ಜೀವನ ಅಂದುಕೊಂಡಂತೆ ನಡೆಯಲ್ಲ: ರ‍್ಯಾಪಿಡೋ ಬುಕ್ ಮಾಡಿದವನಿಗೆ ಚಾಲಕನಾಗಿ ಬಂದವನು ಕ್ಲಾಸ್ ಟಾಪರ್
ರ‍್ಯಾಪಿಡೋ ಬುಕ್ ಮಾಡಿದ ಪ್ರಯಾಣಿಕನೊಬ್ಬ ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದು ಕ್ಲಾಸಿನ ಟಾಪರ್ ಎಂದು ತಿಳಿದು ಆಶ್ಚರ್ಯಗೊಂಡಿದ್ದಾನೆ. ಉಮರ್ ಅವಸರದಿಂದ ರ‍್ಯಾಪಿಡೋ ರೈಡ್ ಬುಕ್ ಮಾಡಿದ್ದ. ಬುಕಿಂಗ್ ವಿವರಗಳು ಕಾಣಿಸಿಕೊಂಡಾಗ ಆತನಿಗೆ ಚಾಲಕನ ಹೆಸರನ್ನು ಎಲ್ಲೋ ಕೇಳಿದ್ದೇನೆ ಎನಿಸಿತು. ಅವಹ ಊಹೆ ನಿಜವಾಗಿತ್ತು. ರ‍್ಯಾಪಿಡೋ ಚಾಲಕ ಆತನ ಸಹಪಾಠಿ, ಕ್ಲಾಸ್ ಟಾಪರ್ ಆಗಿದ್ದ.
ಶಾಲೆಯ ಕ್ಲಾಸ್ ಟಾಪರ್ ಈಗ ರ‍್ಯಾಪಿಡೋ ಚಾಲಕ -
ನವದೆಹಲಿ, ಮಾ. 4: ಜೀವನ ನೀವು ಅಂದುಕೊಂಡಂತೆ ನಡೆಯುವುದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ರ‍್ಯಾಪಿಡೋ ಬುಕ್ ಮಾಡಿದ ಪ್ರಯಾಣಿಕನೊಬ್ಬ ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದು ಕ್ಲಾಸಿನ ಟಾಪರ್ ಎಂದು ತಿಳಿದು ಆಶ್ಚರ್ಯಗೊಂಡಿದ್ದಾನೆ. ಉಮರ್ ಅವಸರದಿಂದ ರಾಪಿಡೋ ರೈಡ್ ಬುಕ್ ಮಾಡಿದ್ದ. ಬುಕಿಂಗ್ ವಿವರಗಳು ಕಾಣಿಸಿಕೊಂಡಾಗ ಸವಾರನ ಹೆಸರು ತನಗೆ ಪರಿಚಿತ ಎಂದುಕೊಂಡಿದ್ದ. ಆತನ ಊಹೆ ನಿಜವಾಗಿತ್ತು. ರ‍್ಯಾಪಿಡೋ ಚಾಲಕ ಆತನ ಸಹಪಾಠಿ, ಕ್ಲಾಸ್ ಟಾಪರ್ ಕೂಡ ಆಗಿದ್ದ. ಸದ್ಯ ಉಮರ್‌ನ ವಿಭಿನ್ನ ಅನುಭವದ ಈ ಪೋಸ್ಟ್ ವೈರಲ್ ಆಗುತ್ತಿದೆ.
ಉಮರ್ ರ‍್ಯಾಪಿಡೋ ರೈಡ್ ಬುಕ್ ಮಾಡಿದ್ದ. ಬುಕ್ಕಿಂಗ್ ಖಚಿತ ಆದಾಗ ಚಾಲಕನ ಹೆಸರು 'ಚಂದನ್' ಎಂದು ಗೊತ್ತಾಯಿತು. ಮೊದಲಿಗೆ ಇದನ್ನು ನಿರ್ಲಕ್ಷಿಸಿದ. ಬಳಿಕ ತನ್ನ ಸಹಪಾಠಿ, ಕ್ಲಾಸ್ ಟಾಪರ್ ಇರಬಹುದೇ ಎನ್ನುವ ಅನುಮಾನ ಮೂಡಿತ್ತು. ಚಾಲಕ ಬಂದಾತ ಆತ ತನ್ನ ಸಹಪಾಠಿ ಚಂದನ್ ಎನ್ನುವುದು ಉಮರ್‌ಗೆ ಖಚಿತವಾಗಿದ್ದು, ಅನಿರೀಕ್ಷಿತ ಭೇಟಿಗೆ ಅಚ್ಚರಿ ವ್ಯಕ್ತಪಡಿಸಿದ್ದ.
ವೈರಲ್ ಪೋಸ್ಟ್ ಇಲ್ಲಿದೆ:
He booked a Rapido in a hurry… never imagining the rider would be his own class topper.
— Bharat Mata Ke Sewak (@PatrioticSoul33) March 2, 2026
Umar was getting late, so he quickly booked a ride.
The booking got confirmed. The rider’s name showed: Chandan.
At first, he ignored it. Then he paused… Could this be our class topper… pic.twitter.com/qgNlKjcKPx
ಪೋಸ್ಟ್‌ನಲ್ಲಿ ಏನಿದೆ?
ಚಂದನ್ ಬಂದಾಗ, ಉಮರ್ ತಮಾಷೆಯಾಗಿ ಅವನನ್ನು ಸ್ವಾಗತಿಸುತ್ತಾ, "ಹೇ, ರ‍್ಯಾಪಿಡೋ ಭಯ್ಯಾ!" ಎಂದು ಸಂಬೋಧಿಸಿದ್ದಾನೆ. ಅದಕ್ಕೆ ಚಂದನ್ ನಗುತ್ತ, "ಮೊದಲು ನನಗೆ ಒಟಿಪಿ ಹೇಳು" ಎಂದು ಪ್ರತಿಕ್ರಿಯಿಸಿದ್ದಾನೆ. ಬೈಕ್ ಹತ್ತಿದ ಮೇಲೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಉಮರ್, "ನೀನು ನಮ್ಮ ಕ್ಲಾಸ್ ಟಾಪರ್ ಆಗಿದ್ದವನಲ್ಲವೇ?" ಎಂದು ಕೇಳಿದ್ದಾನೆ.
ಸವಾರಿ ಆರಂಭವಾಗುತ್ತಿದ್ದಂತೆ, ಉಮರ್ ರ‍್ಯಾಪಿಡೋ ಸವಾರನಾಗಿ ಕೆಲಸ ಮಾಡಲು ಯಾವಾಗ ಪ್ರಾರಂಭಿಸಿದೆ ಎಂದು ಚಂದನ್ ಬಳಿ ಕೇಳಿದ್ದಾನೆ. ಚಂದನ್ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸುತ್ತ, ʼʼಜೀವನ ಯಾವಾಗಲೂ ಪ್ಲ್ಯಾನ್ ಪ್ರಕಾರ ನಡೆಯುವುದಿಲ್ಲ. ಆದರೆ ನಾನು ಚೆನ್ನಾಗಿದ್ದೇನೆʼʼ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಹಳೆಯ ಸಹಪಾಠಿಯಿಂದ ಹಣ ಪಡೆಯಲು ನಿರಾಕರಿಸಿದ್ದಾನೆ. "ಒಂದು ಕಾಲದಲ್ಲಿ ಟಾಪರ್ ಆಗಿದ್ದ ನಾನು ಇಂದು ರೈಡರ್ ಆಗಿದ್ದೇನೆ. ಜೀವನ ನಿಜಕ್ಕೂ ಊಹಿಸಲಸಾಧ್ಯ" ಎಂದು ಹೇಳಿದ್ದಾನೆ.
ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ
ಅಂಕಗಳು ಅಥವಾ ಶೈಕ್ಷಣಿಕ ಯಶಸ್ಸು ಯಾವಾಗಲೂ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಪ್ರಾಮಾಣಿಕವಾಗಿ ದುಡಿದರೆ ಪ್ರತಿಯೊಂದು ಕೆಲಸವೂ ಗೌರವಕ್ಕೆ ಅರ್ಹ ಎಂಬ ಸಂದೇಶದೊಂದಿಗೆ ಈ ಪೋಸ್ಟ್ ವೈರಲ್ ಆಗಿದೆ.ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ.
ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದರೂ ಆರ್ಥಿಕ ಒತ್ತಡಗಳು, ಕುಟುಂಬದ ಜವಾಬ್ದಾರಿಗಳು ಬದುಕನ್ನು ಬದಲಾಯಿಸುತ್ತವೆ ಎಂದು ವಿಡಿಯೊ ನೋಡಿದ ಅನೇಕರು ಪ್ರತಿಕ್ರಿಯಿಸಿದ್ದಾರೆ. ಯಾವುದೇ ಕೆಲಸ ಸಣ್ಣದಲ್ಲ, ಪ್ರಾಮಾಣಿಕವಾಗಿ ದುಡಿಯುವ ಪ್ರತಿಯೊಬ್ಬರಿಗೂ ಗೌರವ ಇದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.