ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಭಾರತ ತಂಡ ಪಾಕಿಸ್ತಾನದಲ್ಲಿ ಆಡಿದಿದ್ರೆ...?ʼ: ಅಚ್ಚರಿ ಹೇಳಿಕೆ ನೀಡಿದ ವಸೀಮ್‌ ಅಕ್ರಮ್!

Wasim Akram on India's Matches in Dubai: ನ್ಯೂಜಿಲೆಂಡ್‌ ವಿರುದ್ಧದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ 4 ವಿಕೆಟ್‌ಗಳಿಂದ ಗೆಲುವು ಪಡೆಯುವ ಮೂಲಕ ಟೀಮ್‌ ಇಂಡಿಯಾ ಮೂರನೇ ಬಾರಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ವಸೀಮ್‌ ಅಕ್ರಮ್‌, ಭಾರತ ತಂಡ ಪಾಕಿಸ್ತಾನದಲ್ಲಿ ಆಡಿದ್ದರೂ ಪ್ರಶಸ್ತಿಯನ್ನು ಗೆಲ್ಲುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

'ಭಾರತ ತಂಡ ಪಾಕಿಸ್ತಾನದಲ್ಲಿ ಆಡಿದಿದ್ರೆ..?ʼ: ವಸೀಮ್‌ ಅಕ್ರಮ್‌ ಹೇಳಿಕೆ!

ಭಾರತ ತಂಡವನ್ನು ಶ್ಲಾಘಿಸಿದ ವಸೀಮ್‌ ಅಕ್ರಮ್‌.

Profile Ramesh Kote Mar 10, 2025 6:51 PM

ನವದೆಹಲಿ: ದುಬೈ ಇಂಟರ್‌ನ್ಯಾನಷಲ್‌ ಕಿಕೆಟ್‌ ಕ್ರೀಡಾಂಗಣದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು (Champions Trophy 2025) ಗೆದ್ದಿರುವ ಭಾರತ ತಂಡವನ್ನು ಪಾಕಿಸ್ತಾನ ಮಾಜಿ ವೇಗಿ ವಸೀಮ್‌ ಅಕ್ರಮ್‌ (Wasim Akram) ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಕೇವಲ ದುಬೈ ಮಾತ್ರವಲ್ಲ, ವಿಶ್ವದ ಯಾವುದೇ ಸ್ಥಳದಲ್ಲಿ ಆಡಿದ್ದರೂ ಪ್ರಶಸ್ತಿಯನ್ನು ಗೆಲ್ಲುತ್ತಿತ್ತು. ಅದರಂತೆ ಪಾಕಿಸ್ತಾನದಲ್ಲಿ ಆಡಿದ್ದರೂ ಟೀಮ್‌ ಇಂಡಿಯಾ ಚಾಂಪಿಯನ್‌ ಆಗುತ್ತಿತ್ತು ಎಂದು ವಸೀಮ್‌ ಅಕ್ರಮ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾನುವಾರ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ ವಿರುದ್ದ ಭಾರತ ತಂಡ 4 ವಿಕೆಟ್‌ಗಳಿಂದ ಗೆದ್ದು ಮೂರನೇ ಬಾರಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್‌ ಮಾದರಿಯಲ್ಲಿ ನಡೆಸಲಾಗಿತ್ತು. ರಾಜಕೀಯ ಕಾರಣಗಳಿಂದ ಟೀಮ್‌ ಇಂಡಿಯಾ ಯುಎಇಗೆ ಪ್ರಯಾಣ ಬೆಳೆಸಲು ನಿರಾಕೆರಿಸಿತ್ತು. ಈ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡದ ಎಲ್ಲಾ ಪಂದ್ಯಗಳನ್ನು ಯುಎಇಯ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆಡಿಸಲಾಗಿತ್ತು. ಅದರಂತೆ ಭಾರತ ತಂಡ ಇಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಚಾಂಪಿಯನ್‌ ಆಗಿದೆ. ಅಂದ ಹಾಗೆ ಟೂರ್ನಿಯುದ್ದಕ್ಕೂ ಭಾರತ ತಂಡಕ್ಕೆ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿಸಿದ್ದ ಬಗ್ಗೆ ಹಲವು ಮಾಜಿ ಆಟಗಾರರು ಅಪಸ್ವರವನ್ನು ಎತ್ತಿದ್ದರು. ಇದೀಗ ಪಾಕ್‌ ಮಾಜಿ ವೇಗಿ ವಸೀಮ್‌ ಅಕ್ರಮ್‌ ಅವರು, ಭಾರತ ತಂಡಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

IND vs NZ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ!

ಭಾರತ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ ವಸೀಮ್‌ ಅಕ್ರಮ್‌

"ಭಾರತ ತಂಡ ವಿಶ್ವದ ಯಾವುದೇ ಸ್ಥಳದಲ್ಲಿ ಆಡಿದ್ದರೂ ಪ್ರಶಸ್ತಿಯನ್ನು ಗೆಲ್ಲುತ್ತಿತ್ತು,"ಎಂದು ಸ್ಪೋರ್ಟ್ಸ್‌ ಸೆಂಟ್ರಲ್‌ ಚಾನೆಲ್‌ನ ಡ್ರೆಸ್ಸಿಂಗ್‌ ರೂಂ ಶೋನಲ್ಲಿ ತಿಳಿಸಿದ್ದ ವಸೀಮ್‌ ಅಕ್ರಮ್‌, "ಹೌದು, ಭಾರತದ ಎಲ್ಲಾ ಪಂದ್ಯಗಳನ್ನು ಕೇವಲ ದುಬೈನಲ್ಲಿ ಮಾತ್ರ ಆಡಿಸಬೇಕೆಂದು ನಿರ್ಧರಿಸಲಾಗಿತ್ತು ಹಾಗೂ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಒಂದು ವೇಳೆ ಪಾಕಿಸ್ತಾನದಲ್ಲಿ ಆಡಿದ್ದರೂ ಕೂಡ ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಿತ್ತು," ಎಂದು ಹೇಳಿದ್ದಾರೆ.

"ಭಾರತ ತಂಡ ಒಂದೂ ಪಂದ್ಯವನ್ನು ಸೋಲದೆ 2024ರ ಐಸಿಸಿ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು. ಅದೇ ರೀತಿ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಒಂದೂ ಪಂದ್ಯವನ್ನು ಸೋಲದೆ ಟೀಮ್‌ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿದೆ. ಇದು ರೋಹಿತ್‌ ಶರ್ಮಾ ಅವರ ನಾಯಕತ್ವದ ಗುಣಗಳನ್ನು ತೋರಿಸುತ್ತದೆ," ಎಂದು ವಸೀಮ್‌ ಅಕ್ರಮ್‌ ಶ್ಲಾಘಿಸಿದ್ದಾರೆ.

IND vs NZ Finla: ಚಾಂಪಿಯನ್‌ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

ನಾಯಕ, ಕೋಚ್‌ಗೆ ಬೆಂಬಲ ಸೂಚಿಸಿದ್ದ ಬಿಸಿಸಿಐ

"ಭಾರತ ತಂಡ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ದ ಟೆಸ್ಟ್‌ ಸರಣಿಯನ್ನು 3-0 ಅಂತರದಲ್ಲಿ ಸೋತಿತ್ತು ಹಾಗೂ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯನ್ನೂ ಕಳೆದುಕೊಂಡಿತ್ತು. ಅಲ್ಲದೆ ಶ್ರೀಲಂಕಾ ವಿರುದ್ದ ಏಕದಿನ ಸರಣಿಯಲ್ಲಿಯೂ ಸೋಲು ಅನುಭವಿಸಿತ್ತು ಎಂಬುದನ್ನು ನೀವು ನೆನಪು ಮಾಡಿಕೊಳ್ಳಬಹುದು. ನಾಯಕ ಹಾಗೂ ಕೋಚ್‌ ಅನ್ನು ತೆಗೆಯುವ ಹಂತಕ್ಕೆ ಪರಿಸ್ಥಿತಿ ತಲುಪಿತ್ತು. ಆದರೆ, ಅವರನ್ನು ಬಿಸಿಸಿಐ ಬೆಂಬಲಿಸಿತ್ತು. ಇವರೇ ನಮ್ಮ ನಾಯಕ ಹಾಗೂ ಇವರೇ ನಮ್ಮ ಕೋಚ್‌ ಎಂದು ಹೇಳಿತ್ತು. ಇದೀಗ ಅವರು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಚಾಂಪಿಯನ್‌," ಎಂದು ಪಾಕ್‌ ವೇಗದ ಬೌಲಿಂಗ್‌ ದಿಗ್ಗಜ ಗುಣಗಾನ ಮಾಡಿದ್ದಾರೆ.

IND vs NZ Final: ಚಾಂಪಿಯನ್‌ ಟ್ರೋಫಿ ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಮೋದಿ, ಸಿದ್ದರಾಮಯ್ಯ

ಸತತ 8 ಪಂದ್ಯಗಳನ್ನು ಗೆದ್ದಿರುವ ಭಾರತ

ಈ ಸಾಲಿನಲ್ಲಿ ಭಾರತ ತಂಡ ಸತತ ಎಂಟು ಏಕದಿನ ಪಂದ್ಯಗಳನ್ನು ಗೆದ್ದಂತಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ಅದೇ ಲಯವನ್ನು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಮುಂದುವರಿಸಿತ್ತು. ಬಾಂಗ್ಲಾದೇಶ, ಪಾಕಿಸ್ತಾನ, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳನ್ನು ಸತತವಾಗಿ ಸೋಲಿಸಿ ಟೀಮ್‌ ಇಂಡಿಯಾ ಚಾಂಪಿಯನ್ಸ್‌ ಟ್ರೋಫಿಯನ್ನು ಎತ್ತಿ ಹಿಡಿದಿದೆ.