ಎರಡನೇ ಟಿ20ಐ ಸೋಲಿಗೆ ಬಲವಾದ ಕಾರಣ ತಿಳಿಸಿದ ಸೂರ್ಯಕುಮಾರ್ ಯಾದವ್!
ಬ್ಯಾಟಿಂಗ್ ವೈಫಲ್ಯದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಅಭಿಷೇಕ್ ಶರ್ಮಾ ಅರ್ಧಶತಕ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ವಿಫಲರಾದರು. ಸೋಲಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ಟೀಮ್ ಇಂಡಿಯಾದ ವೈಫಲ್ಯಕ್ಕೆ ಕಾರಣವನ್ನು ತಿಳಿಸಿದರು.
 
                                ಭಾರತದ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ತಿಳಿಸಿದ ಸೂರ್ಯಕುಮಾರ್ ಯಾದವ್. -
 Ramesh Kote
                            
                                Oct 31, 2025 9:29 PM
                                
                                Ramesh Kote
                            
                                Oct 31, 2025 9:29 PM
                            ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ (IND vs AUS) ಭಾರತ ತಂಡ ಹೀನಾಯ ಸೋಲು ಅನುಭವಿಸಿದ್ದರಿಂದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪಂದ್ಯದ ಆರಂಭದಲ್ಲಿ ತ್ವರಿತವಾಗಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಪರಿಣಾಮ ನಮ್ಮ ಪರವಾಗಿ ಫಲಿತಾಂಶ ಮೂಡಿಬಂದಿಲ್ಲ ಎಂದು ಹೇಳಿದ್ದಾರೆ. ಇದರ ಶ್ರೇಯ ಎದುರಾಳಿ ತಂಡದ ಹಿರಿಯ ವೇಗಿ ಜಾಶ್ ಹೇಝಲ್‌ವುಡ್‌ಗೆ (Josh Hazlewood) ಸಲ್ಲಬೇಕೆಂದು ಹೇಳಿದ್ದಾರೆ. ಈ ಸೋಲಿನ ಮೂಲಕ ಟೀಮ್ ಇಂಡಿಯಾ ಟಿ20ಐ ಸರಣಿಯಲ್ಲಿ0-1 ಹಿನ್ನಡೆಯನ್ನು ಅನುಭವಿಸಿದೆ.
ಶುಕ್ರವಾರ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಆರಂಭದಲ್ಲೇ ಸಂಕಷ್ಟಕ್ಕೀಡಾಯಿತು. ಎಂಟು ಓವರರ್‌ಗಳಲ್ಲೇ 49 ರನ್‌ಗಳಿಗೆ ಐದು ವಿಕೆಟ್‌ಗಳ ಪತನವಾಯಿತು. ಆತಿಥೇಯ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಜಾಶ್ ಹೇಝಲ್‌ವುಡ್ ತಮ್ಮ ಖೋಟಾದ ನಾಲ್ಕು ಓವರಗಳಲ್ಲಿ ಕೇವಲ 13 ರನ್ ನೀಡಿ ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ವಿಕೆಟ್‌ಗಳನ್ನು ಕಬಳಿಸಿದರು. ಈ ವೇಳೆ ಅಭಿಷೇಕ್ ಶರ್ಮಾ (67) ಮತ್ತು ಹರ್ಷಿತ್ ರಾಣಾ (35) ಅವರ ಬ್ಯಾಟಿಂಗ್ ಬಲದಿಂದ ಭಾರತ 125 ರನ್ ಕಲೆಹಾಕಲು ಸಾಧ್ಯವಾಗಿತ್ತು.
IND vs AUS: ಬ್ಯಾಟಿಂಗ್ ವೈಫಲ್ಯದಿಂದಾಗಿ ಆಸ್ಟ್ರೇಲಿಯಾ ಎದುರು ಸೋಲುಂಡ ಭಾರತ!
ಬಳಿಕ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ, ಮಿಚೆಲ್ ಮಾರ್ಷ್ (46) ಹಾಗೂ ಟ್ರಾವಿಸ್ ಹೆಡ್ (28) ಅವರ ಬ್ಯಾಟಿಂಗ್ ಬಲದಿಂದ 13. 3 ಓವರ್‌ಗಳಿಗೆ ಮೂರು ವಿಕೆಟ್‌ಗಳಿಂದ 126 ರನ್ ಗಳಿಸಿ 4 ವಿಕೆಟ್ ಗೆಲುವು ಪಡೆಯಿತು. ಕಡಿಮೆ ಗುರಿ ನೀಡಿದರೂ ಭಾರತ ತಂಡದ ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿ ಕಠಿಣ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.
ಸೋಲಿನ ಬಳಿಕ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್‌ನಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ಜಾಶ್ ಹೇಝಲ್‌ವುಡ್ ಅವರನ್ನು ಗುಣಗಾನ ಮಾಡಿದರು. "ಪವರ್‌ಪ್ಲೇನಲ್ಲಿ ಅವರು ಅದ್ಭುತವಾಗಿ ಬೌಲ್ ಮಾಡಿದರು. ಆರಂಭದಲ್ಲಿ ನೀವು ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡರೆ ಕಮ್‌ಬ್ಯಾಕ್ ಮಾಡುವುದು ತುಂಬಾನೆ ಕಷ್ಟ. ಇದರ ಶ್ರೇಯ ಜಾಶ್ ಹೇಝಲ್‌ವುಡ್‌ಗೆ ಸಲ್ಲಬೇಕು. ಅವರು ನಿಜಕ್ಕೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದಾರೆ," ಎಂದು ಗುಣಗಾನ ಮಾಡಿದ್ದಾರೆ.
IND vs AUS: 35 ರನ್ ಗಳಿಸಿ ಗೌತಮ್ ಗಂಭೀರ್ ನಂಬಿಕೆ ಉಳಿಸಿಕೊಂಡ ಹರ್ಷಿತ್ ರಾಣಾ!
ಅಭಿಷೇಕ್ ಶರ್ಮಾಗೆ ಸೂರ್ಯ ಮೆಚ್ಚುಗೆ
ಭಾರತ ತಂಡದ ಏಕಾಂಗಿಯಾಗಿ ಹೋರಾಟ ನಡೆಸಿ ಅರ್ಧಶತಕ ಬಾರಿಸಿದ ಆರಂಭಿಕ ಅಭಿಷೇಕ್ ಶರ್ಮಾ ಅವರನ್ನು ಸೂರ್ಯಕುಮಾರ್ ಯಾದವ್ ಶ್ಲಾಘಿಸಿದರು. "ಅವರು ಹಲವು ದಿನಗಳಿಂದ ಇದೇ ಪ್ರದರ್ಶನವನ್ನು ನಮಗಾಗಿ ತೋರುತ್ತಿದ್ದಾರೆ. ಆಟದ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ, ಸಾಮರ್ಥ್ಯದ ಬಗ್ಗೆಯೂ ಅರಿವಿದೆ, ಇದನ್ನು ಅವರು ಬದಲಾಯಿಸದಿರುವುದು ಒಳ್ಳೆಯದು. ಈ ಕಾರಣದಿಂದಲೇ ಅವರು ಯಶಸ್ವಿಯಾಗುತ್ತಿದ್ದಾರೆ. ಅವರು ಇದೇ ಆಟವನ್ನು ಮುಂದುವರಿಸಬೇಕೆಂದು ನಾವು ನಿರೀಕ್ಷೆ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.
