾಯಕರ ಪೈಕಿ, ನಿಮಗೆ ಅನಿಸಿದ ಅತ್ಯುತ್ತಮ ನಾಯಕ ಯಾರೆಂದು ಇದೇ ವೇಳೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಚೇತೇಶ್ವರ್ ಪೂಜಾರ, ತಾವು ಆಡಿದ ಎಲ್ಲಾ ನಾಯಕರನ್ನು ಆರಿಸಿದ್ದಾರೆ.
"ಇದರಲ್ಲಿ ಒಬ್ಬರನ್ನು ಆರಿಸುವುದು ತುಂಬಾ ಕಷ್ಟ. ಎಂಎಸ್ ಧೋನಿ ಅವರ ನಾಯಕತ್ವದ ಅಡಿಯಲ್ಲಿ ನನ್ನ ವೃತ್ತಿ ಜೀವನ ಆರಂಭವಾಗಿತ್ತು. ನಂತರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅಡಿಯಲ್ಲಿಯೂ ಆಡಿದ್ದೇನೆ. ಇನ್ನು ಸೌರವ್ ಗಂಗೂಲಿ ಅವರ ಅಡಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಅವಕಾಶ ಸಿಕ್ಕಿತ್ತು. 2016-17ರ ಸಾಲಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಅವರ ನಾಯಕತ್ವದಲ್ಲಿಯೂ ಆಡಿದ್ದೇನೆ. ಪ್ರತಿಯೊಬ್ಬ ನಾಯಕರು ಅವರದೇ ಆದ ಸಾಮರ್ಥ್ಯವನ್ನು ಹೊಂದಿದ್ದರು ಹಾಗೂ ಈ ಎಲ್ಲರ ನಾಯಕತ್ವದ ಅಡಿಯಲ್ಲಿ ಆಡುವುದನ್ನು ನಾನು ಆನಂದಿಸಿದ್ದೇನೆ," ಚೇತೇಶ್ವರ್ ಪೂಜಾರ ಹೇಳಿದ್ದಾರೆ.
Asia Cup 2025: ʻಜಸ್‌ಪ್ರೀತ್ ಬುಮ್ರಾ ಎಲ್ಲಾ ಪಂದ್ಯಗಳನ್ನು ಆಡಲ್ಲʼ-ಎಬಿಡಿ ಅಚ್ಚರಿ ಹೇಳಿಕೆ!
ಆಸ್ಟ್ರೇಲಿಯಾ ವಿರುದ್ದ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತದ ಪರ ಕೊನೆಯ ಟೆಸ್ಟ್ ಪಂದ್ಯವನ್ನು ಚೇತೇಶ್ವರ್ ಪೂಜಾರ ಆಡಿದ್ದರು. ಅಂದಿನಿಂದ ದೇಶಿ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಿದ್ದಾರೆ. ಕಳೆದ ವರ್ಷ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಚೇತೇಶ್ವರ್ ಪೂಜಾರ, ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಪೂಜಾರ ವಿಶ್ವಾಸವನ್ನು ಕಳೆದುಕೊಂಡರು.