ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhishek Sharma: ಈ ಆಟಗಾರನಿಂದ ನಮಗೆ ಭೀತಿ ಉಂಟಾಗಿದೆ ಎಂದ ಮ್ಯಾಟ್‌ ಕುಹ್ನೇಮನ್‌!

Matt Kuhnemann on Abhishek Sharma: ಭಾರತದ ವಿರುದ್ಧ ನಾಲ್ಕನೇ ಟಿ20ಐ ಪಂದ್ಯದ ನಿಮಿತ್ತ ಮಾತನಾಡಿದ ಆಸ್ಟ್ರೇಲಿಯಾ ಸ್ಪಿನ್ನರ್‌ ಮ್ಯಾಟ್‌ ಕುಹ್ನೇಮನ್‌, ಅಭಿಷೇಕ್‌ ಶರ್ಮಾ ಅವರನ್ನು ಬಹುಬೇಗ ಔಟ್‌ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ಅಭಿಷೇಕ್‌ ಶರ್ಮಾರ ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿಯಲ್ಲಿ ಆಸೀಸ್‌ ಸ್ಪಿನ್ನರ್‌ ಗುಣಗಾನ ಮಾಡಿದ್ದಾರೆ.

ಅಭಿಷೇಕ್‌ ಶರ್ಮಾರ ಭೀತಿ ಉಂಟಾಗಿದೆ ಎಂದ ಮ್ಯಾಟ್‌ ಕುಹ್ನೇಮನ್‌!

ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ಗೆ ಮ್ಯಾಟ್‌ ಕುಹ್ನೇಮನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. -

Profile Ramesh Kote Nov 4, 2025 7:14 PM

ಕ್ವೀನ್ಸ್‌ಲ್ಯಾಂಡ್‌: ನಾಲ್ಕನೇ ಟಿ20ಐ ಪಂದ್ಯಕ್ಕೂ (IND vs AUS) ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಭಾರತ ತಂಡದ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Sharma) ಅವರ ಭೀತಿ ಉಂಟಾಗಿದೆ ಎಂದು ಆಸೀಸ್‌ ಸ್ಪಿನ್ನರ್‌ ಮ್ಯಾಟ್‌ ಕುಹ್ನೇಮನ್‌ (Matt Kuhnemann) ಒಪ್ಪಿಕೊಂಡಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟಿ20ಐ ಪಂದ್ಯ ನವೆಂಬರ್‌ 6 ರಂದು ಕೀನ್ಸ್‌ಲ್ಯಾಂಡ್‌ನಲ್ಲಿ ನಡೆಯಲಿದೆ. ಸದ್ಯ ಮೂರು ಪಂದ್ಯಗಳ ಅಂತ್ಯಕ್ಕೆ ಟಿ20ಐ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಕಾಯ್ದುಕೊಂಡಿವೆ. ಭರ್ಜರಿ ಫಾರ್ಮ್‌ನಲ್ಲಿರುವ ಅಭಿಷೇಕ್‌ ಶರ್ಮಾ ತಮ್ಮ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್‌ ಮೂಲಕ ನಾಲ್ಕನೇ ಪಂದ್ಯಕ್ಕೂ ಆಸ್ಟ್ರೇಲಿಯಾ ತಂಡಕ್ಕೆ ಭೀತಿ ಹುಟ್ಟಿಸಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೂಲಕ ಬೆಳಕಿಗೆ ಬಂದಿರುವ ಅಭಿಷೇಕ್‌ ಶರ್ಮಾ ಅದ್ಭುತ ಪ್ರತಿಭೆಯನ್ನು ಹೊಂದಿದ್ದಾರೆ. ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್‌ ಮೂಲಕ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಬಲ್ಲ ಅವರು, ಭಾರತ ತಂಡಕ್ಕೆ ಇದೀಗ ಪ್ರಮುಖ ಆಧಾರ ಸ್ಥಂಭವಾಗಿದ್ದಾರೆ. ತಾವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಅಲ್ಪ ದಿನಗಳಲ್ಲಿಯೇ ಅವರು ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕಳೆದ ಏಷ್ಯಾ ಕಪ್‌ ಟೂರ್ನಿಯಲ್ಲಿ ಅವರು ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದರು.

AUS vs IND: ಆಸ್ಟ್ರೇಲಿಯಾಗೆ ಆಘಾತ, ಕೊನೆಯ ಎರಡು ಟಿ20ಐ ಪಂದ್ಯಗಳಿಂದ ಟ್ರಾವಿಸ್‌ ಹೆಡ್‌ ಔಟ್‌!

ನಂತರ ಇದೀಗ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 20ಐ ಸರಣಿಯಲ್ಲಿಯೂ ಅದೇ ಲಯವನ್ನು ಮುಂದುವರಿಸಿದ್ದಾರೆ. ಅವರು ಎರಡನೇ ಪಂದ್ಯದಲ್ಲಿ 68 ರನ್‌ಗಳ ಸ್ಪೋಟಕ ಇನಿಂಗ್ಸ್‌ ಆಡಿದ್ದರು. ಇದೀಗ ನಾಲ್ಕನೇ ಟಿ20ಐ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮ್ಯಾಟ್‌ ಕುಹ್ನೇಮನ್‌ ಅವರು, ಅಭಿಷೇಕ್‌ ಶರ್ಮಾ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ ನಾಲ್ಕನೇ ಪಂದ್ಯದಲ್ಲಿ ಬಹುಬೇಗ ಅವರನ್ನು ಔಟ್‌ ಮಾಡುತ್ತೇವೆಂದು ಅವರು ಭರವಸೆ ನೀಡಿದ್ದಾರೆ.



"ಆರಂಭಿಕ ಎರಡು ಅಥವಾ ಮೂರು ಓವರ್‌ಗಳಲ್ಲಿ ಜೇವಿಯರ್ ಬಾರ್ಟ್ಲೆಟ್, ಬೆನ್ನಿ ದ್ವಾರಶುಯಿಸ್ ಅಥವಾ ನಮ್ಮ ಕಡೆಯಿಂದ ಯಾರಾದರೂ ಒಬ್ಬರು ಅಭಿಷೇಕ್‌ ಶರ್ಮಾ ಅವರನ್ನು ಔಟ್‌ ಮಾಡಲಿದ್ದಾರೆ. ಅವರು ನಿಜವಾದ ಪ್ರತಿಭೆ ಹಾಗೂ ಅವರು ಮೊದಲನೇ ಎಸೆತದಿಂದಲೇ ಆಕ್ರಮಣಕಾರಿಯಾಗಿ ಆಡಲಿದ್ದಾರೆ. ಗುರುವಾರ ಇದು ಒಂದು ಅದ್ಭುತ ಪ್ರದರ್ಶನವಾಗಲಿದೆ, ಆದರೆ ಹುಡುಗರು ಅವರನ್ನು ಔಟ್‌ ಮಾಡಬಹುದು," ಎಂದು ಕುಹ್ನೇಮನ್‌ ಕ್ರಿಕೆಟ್‌, ಕಾಮ್‌ಗೆ ತಿಳಿಸಿದ್ದಾರೆ.

ಎರಡೂ ತಂಡಗಳ ಬ್ಯಾಟಿಂಗ್‌ ವಿಧಾನಗಳನ್ನು ಆಸೀಸ್‌ ಸ್ಪಿನ್ನರ್‌ ಮ್ಯಾಟ್‌ ಕುಹ್ನೇಮನ್‌ ಅವರು ಎತ್ತಿ ಹೇಳಿದರು. ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಕೂಡ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಲಿದ್ದಾರೆ. ಅಭಿಷೇಕ್‌ ಶರ್ಮಾ ಮತ್ತು ಅಭಿಷೇಕ್‌ ಶರ್ಮ ಅವರು ಹೊಸ ದರ್ಜೆಯ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಮಿಚೆಲ್‌ ಮಾರ್ಷ್‌ ಮತ್ತು ಟ್ರಾವಿಸ್‌ ಹೆಡ್‌ ಇದ್ದಾರೆ.

IND vs AUS- ಅರ್ಷದೀಪ್‌, ವಾಷಿಂಗ್ಟನ್‌ ಮಿಂಚು ; ಆಸ್ಟ್ರೇಲಿಯಾಗೆ ತಿರುಗೇಟು ನೀಡಿದ ಭಾರತ!

"ಹೌದು, ಅವರು (ಭಾರತ) ಆಡುವ ರೀತಿ ನಾವು ಆಡುವ ರೀತಿಗೆ ಹೋಲುತ್ತದೆ ಎಂದು ನಾನು ಭಾವಿಸುತ್ತೇನೆ. ತುಂಬಾ ಸ್ಫೋಟಕ ಬ್ಯಾಟಿಂಗ್‌. ಆಟ ವೇಗವಾಗಿ ಬದಲಾಗುತ್ತಿದೆ. ಎಲ್ಲರೂ ಮೊದಲ ಎಸೆತದಿಂದಲೇ ಕಠಿಣವಾಗಿ ಆಡುತ್ತಾರೆ. ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುವುದು ನಿರ್ಣಾಯಕವಾಗಿರುತ್ತದೆ," ಎಂದು ಮ್ಯಾಟ್‌ ಕುಹ್ನೆಮನ್ ಹೇಳಿದ್ದಾರೆ.