ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ವಿರಾಟ್‌ ಕೊಹ್ಲಿ ಅಲ್ಲ! ಆರ್‌ಸಿಬಿಗೆ ಅತ್ಯಂತ ಮೌಲ್ಯಯುತ ಆಟಗಾರನನ್ನು ಹೆಸರಿಸಿದ ಡೇಲ್‌ ಸ್ಟೇನ್‌!

ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೀರುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಅವರನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಡೇಲ್‌ ಸ್ಟೇನ್‌ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಭುವನೇಶ್ವರ್‌ ಆರ್‌ಸಿಬಿಗೆ ಅತ್ಯಂತ ಮೌಲ್ಯಯುತ ಆಟಗಾರ ಎಂದಿದ್ದಾರೆ.

ಭುವನೇಶ್ವರ್‌ ಆರ್‌ಸಿಬಿ ಎಂವಿಪಿ ಆಟಗಾರ ಎಂದ ಡೇಲ್‌ ಸ್ಟೇನ್‌.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ (Bhuvneshwar Kumar) ಅತ್ಯಂತ ಮೌಲ್ಯಯುತ ಆಟಗಾರ ಎಂದು ದಕ್ಷಿಣ ಆಫ್ರಿಕಾ ದಿಗ್ಗಜ ಡೇಲ್‌ ಸ್ಟೇನ್‌ (Dale Steyn) ಹೇಳಿದ್ದಾರೆ. ಆ ಮೂಲಕ 18 ವರ್ಷಗಳ ಕಾಲ ನಿರಂತರವಾಗಿ ಆರ್‌ಸಿಬಿ ಪರ ಆಡುತ್ತಾ ಬಂದಿರುವ ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನು ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಕೊಹ್ಲಿ ಈ ಆವೃತ್ತಿಯಲ್ಲಿ ಆಡಿದ 13 ಇನಿಂಗ್ಸ್‌ಗಳಿಂದ 164.74ರ ಸ್ಟ್ರೈಕ್‌ ರೇಟ್‌ನಲ್ಲಿ 542 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಇವರ ಜೊತೆಗೆ ದೇವದತ್‌ ಪಡಿಕ್ಕಲ್‌ ಅವರು 12 ಇನಿಂಗ್ಸ್‌ಗಳಿಂದ 173.11ರ ಸ್ಟ್ರೈಕ್‌ ರೇಟ್‌ನಲ್ಲಿ 412 ರನ್‌ ಸಿಡಿಸಿದ್ದಾರೆ.

ಇವರ ಜೊತೆಗೆ ವೇಗಿ ಭುವನೇಶ್ವರ್‌ ಕುಮಾರ್‌ ಕೂಡ ಬೌಲಿಂಗ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದಾರೆ. ಭುವನೇಶ್ವರ್‌ ಕುಮಾರ್‌ ಇಲ್ಲಿಯವರೆಗೂ ಆಡಿದ 13 ಪಂದ್ಯಗಳಿಂದ 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಭುವಿ ಅಗ್ರ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ಭುವನೇಶ್ವರ್‌ ಕುಮಾರ್‌ ಅವರನ್ನು ಶ್ಲಾಘಿಸಿದ ಡೇಲ್‌ ಸ್ಟೇನ್‌, ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬಲ್ಲ ಆಟಗಾರ ಎಂದಿದ್ದಾರೆ. ಹೆಚ್ಚಿನ ಸಾಧನೆ ಮಾಡಿದರೂ ಹೆಚ್ಚು ಪ್ರಶಂಸೆಗೆ ಒಳಗಾಗದ ಆಟಗಾರ ಎಂದು ದಕ್ಷಿಣ ಆಫ್ರಿಕಾ ದಿಗ್ಗಜ ಹೇಳಿದ್ದಾರೆ.

IPL 2026: ʻಆರ್‌ಸಿಬಿ ನನಗೆ ತವರು ತಂಡದ ರೀತಿ ಭಾಸವಾಗುತ್ತಿದೆʼ-ಭಾವುಕರಾದ ವೆಂಕಟೇಶ್‌ ಅಯ್ಯರ್‌!

“ಸೀಸನ್ ಅಂತ್ಯದ ವೇಳೆಗೆ ನೋಡಿದರೆ ಇದು ಅತ್ಯಂತ ಆಸಕ್ತಿದಾಯಕ ಸಂಗತಿಯಾಗುತ್ತದೆ. ಬಹುಶಃ ಅವರು ಪರ್ಪಲ್ ಕ್ಯಾಪ್ ಗೆಲ್ಲದೇ ಇರಬಹುದು, ಆದರೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆರ್‌ಸಿಬಿ ಈ ಬಾರಿ ಐಪಿಎಲ್ ಟ್ರೋಫಿ ಗೆದ್ದರೆ, ನಂತರ ಅವರು ಹಿಂತಿರುಗಿ ನೋಡಿದಾಗ ‘ನಮ್ಮ ತಂಡದ ಎಂವಿಪಿ ಈ ಆಟಗಾರನೇ’ ಎಂದು ಹೇಳುತ್ತಾರೆ. ಯಾಕೆಂದರೆ ಮೈದಾನದಲ್ಲಿ ಅವರು ಮಾಡುವ ಪ್ರತಿಯೊಂದು ಕೆಲಸವೂ ಅಸಾಧಾರಣವಾಗಿದೆ. ಪ್ರತಿಯೊಬ್ಬ ಆಟಗಾರರೂ ಇಂತಹ ಆಟವನ್ನು ಆಡಲು ಕನಸು ಕಾಣುತ್ತಾರೆ. ಮೈದಾನಕ್ಕಿಳಿದು ವಿಕೆಟ್ ಪಡೆಯುವುದು, ನಂತರ ಬ್ಯಾಟಿಂಗ್‌ಗೆ ಬಂದು ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಡುವುದು —ಅದು ನಿಜಕ್ಕೂ ವಿಶೇಷ,” ಎಂದು ಎಬಿ ಡಿ ವಿಲಿಯರ್ಸ್‌ ಅವರ ಯುಟ್ಯೂಬ್‌ ಚಾನೆಲ್‌ನಲ್ಲಿ ಡೇಲ್‌ ಸ್ಟೇನ್‌ ಶ್ಲಾಘಿಸಿದ್ದಾರೆ.

“ಅವರು ನಿಜವಾದ ಕ್ರಿಕೆಟ್ ಆಟಗಾರ. ಅತ್ಯುತ್ತಮ ಕ್ರಿಕೆಟಿಗರಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಬಗ್ಗೆ ಹೆಚ್ಚು ಚರ್ಚೆಯಾಗುವುದಿಲ್ಲ, ಯಾಕೆಂದರೆ ಅವರಲ್ಲಿ ಯಾವುದೇ ಅತಿರಂಜಿತ ಶೈಲಿ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚಟುವಟಿಕೆ ಮಾಡುವುದಿಲ್ಲ, ಮೈದಾನದಲ್ಲಿ ಗಮನ ಸೆಳೆಯುವ ವಿಶೇಷ ನಾಟಕೀಯತೆ ಕೂಡ ಇಲ್ಲ.

IPL 2026: '49/3'ರ ಪೋಸ್ಟ್‌ ಹಾಕಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಟ್ರೋಲ್‌ ಮಾಡಿದ ಆರ್‌ಸಿಬಿ!

ಆದರೆ ಅವರು ನಿರಂತರವಾಗಿ ಸರಿಯಾದ ಲೆನ್ತ್‌ನಲ್ಲಿ ಚೆಂಡು ಹಾಕುತ್ತಾರೆ. ಚೆಂಡಿನಿಂದ ಸ್ವಲ್ಪ ಮಟ್ಟಿನ ಚಲನವಲನ ಸೃಷ್ಟಿಸುತ್ತಾರೆ. ಒಂದೊಮ್ಮೆ ಈ ದಿಕ್ಕಿಗೆ ಸ್ವಿಂಗ್ ಮಾಡುತ್ತಾರೆ, ಮತ್ತೊಮ್ಮೆ ಆ ದಿಕ್ಕಿಗೆ ತಿರುಗಿಸುತ್ತಾರೆ. ಅದೇ ಅವರ ದೊಡ್ಡ ಶಕ್ತಿ,” ಎಂದು ಆಫ್ರಿಕಾ ದಿಗ್ಗಜ ಹೇಳಿದ್ದಾರೆ.

ಭುವಿ ಚಾಣಾಕ್ಷ ಬ್ಯಾಟರ್‌, ಫೀಲ್ಡರ್‌ ಎಂದ ಸ್ಟೇನ್‌

ಭುವನೇಶ್ವರ್‌ ಕುಮಾರ್‌ ಕೇವಲ ಅದ್ಭುತ ವೇಗದ ಬೌಲರ್ ಮಾತ್ರವಲ್ಲ, ವಿಶ್ವಾಸಾರ್ಹ ಫೀಲ್ಡರ್ ಹಾಗೂ ಚಾಣಾಕ್ಷ ಬ್ಯಾಟರ್ ಕೂಡ ಹೌದು. ಪಂದ್ಯ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಆಟವಾಡುವ ಸಾಮರ್ಥ್ಯವೂ ಭುವನೇಶ್ವರ್ ಅವರ ದೊಡ್ಡ ಬಲವಾಗಿದೆ ಎಂದು ಸ್ಟೇನ್ ಹೇಳಿದ್ದಾರೆ.

IPL 2026: ʻನಮ್ಮ ದೊಡ್ಡ ಸಿಂಹಗಳುʼ-ಪ್ಲೇಆಫ್ಸ್‌ಗೇರಿದ ಆರ್‌ಸಿಬಿಗೆ ವಿಜಯ್‌ ಮಲ್ಯ ಭಾವನಾತ್ಮಕ ಸಂದೇಶ!

“ಅವರು ನಿಜಕ್ಕೂ ಸಣ್ಣ ಸಣ್ಣ ಕೌಶಲಗಳಲ್ಲಿ ನಿಪುಣ ಆಟಗಾರ. ಆದರೆ ಮೈದಾನದಲ್ಲಿ ನೋಡಿದರೆ ಅವರು ಕ್ಯಾಚ್‌ಗಳನ್ನು ಬಿಡುವುದಿಲ್ಲ, ಚೆಂಡನ್ನು ತಪ್ಪಾಗಿ ಹ್ಯಾಂಡಲ್ ಮಾಡುವುದಿಲ್ಲ. ಬ್ಯಾಟಿಂಗ್‌ಗೆ ಬಂದಾಗಲೂ ಅವರು ಬಹಳ ಬುದ್ಧಿವಂತ ಆಟಗಾರ. ಅವರು ದೊಡ್ಡ ಸಿಕ್ಸರ್ ಹೊಡೆಯುವ ಶೈಲಿಯ ಬ್ಯಾಟರ್ ಅಲ್ಲ. ಸೂರ್ಯಕುಮಾರ್‌ ಯಾದವ್‌ ರೀತಿಯಲ್ಲಿ ಎಲ್ಲ ದಿಕ್ಕಿಗೂ ಹೊಡೆದು ಆಡುವ ಆಟಗಾರನೂ ಅಲ್ಲ. ಅವರು ಕೆಳಕ್ರಮಾಂಕದ ಆಲ್‌ರೌಂಡರ್ ಆಗಿದ್ದು, ಪಂದ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಚೆಂಡು ಎಲ್ಲಿಗೆ ಬೀಳಲಿದೆ ಎಂಬುದನ್ನು ಮುಂಚಿತವಾಗಿಯೇ ಅರ್ಥಮಾಡಿಕೊಳ್ಳುವಷ್ಟು ಚಾಣಾಕ್ಷತೆಯೂ ಅವರಲ್ಲಿದೆ. ಅದೇ ಅವರು ಎಷ್ಟು ಬುದ್ಧಿವಂತ ಕ್ರಿಕೆಟಿಗನಾಗಿದ್ದಾರೆ ಎಂಬುದನ್ನು ತೋರಿಸುತ್ತದೆ,” ಎಂದು ಡೇಲ್‌ ಸ್ಟೇನ್‌ ತಿಳಿಸಿದ್ದಾರೆ.