IND vs ENG: ʻಪಲ್ಟಿ ಹೊಡೆದು ಸಂಭ್ರಮಿಸಿʼ-ರಿಷಭ್ ಪಂತ್‌ಗೆ ಸುನೀಲ್ ಗವಾಸ್ಕರ್ ಆಗ್ರಹ! ವಿಡಿಯೊ
ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಶತಕ ಬಾರಿಸಿದರು. ಆ ಮೂಲಕ ಎರಡೂ ಇನಿಂಗ್ಸ್‌ನಲ್ಲಿ ಶತಕಗಳನ್ನು ಬಾರಿಸಿದ ಪಂತ್‌ಗೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಪಲ್ಟಿ ಹೊಡೆದು ಸಂಭ್ರಮಿಸುವಂತೆ ಆಗ್ರಹಿಸಿದರು. ಇದಕ್ಕೆ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ.

ಪಲ್ಟಿ ಹೊಡೆದು ಸಂಭ್ರಮಿಸುವಂತೆ ಪಂತ್‌ಗೆ ಗವಾಸ್ಕರ್ ಆಗ್ರಹ.

ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ (IND vs ENG) ಮೊದಲನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿಯೂ ಭಾರತ ತಂಡದ ಉಪ ನಾಯಕ ರಿಷಭ್ ಪಂತ್ (Rishabh Pant) ಶತಕ ಬಾರಿಸಿದರು. ಆ ಮೂಲಕ ಲೀಡ್ಸ್ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಪಂತ್ ಶತಕ ಸಿಡಿಸಿದಂತಾಯಿತು. ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ವಿಶ್ವದ ಎರಡನೇ ಹಾಗೂ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ನೂತನ ದಾಖಲೆಯನ್ನು ಪಂತ್ ಬರೆದಿದ್ದಾರೆ. ಅಂದ ಹಾಗೆ ಪಂದ್ಯದ ಎರಡನೇ ಶತಕ ಸಿಡಿಸುತ್ತಿದ್ದಂತೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar), ಪಂತ್‌ಗೆ ಪಲ್ಟಿ ಹೊಡೆಯುವಂತೆ ಆಗ್ರಹಿಸಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೋಮವಾರ ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ದ್ವಿತೀಯ ಇನಿಂಗ್ಸ್ ಪುನರಾರಂಭಿಸಿದ ಭಾರತ ತಂಡದ ಪರ ಕೆಎಲ್ ರಾಹುಲ್ ಜೊತೆ ಕ್ರೀಸ್‌ಗೆ ಬಂದಿದ್ದ ನಾಯಕ ಶುಭಮನ್ ಗಿಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಬ್ರೈಡನ್ ಕಾರ್ಸ್ ಎಸೆತದಲ್ಲಿ ಅವರು ಬೌಲ್ಡ್ ಆದರು. ನಂತರ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಷಭ್ ಪಂತ್ ಆರಂಭದಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಇವರು ಆಡಿದ 140 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 118 ರನ್‌ಗಳನ್ನು ಬಾರಿಸಿದರು. ಅಲ್ಲದೆ ಕೆಎಲ್ ರಾಹುಲ್ ಜೊತೆ ಮುರಿಯದ ನಾಲ್ಕನೇ ವಿಕೆಟ್‌ಗೆ 195 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆ ಮೂಲಕ ಭಾರತ ತಂಡದ ಮೊತ್ತ 300ರ ಸನಿಹ ಬರಲು ನೆರವು ನೀಡಿದರು.
IND vs ENG: ಲೀಡ್ಸ್ ಟೆಸ್ಟ್ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿ ಇತಿಹಾಸ ಬರೆದ ರಿಷಭ್ ಪಂತ್!
ರಿಷಭ್ ಪಂತ್‌ಗೆ ಪಲ್ಟಿ ಹೊಡೆಯುವಂತೆ ಗವಾಸ್ಕರ್ ಆಗ್ರಹ
ಅಂದ ಹಾಗೆ 129 ಎಸೆತಗಳಲ್ಲಿ ರಿಷಭ್ ಪಂತ್ ಶತಕ ಪೂರ್ಣಗೊಳಿಸುತ್ತಿದ್ದಂತೆ ಕಾಮೆಂಟರಿಯನ್ನು ನಿಲ್ಲಿಸಿ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಹೊರಗಡೆ ಬಂದ ತಮ್ಮ ಕೈ ಸನ್ನೆಯ ಮೂಲಕ, ರಿಷಭ್ ಪಂತ್‌ಗೆ ಪಲ್ಟಿ ಹೊಡೆದು ಸಂಭ್ರಮಿಸುವಂತೆ ಆಗ್ರಹಿಸಿದರು. ಇದನ್ನು ಗಮನಿಸಿದ ಪಂತ್, ತಮ್ಮ ಕೈ ಸನ್ನೆಯ ಮೂಲಕವೇ ಮುಂದಿನ ಸಲ ಈ ರೀತಿ ಮಾಡುತ್ತೇನೆಂದು ಹೇಳಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಈ ವೇಳೆ ರಿಷಭ್ ಪಂತ್ ತಮ್ಮ ಬಲಗೈನ ಕೊನೆಯ ಮೂರು ಬೆರಳುಗಳನ್ನು ಕಿವಿಗೆ ಒತ್ತಿ, ಎಡಗೈಯನ್ನು ಮೇಲಕ್ಕೆ ಎತ್ತಿ ವಿಭಿನ್ನ ರೀತಿ ಸಂಭ್ರಮಿಸಿದರು.
𝐓𝐡𝐞 𝐟𝐢𝐫𝐬𝐭 𝐈𝐧𝐝𝐢𝐚𝐧 𝐰𝐢𝐜𝐤𝐞𝐭-𝐤𝐞𝐞𝐩𝐞𝐫 𝐭𝐨 𝐬𝐦𝐚𝐬𝐡 𝐭𝐰𝐢𝐧 𝐜𝐞𝐧𝐭𝐮𝐫𝐢𝐞𝐬 𝐢𝐧 𝐚 𝐓𝐞𝐬𝐭 𝐦𝐚𝐭𝐜𝐡! 🙌🏻
— Star Sports (@StarSportsIndia) June 23, 2025
Take a bow, @RishabhPant17, brilliant would be an understatement! 🫡🔥#ENGvIND 1st Test Day 4 LIVE NOW Streaming on JioHotstar 👉… pic.twitter.com/4A1Poe5jbC
ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ಪಲ್ಟಿ ಹೊಡೆದಿದ್ದ ಪಂತ್
ಅಂದ ಹಾಗೆ ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿಯೂ ರಿಷಭ್ ಪಂತ್ (134 ರನ್) ಶತಕವನ್ನು ಬಾರಿಸಿದ್ದರು. ಸೆಂಚುರಿ ಬಾರಿಸಿದ ಬೆನ್ನಲ್ಲೆ ಪಂತ್, ತಮ್ಮ ಹೆಲ್ಮೆಟ್, ಗ್ಲೌಸ್ ಹಾಗೂ ಬ್ಯಾಟ್ ಅನ್ನು ಪಕ್ಕಕ್ಕೆ ಇಟ್ಟು ಪಲ್ಟಿ ಹೊಡೆದು ಸಂಭ್ರಮಿಸಿದರು. ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಸುನೀಲ್ ಗವಾಸ್ಕರ್ ಸಂತಸ ವ್ಯಕ್ತಪಡಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ವೇಳೆ ಪಂತ್‌ಗೆ ಮೂರ್ಖ, ಮೂರ್ಖ, ಮೂರ್ಖ ಎಂದು ಟೀಕಿಸಿದ್ದ ಗವಾಸ್ಕರ್, ಶನಿವಾರ ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಬಳಿಕ ಸೂಪರ್, ಸೂಪರ್, ಸೂಪರ್ ಎಂದು ಗುಣಗಾನ ಮಾಡಿದ್ದರು.
IND vs ENG: 9ನೇ ಟೆಸ್ಟ್ ಶತಕ ಬಾರಿಸಿ ಭಾರತಕ್ಕೆ ಆಸರೆಯಾದ ಕೆಎಲ್ ರಾಹುಲ್!
ಆಂಡಿ ಫ್ಲವರ್ ಒಳಗೊಂಡ ಎಲೈಟ್ ಲಿಸ್ಟ್ ಸೇರಿದ ಪಂತ್
ಲೀಡ್ಸ್ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕವನ್ನು ಬಾರಿಸುವ ಮೂಲಕ ರಿಷಭ್ ಪಂತ್, ಜಿಂಬಾಬ್ವೆ ಮಾಜಿ ವಿಕೆಟ್ ಕೀಪರ್ ಆಂಡಿ ಪ್ಲವರ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಪಂತ್ ಬರೆದಿದ್ದಾರೆ.