ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ZIM: ಭಾರತ ಟಿ20ಐ ತಂಡದಿಂದ ಅಭಿಷೇಕ್‌ ಶರ್ಮಾರನ್ನು ಕೈಬಿಡಿ ಎಂದ ಕೆ ಶ್ರೀಕಾಂತ್‌!

ಭಾರತದ ಮಾಜಿ ಮುಖ್ಯ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್ (ಕ್ರಿಸ್ ಶ್ರೀಕಾಂತ್) ಅವರು, ಕಳಪೆ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಅಭಿಷೇಕ್ ಶರ್ಮಾ ಕೇವಲ 11 ರನ್‌ಗಳನ್ನು ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು.

ಅಭಿಷೇಕ್‌ ಶರ್ಮಾ ವಿರುದ್ಧ ಕೆ ಶ್ರೀಕಾಂತ್‌ ಹೇಳಿಕೆ.

ನವದೆಹಲಿ: ಜಿಂಬಾಬ್ವೆ ಪ್ರವಾಸ ಅಭಿಷೇಕ್ ಶರ್ಮಾಗೆ (Abhishek Sharma) ಸಂಪೂರ್ಣ ನಿರಾಸಾದಾಯಕವಾಗಿತ್ತು. ಎಡಗೈ ಬ್ಯಾಟರ್ ಮೂರು ಟಿ20ಐ ಪಂದ್ಯಗಳಲ್ಲಿ (IND vs ZIM) ಕೇವಲ 11 ರನ್‌ಗಳನ್ನು ಮಾತ್ರ ಗಳಿಸಿದರು. ಮೊದಲ ಪಂದ್ಯದಲ್ಲಿ ಒಂದು ರನ್‌ಗೆ ಔಟಾದ ಅಭಿಷೇಕ್, ಎರಡನೇ ಪಂದ್ಯದಲ್ಲಿ ಎಂಟು ರನ್‌ಗಳಿಸಿದರು. ಆದರೂ ಭಾರತ ತಂಡದ ಆಡಳಿತ ಮಂಡಳಿ ಅವರ ಮೇಲೆ ವಿಶ್ವಾಸವಿಟ್ಟು, ಮೂರನೇ ಟಿ20 ಪಂದ್ಯದಲ್ಲಿ ಪ್ರಭ್‌ಸಿಮ್ರನ್ ಸಿಂಗ್‌ಗೆ ಪದಾರ್ಪಣೆ ಮಾಡುವ ಅವಕಾಶ ನೀಡಲಿಲ್ಲ. ಆದರೆ ಮೂರನೇ ಪಂದ್ಯದಲ್ಲೂ ಅಭಿಷೇಕ್ ಮತ್ತೆ ವಿಫಲರಾಗಿ ಕೇವಲ ಎರಡು ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಜಿಂಬಾಬ್ವೆ ವಿರುದ್ಧದ ಈ ಕಳಪೆ ಪ್ರದರ್ಶನದ ಬಳಿಕ ಭಾರತದ ಮಾಜಿ ಮುಖ್ಯ ಆಯ್ಕೆಗಾರ ಕ್ರಿಸ್ ಶ್ರೀಕಾಂತ್ (K Srikkanth), ಅಭಿಷೇಕ್ ಶರ್ಮಾ ಕುರಿತು ಕಠಿಣ ನಿರ್ಧಾರ ಕೈಗೊಳ್ಳಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶ್ರೀಕಾಂತ್, ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ನೀಡಬೇಕೆಂದು ಸಲಹೆ ನೀಡಿದರು. ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಸಂಜು ಸ್ಯಾಮ್ಸನ್ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿತ್ತು. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲೂ ಅವರು ಅಂತಿಮ ಹನ್ನೊಂದರ ಬಳಗದಿಂದ ಹೊರಗುಳಿದಿದ್ದರು. ಐದನೇ ಟಿ20 ಪಂದ್ಯದಲ್ಲಿ ಅವರು ವೈಭವ್ ಸೂರ್ಯವಂಶಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು.

IND vs ZIM: ವೈಭವ್‌ ಸೂರ್ಯವಂಶಿ ಸುಧಾರಿಸಿಕೊಳ್ಳಬೇಕಾದ ಅಂಶವನ್ನು ತಿಳಿಸಿದ ವಿವಿಎಸ್‌ ಲಕ್ಷ್ಮಣ್‌!

"ಅಭಿಷೇಕ್ ಶರ್ಮಾ ಅವರ ಆಟವನ್ನು ಎದುರಾಳಿ ತಂಡಗಳು ಈಗಾಗಲೇ ಅರ್ಥ ಮಾಡಿಕೊಂಡಿವೆ. ವಿಶ್ವಕಪ್‌ ಟೂರ್ನಿಯಿಂದಲೇ ಅವರ ವಿರುದ್ಧ ಸ್ಪಷ್ಟ ಯೋಜನೆ ರೂಪಿಸುತ್ತಿವೆ. ಈಗ ಅವರ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಸಂಜು ಸ್ಯಾಮ್ಸನ್‌ಗೆ ಮತ್ತೊಮ್ಮೆ ಅವಕಾಶ ಸಿಗಲಿದೆ ಎನ್ನುವ ವಿಶ್ವಾಸ ನನಗಿದೆ. ಅವರು ಖಂಡಿತವಾಗಿಯೂ ಮತ್ತೆ ತಂಡಕ್ಕೆ ಮರಳುತ್ತಾರೆ. ಆಯ್ಕೆಗಾರರು ಈ ವಿಷಯದಲ್ಲಿ ಧೈರ್ಯವಾದ ನಿರ್ಧಾರ ಕೈಗೊಳ್ಳಬೇಕಾಗಿದೆ," ಎಂದು ಕ್ರಿಸ್ ಶ್ರೀಕಾಂತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅಭಿಷೇಕ್ ಶರ್ಮಾ ಅವರ ವೈಫಲ್ಯತೆ

ಅಭಿಷೇಕ್ ಶರ್ಮಾ ಇತ್ತೀಚಿನ ದಿನಗಳಲ್ಲಿ ರನ್‌ಗಳಿಗಾಗಿ ಪರದಾಡುತ್ತಿದ್ದಾರೆ. ಅವರ ಕಳೆದ ಆರು ಇನಿಂಗ್ಸ್‌ಗಳಲ್ಲಿ ಒಂದರಲ್ಲಿಯೂ 20 ರನ್‌ಗಳ ಗಡಿ ದಾಟಲು ಸಾಧ್ಯವಾಗಿಲ್ಲ. ಇಂಗ್ಲೆಂಡ್ ಪ್ರವಾಸದ ಆರಂಭದಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 49 ರನ್‌ಗಳ ಇನಿಂಗ್ಸ್ ಆಡುವ ಮೂಲಕ ಉತ್ತಮ ಆರಂಭ ಪಡೆದಿದ್ದ ಅವರು, ಎರಡನೇ ಟಿ20ಐ ಪಂದ್ಯದಲ್ಲಿ ಖಾತೆ ತೆರೆಯದೇ ಔಟಾದರು. ಈ ಸರಣಿಯಲ್ಲಿ ಐರ್ಲೆಂಡ್ ಅಚ್ಚರಿಯ ಪ್ರದರ್ಶನ ನೀಡಿ ಭಾರತವನ್ನು 2-0 ಅಂತರದಿಂದ ವೈಟ್‌ವಾಶ್ ಮಾಡಿತ್ತು.

IND vs ZIM: ವೈಭವ್‌ ಸೂರ್ಯವಂಶಿಯಿಂದ ಔಟ್‌ ಆಫ್‌ ಫಾರ್ಮ್‌ ಅಭಿಷೇಕ್‌ ಶರ್ಮಾ ಸ್ಥಾನಕ್ಕೆ ಕುತ್ತು?

ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಅಭಿಷೇಕ್ ಉತ್ತಮ ಆರಂಭ ಪಡೆದಿದ್ದರು. ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 59 ಮತ್ತು 43 ರನ್ ಗಳಿಸಿದ್ದರು. ಆದರೆ ನಂತರದ ಮೂರು ಪಂದ್ಯಗಳಲ್ಲಿ ಒಟ್ಟು 29 ರನ್‌ಗಳಿಗೆ ಸೀಮಿತರಾದರು. ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ 4-0 ಅಂತರದಿಂದ ಕಳೆದುಕೊಂಡಿತು. ಮೊದಲ ಟಿ20ಐ ಪಂದ್ಯ ಮಳೆಯಿಂದ ರದ್ದಾಗಿತ್ತು.

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲೂ ಅಭಿಷೇಕ್ ಅವರ ಕಳಪೆ ಫಾರ್ಮ್ ಮುಂದುವರಿಯಿತು. ಮೂರು ಇನಿಂಗ್ಸ್‌ಗಳಲ್ಲಿ ಅವರು ಕೇವಲ 11 ರನ್ ಗಳಿಸಿದರು. ಆದರೂ, ಎರಡನೇ ಟಿ20ಐ ಪಂದ್ಯದಲ್ಲಿ ತಮ್ಮ ಆಲ್‌ರೌಂಡ್ ಸಾಮರ್ಥ್ಯ ಪ್ರದರ್ಶಿಸಿದ ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.