IND vs ENG: ವಿರಾಟ್ ಕೊಹ್ಲಿ ಅಲ್ಲ, ತನ್ನ ರೋಲ್ ಮಾಡೆಲ್ ಯಾರೆಂದು ತಿಳಿಸಿದ ವೈಭವ್ ಸೂರ್ಯವಂಶಿ!
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ದಾಖಲೆಯ ದ್ವಿಶತಕ (269 ರನ್) ಸಿಡಿಸಿದ್ದಾರೆ. ಈ ಆಟದ ಪ್ರಭಾವದಿಂದ ತನಗೂ ರೆಡ್ ಬಾಲ್ ಕ್ರಿಕೆಟ್ ಆಡಬೇಕೆಂಬ ಕನಸು ಬಂದಿದೆ ಎಂದು ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹೇಳಿದ್ದಾರೆ.

ಶುಭಮನ್ ಗಿಲ್ ನನ್ನ ರೋಲ್ ಮಾಡೆಲ್ ಎಂದ ವೈಭವ್ ಸೂರ್ಯವಂಶಿ.

ನವದೆಹಲಿ: ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ಅವರು ಇಂಗ್ಲೆಂಡ್ ವಿರುದ್ಧ ಎಜ್‌ಬಾಸ್ಟನ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ (IND vs ENG) ಪಂದ್ಯದಲ್ಲಿ ದಾಖಲೆಯ ದ್ವಿಶತಕ ಸಿಡಿಸಿದ್ದಾರೆ. ಈ ಆಟದಿಂದ ಭಾರತದ ಯುವ ಸ್ಫೋಟಕ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಪ್ರಭಾವಿತರಾಗಿದ್ದಾರೆ. 30 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ನೆರವಿನಿಂದ ಗಿಲ್ 269 ರನ್ ಬಾರಿಸಿದ್ದಾರೆ. ಈ ದ್ವಿಶತಕದಿಂದ 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಗಳಿಸಿದ್ದ ದ್ವಿಶತಕ (254 ರನ್) ದಾಖಲೆ ಮುರಿದು ಟೀಮ್ ಇಂಡಿಯಾದ ಪರ ದ್ವಿಶತಕ ಸಿಡಿಸಿದ ಯುವ ನಾಯಕ ಎಂಬ ದಾಖಲೆಯನ್ನು ಬರೆದಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ ಈ ಪಂದ್ಯವನ್ನು ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸಿದ್ದು, ಗಿಲ್ ಆಟದಿಂದ ನಾನು ಪ್ರಭಾವಿತಗೊಂಡಿದ್ದು ಟೆಸ್ಟ್ ಕ್ರಿಕೆಟ್ ಆಡುವ ಕನಸು ಕಂಡಿದ್ದೇನೆ ಎಂದು ಹೇಳಿದ್ದಾರೆ. ಭಾರತ ಅಂಡರ್-19 ತಂಡ, ಇಂಗ್ಲೆಂಡ್-19 ವಿರುದ್ಧ 5 ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯ ಆಡಲಿದೆ. ಏಕದಿನ ಸರಣಿಯಲ್ಲಿ ಮಿಂಚುತ್ತಿರುವ ಸೂರ್ಯವಂಶಿ, ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.
IND vs ENG: ಎರಡನೇ ಟೆಸ್ಟ್‌ನಲ್ಲಿಯೂ ಭಾರತವನ್ನು ಸೋಲಿಸುತ್ತೇವೆಂದ ಹ್ಯಾರಿ ಬ್ರೂಕ್!
ಶುಭಮನ್ ಗಿಲ್ ನಮ್ಮ ರೋಲ್ ಮಾಡೆಲ್: ವೈಭವ್ ಸೂರ್ಯವಂಶಿ
ಬಿಸಿಸಿಐ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿರುವ ವೈಭವ್ ಸೂರ್ಯವಂಶಿ, "ನಮ್ಮಲ್ಲಿ ತುಂಬಾ ಉತ್ತಮ ಭಾವನೆ ಮೂಡಿದೆ. ಇದು ಇಂಗ್ಲೆಂಡ್‌ನಲ್ಲಿ ನಾನು ಆಡಲಿರುವ ಮೊದಲ ಟೆಸ್ಟ್ ಪಂದ್ಯವಾಗಿದೆ. ಪಂದ್ಯ ಯಾವ ರೀತಿ ಸಾಗುತ್ತದೆ ಎಂಬುದನ್ನು ನೋಡುವ ನಿರೀಕ್ಷೆಯಲ್ಲಿದ್ದೇನೆ. ನಾವೆಲ್ಲ ಪಂದ್ಯ (ಭಾರತ vs ಇಂಗ್ಲೆಂಡ್) ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋಗಿದ್ದೆವು. ಈ ಪಂದ್ಯದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಶುಭಮನ್ ಗಿಲ್ ನಮ್ಮೆಲ್ಲರ ರೋಲ್ ಮಾಡೆಲ್ ಆಗಿದ್ದಾರೆ. ತಮ್ಮ ದೇಶದ ಪರ ರೆಡ್ ಬಾಲ್ ಕ್ರಿಕೆಟ್ ಆಡಬೇಕೆಂಬ ಕನಸನ್ನು ಪ್ರತಿಯೊಬ್ಬರು ಹೊಂದಿರುತ್ತಾರೆ. ಅದೇ ರೀತಿಯ ಕನಸು ನನಗೂ ಇದೆ," ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
IND vs ENG: 6 ವಿಕೆಟ್ ಕಿತ್ತು ಕಪಿಲ್ ದೇವ್ ಒಳಗೊಂಡ ಎಲೈಟ್ ಲೀಸ್ಟ್ ಸೇರಿದ ಮೊಹಮ್ಮದ್ ಸಿರಾಜ್!
ಉತ್ತಮ ಫಾರ್ಮ್‌ನಲ್ಲಿರುವ ವೈಭವ್ ಸೂರ್ಯವಂಶಿ
2025ರ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದ ಯುವ ಸ್ಫೋಟಕ ಆಟಗಾರ ವೈಭವ್ ಸೂರ್ಯವಂಶಿ, ಪ್ರಸ್ತುತ ಇಂಗ್ಲೆಂಡ್ ಅಂಡರ್ 19 ತಂಡದ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ವೈಭವ್ ಸೂರ್ಯವಂಶಿ, ಮೂರನೇ ಪಂದ್ಯದಲ್ಲಿ 20 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿ ದಿಗ್ಗಜರಾದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಅವರ ದಾಖಲೆ ಮುರಿದಿದ್ದಾರೆ. ಅಲ್ಲದೆ 31 ಎಸೆತದಲ್ಲೇ 86 ರನ್ ಸಿಡಿಸಿ ಇಂಗ್ಲೆಂಡ್ ನೀಡಿದ್ದ 269 ರನ್ ಗುರಿಯನ್ನು ಟೀಮ್ ಇಂಡಿಯಾ ಕೇವಲ 34.3 ಓವರ್‌ನಲ್ಲೇ ತಲುಪಲು ನೆರವು ನೀಡಿದ್ದರು. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ.
IND vs ENG: ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ 6 ವಿಕೆಟ್ ಕಿತ್ತು ಮಿಂಚಿದ ಮೊಹಮ್ಮದ್ ಸಿರಾಜ್!
ಸರಣಿಯ ಆರಂಭಿಕ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ವೈಭವ್ ಸೂರ್ಯವಂಶಿ, 5 ಭರ್ಜರಿ ಸಿಕ್ಸರ್ ಹಾಗೂ 3 ಮನಮೋಹಕ ಬೌಂಡರಿ ನೆರವಿನಿಂದ 18 ಎಸೆತಗಳಲ್ಲಿ 48 ರನ್ ಗಳಿಸಿ ಅರ್ಧಶತಕ ವಂಚಿತರಾದರೂ, ಪಂದ್ಯ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.