ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೋಹಿತ್‌ ಶರ್ಮಾ ವಿದಾಯ ಹೇಳುವ ಅಗತ್ಯವಿಲ್ಲ, ಅವರು ಅತ್ಯುತ್ತಮ ನಾಯಕ: ಎಬಿಡಿ!

ABD Praised on Rohit Sharma: ವಿರಾಟ್ ಕೊಹ್ಲಿಯ ಆಪ್ತ ಮಿತ್ರ ಎಂದು ಪರಿಗಣಿಸಲಾದ ಎಬಿ ಡಿವಿಲಿಯರ್ಸ್, ರೋಹಿತ್ ಅವರನ್ನು ಹೊಗಳಿದರು. ರೋಹಿತ್ ಶರ್ಮಾ ನಿವೃತ್ತಿ ಹೊಂದುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಅವರು ಆಟದಿಂದ ನಿರ್ಗಮಿಸಿದಾಗ ಅವರು ಇತಿಹಾಸದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗುತ್ತಾರೆ.

2014ರ ಬಳಿಕ ಇದೇ ಮೊದಲ ಬಾರಿ ರೋಹಿತ್‌ ಶರ್ಮಾಗೆ ಎಬಿಡಿ ವಿಶೇಷ ಸಂದೇಶ!

ರೋಹಿತ್‌ ಶರ್ಮಾಗೆ ಎಬಿಡಿ ಮೆಚ್ಚುಗೆ.

Profile Ramesh Kote Mar 13, 2025 5:00 PM

ನವದೆಹಲಿ: ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit sharma) ಮತ್ತು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ (AB De Villiers) 2014ರಲ್ಲಿ ಮುಖಾಮುಖಿಯಾಗಿದ್ದರು. ಆ ಸಮಯದಲ್ಲಿ, ಹಿಟ್‌ಮ್ಯಾನ್ ಒಂದು ಕಾಮೆಂಟ್‌ಗೆ ದಕ್ಷಿಣ ಆಫ್ರಿಕಾದ ಶ್ರೇಷ್ಠ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅಸಮಾಧಾನದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಇದಾದ ನಂತರ ಅವರು ಪರಸ್ಪರ ಮಾತನಾಡುವುದು ತುಂಬಾ ಕಡಿಮೆ. ಆದರೆ ವಿರಾಟ್ ಕೊಹ್ಲಿ ಅವರ ಆಪ್ತ ಸ್ನೇಹಿತ ಎಬಿಡಿ, ರೋಹಿತ್ ಶರ್ಮಾ ನಿವೃತ್ತಿ ಹೊಂದುವ ಅಗತ್ಯವಿಲ್ಲ ಮತ್ತು ಅವರು ಏಕದಿನ ಕ್ರಿಕೆಟ್‌ನ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗುತ್ತಾರೆ ಎಂದು ಇತ್ತೀಚೆಗೆ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ನಂತರ ರೋಹಿತ್ ಶರ್ಮಾ ನಿವೃತ್ತಿ ಹೊಂದುವ ಬಗ್ಗೆ ಬಲವಾದ ಊಹಾಪೋಹಗಳಿದ್ದವು, ಆದರೆ 37ನೇ ವಯಸ್ಸಿನ ರೋಹಿತ್ ಶರ್ಮಾ ಭಾರತ ತಂಡಕ್ಕೆ ಮೂರನೇ ಬಾರಿ ಪ್ರಶಸ್ತಿ ತಂದುಕೊಟ್ಟ ನಂತರ ಈ ಊಹಾಪೋಹಗಳನ್ನು ತಳ್ಳಿಹಾಕಿದರು. "ಇತರ ನಾಯಕರಿಗೆ ಹೋಲಿಸಿದರೆ ರೋಹಿತ್ ಅವರ ಗೆಲುವಿನ ಶೇಕಡಾವಾರು ಪ್ರಮಾಣವನ್ನು ನೋಡಿ, ಇದು ಸುಮಾರು 74 ಪ್ರತಿಶತದಷ್ಟಿದೆ, ಇದು ಹಿಂದಿನ ಇತರ ನಾಯಕರಿಗಿಂತ ಉತ್ತಮವಾಗಿದೆ, ಎಂದ ಡಿವಿಲಿಯರ್ಸ್ "ಅವರು ಆಟ ಮುಂದುವರಿಸಿದರೆ, ಅವರು ಸಾರ್ವಕಾಲಿಕ ಅತ್ಯುತ್ತಮ ಏಕದಿನ ನಾಯಕರಲ್ಲಿ ಒಬ್ಬರಾಗುತ್ತಾರೆ," ಎಂದು ದೊಡ್ಡ ಭವಿಷ್ಯ ನುಡಿದಿದ್ದಾರೆ.

ರೋಹಿತ್‌ ಶರ್ಮಾ ಒಡಿಐ ಕ್ರಿಕೆಟ್‌ ಭವಿಷ್ಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ರಿಕಿ ಪಾಂಟಿಂಗ್‌!

"ಅವರು ಏಕೆ ನಿವೃತ್ತಿ ತೆಗೆದುಕೊಳ್ಳಬೇಕು? ಅವರು ನಾಯಕನಾಗಿ ಮಾತ್ರವಲ್ಲದೆ ಬ್ಯಾಟ್ಸ್‌ಮನ್ ಆಗಿಯೂ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಅವರು 76 ರನ್ ಗಳಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಿದರು ಮತ್ತು ಗೆಲುವಿಗೆ ಅಡಿಪಾಯ ಹಾಕಿದರು. ಒತ್ತಡ ಉತ್ತುಂಗದಲ್ಲಿದ್ದಾಗ ಅವರೇ ಮುಂದೆ ನಿಂತು ಮುನ್ನಡೆಸಿದ್ದಾರೆ. ರೋಹಿತ್ ಶರ್ಮಾ ನಿವೃತ್ತಿ ಹೊಂದುವ ಅಗತ್ಯವಿಲ್ಲ. ಅವರಿಗೆ ಯಾವುದೇ ಟೀಕೆಗಳನ್ನು ಕೇಳುವ ಅಗತ್ಯವಿಲ್ಲ," ಎಂದು ಆರ್‌ಸಿಬಿ ದಿಗ್ಗಜ ತಿಳಿಸಿದ್ದಾರೆ.

"ರೋಹಿತ್‌ ಶರ್ಮಾ ಅವರ ದಾಖಲೆ ತಾನೇ ಹೇಳುತ್ತದೆ. ಅವರು ತಮ್ಮ ಆಟವನ್ನೂ ಬದಲಾಯಿಸಿಕೊಂಡಿದ್ದಾರೆ. ಆರಂಭಿಕ ಆಟಗಾರನಾಗಿ ಪವರ್‌ಪ್ಲೇನಲ್ಲಿ ಅವರ ಸ್ಟ್ರೈಕ್ ರೇಟ್ ಅಷ್ಟೊಂದು ಉತ್ತಮವಾಗಿರಲಿಲ್ಲ. ಆದರೆ 2022 ರಿಂದ, ಅದು ಮೊದಲ ಪವರ್‌ಪ್ಲೇನಲ್ಲಿ 115 ಕ್ಕೆ ಏರಿದೆ. ಇದು ಶ್ರೇಷ್ಠ ಮತ್ತು ಒಳ್ಳೆಯದರ ನಡುವಿನ ವ್ಯತ್ಯಾಸ," ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಶ್ಲಾಘಿಸಿದ್ದಾರೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ 2027ರ ವಿಶ್ವಕಪ್‌ ಆಡಬೇಕೆಂದ ಯೋಗರಾಜ್‌ ಸಿಂಗ್‌!

2014ರಲ್ಲಿ ಮುಖಾಮುಖಿಯಾಗಿದ್ದ ರೋಹಿತ್‌-ಎಬಿಡಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ, 2014 ರ ಟಿ20 ವಿಶ್ವಕಪ್‌ನ ಫೈನಲ್ ತಲುಪಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 29 ರನ್ ಗಳಿಸಿದ್ದರಿಂದ ಭಾರತ 6 ವಿಕೆಟ್‌ಗಳಿಂದ ಸೋತಿತ್ತು. ಈ ಬಗ್ಗೆ ಎಬಿ ಡಿವಿಲಿಯರ್ಸ್ ಟ್ವಿಟರ್‌ನಲ್ಲಿ ರೋಹಿತ್‌ ಶರ್ಮಾ ಅವರನ್ನು ಟೀಕಿಸಿದ್ದರು. "ನಾನು ರೋಹಿತ್ ಶರ್ಮಾ ಸ್ಥಾನದಲ್ಲಿದ್ದರೆ, ನಾನು ಶತಕ ಗಳಿಸುತ್ತಿದ್ದೆ," ಎಂದು ಟ್ವೀಟ್‌ ಮಾಡಿದ್ದರು. ಇದಕ್ಕೆ ಅಂದು ಪ್ರತಿಕ್ರಿಯಿಸಿದ್ದ ರೋಹಿತ್‌ ಶರ್ಮಾ, "ಇದು ಎಂದಿಗೂ ಆಗುವುದಿಲ್ಲ, ಏಕೆಂದರೆ ನೀವು ಎಂದಿಗೂ ವಿಶ್ವಕಪ್ ಫೈನಲ್ ಆಡುವುದಿಲ್ಲ," ಎಂದು ಎಬಿಡಿಗೆ ಟಾಂಗ್‌ ಕೊಟ್ಟಿದ್ದರು. ಅಂದು ಇವರಿಬ್ಬರ ಟ್ವೀಟಾಪಟಿ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿತ್ತು.