ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ರಿಷಭ್‌ ಪಂತ್‌ ರನ್‌ಔಟ್‌ ಆದ ಬಗ್ಗೆ ಕೆಎಲ್‌ ರಾಹುಲ್‌ ಪ್ರತಿಕ್ರಿಯೆ!

KL Rahul on Rishabh Pant's Run Out: ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದ ಮೂರನೇ ದಿನ ಅರ್ಧಶತಕ ಸಿಡಿಸಿದ ಬಳಿಕ ರಿಷಭ್‌ ಪಂತ್‌ ರನ್‌ಔಟ್‌ ಆಗಿದ್ದರು. ಆ ಮೂಲಕ ಶತಕ ಸಿಡಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಕೆಎಲ್‌ ರಾಹುಲ್‌ ಪ್ರತಿಕ್ರಿಯಿಸಿದ್ದಾರೆ.

ರಿಷಭ್‌ ಪಂತ್‌ ರನ್‌ಔಟ್‌ ಆದ ಬಗ್ಗೆ ಕೆಎಲ್‌ ರಾಹುಲ್‌ ಪ್ರತಿಕ್ರಿಯೆ!

ರಿಷಭ್‌ ಪಂತ್‌ ರನ್‌ಔಟ್‌ ಬಗ್ಗೆ ಕೆಎಲ್‌ ರಾಹುಲ್‌ ಪ್ರತಿಕ್ರಿಯೆ.

Profile Ramesh Kote Jul 13, 2025 3:35 PM

ಲಂಡನ್:‌ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ (IND vs ENG) ನಡುವೆ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಅಂಗಣದಲ್ಲಿ ಮೂರನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ (Rishabh pant) ಅವರು ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಎಡಗೈ ತೋರು ಬೆರಳಿಗೆ ಗಾಯವಾದರೂ ಅವರು ಬ್ಯಾಟ್‌ ಮಾಡಿದ್ದರು. ಆದರೆ, ಕೆಎಲ್‌ ರಾಹುಲ್‌ (KL Rahul) ಜೊತೆ ಸಂವಂಹನದ ಕೊರತೆಯಿಂದ ಪಂತ್‌ ರನ್‌ಔಟ್‌ ಆದರು. ಈ ವೇಳೆ ಬೇಸರದೊಂದಿಗೆ ರಿಷಭ್‌ ಪಂತ್‌ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಅಂದ ಹಾಗೆ ರಿಷಭ್‌ ಪಂತ್‌ ಅವರ ರನ್‌ಔಟ್‌ ಬಗ್ಗೆ ಕೆಎಲ್‌ ರಾಹುಲ್‌ ಪ್ರತಿಕ್ರಿಯೆ ನೀಡಿದ್ದಾರೆ.

ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ವಿಕೆಟ್‌ ಕೀಪಿಂಗ್‌ ವೇಳೆ ರಿಷಭ್‌ ಪಂತ್‌ ತನ್ನ ಎಡಗೈ ತೋರು ಬೆರಳಿಗೆ ಚೆಂಡನ್ನು ತಗುಲಿಸಿಕೊಂಡು ಗಾಯ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಮೈದಾನವನ್ನು ತೊರೆದಿದ್ದರು ಹಾಗೂ ನಂತರ ವಿಕೆಟ್‌ ಕೀಪಿಂಗ್‌ಗೆ ಮರಳಲಿಲ್ಲ. ಇವರ ಬದಲು ಧ್ರುವ್‌ ಜುರೆಲ್‌ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ರಿಷಭ್‌ ಪಂತ್‌, 112 ಎಸೆತಗಳಲ್ಲಿ 74 ರನ್‌ ಗಳಿಸಿ ಈ ಸರಣಿಯಲ್ಲಿ ಮೂರನೇ ಶತಕವನ್ನು ಸಿಡಿಸುವ ಹಾದಿಯಲ್ಲಿದ್ದರು.

IND vs ENG: ಕೆಎಲ್‌ ರಾಹುಲ್‌ ಶತಕದ ಹೊರತಾಗಿಯೂ ಮುನ್ನಡೆ ಸಾಧಿಸದ ಟೀಮ್‌ ಇಂಡಿಯಾ!

ಆದರೆ, ಮೂರನೇ ದಿನದಾಟದ ಭೋಜನ ವಿರಾಮಕ್ಕೂ ಮುನ್ನ ಕೆಎಲ್‌ ರಾಹುಲ್‌ 99 ರನ್‌ ಗಳಿಸಿದ್ದರು. ಈ ವೇಳೆ ರಿಷಭ್‌ ಪಂತ್‌ 66ನೇ ಓವರ್‌ 3ನೇ ಎಸೆತದಲ್ಲಿ ಆಫ್‌ಸೈಡ್‌ಗೆ ಚೆಂಡನ್ನು ಡಿಫೆನ್ಸ್‌ ಮಾಡಿ ಕೆಎಲ್‌ ರಾಹುಲ್‌ಗೆ ಸ್ಟ್ರೈಕ್‌ ನೀಡಲು ಪ್ರಯತ್ಮಿಸಿದರು ಹಾಗೂ ರನ್‌ ಓಡಲು ಮುಂದಾದರು. ಆದರೆ, ಬೆನ್‌ ಸ್ಟೋಕ್ಸ್‌ ಚೆಂಡನ್ನು ನೇರವಾಗಿ ನಾನ್‌ಸ್ಟ್ರೈಕ್‌ ಕಡೆಗಿನ ಸ್ಟಂಪ್ಸ್‌ಗೆ ಹೊಡೆದರು. ಆ ಮೂಲಕ ಪಂತ್‌ ಅನಿರೀಕ್ಷಿತವಾಗಿ ರನ್‌ಔಟ್‌ ಆದರು. ಈ ವೇಳೆ ಕೆಎಲ್‌ ರಾಹುಲ್‌ ಅವರನ್ನು ಅಭಿಮಾನಿಗಳು ಟೀಕಿಸಿದರು.

ಮೂರನೇ ದಿನದಾಟದ ಅಂತ್ಯಕ್ಕೆ ಮಾತನಾಡಿದ ಕೆಎಲ್‌ ರಾಹುಲ್‌, ರಿಷಭ್‌ ಪಂತ್‌ ಅವರ ನಿಸ್ವಾರ್ಥ ಮನೋಭಾವವನ್ನು ಶ್ಲಾಘಿಸಿದರು. ಭೋಜನ ವಿರಾಮಕ್ಕೂ ಮುನ್ನ ರಾಹುಲ್‌ ಶತಕವನ್ನು ಪೂರ್ಣಗೊಳಿಸಬೇಕೆಂದು ಇಬ್ಬರೂ ಚರ್ಚೆ ನಡೆಸಿದ್ದರು. ಈ ಕಾರಣದಿಂದಲೇ ರಿಷಭ್‌ ಪಂತ್‌ ತಮ್ಮ ಸಹ ಆಟಗಾರ ರಾಹುಲ್‌ಗೆ ಶತಕ ಸಿಡಿಸಲು ಸಿಂಗಲ್‌ಗೆ ಪ್ರಯತ್ನ ನಡೆಸಿದ್ದರು.

IND vs ENG: ಚೆಂಡು ಬದಲಿಸುವಾಗ ಸಮಯ ವ್ಯರ್ಥ ಮಾಡಿದ ಅಂಪೈರ್‌ ವಿರುದ್ಧ ರವಿ ಶಾಸ್ತ್ರಿ ಕಿಡಿ!

"ಭೋಜನ ವಿರಾಮಕ್ಕೂ ಮುನ್ನ ನಾನು ಶತಕವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆಂದು ನಾನು ರಿಷಭ್‌ ಪಂತ್‌ಗೆ ಕೆಲ ಗಂಟೆಗಳ ಹಿಂದೆ ತಿಳಿಸಿದ್ದೆ. ಭೋಜನ ವಿರಾಮಕ್ಕೂ ಮುನ್ನ ಶೋಯೆಬ್‌ ಬಷೀರ್‌ ಬೌಲ್‌ ಮಾಡಿದ್ದರು ಹಾಗೂ ಈ ವೇಳೆ ಶತಕವನ್ನು ಪೂರ್ಣಗೊಳಿಸಲು ಸಕಾಲ ಎಂದು ನಾನು ಭಾವಿಸಿದ್ದೆ. ಅನಿರೀಕ್ಷಿತವಾಗಿ ನಾನು ಚೆಂಡನ್ನು ನೇರವಾಗಿ ಫೀಲ್ಡರ್‌ಗೆ ಹೊಡೆದಿದ್ದೆ. ನಾನು ಆ ಎಸೆತದಲ್ಲಿ ಬೌಂಡರಿ ಗಳಿಸಬೇಕಾಗಿತ್ತು, ಆದರೆ, ಇದು ಸಾಧ್ಯವಾಗಲಿಲ್ಲ," ಎಂದು ಕೆಎಲ್‌ ರಾಹುಲ್‌ ತಿಳಿಸಿದ್ದಾರೆ.

"ರಿಷಭ್‌ ಪಂತ್‌ ಸ್ಟ್ರೈಕ್‌ ರೊಟೇಟ್‌ ಮಾಡಬೇಕೆಂದು ಬಯಸಿದ್ದರು ಹಾಗೂ ನನ್ನನ್ನು ಸ್ಟ್ರೈಕ್‌ ಪುನಃ ಕಳುಹಿಸಲು ರಿಷಭ್‌ ಪಂತ್‌ ಬಯಸಿದ್ದರು ಎಂದು ನನಗೆ ಅನಿಸಿತ್ತು. ಆದರೆ, ಹೌದು ರನ್‌ಔಟ್‌ ಆದಬಾರದಿತ್ತು. ಇದರಿಂದ ಪಂದ್ಯದ ಸನ್ನಿವೇಶ ಸಂಪೂರ್ಣ ಬದಲಾಯಿತು. ನಮ್ಮಿಬ್ಬರಿಗೂ ಇದು ತುಂಬಾ ನಿರಾಶದಾಯಕ ಸಂಗತಿಯಾಗಿದೆ. ಯಾರೊಬ್ಬರೂ ಕೂಡ ಈ ರೀತಿ ವಿಕೆಟ್‌ ಅನ್ನು ಕೈ ಚೆಲ್ಲಲು ಬಯಸುವುದಿಲ್ಲ," ಎಂದು ಕನ್ನಡಿಗ ಹೇಳಿದ್ದಾರೆ.