Duleep Trophy 2026: ಉತ್ತರ ವಲಯ ಎದುರು ಗೆದ್ದು 24ನೇ ಬಾರಿ ಫೈನಲ್‌ಗೇರಿದ ದಕ್ಷಿಣ ವಲಯ!
ನಾಯಕ ತಿಲಕ್ ವರ್ಮಾ ಅವರ ಅದ್ಭುತ ಬ್ಯಾಟಿಂಗ್ ಬಲದಿಂದ ದಕ್ಷಿಣ ವಲಯ ತಂಡ, ಎದುರಾಳಿ ಉತ್ತರ ವಲಯ ಎದುರು 7 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ದುಲೀಪ್ ಟ್ರೋಫಿ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿತು. ಶತಕ ಹಾಗೂ ಅರ್ಧಶತಕ ಸಿಡಿಸಿದ ನಾಯಕ ತಿಲಕ್ ವರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಉತ್ತರ ವಲಯ ಎದುರು ಗೆದ್ದು ಫೈನಲ್‌ಗೆ ಅರ್ಹತೆ ಪಡೆದ ದಕ್ಷಿಣ ವಲಯ. -
ಬೆಂಗಳೂರು: ನಾಯಕ ತಿಲಕ್ ವರ್ಮಾ (Tilak Verma) ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ದಕ್ಷಿಣ ವಲಯ ತಂಡ, ಉತ್ತರ ವಲಯ ಎದುರು 2026ರ ದುಲೀಪ್ ಟ್ರೋಫಿ ಟೂರ್ನಿಯ (Duleep Trophy 2026) ಸೆಮಿಫೈನಲ್ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 24ನೇ ಬಾರಿ ಈ ಟೂರ್ನಿಯಲ್ಲಿ ದಕ್ಷಿಣ ವಲಯ ತಂಡ ಫೈನಲ್‌ಗೆ ಪ್ರವೇಶ ಮಾಡಿತು. ಸೆಪ್ಟಂಬರ್ 6 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ಎದುರು ಕಾದಾಟ ನಡೆಸಲಿದೆ. ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ ತಿಲಕ್ ವರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
24ನೇ ಬಾರಿ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ದಕ್ಷಿಣ ವಲಯ ತಂಡ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದೆ. ದಕ್ಷಿಣ ವಲಯ ತಂಡ ಈ ಟೂರ್ನಿಯ ಇತಿಹಾಸದಲ್ಲಿ 23 ಬಾರಿ ಫೈನಲ್‌ಗೆ ಪ್ರವೇಶ ಮಾಡಿದ್ದು, 13 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದೀಗ ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ವಲಯ ತಂಡ 14ನೇ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲು ಎದುರು ನೋಡುತ್ತಿದೆ.
ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ಕನ್ನಡಿಗನನ್ನು ಆರಿಸಿದ ದೀಪ್ ದಾಸ್‌ಗುಪ್ತಾ!
ಅಂದ ಹಾಗೆ ಪಂದ್ಯದ ನಾಲ್ಕನೇ ದಿನವಾದ ಬುಧವಾರ 7 ವಿಕೆಟ್‌ಗಳ ನಷ್ಟಕ್ಕೆ 256 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಉತ್ತರ ವಲಯ, 72.4 ಓವರ್‌ಗಳಿಗೆ 297 ರನ್‌ಗಳಿಗೆ ಆಲ್‌ಔಟ್ ಆಯಿತು. ಅಂದರೆ ನಾಲ್ಕನೇ ದಿನ ಮೊದಲ ಸೆಷನ್‌ನಲ್ಲಿಯೇ ಉತ್ತರ ವಲಯ 41 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಪ್ರಥಮ ಇನಿಂಗ್ಸ್‌ನಲ್ಲಿ 117 ರ್‌ಗಳ ಹಿನ್ನಡೆ ಅನುಭವಿಸಿದ್ದ ಉತ್ತರ ವಲಯ ಕೊನೆಯ ಇನಿಂಗ್ಸ್‌ನಲ್ಲಿ ದಕ್ಷಿಣ ವಲಯ ತಂಡಕ್ಕೆ 181 ರನ್‌ಗಳ ಗುರಿಯನ್ನು ನೀಡಿತು.
South Zone cruise into the final 🙌
— BCCI Domestic (@BCCIdomestic) September 2, 2026
They chase down 181 and beat North Zone by 7 wickets 👌
Scorecard ▶️ https://t.co/AGjIStrDAT#DuleepTrophy | #SZvNZ pic.twitter.com/UXTDC4wdF4
ಉತ್ತರ ವಲಯ ಪರ ಎರಡನೇ ಇನಿಂಗ್ಸ್‌ನಲ್ಲಿ ಸನತ್ ಸಂಗ್ವಾನ್ (76 ರನ್) ಹಾಗೂ ಆಯುಷ್ ದೊಸೆಜಾ (52 ರನ್) ಅವರು ಅರ್ಧಶತಕಗಳನ್ನು ಗಳಿಸಿದ್ದು ಬಿಟ್ಟರೆ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉಪಯುಕ್ತ ಕೊಡುಗೆ ನೀಡುವಲ್ಲಿ ವಿಫಲರಾದರು. ಅನ್ಶುಲ್ ಕಾಂಬೋಜ್ (36 ರನ್) ಅವರು ಕೊಂಚ ಹೋರಾಟ ನಡೆಸಿದರು. ಆದರೂ ತಮ್ಮ ತಂಡವನ್ನು 300 ರ ಗಡಿ ದಾಟಿಸಲು ಸಾಧ್ಯವಾಗಲಿಲ್ಲ. ದಕ್ಷಿಣ ವಲಯ ತಂಡದ ಪರ ಎಂಡಿ ನಿಧೀಶ್ ಐದು ವಿಕೆಟ್‌ಗಳ ಸಾಧನೆ ಮಾಡಿದರು.
182 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ವಲಯ ತಂಡದ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉಪಯುಕ್ತ ಕೊಡುಗೆ ನೀಡಿದರು. ರಿಕಿ ಭುಯಿ 42 ರನ್ ಗಳಿಸಿದರೆ, ಎನ್ ಜಗದೀಶನ್ 43 ರನ್ ಗಳಿಸಿದರು. ಆದರೆ, ನಾಯಕ ತಿಲಕ್ ವರ್ಮಾ ಅವರು 51 ರನ್‌ಗಳನ್ನು ಸಿಡಿಸಿದರು. ಇನ್ನು ಉತ್ತರ ವಲಯ ಪರ ಅಬಿದ್ ಮುಷ್ತಾಕ್ ಅವರು ಎರಡು ವಿಕೆಟ್ ಪಡೆದರು.
Duleep Trphy 2026: ಕೇಂದ್ರ ವಲಯವನ್ನು ಮಣಿಸಿ ಫೈನಲ್‌ಗೇರಿದ ಪೂರ್ವ ವಲಯ!
ತಿಲಕ್ ವರ್ಮಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ದಕ್ಷಿಣ ವಲಯ ತಂಡದ ಪರ ನಾಯ ತಿಲಕ್ ವರ್ಮಾ ಅವರು ಪ್ರಥಮ ಇನಿಂಗ್ಸ್‌ನಲ್ಲಿ 116 ರನ್‌ಗಳು ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 51 ರನ್‌ಗಳನ್ನು ಗಳಿಸಿದರು. ತಿಲಕ್ ವರ್ಮಾ ಅವರ ಶತಕದ ಬಲದಿಂದ ದಕ್ಷಿಣ ವಲಯ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಶತಕದ ಮುನ್ನಡೆ ಗಳಿಸಿತ್ತು. ಒಂದು ಹಂತದಲ್ಲಿ ದಕ್ಷಿಣ ವಲಯ ತಂಡ 65 ಕ್ಕೆ 2 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ವೇಳೆ, ತಿಲಕ್ ವರ್ಮಾ ಶತಕ ಸಿಡಿಸುವ ಜೊತೆಗೆ ಎನ್ ಜಗದೀಶನ್ ಹಾಗೂ ಆರ್ ಸ್ಮರಣ್ ಅವರ ಜೊತೆಗೆ ಉಪಯುಕ್ತ ಜೊತೆಯಾಟಗಳನ್ನು ಆಡಿದ್ದರು.