IND vs AFG: ಭಾರತ ಟಿ20 ತಂಡದಲ್ಲಿ ಮೇಜರ್ ಸರ್ಜರಿ, 7 ಮಂದಿಗೆ ಕೊಕ್! ಕಂಪ್ಲಿಟ್ ಲಿಸ್ಟ್ ಇಲ್ಲಿದೆ...
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಈ ಹಿಂದೆ ಜಿಂಬಾಬ್ವೆ ಟಿ20ಐ ಸರಣಿಯಲ್ಲಿ ಆಡಿದ್ದ 7 ಮಂದಿ ಆಟಗಾರರನ್ನು ಈ ಬಾರಿ ಕೈ ಬಿಡಲಾಗಿದೆ. ಇದರಲ್ಲಿ ರಿಂಕು ಸಿಂಗ್, ಪ್ರಿನ್ಸ್ ಯಾದವ್ ಪ್ರಮುಖರಾಗಿದ್ದಾರೆ. ಆದರೆ, ಸಂಜು ಸ್ಯಾಮ್ಸನ್, ವರುಣ್ ಚಕ್ರವರ್ತಿ ಸೇರಿ 8 ಮಂದಿ ಆಟಗಾರರು ತಂಡಕ್ಕೆ ಮರಳಿದ್ದಾರೆ.
ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡ 7 ಮಂದಿ ಆಟಗಾರರು. -
ನವದೆಹಲಿ: ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಟಿ20 ತಂಡದಲ್ಲಿ (India's T20 Squad) ಬಿಸಿಸಿಐ ಮೇಜರ್ ಸರ್ಜರಿ ಮಾಡಿದೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ (IND vs AFG) ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಸೆಪ್ಟಂಬರ್ 13 ರಿಂದ 17ರವರೆಗೆ ಮೂರು ಪಂದ್ಯಗಳು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಜುಲೈನಲ್ಲಿ ಜಿಂಬಾಬ್ವೆ ವಿರುದ್ದದ ಟಿ20ಐ ಸರಣಿಯನ್ನು ಆಡಿದ್ದ ಹಲವು ಆಟಗಾರರನ್ನು ಆಫ್ಘನ್ ಸರಣಿಗೆ ಕೈ ಬಿಡಲಾಗಿದೆ. ಆದರೆ, ಸಂಜು ಸ್ಯಾಮ್ಸನ್, ವರುಣ್ ಚಕ್ರವರ್ತಿ ಅವರಂಥಾ ಕೆಲ ಆಟಗಾರರು ತಂಡಕ್ಕೆ ಮರಳಿದ್ದಾರೆ.
ನಾಯಕ ಶ್ರೇಯಸ್ ಅಯ್ಯರ್ ಹಾಗೂ ಉಪ ನಾಯಕ ತಿಲಕ್ ವರ್ಮಾ ಅವರು ಭಾರತ ಟಿ20ಐ ತಂಡದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಜಿಂಬಾಬ್ವೆ ಪ್ರವಾಸದ ಟಿ20ಐ ಸರಣಿಯ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ಪಡೆಯದ ಪ್ರಭ್ ಸಿಮ್ರಾನ್ ಸಿಂಗ್ ಅವರನ್ನು ಕೂಡ ಕೈಬಿಡಲಾಗಿದೆ.
ಆಫ್ಘನ್ ಟಿ20ಐ ಸರಣಿಯಲ್ಲಿ ಸ್ಥಾನವನ್ನು ಕಳೆದುಕೊಂಡ ಆಟಗಾರರ ಪೈಕಿ ರಿಂಕು ಸಿಂಗ್ ಪ್ರಮುಖರಾಗಿದ್ದಾರೆ. ಇಂಗ್ಲೆಂಡ್ ಹಾಗೂ ಐರ್ಲೆಂಡ್ ಟಿ20ಐ ಸರಣಿಗಳಿಂದ ಹೊರಗುಳಿದಿದ್ದ ಎಡಗೈ ಬ್ಯಾಟ್ಸ್‌ಮನ್, ಬಳಿಕ ಜಿಬಾಬ್ವೆ ವಿರುದ್ಧ ಆಡಿದ್ದರು. ಆದರೆ, ಇಲ್ಲಿ ಆಡಿದ ಎರಡೂ ಇನಿಂಗ್ಸ್‌ಗಳಿಂದ ಕೇವಲ 37 ರನ್‌ಗಳನ್ನು ಗಳಿಸಿದ್ದರು.
Duleep Trphy 2026: ಕೇಂದ್ರ ವಲಯವನ್ನು ಮಣಿಸಿ ಫೈನಲ್‌ಗೇರಿದ ಪೂರ್ವ ವಲಯ!
ಗಾಯದ ಕಾರಣ ಜಿಂಬಾಬ್ವೆ ಪ್ರವಾಸವನ್ನು ತಪ್ಪಿಸಿಕೊಂಡಿದ್ದ ವರುಣ್ ಚಕ್ರವರ್ತಿ ಇದೀಗ ಭಾರತ ತಂಡಕ್ಕೆ ಮರಳಿದ್ದಾರೆ. ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ರವಿ ಬಿಷ್ಣೋಯಿ ಅವರನ್ನೂ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆಗಳು ಕಂಡುಬಂದಿವೆ. ಜಿಂಬಾಬ್ವೆ ಪ್ರವಾಸಕ್ಕೆ ತೆರಳದ ಬಹುತೇಕ ಮೊದಲ ಆಯ್ಕೆಯ ಬೌಲರ್‌ಗಳು ಇದೀಗ ತಂಡಕ್ಕೆ ಮರಳಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ಹೊಸ ಮಾದರಿಯ ವೇಗದ ಬೌಲಿಂಗ್ ಪಡೆಯೊಂದಿಗೆ ಕಣಕ್ಕಿಳಿದಿತ್ತು.
ಹಿಂದಿನ ಸರಣಿಗೆ ಹೋಲಿಸಿದರೆ ತಂಡದಲ್ಲಿ ಹಲವು ಬದಲಾವಣೆಗಳಿದ್ದರೂ, ಗಮನಾರ್ಹ ಅಂಶವೆಂದರೆ ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಎಲ್ಲಾ 15 ಆಟಗಾರರೂ 2026ರ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿರುವ ಅದೇ ಆಟಗಾರರಾಗಿದ್ದಾರೆ. 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 28ರಂದು ಕ್ವಾರ್ಟರ್‌ಫೈನಲ್‌ನಲ್ಲಿ ಆಡಲಿದೆ.
India’s squad for Afghanistan T20I series announced. #TeamIndia will play three T20Is against Afghanistan at New Delhi, beginning September 13.#AFGvIND pic.twitter.com/UqTUeZyHz8
— BCCI (@BCCI) September 1, 2026
ತಂಡಕ್ಕೆ ಇನ್: ಸಂಜು ಸ್ಯಾಮ್ಸನ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್
ತಂಡದಿಂದ ಔಟ್: ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್, ಪ್ರಭ್‌ಸಿಮ್ರನ್ ಸಿಂಗ್
ತಂಡದಲ್ಲಿ ಉಳಿಸಿಕೊಂಡ ಆಟಗಾರರು: ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ಶಿವಂ ದುಬೆ ಮತ್ತು ವರುಣ್ ಚಕ್ರವರ್ತಿ
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್‌ಪ್ರೀತ್ ಬುಮ್ರಾ* (ಫಿಟ್‌ನೆಸ್ ಅವಲಂಬನೆ), ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ* (ಫಿಟ್‌ನೆಸ್ ಅವಲಂಬನೆ)