ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಮತ್ತು ಶಿಸ್ತು ಉಲ್ಲಂಘನೆಯ ಕರಿನೆರಳು ಆವರಿಸಿದೆ. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ (ENG vs PAK) 194 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತಂಡದಲ್ಲಿ ಏಕಾಏಕಿ ಭಾರಿ ಬದಲಾವಣೆಗಳನ್ನು ಮಾಡಿದೆ. ತಂಡದ 7 ಪ್ರಮುಖ ಆಟಗಾರರನ್ನು ನೇರವಾಗಿ ತಂಡದಿಂದ ಕೈಬಿಡಲಾಗಿದೆ. ಆಟಗಾರರಷ್ಟೇ ಅಲ್ಲದೆ, ಕೋಚ್ ಸರ್ಫರಾಝ್ ಅಹ್ಮದ್ ಮತ್ತು ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನೂ ತಮ್ಮ ಹುದ್ದೆಗಳಿಂದ ತೆಗೆದುಹಾಕಲಾಗಿದೆ.
ಟೆಸ್ಟ್ ಸರಣಿ ನಡೆಯುತ್ತಿರುವ ನಡುವೆಯೇ ಕೈಗೊಂಡಿರುವ ಈ ಕಠಿಣ ಕ್ರಮಗಳ ಹಿಂದಿನ ಕಾರಣ ಕೇವಲ ಆಟಗಾರರ ಕಳಪೆ ಪ್ರದರ್ಶನವಲ್ಲ ಎಂದು ಹೇಳಲಾಗುತ್ತಿದೆ. ಕ್ರಿಕೆಟ್ ಮೈದಾನವನ್ನು ಮೀರಿದ ಕೆಲವು ಗಂಭೀರ ಕಾರಣಗಳೂ ಇದರ ಹಿಂದೆ ಇರುವ ಸಾಧ್ಯತೆ ಇದೆ. ಪಿಸಿಬಿ ಐದು ಹೊಸ ಮುಖಗಳು ಹಾಗೂ ಇಬ್ಬರು ಅನುಭವಿ ಆಟಗಾರರನ್ನು ರಾತ್ರೋರಾತ್ರಿ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಆಂತರಿಕ ಮೂಲಗಳ ಪ್ರಕಾರ, ತಂಡದ ಕಳಪೆ ಪ್ರದರ್ಶನದ ಜೊತೆಗೆ ಶಿಸ್ತು ಉಲ್ಲಂಘನೆ ಮತ್ತು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆಯೂ ಮಂಡಳಿ ತನಿಖೆ ನಡೆಸುತ್ತಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ವಿಶೇಷ ಮೆಂಟರ್ ಆಗಿ ಕೆವಿನ್ ಪೀಟರ್ಸನ್ ನೇಮಕ!
ಪಾಕಿಸ್ತಾನದ ಮಾಧ್ಯಮ ವರದಿಯೊಂದರ ಪ್ರಕಾರ, ಮಂಡಳಿಯು ಕೆಲವು ಆಟಗಾರರ ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆದಿದೆ. ಅಂತಿಮ ಟೆಸ್ಟ್ ಪಂದ್ಯ ಮುಗಿಯುವವರೆಗೂ ಈ ಸಾಧನಗಳು ಪಿಸಿಬಿಯ ವಶದಲ್ಲೇ ಇರಲಿವೆ ಎಂದು ವರದಿಯಾಗಿದೆ. ತಂಡದೊಳಗಿನ ಈ ದಿಢೀರ್ ಬೆಳವಣಿಗೆಗಳು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಶಿಸ್ತು ಮತ್ತು ಆಟಗಾರರ ವರ್ತನೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
2010ರ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಮತ್ತೆ ನೆನಪಿಗೆ
ಈ ಸಂಪೂರ್ಣ ಬೆಳವಣಿಗೆ ಕುರಿತು ಪಿಸಿಬಿಯ ಮಾಧ್ಯಮ ನಿರ್ದೇಶಕ ಆಮಿರ್ ಮಿರ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ಮಾಧ್ಯಮಗಳಲ್ಲಿ ಪ್ರಕಟವಾದ ಶಿಸ್ತು ಮತ್ತು ಆಟಗಾರರ ವರ್ತನೆಗೆ ಸಂಬಂಧಿಸಿದ ವರದಿಗಳ ಆಧಾರದ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಂತರಿಕ ತನಿಖೆ ಆರಂಭಿಸಿದೆ ಎಂದು ದೃಢಪಡಿಸಿದ್ದಾರೆ. ಇಂತಹ ಸೂಕ್ಷ್ಮ ಪ್ರಕರಣಗಳನ್ನು ಪಿಸಿಬಿ ತನ್ನ ನಿಗದಿತ ನಿಯಮಗಳು ಮತ್ತು ಮಾನದಂಡಗಳ ಅನ್ವಯವೇ ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
Women's Asia Cup: ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ದಂಡ ವಿಧಿಸಿದ ಐಸಿಸಿ!
ಲಾರ್ಡ್ಸ್ ಮೈದಾನದಲ್ಲೇ 2010ರಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಮತ್ತೊಮ್ಮೆ ನೆನಪಿಗೆ ಬಂದಿವೆ. ಆ ಪ್ರಕರಣದಲ್ಲಿ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಆಮಿರ್ ನೋ-ಬಾಲ್ ಎಸೆಯುವ ಬದಲಿಗೆ ಬುಕ್ಕಿಗಳಿಂದ ಹಣ ಸ್ವೀಕರಿಸಿದ ಆರೋಪದಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.
ಇಮಾಮ್-ಉಲ್-ಹಕ್‌ಗೂ ಸಂಕಷ್ಟ?
ಮತ್ತೊಂದೆಡೆ, ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಗಾಯದ ನೆಪವೊಡ್ಡಿ ಬ್ಯಾಟಿಂಗ್‌ಗೆ ಇಳಿಯದೆ ಉಳಿದ ಆರಂಭಿಕ ಬ್ಯಾಟರ್ ಇಮಾಮ್-ಉಲ್-ಹಕ್ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಕಾಣಿಸುತ್ತಿದೆ. ಪಿಸಿಬಿ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಆಕಿಬ್ ಜಾವೆದ್ ಅವರು ಇಮಾಮ್ ಅವರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Duleep Trophy Final: ಇಶಾನ್ ಕಿಶನ್ ದಾಖಲೆಯ ದ್ವಿಶತಕ, ಬೃಹತ್ ಮೊತ್ತ ಕಲೆಹಾಕಿದ ಪೂರ್ವ ವಲಯ!
“ಇಮಾಮ್ ಅವರ ಗಾಯದ ವಿಚಾರವೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ ಮತ್ತು ಇದು ತೀವ್ರ ನಿರಾಶಾದಾಯಕವಾಗಿದೆ. ಹಿಂದೆ ಆಟಗಾರರು ಗಾಯಗೊಂಡಿದ್ದರೂ, ಪ್ಲಾಸ್ಟರ್ ಕಟ್ಟಿಕೊಂಡೇ ತಂಡಕ್ಕಾಗಿ ಆಡುತ್ತಿದ್ದರು. ಸ್ನಾಯು ಸೆಳೆತವಾಗಿದೆ ಎಂಬ ಕಾರಣಕ್ಕೆ ನೀವು ಎರಡೂ ಇನಿಂಗ್ಸ್‌ಗಳಲ್ಲೂ ಬ್ಯಾಟಿಂಗ್‌ಗೆ ಇಳಿಯದೇ ಇರುವುದು ಹೇಗೆ ಸಾಧ್ಯ? ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಆಕಿಬ್ ಜಾವೆದ್ ಹೇಳಿದ್ದರು.