ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಪಾಕಿಸ್ತಾನ ಮಾಜಿ ನಾಯಕ ಸರ್ಫರಾಝ್‌ ಅಹ್ಮದ್‌!

ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಸರ್ಫರಾಝ್‌ ಖಾನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಾರ್ಚ್‌ 15 ರಂದು ಭಾನುವಾರ ವಿದಾಯ ಹೇಳಿದ್ದಾರೆ. ಅವರು ಪಾಕ್‌ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6,164 ರನ್‌ಗಳನ್ನು ಕಲೆ ಹಾಕಿದಾರೆ. ಇವರ ನಾಯಕತ್ವದಲ್ಲಿ ಪಾಕಿಸ್ತಾನ ತಂಡದ 2017ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಸರ್ಫರಾಝ್‌ ಅಹ್ಮದ್‌!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸರ್ಫರಾಝ್‌ ಖಾನ್‌. -

Profile
Ramesh Kote Mar 15, 2026 5:46 PM

ನವದೆಹಲಿ: ಪಾಕಿಸ್ತಾನ ತಂಡದ (Pakistan Cricket Team) ಮಾಜಿ ನಾಯಕ ಸರ್ಫರಾಝ್‌ ಅಹ್ಮದ್‌ (Sarfaraz Ahmed) ಮಾರ್ಚ್‌ 15 ರಂದು ಭಾನುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2017ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (ICC Champions Trophy 2017) ಟೂರ್ನಿಯಲ್ಲಿ ಪಾಕಿಸ್ತಾನ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದ ನಾಯಕ, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಆಡಿದ 54 ಟೆಸ್ಟ್, 117 ಒಡಿಐ ಮತ್ತು 61 ಟಿ20 ಪಂದ್ಯಗಳಿಂದ ಒಟ್ಟು 6,164 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರು 6 ಶತಕ ಮತ್ತು 35 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಆ ಮೂಲಕ ಪಾಕಿಸ್ತಾನದ ದಿಗ್ಗಜರಲ್ಲಿ ಸರ್ಫರಾಝ್‌ ಕೂಡ ಒಬ್ಬತರಾಗಿದ್ದಾರೆ.

38ನೇ ವಯಸ್ಸಿನ ಸರ್ಫರಾಝ್‌ ಅಹ್ಮದ್ ವಿಕೆಟ್‌ ಕೀಪರ್‌ ಆಗಿಯೂ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಅವರು ಸ್ಟಂಪಿಂಗ್‌ ಮತ್ತು ಕ್ಯಾಚ್‌ಗಳನ್ನು ಪಡೆಯುವುದಲ್ಲಿಯೂ ಸಕ್ಸಸ್‌ ಕಂಡಿದ್ದಾರೆ. ಅಂದ ಹಾಗೆ ಅವರು ಸ್ಟಂಪ್‌ಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 315 ಕ್ಯಾಚ್‌ಗಳು ಮತ್ತು 56 ಸ್ಟಂಪ್‌ ಔಟ್‌ ಮಾಡಿದ್ದಾರೆ.

T20 World Cup: ಪಾಕಿಸ್ತಾನ ಕ್ರಿಕೆಟಿಗರಿಗೆ 16 ಲಕ್ಷ ರು ದಂಡ ವಿಧಿಸಿದ್ದು ನಿಜಾನಾ? ಸ್ಪಷ್ಟನೆ ನೀಡಿದ ಪಿಸಿಬಿ!

ಸರ್ಫರಾಝ್‌ ಅಹ್ಮದ್‌‌ ಪಾಕಿಸ್ತಾನ ತಂಡವನ್ನು 100 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಅವರು 50 ಒಡಿಐ, 37 ಟಿ20ಐ ಮತ್ತು 13 ಟೆಸ್ಟ್‌ ಪಂದ್ಯಗಳು ಒಳಗೊಂಡಿವೆ. ಅವರು ಪಾಕಿಸ್ತಾನ ತಂಡವನ್ನು ಒಮ್ಮೆ ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ತಲುಪಿಸಿದ್ದರು. 2023ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಕೊನೆಯ ಬಾರಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದ ಅವರು, ಇದೀಗ ಪಾಕಿಸ್ತಾನ U-19 ತಂಡದ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಯನ್ನು ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಸ್ವೀಕರಿಸಿದ್ದರು.

ನನ್ನ ಕನಸು ನನಸಾಗಿದೆ: ಸರ್ಫರಾಝ್‌ ಅಹ್ಮದ್‌

ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುವುದು ಅತ್ಯಂತ ಗೌರವದ ಸಂಗತಿಯಾಗಿದೆ ಎಂದು ಅವರು ವಿವರಿಸಿದರು. 2006 ರಲ್ಲಿ U-19 ವಿಶ್ವಕಪ್‌ ಗೆದ್ದಿದ್ದ ತಂಡವನ್ನು ಮುನ್ನಡೆಸಿದ ಕ್ಷಣದಿಂದ 2017ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವು ಸಾಧಿಸಿದವರೆಗೆ ಹಲವು ಮಹತ್ವದ ಕ್ಷಣಗಳನ್ನು ಅವರು ನೆನಸಿಕೊಂಡಿದ್ದಾರೆ. ಪಾಕಿಸ್ತಾನವನ್ನು ಮುನ್ನಡೆಸುವ ತಮ್ಮ ಕನಸು ನನಸಾಗಿದೆ ಹಾಗೂ ನನ್ನ ನಾಯಕತ್ವದಲ್ಲಿ ಹಲವು ಭವಿಷ್ಯದ ಸ್ಟಾರ್‌ಗಳು ಬೆಳಕಿಗೆ ಬಂದಿದ್ದಾರೆಂದು ಅವರು ಹೇಳಿಕೊಂಡಿದ್ದಾರೆ.



“ಪಾಕಿಸ್ತಾನವನ್ನು ಪ್ರತಿನಿಧಿಸುವುದು ನನ್ನ ಜೀವನದಲ್ಲಿ ಅತ್ಯಂತ ಗೌರವದ ಸಂಗತಿ. 2006 ರಲ್ಲಿ U-19 ವಿಶ್ವಕಪ್‌ ಗೆದ್ದಿದ್ದ ತಂಡವನ್ನು ಮುನ್ನಡೆಸಿದ ಕ್ಷಣದಿಂದ 2017ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವಿನವರೆಗೆ, ಪಾಕಿಸ್ತಾನ ಕಲರ್ಸ್‌ನ ಪ್ರತಿಯೊಂದು ಕ್ಷಣವೂ ವಿಶೇಷವಾಗಿತ್ತು. ನನ್ನ ಆಟಗಾರ ಸಹೋದ್ಯೋಗಿಗಳು, ಕೋಚ್‌ಗಳು, ಕುಟುಂಬ ಮತ್ತು ಅಭಿಮಾನಿಗಳ ಅಚಲ ಬೆಂಬಲಕ್ಕೆ ನಾನು ಹೃತ್ಪೂರ್ವಕವಾಗಿ ಕೃತಜ್ಞನಾಗಿದ್ದೇನೆ," ಎಂದು ಸರ್ಫರಾಝ್‌ ಅಹ್ಮದ್‌ ಬರೆದಿದ್ದಾರೆ.