ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Duleep Trophy Final: ಇಶಾನ್‌ ಕಿಶನ್‌ ದಾಖಲೆಯ ದ್ವಿಶತಕ, ಬೃಹತ್‌ ಮೊತ್ತ ಕಲೆಹಾಕಿದ ಪೂರ್ವ ವಲಯ!

East Zone vs South Zone: ದಕ್ಷಿಣ ವಲಯ ಎದುರು ಇಶಾನ್‌ ಕಿಶನ್‌ ದ್ವಿಶತಕ ಹಾಗೂ ಕುಮಾರ್‌ ಕುಶಾಗ್ರ ಅವರ ಶತಕದ ಬಲದಿಂದ ಪೂರ್ವ ವಲಯ ತಂಡ, 2026ರ ದುಲೀಪ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದ ಎರಡನೇ ದಿನ ಬೃಹತ್‌ ಮೊತ್ತವನ್ನು ಕಲೆ ಹಾಕಿದೆ. ಪೂರ್ವ ವಲಯ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 708 ರನ್‌ಗಳನ್ನು ಗಳಿಸಿ ಆಲ್‌ಔಟ್‌ ಆಗಿದೆ.

ಇಶಾನ್‌ ಕಿಶನ್‌ ದ್ವಿಶತಕದಿಂದ ಪೂರ್ವ ವಲಯ ಬೃಹತ್‌ ಮೊತ್ತ!

ದಕ್ಷಿಣ ವಲಯ ಎದುರು ದ್ವಿಶತಕ ಬಾರಿಸಿದ ಇಶಾನ್‌ ಕಿಶನ್‌ ಬ್ಯಾಟಿಂಗ್‌ ವೈಖರಿ. -

Profile
Ramesh Kote Sep 7, 2026 6:20 PM

ಚೆನ್ನೈ: ಇಶಾನ್‌ ಕಿಶನ್‌ (Ishan Kishan) ದ್ವಿಶತಕ ಹಾಗೂ ಕುಮಾರ್‌ ಕುಶಾಗ್ರ (Kumar Kushagra) ಶತಕದ ಬಲದಿಂದ ಪೂರ್ವ ವಲಯ ತಂಡ, ದಕ್ಷಿಣ ವಲಯ ಎದುರು 2026ರ ದುಲೀಪ್‌ ಟ್ರೋಫಿ ಫೈನಲ್‌ (Duleep Trophy 2026) ಪಂದ್ಯದ ಎರಡನೇ ದಿನವೂ ಪ್ರಾಬಲ್ಯ ಸಾಧಿಸಿದೆ. ಪೂರ್ವ ವಲಯ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 163 ಓವರ್‌ಗಳಿಗೆ 708 ರನ್‌ಗಳಿಗೆ ಆಲ್‌ಔಟ್‌ ಆಯಿತು. ಎರಡನೇ ದಿನ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ನಾಯಕ ಇಶಾನ್‌ ಕಿಶನ್‌, ದ್ವಿಶತಕವನ್ನು ಬಾರಿಸಿ ತಮ್ಮ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದರು.