ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಭಾರತದ ಎದುರು 5 ವಿಕೆಟ್‌ ಕಿತ್ತು ಐತಿಹಾಸಿಕ ದಾಖಲೆ ಬರೆದ ಗಸ್‌ ಅಟ್ಕಿನ್ಸನ್‌!

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ನಡೆಯುತ್ತಿರುವ ಸರಣಿಯಲ್ಲಿ ಗಾಯದಿಂದ ಕಳೆದ ನಾಲ್ಕೂ ಪಂದ್ಯಗಳಲ್ಲಿ ತಂಡದಿಂದ ಹೊರಗುಳಿದಿದ್ದ ಇಂಗ್ಲೆಂಡ್‌ ವೇಗಿ ಗಸ್‌ ಅಟ್ಕಿನ್ಸನ್‌, ಇದೀಗ ಸರಣಿಯ ಕೊನೆಯ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಕಿತ್ತು ಐತಿಹಾಸಿಕ ದಾಖಲೆಯೊಂದನ್ನು ಬರೆದಿದ್ದಾರೆ.

ಭಾರತದ ವಿರುದ್ಧ ಗಸ್‌ ಅಟ್ಕಿನ್ಸನ್‌ 5 ವಿಕೆಟ್‌ ಕಿತ್ತು ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಕೆನಿಂಗ್ಟನ್‌: ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಟೆಸ್ಟ್‌ ಸರಣಿಯಲ್ಲಿ(IND vs ENG) ಕೊನೆಯ ಪಂದ್ಯ ಇಲ್ಲಿನ ಓವಲ್‌ ಮೈದಾನದಲ್ಲಿ ನಡೆಯುತ್ತಿದೆ. ಇನ್ನು ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿದ ಆತಿಥೇಯ ಇಂಗ್ಲೆಂಡ್‌ ತಂಡ, ಭಾರತ ತಂಡವನ್ನು 224 ರನ್​ಗಳಿಗೆ ಆಲೌಟ್‌ ಮಾಡಿತು. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ಗಳು ಭಾರತದ (India) ಬೌಲರ್‌ಗಳ ವಿರುದ್ದ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸುತ್ತಿದ್ದಾರೆ. ಇನಿಂಗ್ಸ್‌ನ ಮೊದಲ ಓವರ್‌ನಿಂದಲೂ ಬೌಂಡರಿ ಬಾರಿಸಿ ಉತ್ತಮ ಆರಂಭ ಪಡೆದಿದ್ದರು. ಈಗಾಗಲೇ ಇಂಗ್ಲೆಂಡ್‌ (England) ತಂಡ 5.18 ರನ್​ಗಳ ಸರಸಾರಿಯಲ್ಲಿ 5 ವಿಕೆಟ್‌ ನಷ್ಟಕ್ಕೆ 201 ರನ್ ಕಲೆಹಾಕಿದೆ. ವಾಸ್ತವವಾಗಿ ಪಂದ್ಯ ಆರಂಭಕ್ಕೂ ಮುನ್ನ ಓವಲ್‌ ಪಿಚ್‌ ಸೀಮರ್‌ಗಳಿಗೆ ಅತೀ ಹೆಚ್ಚು ಸಹಾಯಕಾರಿಯಾಗಿರುವುದರಿಂದ ರನ್‌ ಗಳಿಸುವುದು ಅಷ್ಟು ಸುಲಭ ಇಲ್ಲ ಎನ್ನಲಾಗುತ್ತಿತ್ತು.

ಇದಕ್ಕೆ ಪೂರಕವಾಗಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಕೂಡ ಆಮೆ ಗತಿಯಲ್ಲಿ ರನ್‌ ಕಲೆಹಾಕಿದರು. ಆದರೆ ಇಂಗ್ಲೆಂಡ್‌ಗೆ ಸಿಕ್ಕಿರುವ ಈ ಆರಂಭ ಬೇರೆಯದ್ದೇ ಅಭಿಪ್ರಾಯವನ್ನು ಹುಟ್ಟು ಹಾಕಿದೆ. ಇದರ ನಡುವೆ ಗಾಯದಿಂದ ಕಳೆದ ನಾಲ್ಕೂ ಪಂದ್ಯಗಳಲ್ಲಿ ತಂಡದಿಂದ ಹೊರಗುಳಿದಿದ್ದ ಇಂಗ್ಲೆಂಡ್‌ ವೇಗಿ ಗಸ್‌ ಅಟ್ಕಿನ್ಸನ್‌ ಭಾರತದ ವಿರುದ್ಧ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್‌ ತಂಡದ ಮಾಜಿ ವೇಗಿ ಚಾರ್ಜ್‌ ಲೊಹ್ಮನ್‌ ಅವರ ಸುದೀರ್ಘ 129 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ.

IND vs ENG: ಬೆನ್‌ ಡಕೆಟ್‌ ಭುಜದ ಮೇಲೆ ಕೈ ಹಾಕಿ ಪೆವಿಲಿಯನ್‌ಗೆ ಕಳುಹಿಸಿಕೊಟ್ಟ ಆಕಾಶ್‌ ದೀಪ್‌!

ಐತಿಹಾಸಿಕ ದಾಖಲೆ ಬರೆದ ಗಸ್‌ ಅಟ್ಕಿನ್ಸನ್‌

ಭಾರತದ ಮೊದಲ ಇನಿಂಗ್ಸ್‌ನಲ್ಲಿ ಬಿಗಿಯಾದ ದಾಳಿ ನಡೆಸಿದ ಗಸ್‌ ಅಟ್ಕಿನ್ಸನ್‌ ಕೇವಲ 33 ನೀಡಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ಭಾರತ ತಂಡವನ್ನು 224 ರನ್‌ಗಳಿಗೆ ಆಲ್‌ಔಟ್‌ ಮಾಡುವಲ್ಲಿ ಇಂಗ್ಲೆಂಡ್‌ಗೆ ನೆರವು ನೀಡಿದ್ದರು. ಈ ಪಂದ್ಯದಲ್ಲಿ ಭಾರತ ತಂಡದ ಪ್ರಮುಖ ವಿಕೆಟ್‌ಗಳಾದ ಯಶಸ್ವಿ ಜೈಸ್ವಾಲ್‌, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಧೃವ್‌ ಜುರೆಲ್‌, ವಾಷಿಂಗ್ಟನ್‌ ಸುಂದರ್‌, ಮೊಹಮ್ಮದ್‌ ಸಿರಾಜ್‌ ಹಾಗೂ ಪ್ರಸಿಧ್‌ ಕೃಷ್ಣ ಅವರ ವಿಕೆಟ್‌ ಕಿತ್ತು ಸಂಭ್ರಮಿಸಿದ್ದರು. ಆ ಮೂಲಕ ಅವರು ಇದುವರೆಗೂ 13 ಟೆಸ್ಟ್‌ ಪಂದ್ಯಗಳನ್ನಾಡಿದ್ದು, (24 ಇನಿಂಗ್ಸ್)‌ 21ರ ಸರಾಸರಿ ಮತ್ತು 34.9ರ ಸ್ಟ್ರೈಕ್‌ ರೇಟ್‌ನಲ್ಲಿ 60 ವಿಕೆಟ್‌ ಕಬಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನ ಇತಿಹಾಸದಲ್ಲೇ 35ಕ್ಕಿಂತ ಕಡಿಮೆ ಸ್ಟ್ರೈಕ್‌ ರೇಟ್‌ನಲ್ಲಿ ಕಬಳಿಸಿದ ಎರಡನೇ ಬೌಲರ್‌ ಎನ್ನುವ ಹೆಗ್ಗಳಿಕೆಗೆ ಭಾಜರಾಗಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್‌ನ ಚಾರ್ಜ್‌ ಲೊಹ್‌ಮನ್‌ ಅವರು 1896ರಲ್ಲಿ ಅತೀ ಕಡಿಮೆ ಸ್ಟ್ರೈಕ್‌ ರೇಟ್‌ನಲ್ಲಿ 112 ವಿಕೆಟ್‌ ಕಬಳಿಸಿದ್ದರು.

IND vs ENG: ʻಶುಭಮನ್‌ ಗಿಲ್‌ ರನ್‌ಔಟ್‌ ಓವಲ್‌ ಟೆಸ್ಟ್‌ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ʼ,-ಆಕಾಶ್‌ ಚೋಪ್ರಾ!

ಅತ್ಯುತ್ತಮ ಬೌಲಿಂಗ್‌ ಸ್ಟ್ರೈಕ್‌ ರೇಟ್‌ನಲ್ಲಿ ಅತೀ ಹೆಚ್ಚು ವಿಕೆಟ್‌ ಕಬಳಿಸಿ ಬೌಲರ್‌ಗಳ ಪಟ್ಟಿ

  1. ಜಾರ್ಜ್‌ ಲೊಹ್ಮನ್‌‌ (ಇಂಗ್ಲೆಂಡ್‌): 18 ಪಂದ್ಯಗಳನ್ನಾಡಿ 34.1ರ ಬೌಲಿಂಗ್‌ ಸ್ಟ್ರೈಕ್‌ ರೇಟ್‌ನಲ್ಲಿ 112 ವಿಕೆಟ್‌ ಪಡೆದಿದ್ದಾರೆ.
  2. ಗಸ್‌ ಅಟ್ಕಿನ್ಸನ್‌ (ಇಂಗ್ಲೆಂಡ್‌): 13 ಪಂದ್ಯಗಳನ್ನಾಡಿ 34.9ರ ಬೌಲಿಂಗ್‌ ಸ್ಟ್ರೈಕ್‌ ರೇಟ್‌ನಲ್ಲಿ 60 ವಿಕೆಟ್‌ ಕಬಳಿಸಿದ್ದಾರೆ.
  3. ಸ್ಕಾಟ್‌ ಬೋಲೆಂಡ್‌ (ಆಸ್ಟ್ರೇಲಿಯಾ): 14 ಪಂದ್ಯಗಳನ್ನಾಡಿ 36.0ರ ಬೌಲಿಂಗ್‌ ಸ್ಟ್ರೈಕ್‌ ರೇಟ್‌ನಲ್ಲಿ 62 ವಿಕೆಟ್‌ ಕಿತ್ತಿದ್ದಾರೆ.
  4. ಜಾನ್‌ ಜೇಮ್ಸ್‌ ಫೆರ್ರಿಸ್‌ (ಆಸ್ಟ್ರೇಲಿಯಾ): 9 ಪಂದ್ಯಗಳನ್ನಾಡಿ 37.7ರ ಬೌಲಿಂಗ್‌ ಸ್ಟ್ರೈಕ್‌ ರೇಟ್‌ನಲ್ಲಿ 61 ವಿಕೆಟ್‌ ಪಡೆದಿದ್ದಾರೆ.
  5. ಮಾರ್ಕೊ ಯೆನ್ಸೆನ್‌ (ದಕ್ಷಿಣ ಆಫ್ರಿಕಾ): 18 ಪಂದ್ಯಗಳನ್ನಾಡಿ 38.0ರ ಬೌಲಿಂಗ್‌ ಸ್ಟ್ರೈಕ್‌ ರೇಟ್‌ನಲ್ಲಿ 77 ವಿಕೆಟ್‌ ಪಡೆದಿದ್ದಾರೆ.

ಬರಹ- ಕೆ ಎನ್‌ ರಂಗು, ಚಿತ್ರದುರ್ಗ