ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಎರಡನೇ ಟೆಸ್ಟ್‌ನಲ್ಲಿಯೂ ಭಾರತವನ್ನು ಸೋಲಿಸುತ್ತೇವೆಂದ ಹ್ಯಾರಿ ಬ್ರೂಕ್!

ಬರ್ಮಿಂಗ್‌ಹ್ಯಾಮ್‌ನಲ್ಲಿ ಎಜ್‌ಬಾಸ್ಟನ್‌ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತ ತಂಡದ ಆಟಗಾರರನ್ನು ಬಹುಬೇಗ ನಿಯಂತ್ರಿಸುವ ಆತ್ಮವಿಶ್ವಾಸ ನಮಗಿದೆ ಎಂದು ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್ ಹೇಳಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡು ಒಟ್ಟಾರೆ 244 ರನ್ ಮುನ್ನಡೆ ಸಾಧಿಸಿದೆ.

IND vs ENG: ಭಾರತ ತಂಡಕ್ಕೆಎಚ್ಚರಿಕೆ ನೀಡಿದ ಹ್ಯಾರಿ ಬ್ರೂಕ್‌!

ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಹ್ಯಾರಿ ಬ್ರೂಕ್‌.

Profile Ramesh Kote Jul 5, 2025 11:46 AM

ಬರ್ಮಿಂಗ್‌ಹ್ಯಾಮ್: ಎರಡನೇ ಟೆಸ್ಟ್‌ ಪಂದ್ಯದ (IND vs ENG) ನಾಲ್ಕನೇ ದಿನದಾಟದಲ್ಲಿ ಭಾರತ ತಂಡದ ಆಟಗಾರರನ್ನು ಬಹುಬೇಗ ನಿಯಂತ್ರಿಸುವ ಆತ್ಮವಿಶ್ವಾಸ ನಮಗಿದೆ ಎಂದು ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್‌ ಹ್ಯಾರಿ ಬ್ರೂಕ್ (Harry Brook) ಹೇಳಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಒಂದು ವಿಕೆಟ್ ಕಳೆದುಕೊಂಡು 64 ರನ್ ಗಳಿಸಿದ್ದು, 244 ರನ್ ಮುನ್ನಡೆ ಪಡೆದಿದೆ. ಹೀಗಿದ್ದರೂ ಭಾರತ ತಂಡ ನಾಲ್ಕನೇ ಇನಿಂಗ್ಸ್‌ನಲ್ಲಿ ಪಂದ್ಯ ಗೆಲ್ಲಲು ನೀಡುವ ಗುರಿಯನ್ನು ನಾವು ತಲುಪುತ್ತೇವೆ ಎಂದು ಬ್ರೂಕ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮೂರನೇ ದಿನದಾಟದಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಅವರ ಮಾರಕ ದಾಳಿಯಿಂದ ಇಂಗ್ಲೆಂಡ್ 84 ರನ್‌ಗಳಿಗೆ 5 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು . ಆದರೆ ವಿಕೆಟ್ ಕೀಪರ್ ಜೇಮಿ ಸ್ಮಿತ್ (184* ರನ್) ಜೊತೆಗೆ 303 ರನ್‌ಗಳ ಜೊತೆಯಾಟವಾಡಿದ ಹ್ಯಾರಿ ಬ್ರೂಕ್ (158 ರನ್) ಇಂಗ್ಲೆಂಡ್ ತಂಡ 407 ರನ್ ಗಳಿಸಿ ಫಾಲೋ ಆನ್ ಭೀತಿಯಿಂದ ಪಾರು ಮಾಡಿದ್ದರು.

IND vs ENG: 6 ವಿಕೆಟ್ ಕಿತ್ತು ಕಪಿಲ್ ದೇವ್ ಒಳಗೊಂಡ ಎಲೈಟ್ ಲೀಸ್ಟ್ ಸೇರಿದ ಮೊಹಮ್ಮದ್‌ ಸಿರಾಜ್‌!

ಭಾರತ ತಂಡವನ್ನು ಬಹುಬೇಗ ಕಟ್ಟಿ ಹಾಕುತ್ತೇವೆ: ಬ್ರೂಕ್

ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹ್ಯಾರಿ ಬ್ರೂಕ್, ಲೀಡ್ಸ್‌ನ ಹೆಡಿಂಗ್ಲ್ ಪಿಚ್‌ನಲ್ಲಿ ನಿಯಂತ್ರಿಸಿದ ರೀತಿಯಲ್ಲೇ ಟೀಮ್ ಇಂಡಿಯಾವನ್ನು ನಿಯಂತ್ರಿಸಿ ಅವರು ನೀಡುವ ಗುರಿ ಮೆಟ್ಟಿನಿಂತು ಗೆಲುವು ಸಾಧಿಸುತ್ತೇವೆ ಎಂದು ಬ್ರೂಕ್ ಹೇಳಿದ್ದಾರೆ.

"ಪಂದ್ಯದಲ್ಲಿ ಸಹಜವಾಗಿಯೇ ಅವರು (ಟೀಮ್ ಇಂಡಿಯಾ) ಈಗ ಮುನ್ನಡೆ ಸಾಧಿಸಿದ್ದಾರೆ. ಆದರೆ 4ನೇ ದಿನದಾಟದ ಬೆಳಗಿನ ಆಟದಲ್ಲೇ 3 ಅಥವಾ 4 ವಿಕೆಟ್ ಪಡೆದು ಅವರ ಮೇಲೆ ಒತ್ತಡ ಹಾಕುತ್ತೇವೆ. ಪಂದ್ಯ ಯಾವ ರೀತಿ ತಿರುವು ಪಡೆಯುತ್ತದೆ ಎಂದು ನಮಗ್ಯಾರಿಗೂ ತಿಳಿದಿಲ್ಲ, ಕಳೆದ ಟೆಸ್ಟ್ ಪಂದ್ಯದಲ್ಲಿ ನಮ್ಮ ಬೌಲರ್‌ಗಳು ಇವರ ವಿರುದ್ಧ 30 ರನ್‌ಗಳಿಗೆ 7 ವಿಕೆಟ್ ಹಾಗೂ 40 ರನ್‌ಗಳಿಗೆ 6 ವಿಕೆಟ್ ಪಡೆದಿದ್ದೇವೆ. ‌ಹೆಡಿಂಗ್ಲೆ ಟೆಸ್ಟ್‌ನಲ್ಲಿ ತೋರಿದ ಪ್ರದರ್ಶನವನ್ನೇ ಇಲ್ಲಿಯೂ ತೋರಿ ಅವರನ್ನು ನಿಯಂತ್ರಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತೇವೆ," ಎಂದು ಬ್ರೂಕ್ ತಿಳಿಸಿದ್ದಾರೆ.

IND vs ENG: ಬ್ರೂಕ್‌-ಸ್ಮಿತ್‌ ಅಬ್ಬರದ ಹೊರತಾಗಿಯೂ ಸಿರಾಜ್‌ ಮಾರಕ ದಾಳಿಗೆ ಆಂಗ್ಲರು ತತ್ತರ, ಭಾರತಕ್ಕೆ ದೊಡ್ಡ ಮುನ್ನಡೆ!

ಬರ್ಮಿಂಗ್‌ಹ್ಯಾಮ್‌ ಟೆಸ್ಟ್ ಗೆಲ್ಲುತ್ತೇವೆ

"ಅವರು (ಟೀಮ್ ಇಂಡಿಯಾ) ಯಾವುದೇ ಗುರಿ ನೀಡಿದರೂ ನಾವು ಅದನ್ನು ಚೇಸ್ ಮಾಡುತ್ತೇವೆ. ಅಲ್ಲದೆ ನಮ್ಮ ಆಟದ ಶೈಲಿಯು ಇಡೀ ವಿಶ್ವಕ್ಕೆ ತಿಳಿದಿದೆ. ಆದ್ದರಿಂದ ಭಾರತ ನೀಡುವ ಗುರಿಯನ್ನು ತಲುಪಲು ನಾವು ಬಯಸುತ್ತೇವೆ. ಅದಕ್ಕಾಗಿ ನಾಲ್ಕನೇ ದಿನದಾಟದಲ್ಲಿ ನಾವು ಯಾವುದೇ ಸವಾಲು ಎದುರಿಸಲು ಸಜ್ಜಾಗಿದ್ಧೇವೆ. ಆರಂಭಿಕ ಸೆಷನ್‌ನಲ್ಲೇ ಒಂದೆರಡು ವಿಕೆಟ್ ಪಡೆದು ಅವರ ಮೇಲೆ ಒತ್ತಡ ಹೇರುತ್ತೇವೆ," ಎಂದು ಹ್ಯಾರಿ ಬ್ರೂಕ್ ಹೇಳಿದ್ದಾರೆ.

ಲೀಡ್ಸ್‌ನ ಮೊದಲ ಟೆಸ್ಟ್ ಪಂದ್ಯದಲ್ಲಿ 371 ರನ್‌ಗಳನ್ನು ಚೇಸ್‌ ಮಾಡಿದ್ದ ಇಂಗ್ಲೆಂಡ್‌, 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 2022ರಲ್ಲಿ ಟೀಮ್ ಇಂಡಿಯಾ ವಿರುದ್ಧ 378 ರನ್ ಗುರಿ ತಲುಪಿ ಗೆಲುವು ಸಾಧಿಸಿರುವುದು ಇಂಗ್ಲೆಂಡ್‌ನ ಗರಿಷ್ಠ ಚೇಸಿಂಗ್ ಮೊತ್ತವಾಗಿದೆ. ಈಗ‌ ಬರ್ಮಿಂಗ್‌ಹ್ಯಾಮ್‌ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡುವ ಗುರಿಯನ್ನು ತಲುಪಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವತ್ತ ಬೆನ್ ಸ್ಟೋಕ್ಸ್ ಪಡೆ ಎದುರು ನೋಡುತ್ತಿದೆ.