IND vs AUS: ಅರ್ಷದೀಪ್ ಸಿಂಗ್‌ರನ್ನು ಬೆಂಚ್ ಕಾಯಿಸಬಾರದೆಂದ ಇರ್ಫಾನ್ ಪಠಾಣ್!
ಆಸ್ಟ್ರೇಲಿಯಾ ವಿರುದ್ಧ ಮುಂದಿನ ಎರಡೂ ಪಂದ್ಯಗಳಲ್ಲಿ ಅರ್ಷದೀಪ್ ಸಿಂಗ್ ಅವರನ್ನು ಆಡಿಸಬೇಕೆಂದು ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಆಗ್ರಹಿಸಿದ್ದಾರೆ. ಮೂರನೇ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ತಮ್ಮ ಮೌಲ್ಯ ಏನೆಂದು ಅವರು ಸಾಬೀತುಪಡಿಸಿದ್ದಾರೆಂದು ಪಠಾಣ್ ತಿಳಿಸಿದ್ದಾರೆ.
ಅರ್ಷದೀಪ್ ಸಿಂಗ್ ಪರ ಬ್ಯಾಟ್ ಬೀಸಿದ ಇರ್ಫಾನ್ ಪಠಾಣ್. -
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯ (IND vs AUS) ಮುಂದಿನ ಪಂದ್ಯಗಳಲ್ಲಿ ಯುವ ವೇಗಿ ಅರ್ಷದೀಪ್ ಸಿಂಗ್ (Arshdeep Singh) ಅವರನ್ನು ಕೂರಿಸಲು ಯಾವುದೇ ಕಾರಣವಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಹೇಳಿದ್ದಾರೆ. ಆಸೀಸ್ ಎದುರಿನ ಆರಂಭಿಕ ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಅರ್ಷದೀಪ್ ಸಿಂಗ್ ಅವರು ಮೂರನೇ ಪಂದ್ಯದಲ್ಲಿ 35 ರನ್ ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ನಾಲ್ಕನೇ ಪಂದ್ಯವನ್ನು ಆಡಲು ಯುವ ವೇಗಿ ಎದುರು ನೋಡುತ್ತಿದ್ದಾರೆ.
ಪಂದ್ಯಗಳ ಆರಂಭಿಕ ಆರು ಓವರ್‌ಗಳಲ್ಲಿ ತಾವು ಎಷ್ಟೊಂದು ಪರಿಣಾಮಕಾರಿ ಎಂಬುದನ್ನು ಯುವ ವೇಗಿ ಸಾಬೀತುಪಡಿಸಿದ್ದಾರೆ. ತಮಗೆ ಸಿಕ್ಕಿ ಅವಕಾಶದಲ್ಲಿ ಅದ್ಭುತ ಪ್ರದರ್ಶನವನ್ನು ತೋರುವ ಮೂಲಕ ತಮ್ಮ ಮೌಲ್ಯ ಏನೆಂದು ಸಾಬೀತುಪಡಿಸಿದ್ದಾರೆಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
"ಅರ್ಷದೀಪ್ ಸಿಂಗ್ ಕಳೆದ ಪಂದ್ಯದಲ್ಲಿ ಆಡುವ ಮೂಲಕ ತಮ್ಮ ಮೌಲ್ಯ ಏನೆಂಬುದನ್ನು ತೋರಿಸಿದರು. ಅವರು ಇಲ್ಲಿಯವರೆಗೆ ಪವರ್‌ಪ್ಲೇನಲ್ಲಿ 45 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಚೊಚ್ಚಲ ಪಂದ್ಯದ ನಂತರ, ಪವರ್‌ಪ್ಲೇನಲ್ಲಿ ಹೊಸ ಚೆಂಡಿನಲ್ಲಿ ಅರ್ಷದೀಪ್‌ಗಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದವರು ಯಾರೂ ಇಲ್ಲ. ಅದಕ್ಕಾಗಿಯೇ ಅರ್ಷದೀಪ್ ಅವರ ಸೇರ್ಪಡೆ ಅತ್ಯಗತ್ಯ, ಅವರು ಅತ್ಯಗತ್ಯ ಎಂದು ನಾವು ಮತ್ತೆ ಮತ್ತೆ ಹೇಳುತ್ತಿದ್ದೇವೆ. ಇದಕ್ಕೆ ಕಾರಣವೇನೆಂದು ಅವರು ತೋರಿದ್ದಾರೆ," ಎಂದು ಇರ್ಫಾನ್ ಪಠಾಣ್ ತಮ್ಮ ಯೂಟ್ಯೂಬ್ ಚಾನೆಲ್‌ನ ವೀಡಿಯೊದಲ್ಲಿ ತಿಳಿಸಿದ್ದಾರೆ.
AUS vs IND: ಆಸ್ಟ್ರೇಲಿಯಾಗೆ ಆಘಾತ, ಕೊನೆಯ ಎರಡು ಟಿ20ಐ ಪಂದ್ಯಗಳಿಂದ ಟ್ರಾವಿಸ್ ಹೆಡ್ ಔಟ್!
ಟಿ20ಐ ತಂಡದಲ್ಲಿ ನಿಯಮಿತ ಆಟಗಾರನಲ್ಲದಿದ್ದರೂ ಹೆಚ್ಚಿನ ಸಂದರ್ಭಗಳಲ್ಲಿ ಅರ್ಷ್‌ದೀಪ್ ಸಿಂಗ್ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಇರ್ಫಾನ್ ಪಠಾಣ್ ಅವರನ್ನು ಶ್ಲಾಘಿಸಿದರು. ಇನ್ನು ಮುಂದೆ ಅರ್ಷ್‌ದೀಪ್ ಅವರನ್ನು ಬೆಂಚ್ ಕಾಯಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.
"ಇದರ ಶ್ರೇಯ ಅರ್ಷದೀಪ್ ಸಿಂಗ್‌ಗೆ ಸಲ್ಲಬೇಕು. ನಿಯಮಿತವಾಗಿ ಆಡದಿದ್ದರೂ, ಅವಕಾಶ ಸಿಕ್ಕಾಗಲೆಲ್ಲಾ ಅವರು ಪ್ರದರ್ಶನ ನೀಡಿದ ರೀತಿ ಶ್ಲಾಘನೀಯ. ತುಂಬಾ ಚೆನ್ನಾಗಿ ಬೌಲ್ ಮಾಡಿದ್ದಾರೆ. ಈಗ ಅವರನ್ನು ಮತ್ತೆ ಕೈಬಿಡಬಾರದು, ಅವರು ನಿಯಮಿತವಾಗಿ ಪ್ಲೇಯಿಂಗ್ XI ನಲ್ಲಿ ಆಡುವುದನ್ನು ಮುಂದುವರಿಸಬೇಕು ಎಂಬ ಆಶಯವಿದೆ. ವಿಶೇಷವಾಗಿ ಈ ಪ್ರದರ್ಶನದ ನಂತರ, ಅವರನ್ನು ಬೆಂಚ್ ಕಾಯಿಸಲು ಯಾವುದೇ ಕಾರಣವಿರುವುದಿಲ್ಲ," ಎಂದು ಅವರು ತಿಳಿಸಿದ್ದಾರೆ.
IND vs AUS- ಅರ್ಷದೀಪ್, ವಾಷಿಂಗ್ಟನ್ ಮಿಂಚು ; ಆಸ್ಟ್ರೇಲಿಯಾಗೆ ತಿರುಗೇಟು ನೀಡಿದ ಭಾರತ!
ಮೂರನೇ ಪಂದ್ಯದಲ್ಲಿ 10 ಡಾಟ್ ಬಾಲ್ ಹಾಕಿದ್ದ ಅರ್ಷದೀಪ್ ಸಿಂಗ್ ಟ್ರಾವಿಸ್ ಹೆಡ್, ಜಾಶ್ ಇಂಗ್ಲಿಸ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಅವರನ್ನು ಔಟ್ ಮಾಡಿದ್ದರು. ಆ ಮೂಲಕ ಭಾರತ ತಂಡ 5 ವಿಕೆಟ್ ಗೆಲುವು ಪಡೆದಿತ್ತು. ಆ ಮೂಲಕ ಟಿ20ಐ ಸರಣಿಯಲ್ಲಿ ಭಾರತ ತಂಡ 1-1 ಸಮಬಲ ಸಾಧಿಸಿತು. ಅರ್ಷದೀಪ್ ಸಿಂಗ್ ತಾವು ಆಡಿದ 66 ಟಿ 20ಐ ಪಂದ್ಯಗಳಿಂದ 104 ವಿಕೆಟ್‌ಗಳನ್ನು ಕಬಳಿಸಿದ್ದರು.