ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ZIM: ರಜತ್‌ ಪಾಟಿದಾರ್‌ಗೆ ಭಾರತ ತಂಡದಲ್ಲಿ ಸ್ಥಾನ ಏಕೆ ನೀಡಿಲ್ಲ? ಹನುಮ ವಿಹಾರಿ ಪ್ರಶ್ನೆ!

ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯ ಭಾರತ ತಂಡದಲ್ಲಿ ರಜತ್‌ ಪಾಟಿದಾರ್‌ಗೆ ಅವಕಾಶ ನೀಡದ ಬಗ್ಗೆ ಮಾಜಿ ಕ್ರಿಕೆಟಿಗ ಹನುಮ ವಿಹಾರಿ ಪ್ರಶ್ನೆ ಮಾಡಿದ್ದಾರೆ. 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮ್ಮ ಅದ್ಭುತ ಫಾರ್ಮ್‌ ಹೊರತಾಗಿಯೂ ಅವರನ್ನು ಬಿಸಿಸಿಐ ಆಯ್ಕೆದಾರರು ಕಡೆಗಣಿಸಿದ್ದಾರೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದಲ್ಲಿ ರಜತ್‌ ಪಾಟಿದಾರ್‌ಗೆ ಸ್ಥಾನ ಯಾಕಿಲ್ಲ? ಹನುಮ ವಿಹಾರಿ!

ರಜತ್‌ ಪಾಟಿದಾರ್‌ ಪರ ಬ್ಯಾಟ್‌ ಬೀಸಿದ ಹನುಮ ವಿಹಾರಿ. -

Profile
Ramesh Kote Jul 24, 2026 3:44 PM

ನವದೆಹಲಿ: ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಗೆ (IND vs ZIM) ರಜತ್ ಪಾಟಿದಾರ್ (Rajat Patidar) ಅವರನ್ನು ಆಯ್ಕೆ ಮಾಡದ ಆಯ್ಕೆ ಸಮಿತಿಯ ನಿರ್ಧಾರವನ್ನು ಭಾರತದ ಮಾಜಿ ಬ್ಯಾಟರ್ ಹನುಮ ವಿಹಾರಿ (Hanumna Vihari) ತೀವ್ರವಾಗಿ ಪ್ರಶ್ನಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ಪಾಟಿದಾರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ, ಅವರ ಸಾಧನೆ ಮತ್ತು ನಾಯಕತ್ವದ ಅರ್ಹತೆಯನ್ನು ಟೀಮ್‌ ಮ್ಯಾನೇಜ್‌ಮೆಂಟ್‌ ಹಾಗೂ ಆಯ್ಕೆ ಸಮಿತಿ ಕಡೆಗಣಿಸಿದೆ ಎಂದು ವಿಹಾರಿ ಅಭಿಪ್ರಾಯಪಟ್ಟಿದ್ದಾರೆ.

ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಗಳಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು. ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತ ತಂಡ ಯುಕೆ ಪ್ರವಾಸದಲ್ಲಿ ಆರು ಪಂದ್ಯಗಳನ್ನು ಸೋತಿತ್ತು ಹಾಗೂ ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿತ್ತು. ಇದೀಗ ಜಿಂಬಾಬ್ವೆ ಟಿ20ಐ ಸರಣಿಯಲ್ಲಿ ಶ್ರೇಯಸ್‌ ನಾಯಕನಾಗಿ ಮೊದಲ ಸರಣಿಯನ್ನು ಗೆಲ್ಲಲು ಎದುರು ನೋಡುತ್ತಿದ್ದಾರೆ.

IND vs ZIM: ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ ಹಾದಿಯ ಬಗ್ಗೆ ಪ್ರತಿಕ್ರಿಯಿಸಿದ ಮಯಾಂಕ್‌ ಯಾದವ್!

ಬಿಸಿಸಿಐ ಅನ್ನು ಪ್ರಶ್ನಿಸಿದ ಹನುಮ ವಿಹಾರಿ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಭಾರತದ ಮಾಜಿ ಬ್ಯಾಟರ್ ಹನುಮ ವಿಹಾರಿ, ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡದಿರುವುದನ್ನು ಪ್ರಶ್ನಿಸಿದರು.

"ರಿಂಕು ಸಿಂಗ್ ಅವರನ್ನು ಮತ್ತೆ ತಂಡಕ್ಕೆ ಕರೆತರಲಾಗಿದೆ. ಆದರೆ ರಜತ್ ಪಾಟಿದಾರ್ ಎಲ್ಲಿದ್ದಾರೆ? ಅವರು ಸತತ ಎರಡು ಋತುಗಳಲ್ಲಿ ಆರ್‌ಸಿಬಿಯನ್ನು ಚಾಂಪಿಯನ್‌ ಮಾಡಿದ್ದಾರೆ ಹಾಗೂ ಅವರು ಬ್ಯಾಟರ್ ಆಗಿಯೂ ಉತ್ತಮ ಪ್ರದರ್ಶನ ನೀಡಿದ್ದರು. ಆದರೂ ಅವರನ್ನು ಬಿಸಿಸಿಐ ಪರಿಗಣಿಸಲೇ ಇಲ್ಲ. ಇದು ಆಯ್ಕೆ ಸಮಿತಿಯ ಕಠಿಣ ನಿರ್ಧಾರವಾಗಿದೆ," ಎಂದು ಹನುಮ ವಿಹಾರಿ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ತಂಡವನ್ನು ಗಮನಿಸಿದರೆ ಬಹುತೇಕ ಎಲ್ಲರೂ ಎಡಗೈ ಬ್ಯಾಟರ್‌ಗಳೇ ಇದ್ದಾರೆ. ಇಂತಹ ಸಂದರ್ಭದಲ್ಲಿ ಬಲಗೈ ಬ್ಯಾಟರ್‌ಗಳಾದ ರಜತ್ ಪಾಟಿದಾರ್ ಅಥವಾ ಸಂಜು ಸ್ಯಾಮ್ಸನ್ ಅವರಲ್ಲಿ ಒಬ್ಬರಿಗೆ ಅವಕಾಶ ನೀಡಬೇಕಿತ್ತು. ಹೌದು, ಪ್ರಭ್‌ಸಿಮ್ರನ್ ಸಿಂಗ್ ತಂಡದಲ್ಲಿದ್ದಾರೆ. ಆದರೆ ಇಶಾನ್ ಕಿಶನ್ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಆಗಿರುವುದರಿಂದ ಅವರಿಗೆ ಆಡುವ ಅವಕಾಶ ಸಿಗುತ್ತದೆ ಎಂದು ನನಗೆ ಅನಿಸುವುದಿಲ್ಲ," ಎಂದು ಅಭಿಪ್ರಾಯಪಟ್ಟರು.

IND vs ZIM: 15ನೇ ವಯಸ್ಸಿನ ಚೊಚ್ಚಲ ಅರ್ಧಶತಕ ಬಾರಿಸಿ ವಿಶ್ವ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ರಜತ್ ಪಾಟಿದಾರ್‌ರನ್ನು ಏಕೆ ಆಯ್ಕೆ ಮಾಡಲಿಲ್ಲ?: ಹನುಮ ವಿಹಾರಿ ಪ್ರಶ್ನೆ

ಭಾರತ ತಂಡದ ಆಯ್ಕೆಯಲ್ಲಿ ಸಮತೋಲನದ ಕೊರತೆಯಿದೆ ಎಂದು ಹನುಮ ವಿಹಾರಿ ಮತ್ತೊಮ್ಮೆ ಪ್ರಶ್ನೆ ಎತ್ತಿದ್ದಾರೆ. 2026ರ ಐಪಿಎಲ್‌ ಟೂರ್ನಿಯಲ್ಲಿ 486 ರನ್‌ಗಳನ್ನು 196.76ರ ಸ್ಟ್ರೈಕ್‌ರೇಟ್‌ನಲ್ಲಿ ಗಳಿಸಿ ಅದ್ಭುತ ಪ್ರದರ್ಶನ ನೀಡಿದರೂ, ರಜತ್ ಪಾಟಿದಾರ್ ಅವರಿಗೆ ಅವಕಾಶ ನೀಡದಿರುವುದು ಅಚ್ಚರಿ ಮೂಡಿಸಿದೆ ಎಂದು ಅವರು ಹೇಳಿದರು.

ಅಲ್ಲದೆ, ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತು ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡದ ನಿರ್ಧಾರವನ್ನೂ ವಿಹಾರಿ ಟೀಕಿಸಿದರು.

"ಕುಲ್‌ದೀಪ್ ಯಾದವ್ ಅವರನ್ನು ಏಕೆ ತಂಡಕ್ಕೆ ಸೇರಿಸಲಿಲ್ಲ? ಅವರು ಅನುಭವ ಹೊಂದಿರುವ ರಿಸ್ಟ್ ಸ್ಪಿನ್ನರ್. ಅವರಿಗೆ ಅವಕಾಶ ನೀಡದಿರುವುದು ಏಕೆ? ಜಿಂಬಾಬ್ವೆ ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲು ಇಷ್ಟವಿಲ್ಲದಿದ್ದರೆ ಪ್ರಭ್‌ಸಿಮ್ರನ್ ಸಿಂಗ್ ಅವರನ್ನು ಕರೆಸಿದ್ದೀರಿ, ಅದು ಸರಿ. ಆದರೆ ರಜತ್ ಪಾಟಿದಾರ್‌ಗೆ ಕನಿಷ್ಠ ಒಂದು ಅವಕಾಶವನ್ನೂ ನೀಡಲಿಲ್ಲ. ಇದರಲ್ಲಿ ವಯಸ್ಸು ಏಕೆ ಮಾನದಂಡವಾಗಬೇಕು?" ಎಂದು ವಿಹಾರಿ ಪ್ರಶ್ನೆ ಮಾಡಿದ್ದಾರೆ.