16ನೇ ವಯಸ್ಸಿನಲ್ಲಿ ಡಬ್ಲ್ಯುಪಿಎಲ್‌ಗೆ ಪದಾರ್ಪಣೆ ಮಾಡಿ ವಿಶೇಷ ದಾಖಲೆ ಬರೆದ ದೀಯಾ ಯಾದವ್!
Deeya Yadav Creates History: 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ 16ನೇ ವಯಸ್ಸಿನ ದೀಯಾ ಯಾದವ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಡಬ್ಲ್ಯುಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ.
ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದ ದೀಯಾ ಯಾದವ್. -
ನವದೆಹಲಿ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ (MIW vs DCW) ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ದೀಯಾ ಯಾದವ್ (Deeya Yadav) ಅವರು ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ (WPL 2026) ಪದಾರ್ಪಣೆ ಮಾಡಿದ್ದಾರೆ. ಆ ಮೂಲಕ ಡಬ್ಲ್ಯುಪಿಎಲ್ ಟೂರ್ನಿಯ ಇತಿಹಾಸದಲ್ಲಿ ಅವರು ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅವರು ಈ ಟೂರ್ನಿಯ ಮೊದಲ ಹಂತದಲ್ಲಿ ಪದಾರ್ಪಣೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಎರಡನೇ ಲೆಗ್‌ನ ಮೊದಲನೇ ಪಂದ್ಯದಲ್ಲಿಯೇ ಅವರು ಚೊಚ್ಚಲ ಪಂದ್ಯವನ್ನು ಆಡಲು ಅವಕಾಶ ಲಭಿಸಿತು.
ದೀಯಾ ಯಾದವ್ ಅವರು ತಮ್ಮ 16ನೇ ವಯಸ್ಸಿನಲ್ಲಿಯೇ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದರು. ಆ ಮೂಲಕ ಡಬ್ಲ್ಯುಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆಯನ್ನು ಬರೆದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಲಾಯಿತು. ಮಿನ್ನು ಮಣಿ ಅವರ ಬದಲು ದೀಯಾ ಯಾದವ್ ಅವರನ್ನು ಆಡಿಸಲಾಯಿತು. ಆ ಮೂಲಕ ಮುಂಬೈ ತಂಡದ ಜಿ ಕಮಲಿನಿ ಅವರ ದಾಖಲೆಯನ್ನು ಮುರಿದಿದ್ದಾರೆ.
WPL 2026: ಚೊಚ್ಚಲ ಅರ್ಧಶತಕ ಬಾರಿಸಿದ ಗೌತಮಿ ನಾಯಕ್‌ಗೆ ಹಾರ್ದಿಕ್ ಪಾಂಡ್ಯ ವಿಶೇಷ ಸಂದೇಶ!
ಡಬ್ಲ್ಯುಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿಯರು
ದೀಯಾ ಯಾದವ್: 16 ವರ್ಷ, 103 ದಿನಗಳು (ಡೆಲ್ಲಿ ಕ್ಯಾಪಿಟಲ್ಸ್) ಮುಂಬೈ ಇಂಡಿಯನ್ಸ್ ವಿರುದ್ಧ (2026)
ಗುಣಲನ್ ಕಮಲಿನಿ: 16 ವರ್ಷ, 213 ದಿನಗಳು (ಮುಂಬೈ ಇಂಡಿಯನ್ಸ್) ಗುಜರಾತ್ ಜಯಂಟ್ಸ್ ವಿರುದ್ಧ (2025)
ಶಭಮನ್ ಶೈಕ್: 16 ವರ್ಷ, 263 ದಿನಗಳು, (ಗುಜರಾತ್ ಜಯಂಟ್ಸ್) ಮುಂಬೈ ಇಂಡಿಯನ್ಸ್ ವಿರುದ್ಧ (2024)
ಪರಶಿವ ಚೋಪ್ರಾ: 16 ವರ್ಷ, 312 ದಿನಗಳು(ಯುಪಿ ವಾರಿಯರ್ಸ್) ಮುಂಬೈ ಇಂಡಿಯನ್ಸ್ ವಿರುದ್ಧ (2023)
ವಿಜೆ ಜೋಶಿತಾ: 18 ವರ್ಷ, 205 ದಿನಗಳು (ಆರ್‌ಸಿಬಿ) ಗುಜರಾತ್ ಜಯಂಟ್ಸ್ ವಿರುದ್ಧ (2025)
16 years and 103 days 💙❤️
— Delhi Capitals (@DelhiCapitals) January 20, 2026
Deeya Yadav, youngest-ever WPL player🔥 pic.twitter.com/BKUWWkUv13
ದೀಯಾ ಯಾದವ್ ಯಾರು?
ದೀಪು ಹರಿಯಾಣ ಮೂಲದವರಾಗಿದ್ದು, ಅವರನ್ನು ಕ್ಯಾಪಿಟಲ್ಸ್ ತಂಡವು ಅವರ ಮೂಲ ಬೆಲೆಯಾದ 10 ಲಕ್ಷ ರು. ಗೆ ಖರೀದಿಸಿತು. ಅವರು ಒಬ್ಬ ಬ್ಯಾಟ್ಸ್‌ಮನ್ ಹಾಗೂ ದೊಡ್ಡ ಹೊಡೆತಗಳಿಗೆ ಖ್ಯಾತಿಯನ್ನು ಗಳಿಸಿದ್ದಾರೆ. "ಅವರಿಗೆ 16 ವರ್ಷ, ಆದರೆ ಅವರು ನಿಜವಾಗಿಯೂ ಚೆಂಡನ್ನು ಪಾರ್ಕ್‌ನಿಂದ ಹೊರಗೆ ಹೊಡೆಯಬಲ್ಲರು. ನಾನು ಹೇಳುವುದಿಷ್ಟೆ," ಎಂದು ಕಿರಿಯ ಆಟಗಾರ್ತಿಯ ಬಗ್ಗೆ ನಾಯಕಿ ಜೆಮಿಮಾ ರೊಡ್ರಿಗಸ್ ತಿಳಿಸಿದ್ದಾರೆ.
⚡Youngest at the time of #WPL debut ⚡
— Cricbuzz (@cricbuzz) January 20, 2026
16y 103d - Deeya Yadav (DC-W), 2026
16y 213d - Gunalan Kamalini (MI-W), 2025
16y 263d - Shabnam Shakil (GG-W), 2024
16y 312d - Parshavi Chopra (UPW-W), 2023
18y 205d - VJ Joshitha (RCB-W), 2025#WomensCricket pic.twitter.com/cKxJ0Bqsn3
2025-26ರ ಸೀನಿಯರ್ ಮಹಿಳಾ ಟಿ20 ಟ್ರೋಫಿಯಲ್ಲಿ ಅವರು ಎಂಟು ಇನಿಂಗ್ಸ್‌ಗಳಲ್ಲಿ 128ರ ಸ್ಟ್ರೈಕ್-ರೇಟ್‌ನಲ್ಲಿ 298 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ ಮತ್ತು ಅವರು ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ.
ದೇಶಿ ಕ್ರಿಕೆಟ್‌ನಲ್ಲಿ ಶಫಾಲಿ ವರ್ಮಾ ಅವರ ಸಹ ಆಟಗಾರ್ತಿ ದೀಯಾ ಯಾದವ್. ಭಾರತದ ವಿಶ್ವಕಪ್ ಫೈನಲ್ ಗೆಲುವಿನ ನಾಯಕಿ ಕ್ಯಾಪಿಟಲ್ಸ್‌ನಲ್ಲಿ ಮಾತ್ರವಲ್ಲದೆ ಹರಿಯಾಣಕ್ಕೂ ಸಹ ಆಟಗಾರ್ತಿ. ವಾಸ್ತವವಾಗಿ, ಅವರನ್ನು 'ಚೋಟಿ ಶಫಾಲಿ' ಎಂದು ಅಡ್ಡಹೆಸರು ಇಡಲಾಗಿದೆ.