ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: 35 ರನ್‌ ಗಳಿಸಿ ಗೌತಮ್ ಗಂಭೀರ್‌ ನಂಬಿಕೆ ಉಳಿಸಿಕೊಂಡ ಹರ್ಷಿತ್‌ ರಾಣಾ!

IND vs AUS 2nd T20I: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ವೇಗಿ ಹರ್ಷಿತ್ ರಾಣಾ 33 ಎಸೆತಗಳಲ್ಲಿ 35 ರನ್ ಗಳಿಸಿ ಅದ್ಭುತ ಇನಿಂಗ್ಸ್ ಆಡಿದರು. ಆ ಮೂಲಕ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದ ಹೆಡ್‌ ಕೋಚ್‌ ಗಂಭೀರ್‌ ನಂಬಿಕೆಯನ್ನು ಹರ್ಷಿತ್‌ ಉಳಿಸಿಕೊಂಡಿದ್ದಾರೆ.

35 ರನ್‌ ಗಳಿಸಿ ಗೌತಮ್‌ ಗಂಭೀರ್‌ ನಂಬಿಕೆ ಉಳಿಸಿಕೊಂಡ ಹರ್ಷಿತ್‌ ರಾಣಾ!

35 ರನ್‌ ಗಳಿಸಿ ಗಂಭೀರ್‌ ನಂಬಿಕೆ ಉಳಿಸಿಕೊಂಡ ಹರ್ಷಿತ್‌ ರಾಣಾ. -

Profile Ramesh Kote Oct 31, 2025 4:49 PM

ಮೆಲ್ಬೋರ್ನ್: ಇಲ್ಲಿನ ಮೆಲ್ಬೋರ್ನ್‌ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20ಐ ಪಂದ್ಯದಲ್ಲಿ (IND vs AUS) ಭಾರತ ತಂಡದ ಬ್ಯಾಟಿಂಗ್ ಸಂಪೂರ್ಣ ವಿಫಲವಾಯಿತು. ಆರಂಭಿಕರಾದ ಅಭಿಷೇಕ್ ಶರ್ಮಾ (Abhishek Sharma) ಮತ್ತು ವೇಗಿ ಹರ್ಷಿತ್ ರಾಣಾ (Harshit Rana) ಮಾತ್ರ ಉತ್ತಮ ಪ್ರದರ್ಶನ ತೋರಿದರು. ಇವರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಇದರ ಪರಿಣಾಮ ಭಾರತ 18.4 ಓವರ್‌ಗಳಲ್ಲಿ ಕೇವಲ 125 ರನ್‌ಗಳಿಗೆ ಆಲೌಟ್ ಆಯಿತು. ಮೇಲಿನ ಕ್ರಮಾಂಕದಲ್ಲಿ ಬಡ್ತಿ ಪಡೆದು 35 ರನ್‌ ಗಳಿಸುವ ಮೂಲಕ ಹರ್ಷಿತ್‌ ರಾಣಾ, ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಇದರ ಜೊತೆಗೆ ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್ ಮತ್ತು ರಿಷಭ್ ಪಂತ್‌ ಅವರ ದಾಖಲೆಗಳನ್ನು ಮುರಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಕೇವಲ 49 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ನಂತರ ಶಿವಂ ದುಬೆ ಅವರಿಗೂ ಮೇಲಿನ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದ ಹರ್ಷಿತ್ ರಾಣಾ, ಎಲ್ಲರ ಗಮನ ಸೆಳೆದರು ಹಾಗೂ ಅವರು ಟೀಮ್‌ ಮ್ಯಾನೇಜ್‌ಮೆಂಟ್‌ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು. ಅಭಿಷೇಕ್ ಶರ್ಮಾ ಅವರೊಂದಿಗೆ ಹರ್ಷಿತ್‌ 63 ಎಸೆತಗಳಲ್ಲಿ ಆರನೇ ವಿಕೆಟ್‌ಗೆ 56 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

IND vs AUS 2nd T20 Live: ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ

ಈ ಇನಿಂಗ್ಸ್‌ನಲ್ಲಿ ಹರ್ಷಿತ್ ರಾಣಾ 33 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಅದ್ಭುತ 35 ರನ್ ಗಳಿಸಿದರು. ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಂತೆ ಅದ್ಭುತ 68 ರನ್‌ಗಳನ್ನು ಕಲೆ ಹಾಕಿದರು. ಈ ಇಬ್ಬರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿಯನ್ನು ವೈಯಕ್ತಿಕ ಮೊತ್ತವನ್ನು ತಲುಪಲಿಲ್ಲ. ಈ ಅವಧಿಯಲ್ಲಿ ಹರ್ಷಿತ್ ರಾಣಾ ಅವರ 35 ರನ್‌ಗಳು ಭಾರತ ತಂಡಕ್ಕೆ ಅತ್ಯಂತ ಹೆಚ್ಚಿನ ಮೌಲ್ಯವನ್ನು ತಂದುಕೊಟ್ಟಿತು.

ಹರ್ಷಿತ್ ರಾಣಾ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 35 ರನ್‌ಗಳ ಮೂಲಕ ಹಲವು ದಿಗ್ಗಜರನ್ನು ಹಿಂದಿಕ್ಕಿದರು. ಈ ಹಿಂದೆ, ಈ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಹೊಂದಿದ್ದರು, ಅವರು ತವರಿನಲ್ಲಿ ನಡೆದಿದ್ದ ಟಿ20ಐನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 34 ರನ್ ಗಳಿಸಿದರು. ಹರ್ಷಿತ್ ರಾಣಾ ಅವರನ್ನು ಹಿಂದಿಕ್ಕಿದ್ದಾರೆ.

IND vs AUS 2nd T20I: ಆಸ್ಟಿನ್ ಗೌರವಾರ್ಥ; ಪಂದ್ಯಕ್ಕೂ ಮುನ್ನ ಮೆಲ್ಬರ್ನ್‌ ಸ್ಟೇಡಿಯಂನಲ್ಲಿ ಒಂದು ನಿಮಿಷ ಮೌನಾಚರಣೆ

ತಮ್ಮ ಈ ಇನಿಂಗ್ಸ್‌ ಮೂಲಕ ಹರ್ಷಿತ್ ರಾಣಾ, ಡೇವಿಡ್ ಮಿಲ್ಲರ್, ಜೋ ರೂಟ್ (32 ರನ್), ಮೊಹಮ್ಮದ್ ರಿಝ್ವಾನ್ (31 ರನ್), ದಿನೇಶ್ ಕಾರ್ತಿಕ್ (30 ರನ್), ಮಾರ್ಕ್ ಬೌಷರ್ (29 ರನ್), ಫಾಫ್ ಡು ಪ್ಲೆಸಿಸ್ (27 ರನ್), ಕೈರೊನ್ ಪೊಲಾರ್ಡ್ (26 ರನ್), ಕೆವಿನ್ ಪೀಟರ್ಸನ್ (25 ರನ್), ವೀರೇಂದ್ರ ಸೆಹ್ವಾಗ್ (23 ರನ್), ಸಂಜು ಸ್ಯಾಮ್ಸನ್ (23 ರನ್), ಕೇನ್ ವಿಲಿಯಮ್ಸನ್ (23 ರನ್), ರಿಷಭ್ ಪಂತ್ (20 ರನ್), ಏಡೆನ್ ಮಾರ್ಕ್ರಮ್ (18 ರನ್), ನಿಕೋಲಸ್ ಪೂರನ್ (18 ರನ್), ಬೆನ್ ಸ್ಟೋಕ್ಸ್ (17* ರನ್), ಪಾಲ್ ಕಾಲಿಂಗ್‌ವುಡ್ (16 ರನ್), ಜಾಕ್‌ ಕ್ಯಾಲಿಸ್ (15 ರನ್), ಹ್ಯಾರಿ ಬ್ರೂಕ್ (12 ರನ್) ಮತ್ತು ಕ್ರಿಸ್ ಗೇಲ್ (12 ರನ್) ಅವರನ್ನು ಹಿಂದಿಕ್ಕಿದ್ದಾರೆ.