IND vs ENG: ಐದನೇ ಟಿ20ಐ ಪಂದ್ಯದ ಟಾಸ್ ತಡವಾಗಲು ಕಾರಣವೇನು?
IND vs ENG: ಸೌತ್‌ಹ್ಯಾಂಪ್ಟನ್‌ನ ರೋಸ್ ಬೌಲ್ ಕ್ರೀಡಾಂಣಗಣದಲ್ಲಿ ಇದೀಗ ನಡೆಯುತ್ತಿರು ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದ ಟಾಸ್‌ಗೆ 45 ನಿಮಿಷಗಳ ಕಾಲ ತಡವಾಯಿತು. ಇದಕ್ಕೆ ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟಿ20ಐ ಪಂದ್ಯ. -
ಸೌತ್‌ಹ್ಯಾಂಪ್ಟನ್: ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ಟಿ20ಐ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯ (IND vs ENG) ತಡವಾಗಿ ಆರಂಭವಾಯಿತು. ಏಕೆಂದರೆ ಪಂದ್ಯದ ಟಾಸ್ ಅರ್ಧಗಂಟೆ ಮುಂಚೆ ಅಂದರೆ, ಭಾರತೀಯ ಕಾಲಮಾನ ಸಂಜೆ 06: 30ಕ್ಕೆ ನಡೆಯಬೇಕಾಗಿತ್ತ. ಆದರೆ, ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ಟೀಮ್ ಇಂಡಿಯಾ ಮೈದಾನಕ್ಕೆ ತಡವಾಗಿ ಆಗಮಿಸಿತು. ಹೋಟೆಲ್‌ನಿಂದ ಸ್ಟೇಡಿಯಂಗೆ ಪ್ರಯಾಣಿಸುವಾಗ ಹೆಚ್ಚು ಟ್ರಾಫಿಕ್ ಉಂಟಾಗಿತ್ತು, ಹಾಗಾಗಿ ತಡವಾಯಿತು ಎಂದು ವರದಿಗಳು ಹೇಳುತ್ತಿವೆ. ಇದನ್ನು ಕಾಮೆಂಟೇಟರ್ ರವಿ ಶಾಸ್ತ್ರಿ ಅವರು ಕೂಡ ಸ್ಪಷ್ಟಪಡಿಸಿದ್ದರು.
ಭಾರತ ತಂಡ ಮೈದಾನಕ್ಕೆ ತಡವಾಗಿ ಆಗಮಿಸಿದ ಕಾರಣ ಪಂದ್ಯದ ಟಾಸ್ ಭಾರತೀಯ ಕಾಲಮಾನ 07:15ಕ್ಕೆ ನಡೆದಿತ್ತು ಹಾಗೂ ಪಂದ್ಯ ಸಂಜೆ 07:30ಕ್ಕೆ ಆರಂಭವಾಯಿತು. ಅಂದರೆ ಪಂದ್ಯದ ಆರಂಭಕ್ಕೆ ಅರ್ಧಗಂಟೆ ತಡವಾಯಿತು.
ಟಾಸ್‌ನಲ್ಲಿ ಉಂಟಾದ ವಿಳಂಬ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತು. ಸಾಮಾನ್ಯವಾಗಿ ಪಂದ್ಯ ಆರಂಭಕ್ಕೆ ಅರ್ಧ ಗಂಟೆ ಮೊದಲು ಟಾಸ್ ಪ್ರಕ್ರಿಯೆ ನಡೆಯುವುದು ವಾಡಿಕೆ. ಸೌತ್‌ಹ್ಯಾಂಪ್ಟನ್ ನಗರದ ಹೊರವಲಯದಲ್ಲಿರುವ ರೋಸ್ ಬೌಲ್ ಕ್ರೀಡಾಂಗಣವು ಪಂದ್ಯಗಳ ದಿನಗಳಲ್ಲಿ ಸಂಚಾರ ದಟ್ಟಣೆ ಹಾಗೂ ಕ್ರೀಡಾಂಗಣಕ್ಕೆ ಪ್ರವೇಶಿಸುವಲ್ಲಿ ಉಂಟಾಗುವ ಸಮಸ್ಯೆಗಳ ಕಾರಣದಿಂದ ಈ ಹಿಂದೆಯೂ ಟೀಕೆಗೆ ಗುರಿಯಾಗಿತ್ತು.
ಸೂರ್ಯ ನಾಯಕ, ಭಾರತ ಟಿ20 ತಂಡದ ಪರ್ಯಾಯ ಪ್ಲೇಯಿಂಗ್ XI ಆರಿಸಿದ ಆಕಾಶ್ ಚೋಪ್ರಾ!
ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಭಾರತ
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಮೊದಲು ಬೌಲಿಂಗ್ ಆರಿಸಿಕೊಂಡರು, ಆ ಮೂಲಕ ಎದುರಾಳಿ ಇಂಗ್ಲೆಂಡ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಪಂದ್ಯದ ಟಾಸ್ ವೇಳೆ ಅವರು ಭಾರತ ತಂಡದ ಪ್ಲೇಯಿಂಗ್ Xiನಲ್ಲಿ ಎರಡು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ಮೂರು ಪಂದ್ಯಗಳಿಂದ ಬೆಂಚ್ ಕಾದಿದ್ದ ಸಂಜು ಸ್ಯಾಮ್ಸನ್ ಅವರನ್ನು ವೈಭವ್ ಸೂರ್ಯವಂಶಿ ಅವರ ಸ್ಥಾನಕ್ಕೆ ಕರೆಸಿಕೊಂಡರೆ, ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಸ್ಥಾನಕ್ಕೆ ಸೂರ್ಯಾಂಶ್ ಶೆಡ್ಗೆ ಅವರಿಗೆ ಚೊಚ್ಚಲ ಸ್ಥಾನವನ್ನು ನೀಡಲಾಯಿತು.
🚨 Toss 🚨#TeamIndia have won the toss and elected to bowl first in Southampton.
— BCCI (@BCCI) July 11, 2026
Updates ▶️ https://t.co/7mo5osv0MW#ENGvIND pic.twitter.com/qAQj6cvYSA
ಕ್ಲೀನ್ ಸ್ವೀಪ್ ಭೀತಿಯಲ್ಲಿ ಟೀಮ್ ಇಂಡಿಯಾ
ಭಾರತ ತಂಡ ಈ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಹೀನಾಯ ಪ್ರದರ್ಶನವನ್ನು ತೋರುತ್ತಿದೆ. ಇಲ್ಲಿಯ ತನಕ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋಲು ಅನುಭವಿಸಿತು. ಇದರಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಆ ಮೂಲಕ ಕೊನೆಯ ಪಂದ್ಯ ಬಾಕಿ ಇರುವಾಗಲೇ ಭಾರತ ತಂಡ 0-3 ಅಂತರದಲ್ಲಿ ಟಿ20ಐ ಸರಣಿಯನ್ನು ಕಳೆದುಕೊಂಡಿದೆ. ಇದೀಗ ಐದನೇ ಪಂದ್ಯವನ್ನು ಗೆದ್ದು ಟಿ20ಐ ಸರಣಿಯಲ್ಲಿ ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳಲು ಎದುರು ನೋಡುತ್ತಿದೆ.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಪ್ರಸಿಧ್ ಕೃಷ್ಣ
ಇಂಗ್ಲೆಂಡ್: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಜಾಶ್ ಟಂಗ್