IND vs ENG: ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಬೆನ್ ಸ್ಟೋಕ್ಸ್!
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ತಮ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಮೂರನೇ ದಿನದಾಟದಂದು ಹ್ಯಾರಿ ಬ್ರೂಕ್ ಔಟಾದ ಬಳಿಕ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ, ಸ್ಟೋಕ್ಸ್ 141ರನ್ ಬಾರಿಸುವುದರ ಮೂಲಕ ಕ್ರಿಕೆಟ್ ದಿಗ್ಗಜರಾದ ಜಾಕ್ ಕಾಲಿಸ್ ಮತ್ತು ಗ್ಯಾರಿಫೀಲ್ಡ್ ಸೋಬರ್ಸ್ ಅವರನ್ನು ಒಳಗೊಂಡ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದ ಬೆನ್ ಸ್ಟೋಕ್ಸ್.

ಮ್ಯಾಂಚೆಸ್ಟರ್: ಇಲ್ಲಿನ ಓಲ್ಡ್ ಟ್ರಾಫರ್ಡ್‌ನಲ್ಲಿ ಭಾನುವಾರ ಮುಕ್ತಾಯವಾದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ(IND vs ENG) ಆತಿಥೇಯ ಇಂಗ್ಲೆಂಡ್ ತಂಡ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 669 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ ಆತಿಥೇಯರು ಭಾರತದ (India) ವಿರುದ್ಧ 311 ರನ್‌ಗಳ ಮುನ್ನಡೆ ಸಾಧಿಸಿದ್ದರು. ಭಾರತ ತನ್ನ ಪಾಲಿನ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್ ಗಳಿಸಿದರೆ, ಇತ್ತ ಇಂಗ್ಲೆಂಡ್ ತಂಡದ ತನ್ನ ಬ್ಯಾಟ್ಸ್‌ಮನ್‌ಗಳ ಉತ್ತಮ ಪ್ರದರ್ಶನದ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿತು. ಮತ್ತೊಂದು ಕಡೆ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಆರಂಭದಲ್ಲೇ ಮುಗ್ಗರಿಸಿತು ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಕಡೆ ನಡೆದಿದ್ದರು. ಹಾಗಾಗಿ ಭಾರತ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ವೇಳೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ತಮ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಬೆನ್ ಸ್ಟೋಕ್ಸ್ ತಮ್ಮ 14ನೇ ಟೆಸ್ಟ್ ಕ್ರಿಕೆಟ್ ಶತಕ ಬಾರಿಸುವುದರ ಮೂಲಕ ಐತಿಹಾಸಿಕ ಮೈಲುಗಲ್ಲನ್ನು ನೆಟ್ಟಿದ್ದಾರೆ. ಮೂರನೇ ದಿನದಾಟದಂದು ಹ್ಯಾರಿ ಬ್ರುಕ್ ಔಟಾದ ಬಳಿಕ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ ಸ್ಟೋಕ್ಸ್ 141ರನ್ ಬಾರಿಸುವುದರ ಮೂಲಕ ತಂಡ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ವೇಳೆ ಅವರು ದೀರ್ಘಾವಧಿ ಸ್ವರೂಪದಲ್ಲಿ 7000 ರನ್‌ಗಳ ಗಡಿಯನ್ನು ದಾಟಿದರು ಹಾಗೂ 200 ವಿಕೆಟ್ ಪಡೆದ ಮೂರನೇ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆದರು. ಈ ಮೂಲಕ ಕ್ರಿಕೆಟ್ ದಿಗ್ಗಜರಾದ ಜಾಕ್ ಕಾಲಿಸ್ ಮತ್ತು ಗಾರ್ಫೀಲ್ಡ್ ಸೋಬರ್ಸ್ ರವರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಸ್ಟೋಕ್ಸ್‌ಗೆ ಇದು 2023ರ ಜೂನ್ ನಂತರ ಅತೀ ದೊಡ್ಡ ಇನಿಂಗ್ಸ್ ಆಗಿದ್ದು, ಅವರ ಅಗ್ರೆಸಿವ್ ಫಾರ್ಮ್ ಮರು ಪಡೆದಿದೆ ಎನ್ನಬಹುದು.
IND vs ENG: ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಬೆನ್ ಸ್ಟೋಕ್ಸ್ ವರ್ತನೆಗೆ ಸಂಜಯ್ ಮಾಂಜ್ರೇಕರ್ ಕಿಡಿ!
ಈ ಹಿಂದೆ ಸ್ಟೋಕ್ಸ್ ಎರಡನೇ ದಿನದಂದು ತಂಡದ 5ವಿಕೆಟ್ ಕಬಳಿಸಿ ಎದುರಾಳಿ ಭಾರತವನ್ನು 358ರನ್‌ಗಳಿಗೆ ಕಟ್ಟಿಹಾಕುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. 2017ರ ಬಳಿಕ ಸ್ಟೋಕ್ಸ್ ಇದೇ ಮೊದಲ ಬಾರಿ 5 ವಿಕೆಟ್ ಕಿತ್ತಿದ್ದು, ಒಂದೇ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿ, ಶತಕ ಸಿಡಿಸಿದ ವಿಶ್ವದ ಐದನೇ ಟೆಸ್ಟ್ ತಂಡದ ನಾಯಕ ಹಾಗೂ ಇಂಗ್ಲೆಂಡ್‌ನ ನಾಲ್ಕನೇ ಆಟಗಾರ ಎನ್ನುವ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.
ಮೂರನೇ ದಿನದಾಟದ ಮುಕ್ತಾಯದ ವೇಳೆಗೆ ಜೋ ರೂಟ್ ಜೊತೆಯಾಗಿ ಐದನೇ ವಿಕೆಟ್‌ಗೆ 142ರ ಜೊತೆಯಾಟವಾಡಿದ್ದರು. ನಾಲ್ಕನೇ ದಿನದಂದು ಪುನಃ ಮೈದಾನಕ್ಕಿಳಿದ ಸ್ಟೋಕ್ಸ್, ಬ್ರೈಡನ್ ಕಾರ್ಸ್ ಜೊತೆಗೆ 9ನೇ ವಿಕೆಟ್ ಗೆ 95 ರನ್ ಜೊತೆಯಾಟವಾಡಿ ಭರ್ಜರಿ ಶತಕ ಸಿಡಿಸಿದರು. ಅಂತಿಮವಾಗಿ ಸ್ಟೋಕ್ಸ್ 198 ಎಸೆತಗಳಲ್ಲಿ 141 ರನ್ ಗಳಿಸಿ ರವೀಂದ್ರ ಜಡೇಜಾ ಎಸೆತದಲ್ಲಿ ಲಾಂಗ್ ಆನ್ ನಲ್ಲಿ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು. ಅವರ ಈ ಬೃಹತ್ ಇನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿದ್ದವು.
IND vs ENG 4th Test: ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ
ಬೆನ್ ಸ್ಟೋಕ್ಸ್ ಶತಕದ ಮೂಲಕ ಇಂಗ್ಲೆಂಡ್ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 669 ರನ್ ಬಾರಿಸಿದರು. ಆ ಮೂಲಕ ಭಾರತ ತಂಡಕ್ಕಿಂತ 311 ರನ್ ಮುನ್ನಡೆ ಪಡೆದು ಮೇಲುಗೈ ಸಾಧಿಸಿತು. ಇಂಗ್ಲೆಂಡ್‌ನ ಇತರೆ ಆಟಗಾರರಾದ ಜೋ ರೂಟ್ (150 ರನ್, 248 ಎಸೆತ), ಬೆನ್ ಡಕೆಟ್ (94), ಝ್ಯಾಕ್ ಕ್ರಾವ್ಲಿ (84), ಮತ್ತು ಒಲ್ಲಿ ಪೋಪ್ (71) ಕೂಡಾ ಶ್ರೇಷ್ಠ ಆಟವಾಡಿದರು. ಇತ್ತ ಭಾರತದ ಪರ ರವೀಂದ್ರ ಜಡೇಜಾ 143 ರನ್ ನೀಡಿ 4 ವಿಕೆಟ್ ಪಡೆದರೆ, ಇನ್ನೊಂದು ಕಡೆ ವಾಷಿಂಗ್ಟನ್ ಸುಂದರ್ 107ಕ್ಕೆ 2 ವಿಕೆಟ್ ಹಾಗೂ ಜಸ್‌ಪ್ರೀತ್ ಬುಮ್ರಾ 112ಕ್ಕೆ 2 ಕಬಳಿಸಿ ಆಂಗ್ಲರನ್ನು ಆಲೌಟ್ ಮಾಡಿದರು.
ಬರಹ: ಕೆಎನ್ ರಂಗು, ಚಿತ್ರದುರ್ಗ