IND vs AFG: ಶುಭಮನ್ ಗಿಲ್ ಭರ್ಜರಿ ಬ್ಯಾಟಿಂಗ್, ಆಫ್ಘನ್ ಎದುರು ಭಾರತಕ್ಕೆ ಭರ್ಜರಿ ಜಯ!
IND vs AFG Match Highlights: ಶುಭಮನ್ ಗಿಲ್ ಅವರ ಬ್ಯಾಟಿಂಗ್ ಬಲದಿಂದ ಭಾರತ ತಂಡ, ಮಳೆ ಬಾಧಿತ ಮೊದಲನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡಕ್ಕೆ 7 ವಿಕೆಟ್ ಜಯ. -
ಧರ್ಮಶಾಲಾ: ರಹಮಾನ್‌ವುಲ್ಲಾ ಗುರ್ಬಾಝ್ (Rahanullah Gurbaz) ಶತಕದ ಹೊರತಾಗಿಯೂ ಶುಭಮನ್ ಗಿಲ್ (Shubman Gill) ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ಭಾರತ ತಂಡ, ಮಳೆ ಬಾಧಿತ ಮೊದಲನೇ ಏಕದಿನ ಪಂದ್ಯದಲ್ಲಿ (IND vs AFG) ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆದಿದೆ. ಇನ್ನು ದೊಡ್ಡ ಮೊತ್ತದ ಗುರಿ ನೀಡಿದ ಹೊರತಾಗಿಯೂ ಆಫ್ಘನ್ ತಂಡ, ಬೌಲಿಂಗ್ ವೈಫಲ್ಯದಿಂದಾಗಿ ಸೋಲು ಒಪ್ಪಿಕೊಂಡಿತು.
ಶನಿವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು. ಹಾಗಾಗಿ ಪಂದ್ಯವನ್ನು ನಿಗದಿತ ಸಮಯ 1:30 ಕ್ಕೆ ಆರಂಭಿಸಲು ಸಾಧ್ಯವಾಗಲಿಲ್ಲ. ಸಂಜೆ 5:45ಕ್ಕೆ ಪಂದ್ಯವನ್ನು ಆರಂಭಿಸಲಾಯಿತು. ನಾಲ್ಕೂವರೆ ಗಂಟೆಗಳ ತಡವಾಗಿ ಆರಂಭಿಸಿದ ಕಾರಣ ಪಂದ್ಯವನ್ನು 25 ಓವರ್‌ಗಳಿಗೆ ಇಳಿಸಲಾಯಿತು.
IND vs AFG: ಆರಂಭಿಕನಾಗಿ 16,000 ರನ್‌ಗಳನ್ನು ಪೂರ್ಣಗೊಳಿಸಿದ ರೋಹಿತ್ ಶರ್ಮಾ!
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಅಫ್ಘಾನಿಸ್ತಾನ ತಂಡ, ರಹಮಾನ್‌ವುಲ್ಲಾ ಗುರ್ಬಾಝ್ (102 ರನ್) ಅವರ ಶತಕದ ಬಲದಿಂದ 24.5 ಓವರ್‌ಗಳಿಗೆ 194 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 195 ರನ್‌ಗಳ ಗುರಿಯನ್ನು ನೀಡಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಶುಭಮನ್ ಗಿಲ್ (84* ರನ್) ಅವರ ಬ್ಯಾಟಿಂಗ್ ಬಲದಿಂದ 22.5 ಓವರ್‌ಗಳಿಗೆ ಮೂರು ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಸೇರಿತು.
Picture-Perfect 🙌#TeamIndia wrap a comprehensive victory by 7️⃣ wickets in Dharamshala ✅
— BCCI (@BCCI) June 13, 2026
They lead the #INDvAFG ODI series by 1️⃣-0️⃣ 👌
Scorecard ▶️ https://t.co/lCuohEZYAl @IDFCFIRSTBank pic.twitter.com/RNy13a0PHX
ಆಫ್ಘನ್‌ಗೆ ಆರಂಭಿಕ ಆಘಾತ
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಅರ್ಷದೀಪ್ ಸಿಂಗ್ ಹೊಸ ಚೆಂಡಿನಲ್ಲಿ ಸೆಡಿಕುಲ್ಹಾ ಅಟಲ್ ಹಾಗೂ ರಹಮತ್ ಶಾ ಅವರನ್ನು ಔಟ್ ಮಾಡಿದರು. ಇಬ್ರಾಂಹಿ ಝರ್ಡಾನ್ ಅವರನ್ನು ಗುರ್ನೂರ್ ಬ್ರಾರ್ ಅವರನ್ನು ಔಟ್ ಮಾಡಿದರು. ಆ ಮೂಲಕ ಕೇವಲ 26 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.
Impressive day out in #TeamIndia colours 💙
— BCCI (@BCCI) June 13, 2026
Harsh Dubey 🤝 Gurnoor Brar
Updates ▶️ https://t.co/lCuohEZYAl #INDvAFG | @IDFCFIRSTBank pic.twitter.com/4nFkz6efAn
ರಹಮಾನ್‌ವುಲ್ಲಾ ಗುರ್ಬಾಝ್ ಭರ್ಜರಿ ಶತಕ
ಒಂದು ತುದಿಯಲ್ಲಿ ನಿಂತು ಸ್ಪೋಟಕ ಬ್ಯಾಟಿಂಗ್ ನಡೆಸಿದ್ದ ರಹಮಾನ್‌ವುಲ್ಲಾ ಗುರ್ಬಾಝ್ ಅವರು ಕೇವಲ 51 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ ಅಷ್ಟೇ ಬೌಂಡರಿಗಳೊಂದಿಗೆ 102 ರನ್ ಗಳಿಸಿದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 9ನೇ ಶತಕ ಹಾಗೂ ಭಾರತದ ಎದುರು ಎರಡನೇ ವೇಗದ ಶತಕವನ್ನು ಪೂರ್ಣಗೊಳಿಸಿದರು. ಹಷ್ಮತ್‌ವುಲ್ಲಾ ಶಾಹಿಡಿ (27) ಹಾಗೂ ಅಝಮತ್‌ವುಲ್ಲಾ ಒಮರ್ಜಾಯ್ (26 ರನ್) ಅವರನ್ನು ಹೊರತುಪಡಿಸಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳ ನೆಲಕಚ್ಚಿದರು.
𝐑𝐮𝐧𝐬: 𝟏𝟎𝟐
— Afghanistan Cricket Board (@ACBofficials) June 13, 2026
𝐁𝐚𝐥𝐥𝐬: 𝟓𝟏
𝐅𝐨𝐮𝐫𝐬: 𝟖
𝐒𝐢𝐱𝐞𝐬: 𝟖
𝐒. 𝐑𝐚𝐭𝐞: 𝟐𝟎𝟎
A performance for the ages from @RGurbaz_21! 👏#AfghanAtalan | #INDvAFG | #GloriousNationVictoriousTeam | #e& – Go for More | #SuperCola – Share the Love pic.twitter.com/zzsmMguHto
ಏಕದಿನ ಕ್ರಿಕೆಟ್ ಪದಾರ್ಪಣೆ ಪಂದ್ಯದಲ್ಲಿ ಹರ್ಷ್ ದುಬೇ ಹಾಗೂ ಗುರ್ನೂರ್ ಬ್ರಾರ್ ತಲಾ 3 ವಿಕೆಟ್‌ಗಳನ್ನು ಪಡೆದರು. ಅರ್ಷದೀಪ್ ಸಿಂಗ್ ಹಾಗೂ ನಿತೀಶ್‌ಕುಮಾರ್ ರೆಡ್ಡಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
ಭಾರತ ತಂಡವನ್ನು ಗೆಲ್ಲಿಸಿದ ಶುಭಮನ್ ಗಿಲ್
ರೋಹಿತ್ ಶರ್ಮಾ ಕೇವಲ 16 ರನ್ ಗಳಿಸಿ ರನ್‌ಔಟ್ ಆದ ಬಳಿಕ ಶುಭಮನ್ ಗಿಲ್ ತಂಡದ ಜವಾಬ್ದಾರಿ ತೆಗೆದುಕೊಂಡು ಕೊನೆಯವರೆಗೂ ಬ್ಯಾಟಿಂಗ್ ನಡೆಸಿದರು. 34 ರನ್ ಗಳಿಸಿ ಉತ್ತಮ ಆರಂಭ ಪಡೆದರೂ ಇಶಾನ್ ಕಿಶನ್ ರಶೀದ್ ಖಾನ್‌ಗೆ ಬೌಲ್ಡ್ ಆದರು. ಶ್ರೇಯಸ್ ಅಯ್ಯರ್ ಕೂಡ ನಿರಾಶೆ ಮೂಡಿಸಿದರು. ಆದರೆ, ಶುಭಮನ್ ಗಿಲ್ ಉತ್ತಮವಾಗಿ ಬ್ಯಾಟ್ ಮಾಡಿದರು. ಅವರು ಆಡಿದ 66 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 84 ರನ್ ಗಳಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಲ್ಲದೆ ಕಿಶನ್ ಜೊತೆಗೆ 70 ರನ್ ಹಾಗೂ ಕೆಎಲ್ ರಾಹುಲ್ ಜೊತೆಗೆ 53 ರನ್ ಜೊತೆಯಾಟವನ್ನು ಕೂಎ ಆಡಿದ್ದರು. ಕೆಎಲ್ ರಾಹುಲ್ ಕೇವಲ 19 ಎಸೆತಗಳಲ್ಲಿಅಜೇಯ 39 ರನ್ ಸಿಡಿಸಿದರು.
Leading from the front in some style 🫡#TeamIndia Captain Shubman Gill is the Player of the Match for his glorious knock in the chase 👌🔝
— BCCI (@BCCI) June 13, 2026
Scorecard ▶️ https://t.co/lCuohEZYAl #INDvAFG | @IDFCFIRSTBank | @ShubmanGill pic.twitter.com/UdZNbAApEk
ಸ್ಕೋರ್ ವಿವರ
ಅಫ್ಘಾನಿಸ್ತಾನ: 24.5 ಓವರ್‌ಗಳಿಗೆ 194-10 (ರಹಮಾನ್‌ವುಲ್ಲಾ ಗುರ್ಬಾಝ್ 102, ಹಷ್ಮತ್‌ವುಲ್ಲಾ ಶಾಹಿಡಿ 27, ಅಝಮತ್‌ವುಲ್ಲಾ ಒಮರ್ಜಾಯ್ 26; ಗುರ್ನೂರ್ ಬ್ರಾರ್ 27ಕ್ಕೆ 3, ಹರ್ಷ್ ದುಬೇ 47 ಕ್ಕೆ 3, ಅರ್ಷದೀಪ್ ಸಿಂಗ್ 27 ಕ್ಕೆ 2, ನಿತೀಶ್ ಕುಮಾರ್ ರೆಡ್ಡಿ 31 ಕ್ಕೆ 2)
ಭಾರತ: 22.5 ಓವರ್‌ಗಳಿಗೆ 195-3 (ಶುಭಮನ್ ಗಿಲ್ 84*, ಇಶಾನ್ ಕಿಶನ್ 34, ಕೆಎಲ್ ರಾಹುಲ್ 39*; ರಶೀದ್ ಖಾನ್ 37 ಕ್ಕೆ 1)
ಪಂದ್ಯ ಶ್ರೇಷ್ಠ ಪ್ರಶಸ್ತಿ : ಶುಭಮನ್ ಗಿಲ್