IND vs ENG: ಅರ್ಧಶತಕ ಸಿಡಿಸಿ ಎಂಎಸ್ ಧೋನಿ ದಾಖಲೆ ಸರಿಗಟ್ಟಿದ ರಿಷಭ್ ಪಂತ್!
ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಪ್ರವಾಸಿ ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲಿ ಎಂಎಸ್ ಧೋನಿಯ ದಾಖಲೆಯನ್ನು ಪಂತ್ ಸರಿಗಟ್ಟಿದ್ದಾರೆ.

ಅರ್ಧಶತಕ ಬಾರಿಸಿ ಎಂಎಸ್ ಧೋನಿ ದಾಖಲೆ ಮುರಿದ ರಿಷಭ್ ಪಂತ್.

ಲಂಡನ್: ಬೆರಳು ಗಾಯದ ಹೊರತಾಗಿಯೂ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್(Rishabh Pant) ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ(IND vs ENG) ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕವನ್ನು ಬಾರಸಿದ್ದಾರೆ. ಆ ಮೂಲಕ ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಅರ್ಧಶತಕಗಳನ್ನು ಸಿಡಿಸಿದ ಪ್ರವಾಸಿ ವಿಕೆಟ್ ಕೀಪರ್‌ಗಳ ಸಾಲಿನಲ್ಲಿ ಮಾಜಿ ನಾಯಕ ಎಂಎಸ್ ಧೋ (MS Dhoni) ದಾಖಲೆಯನ್ನು ರಿಷಭ್ ಪಂತ್ ಸರಿಗಟ್ಟಿದ್ದಾರೆ. ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನ ಮೊದಲನೇ ಸೆಷನ್‌ನಲ್ಲಿ ರಿಷಭ್ ಪಂತ್ ಈ ಸಾಧನೆಯನ್ನು ಮಾಡಿದ್ದಾರೆ.
ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಶುಭಮನ್ ಗಿಲ್ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ರಿಷಭ್ ಪಂತ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಎಡಗೈ ತೋರು ಬೆರಳಿನಲ್ಲಿನ ಗಾಯದ ಹೊರತಾಗಿಯೂ ಬ್ಯಾಟಿಂಗ್‌ನಲ್ಲಿ ಕಠಿಣ ಹೋರಾಟವನ್ನು ನಡೆಸಿದರು. ಅವರು 86 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದರು. ಅಲ್ಲದೆ ಕೆಎಲ್ ರಾಹುಲ್ ಅವರ ಜೊತೆ ನಿರ್ಣಾಯಕ ಜೊತೆಯಾಟವನ್ನು ಆಡಿದರು. ರನ್ ಔಟ್ ಆಗುವುದಕ್ಕೂ ಮುನ್ನ ಪಂತ್, 112 ಎಸೆತಗಳಲ್ಲಿ 74 ರನ್ ಗಳಿಸಿದ್ದರು. ಅವರು ಶತಕ ಸಿಡಿಸುವ ಭರವಸೆಯನ್ನು ಮೂಡಿಸಿದ್ದರು. ಆದರೆ, ಅನಿರೀಕ್ಷಿತವಾಗಿ ರನ್ ಔಟ್ ಆದರು.
ತಮ್ಮ ಅರ್ಧಶತಕದ ಮೂಲಕ ರಿಷಭ್ ಪಂತ್ ಇಂಗ್ಲೆಂಡ್ ನೆಲದಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯ ದಾಖಲೆಯನ್ನು ಸರಿಗಟ್ಟಿದ್ದಾರೆ.
IND vs ENG: ಲಾರ್ಡ್ಸ್ ಅಂಗಣದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆಎಲ್ ರಾಹುಲ್!
ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ಅರ್ಧಶತಕಗಳನ್ನು ಬಾರಿಸಿದ ಪ್ರವಾಸಿ ವಿಕೆಟ್ ಕೀಪರ್‌ಗಳು
ರಿಷಭ್ ಪಂತ್ (ಭಾರತ) - 20 ಇನಿಂಗ್ಸ್‌ಗಳಲ್ಲಿ 8
ಎಂಎಸ್ ಧೋನಿ (ಭಾರತ) - 23 ಇನಿಂಗ್ಸ್‌ಗಳಲ್ಲಿ 8
ಜಾನ್ ವೇಟ್ (ದಕ್ಷಿಣ ಆಫ್ರಿಕಾ) - 27 ಇನಿಂಗ್ಸ್‌ಗಳಲ್ಲಿ 7
ರಾಡ್ನಿ ಮಾರ್ಷ್ (ಆಸ್ಟ್ರೇಲಿಯಾ) - 35 ಇನಿಂಗ್ಸ್‌ಗಳಲ್ಲಿ 6
ಜಾಕ್ ಕ್ಯಾಮರೂನ್ (ದಕ್ಷಿಣ ಆಫ್ರಿಕಾ) - 14 ಇನಿಂಗ್ಸ್‌ಗಳಲ್ಲಿ 5
5⃣0⃣ up for vice-captain Rishabh Pant 👍
— BCCI (@BCCI) July 12, 2025
1⃣0⃣0⃣-run partnership between him & KL Rahul 🤝
Updates ▶️ https://t.co/X4xIDiSmBg#TeamIndia | #ENGvIND | @RishabhPant17 | @klrahul pic.twitter.com/wUbL8NerUT
ಗಾಯದಿಂದ ಬಳಲುತ್ತಿರುವ ರಿಷಭ್ ಪಂತ್
ರಿಷಭ್ ಪಂತ್ ಅವರು ಟೆಸ್ಟ್ ಪಂದ್ಯದ ಮೊದಲನೇ ದಿನ ವಿಕೆಟ್ ಕೀಪಿಂಗ್ ವೇಳೆ ತಮ್ಮ ಎಡಗೈ ತೋರು ಬೆರಳಿಗೆ ಚೆಂಡು ತಗುಲಿಸಿಕೊಂಡು ಗಾಯಕ್ಕೆ ತುತ್ತಾಗಿದ್ದರು. ಇಂಗ್ಲೆಂಡ್ ತಂಡದ 34ನೇ ಓವರ್‌ನಲ್ಲಿರಿಷಭ್ ಪಂತ್ ಅವರ ಎಸೆತದಲ್ಲಿ ಚೆಂಡು ಹಿಡಿಯುವಾಗ ತಮ್ಮ ಎಡಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದರು. ನಂತರ ಅವರು ನೋವು ತಾಳಲಾರದೆ ಡ್ರೆಸ್ಸೀಂಗ್ ರೂಂ ಗೆ ತೆರಳಿದರು. ಬಳಿಕ ಮತ್ತೊರ್ವ ವಿಕೆಟ್ ಕೀಪರ್ ಧ್ರುವ್ ಜುರೆಲ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಿದರು. ನಂತರ ಪ್ರಥಮ ಇನಿಂಗ್ಸ್‌ನಲ್ಲಿ ಪಂತ್ ವಿಕೆಟ್ ಕೀಪಿಂಗ್‌ಗೆ ಬರಲೇ ಇಲ್ಲ.
ಎರಡನೇ ದಿನದ ಆರಂಭಕ್ಕೂ ಮುನ್ನ ಪಂತ್ ಅವರ ಎಡಗೈ ತೋರು ಬೆರಳಿನ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ವೈದ್ಯಕೀಯ ತಂಡವು ಅವರನ್ನು ಇನ್ನೂ ಮೌಲ್ಯಮಾಪನ ಮಾಡುತ್ತಿದೆ ಎಂದು ಬಿಸಿಸಿಐ ದೃಢಪಡಿಸಿತು.
IND vs ENG-'ಶುಭಮನ್ ಗಿಲ್ 430 ರನ್ ಗಳಿಸಿದ್ದಾರೆ': ಡ್ಯೂಕ್ ಬಾಲ್ ಸಿಇಒ ಟೀಕೆಗಳಿಗೆ ತಿರುಗೇಟು!
ಈ ಅಸ್ವಸ್ಥತೆಯ ಹೊರತಾಗಿಯೂ ಜುಲೈ 11ರಂದು ಶುಕ್ರವಾರ ಲಾರ್ಡ್ಸ್ ಟೆಸ್ಟ್‌ನ ಎರಡನೇ ದಿನದಂದು ತರಬೇತಿಯನ್ನು ಪುನರಾರಂಭಿಸುವ ಮೂಲಕ ಪಂತ್ ಭರವಸೆಯನ್ನು ಮೂಡಿಸಿದ್ದರು. ಮೂರನೇ ದಿನದ ಮೊದಲ ಅವಧಿಯಲ್ಲಿ ಬ್ಯಾಟ್ ಮಾಡುವಾಗ ಪಂತ್ ಸ್ವಲ್ಪ ಅಸ್ವಸ್ಥತೆಯನ್ನು ಅನುಭವಿಸಿದ್ದರು. ಅಂದ ಹಾಗೆ ಲೀಡ್ಸ್ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಪಂತ್ ಶತಕ ಬಾರಿಸಿದ್ದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ್ದ ಎರಡನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದರು.