ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಐದನೇ ಟೆಸ್ಟ್‌ ಆಡದ ಜಸ್‌ಪ್ರೀತ್‌ ಬುಮ್ರಾ ವಿರುದ್ದ ಬಿಸಿಸಿಐ ಅಸಮಾಧಾನ!

ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಸಲುವಾಗಿ ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದ ಭಾರತ ತಂಡದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರ ಮೇಲೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಜಸ್‌ಪ್ರೀತ್‌ ಬುಮ್ರಾ ಅವರ ಸ್ಥಾನದಲ್ಲಿ ಆಕಾಶ್‌ ದೀಪ್‌ ಪಂದ್ಯದಲ್ಲಿ ಆಡುತ್ತಿದ್ದಾರೆ.

ಐದನೇ ಟೆಸ್ಟ್‌ ಆಡದ ಜಸ್‌ಪ್ರೀತ್‌ ಬುಮ್ರಾ  ವಿರುದ್ದ ಬಿಸಿಸಿಐ ಅಸಮಾಧಾನ!

ಜಸ್‌ಪ್ರೀತ್‌ ಬುಮ್ರಾ ಬಗ್ಗೆ ಬಿಸಿಸಿಐ ಅಸಮಾಧಾನವನ್ನು ವ್ಯಕ್ತಪಡಿಸಿದೆ.

Profile Ramesh Kote Aug 1, 2025 7:24 PM

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ (IND vs ENG) ನಡುವಣ ಐದನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯ ಇಲ್ಲಿನ ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ವರ್ಕ್‌ಲೋಡ್‌ ಮ್ಯಾನೇಜ್‌ಮೆಂಡ್‌ ಸಲುವಾಗಿ ಭಾರತ ತಂಡದ ಪ್ಲೇಯಿಂಗ್‌ xi ನಿಂದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಹೊರಗುಳಿದಿದ್ದಾರೆ. ಈ ಕಾರಣದಿಂದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಜಸ್‌ಪ್ರೀತ್‌ ಬುಮ್ರಾ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಈ ಸರಣಿಗೂ ಮುನ್ನ ಜಸ್‌ಪ್ರೀತ್‌ ಬುಮ್ರಾ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆಂದು ಹೇಳಲಾಗಿತ್ತು. ಅದರಂತೆ ಅವರು ಆಡಿದ ಮೂರು ಪಂದ್ಯಗಳಿಂದ ಬುಮ್ರಾ ಒಟ್ಟು 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇದೀಗ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಆಡದಿರುವ ಜಸ್‌ಪ್ರೀತ್‌ ಬುಮ್ರಾ ಅವರ ನಿರ್ಧಾರವು ಬಿಸಿಸಿಐಗೆ ಬೇಸರವನ್ನು ತರಸಿದೆ ಹಾಗೂ ವೇಗಿಯ ಆಯ್ಕೆ ಮತ್ತು ಆಯ್ಕೆ ನೀತಿಯನ್ನು ಪರಿಶೀಲಿಸುವಂತೆ ಬಿಸಿಸಿಐ ಸೂಚನೆ ನೀಡಿದೆ. ಐದನೇ ಟೆಸ್ಟ್‌ಗೆ ಮೊದಲು ಅವರ ಅಲಭ್ಯತೆಯ ಬಗ್ಗೆ ಟೀಮ್‌ ಮ್ಯಾನೇಜ್‌ಮೆಂಟ್‌ ಎಲ್ಲಿಯೂ ಅಧಿಕೃತ ಮಾಹಿತಿಯನ್ನು ನೀಡಿರಲಿಲ್ಲ. ಜಸ್‌ಪ್ರೀತ್‌ ಬುಮ್ರಾ ಅವರ ಬೌಲಿಂಗ್‌ ವರ್ಕ್‌ಲೋಡ್‌ ಸಲುವಾಗಿ ತಂಡದ ಬೌಲಿಂಗ್‌ ವಿಭಾಗವನ್ನು ನಿರ್ವಹಿಸುವ ವಿಷಯದಲ್ಲಿ ಕಠಿಣ ಸವಾಲು ಎದುರಾಗಿದೆ. ಇದರ ಬಗ್ಗೆ ಬಿಸಿಸಿಐ ಅಂತಿಮ ಕರೆಯನ್ನು ತೆಗೆದುಕೊಳ್ಳಲಿದೆ ಎಂದು ಟೀಮ್‌ ಆಫ್‌ ಇಂಡಿಯಾ ವರದಿ ಮಾಡಿದೆ.

IND vs ENG: ಓವಲ್‌ ಪಿಚ್‌ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ ಸುನೀಲ್‌ ಗವಾಸ್ಕರ್‌!

ಇದರ ಪ್ರಕಾರ ಭಾರತ ತಂಡ ಮುಂದಿನ ದಿನಗಳಲ್ಲಿ ಐದು ಪಂದ್ಯಗಳ ಟೆಸ್ಟ್‌ ಸರಣಿ ಇದ್ದರೆ, ಈ ಸರಣಿಗೆ ಜಸ್‌ಪ್ರೀತ್‌ ಬುಮ್ರಾ ಅವರನ್ನು ಬಿಸಿಸಿಐ ಪರಿಗಣಿಸುವುದಿಲ್ಲ. ಬಿಸಿಸಿಐನ ಪ್ರತಿಯೊಂದು ಆಯ್ಕೆ ಸಭೆಗೂ ಮುನ್ನ ವೈದ್ಯಕೀಯ ತಂಡ, ಜಸ್‌ಪ್ರೀತ್‌ ಬುಮ್ರಾ ಅವರ ಫಿಟ್ನೆಸ್ ವರದಿಯನ್ನು ಒದಗಿಸಬೇಕು ಎಂದು ಕೂಡ ಎತ್ತಿ ಹೇಳಿದೆ. ಅಂದ ಹಾಗೆ ಮುಂದಿನ ಎರಡು ವರ್ಷಗಳಲ್ಲಿ ಭಾರತ ತಂಡ ಯಾವುದೇ ಐದು ಪಂದ್ಯಗಳ ಟೆಸ್ಟ್‌ ಸರಣಿ ಬರುವುದಿಲ್ಲ. ಈ ವರ್ಷದ ಆರಂಭದಲ್ಲಿ ಭಾರತ ತಂಡಕ್ಕೆ ವೆಸ್ಟ್‌ ಇಂಡೀಸ್‌ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗಳು ಇವೆ.

ಬ್ಯಾಟಿಂಗ್‌ ಕೋಚ್‌ ಸಿತಾಂಶು ಕೊಟಕ್‌ ಹೇಳಿದ್ದೇನು?

ಭಾರತ ತಂಡದ ಆಟಗಾರರ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ಭಾರತ ತಂಡದ ಬ್ಯಾಟಿಂಗ್‌ ಕೋಚ್‌ ಸಿತಾಂಶು ಕೊಟಕ್‌ ವಿವರಣೆ ನೀಡಿದ್ದಾರೆ. "ಬೌಲರ್ ಒಂದು ವಾರಕ್ಕೆ ಒಂದು ನಿರ್ದಿಷ್ಟ ಸಂಖ್ಯೆಯ ಓವರ್‌ಗಳನ್ನು ಹಾಕುವ ಬಗ್ಗೆ ಇದಾಗಿದೆ. ಅವರು ಟಿ20 ಗಾಗಿ ತಯಾರಿ ನಡೆಸುತ್ತಿದ್ದರೆ ಮತ್ತು ಐದು ದಿನಗಳವರೆಗೆ ಆರು ಓವರ್‌ಗಳನ್ನು ಹಾಕಿದರೆ, ಅದು ಟಿ20ಗೆ ಸಾಕಷ್ಟು ಕೆಲಸದ ಹೊರೆಯಾಗಿದೆ. ಆದ್ದರಿಂದ, ಅವರು ಐಪಿಎಲ್ ಆಡುವಾಗ ಟೆಸ್ಟ್ ಸರಣಿಗೆ ತಯಾರಿ ನಡೆಸಲು, ಬೌಲಿಂಗ್ ಕೋಚ್ ಮತ್ತು ಎಸ್ & ಸಿ ತಂಡ ಎಲ್ಲರೂ ಅವರೊಂದಿಗೆ ಸಂಪರ್ಕದಲ್ಲಿದ್ದರು," ಎಂದು ಅವರು ತಿಳಿಸಿದ್ದಾರೆ.

IND vs ENG: ʻಶುಭಮನ್‌ ಗಿಲ್‌ ರನ್‌ಔಟ್‌ ಓವಲ್‌ ಟೆಸ್ಟ್‌ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ʼ,-ಆಕಾಶ್‌ ಚೋಪ್ರಾ!

"ಕಳೆದ ನಾಲ್ಕೈದು ವಾರಗಳಲ್ಲಿ ಬೌಲಿಂಗ್‌ನಲ್ಲಿ ಯಾವುದೇ ಏರಿಕೆ ಇರಬಾರದು. ಒಬ್ಬ ಬೌಲರ್ ವಾರಕ್ಕೆ 30 ಓವರ್‌ಗಳನ್ನು ಹಾಕುತ್ತಿದ್ದರೆ ಮತ್ತು ಇದ್ದಕ್ಕಿದ್ದಂತೆ, ಪ್ರಥಮ ಇನಿಂಗ್ಸ್‌ನಲ್ಲಿ ಅವರು 35 ಓವರ್‌ಗಳನ್ನು ಹಾಕಿದರೆ, ಅದು ಅವರ ವರ್ಕ್‌ಲೋಡ್‌ನಲ್ಲಿನ ಏರಿಕೆಯಾಗಿದೆ. ಅದು ಬೌಲರ್ ಸ್ವತಃ 'ನಾನು ದಣಿದಿದ್ದೇನೆ' ಎಂದು ಭಾವಿಸುತ್ತಾನೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಂತರ, ಅವರು ವರ್ಕ್‌ಲೋಡ್ ಬಗ್ಗೆ ಯೋಚಿಸುತ್ತಾರೆ," ಎಂದು ಸಿತಾಂಶು ಕೊಟಕ್‌ ತಿಳಿಸಿದ್ದಾರೆ.