ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ 15 ಸದಸ್ಯರ ಒಮನ್‌ ತಂಡ ಪ್ರಕಟ!

Oman Squad for T20 World Cup: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7 ರಂದು ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್‌ ಟೂರ್ನಿಗೆ 15 ಸದಸ್ಯರ ಒಮನ್‌ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಒಮನ್ ಕ್ರಿಕೆಟ್ ತಂಡವು ಪಂದ್ಯಾವಳಿಗಾಗಿ ತನ್ನ ತಂಡವನ್ನು ಪ್ರಕಟಿಸಿದೆ. ಒಮನ್ ತಂಡವನ್ನು ಭಾರತೀಯ ಮೂಲದ ಜತೀಂದರ್ ಸಿಂಗ್ ಮುನ್ನಡೆಸಲಿದ್ದಾರೆ.

2026ರ ಟಿ20 ವಿಶ್ವಕಪ್‌ ಒಮನ್‌ ತಂಡಕ್ಕೆ ಜತೀಂದರ್‌ ಸಿಂಗ್‌ ನಾಯಕ!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಒಮನ್‌ ತಂಡ ಪ್ರಕಟ. -

Profile
Ramesh Kote Dec 30, 2025 10:06 PM

ನವದೆಹಲಿ: ಮುಂದಿನ ವರ್ಷ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಗೆ ಒಮನ್ (Oman) ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಲುಧಿಯಾನದ ಜತೀಂದರ್ ಸಿಂಗ್ (Jatinder Singh) ಒಮನ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಒಮನ್ ತಂಡ ಟೂರ್ನಿಯ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದರಲ್ಲಿ ಜಿಂಬಾಬ್ವೆ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಐರ್ಲೆಂಡ್ ತಂಡಗಳ ಎದುರು ಲೀಗ್‌ ಹಂತದಲ್ಲಿ ಕಾದಾಟ ನಡೆಸಲಿದೆ. ಒಮನ್ ಫೆಬ್ರವರಿ 9 ರಂದು ಕೊಲಂಬೊದಲ್ಲಿ ಜಿಂಬಾಬ್ವೆ ವಿರುದ್ಧ ತನ್ನ ಮೊದಲನೇ ಪಂದ್ಯವನ್ನು ಆಡುವ ಮೂಲಕ ಟಿ20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.

ಒಮನ್ ಕ್ರಿಕೆಟ್ ತಂಡದ ಭಾರತೀಯ ಮೂಲದ ಆಟಗಾರ ಜತೀಂದರ್ ಸಿಂಗ್ ಅವರ ಕಥೆ ಸಾಕಷ್ಟು ಆಸಕ್ತಿದಾಯಕವಾಗಿದೆ. ಅವರ ತಂದೆ ಗುರ್ಮೈಲ್ ಸಿಂಗ್ 1975 ರಲ್ಲಿ ಉದ್ಯೋಗವನ್ನು ಹುಡುಕುತ್ತಾ ಒಮನ್‌ಗೆ ತೆರಳಿದ್ದರು. ಅಲ್ಲಿ ಅವರು ರಾಯಲ್ ಒಮನ್ ಪೊಲೀಸರಲ್ಲಿ ಬಡಗಿಯಾಗಿ ಸೇವೆ ಸಲ್ಲಿಸಿದ್ದರು. ಜತಿಂದರ್ 2003ರಲ್ಲಿ ತಮ್ಮ ತಾಯಿ ಮತ್ತು ಒಡಹುಟ್ಟಿದವರೊಂದಿಗೆ ಒಮನ್‌ಗೆ ತೆರಳಿದ್ದರು. ಅವರು ಮಸ್ಕತ್‌ನಲ್ಲಿರುವ ಇಂಡಿಯನ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದಿದ್ದರು.

Ellyse Perry: 2026ರ ಮಹಿಳಾ ಪ್ರೀಮಿಯರ್‌ ಲೀಗ್‌ನಿಂದ ಸ್ಟಾರ್‌ ಆಟಗಾರ್ತಿ ಔಟ್‌, ಆರ್‌ಸಿಬಿಗೆ ಆಘಾತ!

ಕ್ರಿಕೆಟ್‌ನ ಮೇಲಿನ ಅವರ ಉತ್ಸಾಹ ಅವರನ್ನು ಒಮನ್ ಅಂಡರ್ -19 ತಂಡಕ್ಕೆ ಕರೆದೊಯ್ಯಿತು. ಗಮನಾರ್ಹವಾಗಿ, ಅವರು 2007ರ ಎಸಿಸಿ ಅಂಡರ್ -19 ಎಲೈಟ್ ಕ್ಲಬ್‌ನಲ್ಲಿ ಐದು ಪಂದ್ಯಗಳನ್ನು ಆಡಿದ್ದರು. ಜತೀಂದರ್ ಸಿಂಗ್ ಒಮನ್ ಪರ 61 ಏಕದಿನ ಮತ್ತು 72 ಟಿ20 ಪಂದ್ಯಗಳನ್ನು ಆಡಿದ್ದು, ಏಕದಿನ ಪಂದ್ಯಗಳಲ್ಲಿ 1704 ರನ್ ಮತ್ತು ಟಿ20ನಲ್ಲಿ 1605 ರನ್ ಗಳಿಸಿದ್ದಾರೆ.



ವಿನಾಯಕ್ ಶುಕ್ಲಾ ಉಪನಾಯಕ

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ವಿನಾಯಕ್ ಶುಕ್ಲಾ ಅವರನ್ನು ಟಿ20 ವಿಶ್ವಕಪ್‌ಗಾಗಿ ಒಮನ್ ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ. ಏಷ್ಯಾ ಕಪ್ ತಂಡಕ್ಕೆ ಹೋಲಿಸಿದರೆ ತಂಡದಲ್ಲಿ ಐದು ಬದಲಾವಣೆಗಳನ್ನು ಮಾಡಲಾಗಿದ್ದು, ಹಲವಾರು ಅನುಭವಿ ಆಟಗಾರರನ್ನು ಮತ್ತು ಹಲವು ಹೊಸ ಆಟಗಾರರನ್ನು ಉಳಿಸಿಕೊಂಡಿದೆ. ಅನುಭವಿ ಆಲ್‌ರೌಂಡರ್ ಅಮೀರ್ ಕಲೀಮ್ ಅವರನ್ನು ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿಲ್ಲ. ಪಾಕಿಸ್ತಾನದಲ್ಲಿ ಜನಿಸಿದ 43ರ ಪ್ರಾಯದ ಕಲೀಮ್, ಓಮನ್ ಪರ 15 ಏಕದಿನ ಮತ್ತು 54 ಟಿ20 ಪಂದ್ಯಗಳನ್ನು ಆಡಿದ್ದಾರೆ.

IND vs NZ: ಸಚಿನ್‌ ತೆಂಡೂಲ್ಕರ್‌ರ ವಿಶ್ವ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್‌ ಕೊಹ್ಲಿ!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಒಮನ್ ತಂಡ

ಜತೀಂದರ್ ಸಿಂಗ್ (ನಾಯಕ), ವಿನಾಯಕ್ ಶುಕ್ಲಾ, ಮೊಹಮ್ಮದ್ ನದೀಮ್, ಶಕೀಲ್ ಅಹ್ಮದ್, ಹಮ್ಮದ್ ಮಿರ್ಜಾ, ವಸಿಮ್ ಅಲಿ, ಕರಣ್ ಸೋನಾವಾಲೆ, ಶಾ ಫೈಸಲ್, ನದೀಮ್ ಖಾನ್, ಸುಫ್ಯಾನ್ ಮಹಮೂದ್, ಜೇ ಒಡೆದಾರ, ಶಫೀಕ್ ಜಾನ್, ಆಶಿಶ್ ಒಡೆದಾರ, ಜಿತೆನ್ ರಾಮನಂದಿ, ಹಸ್ನೈನ್ ಅಲಿ ಶಾ