ಬಿಗ್ಬ್ಯಾಷ್ ಲೀಗ್ಗೆ ಹೆಸರು ನೋಂದಾಯಿಸಿದ ಜೇಮ್ಸ್ ಆಂಡರ್ಸನ್, ಭಾರತದಿಂದ ಏಕೈಕ ಆಟಗಾರ!
ಜೂನ್ 19 ರಂದು ನಡೆಯಲಿರುವ ಮುಂಬರುವ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಡ್ರಾಫ್ಟ್ ಸೆಟ್ಗೆ ಇಂಗ್ಲೆಂಡ್ನ ಲೆಜೆಂಡರಿ ವೇಗಿ ಜೇಮ್ಸ್ ಆಂಡರ್ಸನ್ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ಭಾರತದಿಂದ ಏಕೈಕ ಆಟಗಾರ ಸಿದ್ಧಾರ್ಥ್ ಕೌಲ್ ಅವರು ಕೂಡ ತಮ್ಮ ನೊಂದಾಯಿಸಿಕೊಂಡಿದ್ದಾರೆ.

ಜೇಮ್ಸ್ ಆಂಡರ್ಸನ್ ಬಿಗ್ಬ್ಯಾಷ್ ಡ್ರಾಫ್ಟ್ನಲ್ಲಿ ಹೆಸರು ನೋಂದಾಯಿಸಿದ್ದಾರೆ.

ನವದೆಹಲಿ: ಇಂಗ್ಲೆಂಡ್ ತಂಡದ ವೇಗದ ಬೌಲಿಂಗ್ ದಂತಕತೆ ಜೇಮ್ಸ್ ಆಂಡರ್ಸನ್ (James Anderson) ಮುಂಬರುವ ಬಿಗ್ ಬ್ಯಾಷ್ ಲೀಗ್ (BBL) ಟೂರ್ನಿಯಲ್ಲಿ ಆಡಲು ಆಸಕ್ತಿಯನ್ನು ಹೊಂದಿದ್ದಾರೆ. ಜೂನ್ 19 ರಂದು ನಡೆಯುವ ಡ್ರಾಫ್ಟ್ ಸೆಟ್ಗೆ ಜೇಮ್ಸ್ ಆಂಡರ್ಸನ್ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ಭಾರತದಿಂದ ಏಕೈಕ ಆಟಗಾರ ಸಿದ್ಧಾರ್ಥ್ ಕೌಲ್ ಕೂಡ ತಮ್ಮ ಹೆಸರನ್ನು ಸೇರಿಸಿದ್ದಾರೆ. ಜೂನ್ 17 ರಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ಪಟ್ಟಿಯಲ್ಲಿ ಒಟ್ಟು 600 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಜೇಮ್ಸ್ ಆಂಡರ್ಸನ್ ಅವರು ಇತ್ತೀಚೆಗೆ 11 ವರ್ಷಗಳ ಬಳಿಕ ಟಿ20 ಕ್ರಿಕೆಟ್ಗೆ ಮರಳಿದ್ದರು. ಅವರು ವಿಟಾಲಿಟಿ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಲಂಕಾಷೈರ್ ಪರ ಆಡಿದ್ದರು. ತಮ್ಮ ಕಮ್ಬ್ಯಾಕ್ ಪಂದ್ಯದಲ್ಲಿ ಅವರು ಡುರ್ಹ್ಯಾಮ್ ವಿರುದ್ಧ ಬೌಲ್ ಮಾಡಿದ್ದ ನಾಲ್ಕು ಓವರ್ಗಳಿಗೆ 17 ರನ್ ನೀಡಿ 3 ವಿಕೆಟ್ ಕಿತ್ತಿದ್ದರು. ಆ ಮೂಲಕ ಎದುರಾಳಿ ತಂಡವನ್ನು 150 ರನ್ಗಳಿಗೆ ಕಟ್ಟಿ ಹಾಕಲು ನೆರವು ನೀಡಿದ್ದರು.
IND vs ENG: ಇಂಗ್ಲೆಂಡ್ ಪ್ರವಾಸದ ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಯಾದ ಹರ್ಷಿತ್ ರಾಣಾ!
ಡ್ರಾಫ್ಟ್ನಲ್ಲಿ ಯಾವುದಾದರೂ ತಂಡ ಜೇಮ್ಸ್ ಆಂಡರ್ಸನ್ ಅವರನ್ನು ಖರೀದಿಸಿದರೆ, ಆಗ 2025ರ ಬಿಬಿಎಲ್ ಟೂರ್ನಿಯಲ್ಲಿ ಆಡುವ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಯನ್ನು ಅವರು ಬರೆಯಲಿದ್ದಾರೆ. ಅಲ್ಲದೆ ಬಿಬಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ಹಿರಿಯ ಆಟಗಾರರರಾಗಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅವರು 46 ವರ್ಷ 350 ದಿನಗಳಲ್ಲಿ ಬಿಬಿಎಲ್ ಆಡಿದ್ದರು.
ಇದಕ್ಕೂ ಮುನ್ನ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನಲ್ಲಿಯೂ ಜೇಮ್ಸ್ ಆಂಡರ್ಸನ್ ಅವರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ, ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲು ಆಸಕ್ತಿ ತೋರಿಸಿರಲಿಲ್ಲ. ಆದರೆ, ವೆಲಾಸಿಟಿ ಬ್ಲಾಸ್ಟ್ನಲ್ಲಿ ಆಡುವ ಮೂಲಕ ಟಿ20 ಕ್ರಿಕೆಟ್ಗೆ ಮರಳಿದ್ದರು. ಲಂಕಾಷೈರ್ ಪರ ಆಡಿದ್ದ 4 ಇನಿಂಗ್ಸ್ಗಳಿಂದ 9 ವಿಕೆಟ್ಗಳನ್ನು ಕಬಳಿಸಿದ್ದರು. ಆ ಮೂಲಕ ಟಿ20 ಕ್ರಿಕೆಟ್ನಲ್ಲಿಯೂ ತಾವು ಭಯಾನಕ ಫಾರ್ಮ್ನಲ್ಲಿರುವುದಾಗಿ ಸಾಬೀತುಪಡಿಸಿದ್ದರು.
IND vs ENG: ಭಾರತ ಟೆಸ್ಟ್ ತಂಡದ ನಾಯಕತ್ವ ತಪ್ಪಲು ಕಾರಣ ತಿಳಿಸಿದ ಜಸ್ಪ್ರೀತ್ ಬುಮ್ರಾ!
ಇಂಗ್ಲೆಂಡ್ನ ಒಟ್ಟು 178 ಆಟಗಾರರು ನೋಂದಾಯಿಸಿಕೊಂಡಿರುವ ಬಿಬಿಎಲ್ ಡ್ರಾಫ್ಟ್ನಲ್ಲಿ ಆಂಡರ್ಸನ್ ಖರೀದಿದಾರರನ್ನು ಪಡೆಯಲು ಅವರ ಪ್ರದರ್ಶನ ಸಾಕಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಅವರಲ್ಲದೆ, ಪಾಕಿಸ್ತಾನದ 74 ಆಟಗಾರರು, ವೆಸ್ಟ್ ಇಂಡೀಸ್ನ 42 ಮತ್ತು ಶ್ರೀಲಂಕಾದ 13 ಆಟಗಾರರು ಸಹ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ, ಭಾರತದಿಂದ ಸಿದ್ಧಾರ್ಥ್ ಕೌಲ್ ಒಬ್ಬರೇ ಒಬ್ಬರು ನೋಂದಾಯಿಸಿಕೊಂಡಿದ್ದಾರೆ.
ಇದರ ನಡುವೆ ಭಾರತದ ತ್ರಿವಳಿ ಆಟಗಾರ್ತಿಯರಾದ ಶಿಖಾ ಪಾಂಡೆ, ಯಸ್ತಿಕಾ ಭಾಟಿಯಾ ಮತ್ತು ಜೆಮಿಮಾ ರೊಡ್ರಿಗಸ್ ಕೂಡ ಮಹಿಳಾ ಬಿಗ್ ಬ್ಯಾಷ್ ಲೀಗ್ ಡ್ರಾಫ್ಟ್ಗೆ ಆಸಕ್ತಿ ತೋರಿಸಿದ್ದಾರೆ. ಈ ಋತುವಿನಲ್ಲಿ ಹೀಟ್ ಮತ್ತು ಸಿಕ್ಸರ್ಸ್ ಕ್ರಮವಾಗಿ ಬಿಬಿಎಲ್ ಮತ್ತು ಡಬ್ಲ್ಯುಬಿಬಿಎಲ್ ಡ್ರಾಫ್ಟ್ಗಳಲ್ಲಿ ಮೊದಲ ಆಯ್ಕೆಯನ್ನು ಹೊಂದಿರುತ್ತಾರೆ. ಪ್ರತಿ ಡ್ರಾಫ್ಟ್ ನಾಲ್ಕು ಸುತ್ತುಗಳನ್ನು ಒಳಗೊಂಡಿರುತ್ತದೆ, ಈ ಸಮಯದಲ್ಲಿ ಪ್ರತಿ ತಂಡವು ಒಂದು ಆಯ್ಕೆಯನ್ನು ಮಾಡುತ್ತದೆ.