ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರ ಒಡಿಐ ಭವಿಷ್ಯದ ಬಗ್ಗೆ ಅಜಿತ್ ಅಗರ್ಕರ್ ಮಹತ್ವದ ಹೇಳಿಕೆ!
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ಈಗಾಗಲೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಅಭ್ಯಾಸವನ್ನು ನಡೆಸುತ್ತಿದ್ದಾರೆ. ಮುಂದಿನ ಏಕದಿನ ವಿಶ್ವಕಪ್ ನಿಮಿತ್ತ ಕೊಹ್ಲಿ ಹಾಗೂ ರೋಹಿತ್‌ಗೆ ಈ ಸರಣಿ ಮುಖ್ಯವಾಗಿದೆ. ಈ ಇಬ್ಬರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಬಿಸಿಸಿಸಿ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮಹತ್ವದ ಹೇಳಿಕೆ ನೀಡಿದ್ದಾರೆ.

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿಯ ಒಡಿಐ ಭವಿಷ್ಯ ನುಡಿದ ಚೀಫ್ ಸೆಲೆಕ್ಟರ್. -

ದುಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ (IND vs AUS) ಅಕ್ಟೋಬರ್ 19 ರಂದು ಆರಂಭವಾಗಲಿದೆ. ಟೀಮ್ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾದಲ್ಲಿ ಅಭ್ಯಾಸವನ್ನು ನಡೆಸುತ್ತಿದೆ. ವಿಶೇಷವಾಗಿ ದೀರ್ಘಾವಧಿ ಬಳಿಕ ಭಾರತ ತಂಡಕ್ಕೆ ಮರಳಿದ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಪ್ರಮುಖ ಆಕರ್ಷಣೆಯಾಗಿದೆ. ಪ್ರಸ್ತುತ ಕೊಹ್ಲಿ ಹಾಗೂ ರೋಹಿತ್ ಅವರ ಏಕದಿನ ವಿಶ್ವಕಪ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದರಂತೆ ಬಿಸಿಸಿಐಥ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ (Ajit Agarkar) ಅವರು, ಪ್ರತಿಯೊಂದು ಪಂದ್ಯದಲ್ಲಿಯೂ ಇವರನ್ನು ಮೌಲ್ಯಮಾಪನ ಮಾಡುವುದು ಮೂರ್ಖತನವಾಗಿದೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದೀರ್ಘ ವಿರಾಮದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಪರ ಕೊನೆಯ ಬಾರಿ ಅವರು ಆಡಿದ್ದರು. ಇದಾದ ಬಳಿಕ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಂದರ್ಭದಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಕುರಿತು ಎನ್‌ಡಿಟಿವಿ ಮಾತನಾಡಿರುವ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, "ಪ್ರತಿಯೊಂದು ಪಂದ್ಯದಲ್ಲಿಯೂ ಅವರ ಪ್ರದರ್ಶನವನ್ನು ಮೌಲ್ಯ ಮಾಪನ ಮಾಡುವುದು ಮೂರ್ಖತನವಾಗುತ್ತದೆ. ಅವರು ಆಡಲು ಪ್ರಾರಂಭಿಸಿದ ನಂತರ, ಅವರನ್ನು ಮೌಲ್ಯಮಾಪನ ಮಾಡಲಾಗುತ್ತದೆ, ಆದರೆ ಅವರನ್ನು ಟ್ರಯಲ್‌ಗೆ ಒಳಪಡಿಸುವುದಿಲ್ಲ" ಎಂದು ಹೇಳಿದ್ದಾರೆ.
IND vs AUS: ಆಸೀಸ್‌ಗೆ ಮತ್ತೊಂದು ಗಾಯದ ಆಘಾತ; ಸರಣಿಯಿಂದ ಹೊರಬಿದ್ದ ಗ್ರೀನ್
ಶುಭಮನ್ ಗಿಲ್ ಅವರ ಹೊಸ ನಾಯಕತ್ವದಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ದ ಏಕದಿನ ಸರಣಿಯನ್ನು ಆಡುತ್ತಿರುವ ಕಾರಣ, ಕೊಹ್ಲಿ ಮತ್ತು ರೋಹಿತ್ ಅವರ ಭವಿಷ್ಯ ದೊಡ್ಡ ಚರ್ಚೆಯ ವಿಷಯವಾಗಿದೆ. ಆಸ್ಟ್ರೇಲಿಯಾ ಪ್ರವಾಸ ಪ್ರಾರಂಭವಾಗುವುದಕ್ಕೂ ಮುನ್ನ ರೋಹಿತ್ ಮತ್ತು ಕೊಹ್ಲಿ ಅವರು ಆಡುವ ಪ್ರತಿಯೊಂದು ಸರಣಿಯ ಪ್ರದರ್ಶನದ ಆಧಾರದ ಮೇಲೆ ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎನ್ನುವ ಊಹಾಪೋಹಗಳು ಹರಿದಾಡುತ್ತಿದ್ದವು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಅವರು ಆಸ್ಟ್ರೇಲಿಯಾದಲ್ಲಿ ರನ್ ಗಳಿಸದಿದ್ದರೆ ಅವರನ್ನು ಕೈಬಿಡಲಾಗುತ್ತದೆ ಎಂದರ್ಥವಲ್ಲ ಮತ್ತು ಅದೇ ರೀತಿ, ಅವರು ಆಸ್ಟ್ರೇಲಿಯಾದಲ್ಲಿ ಮೂರು ಶತಕಗಳನ್ನು ಗಳಿಸಿದರೆ, ಅವರನ್ನು 2027 ರ ವಿಶ್ವಕಪ್‌ಗೆ ಆಯ್ಕೆ ಮಾಡಲಾಗುತ್ತದೆ ಎಂದಲ್ಲ," ಎಂದು ತಿಳಿಸಿದ್ದಾರೆ.
IND vs AUS: ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರನನ್ನು ಆರಿಸಿದ ಮೈಕಲ್ ಕ್ಲಾರ್ಕ್!
ಆಸ್ಟ್ರೇಲಿಯಾ ಸರಣಿಗೆ ಕೊಹ್ಲಿ, ರೋಹಿತ್ ಹೊಂದಿಕೊಳ್ಳಲಿದ್ದಾರೆ: ಅಕ್ಷರ್ ಪಟೇಲ್
ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಕ್ಕೆ ಬಂದ ಕೂಡಲೇ ರೋಹಿತ್ ಮತ್ತು ಕೊಹ್ಲಿ ಉತ್ತಮ ಅಭ್ಯಾಸ ಆರಂಭಿಸಿದ್ದರು. ಗುರುವಾರ ಇಬ್ಬರೂ ಅಕ್ಕಪಕ್ಕದ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿ ಉತ್ತಮ ಫಾರ್ಮ್‌ನಲ್ಲಿರುವಂತೆ ಕಂಡುಬಂದಿತು. ಇಬ್ಬರೂ ಆಟಗಾರರು ಆಡಲು ಸಿದ್ಧರಿದ್ದಾರೆ ಮತ್ತು ನೆಟ್ಸ್ ಮತ್ತು ಫಿಟ್ನೆಸ್ ವಿಷಯದಲ್ಲಿ ಉತ್ತಮವಾಗಿ ಕಾಣುತ್ತಿದ್ದಾರೆ ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.
ಉಭಯ ಆಟಗಾರರ ಕುರಿತು ಮಾತನಾಡಿದ ಅಕ್ಷರ್, "ಅವರು ವೃತ್ತಿಪರರು, ಆದ್ದರಿಂದ ಅವರಿಗೆ ಏನು ಮಾಡಬೇಕೆಂದು ತಿಳಿದಿದೆ. ಅವರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ, ಆದ್ದರಿಂದ ಅವರು ಹೋಗಲು ಸಿದ್ಧರಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ನೆಟ್ಸ್ ಮತ್ತು ಫಿಟ್‌ನೆಸ್ ಎರಡರಲ್ಲೂ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ" ಎಂದು ತಿಳಿಸಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಕ್ಟೋಬರ್ 19 ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ.