ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಎರಡನೇ ದಿನ ಶುಭಮನ್‌ ಗಿಲ್‌ ಎಸಗಿದ ತಪ್ಪನ್ನು ಬಹಿರಂಗಪಡಿಸಿದ ರಿಕಿ ಪಾಂಟಿಂಗ್!

ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಅವರು ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡನೇ ದಿನವಾದ ಗುರುವಾರ ಇಂಗ್ಲೆಂಡ್‌ ತಂಡದ ಎರಡಯ ವಿಕೆಟ್‌ ನಷ್ಟಕ್ಕೆ 225 ರನ್‌ಗಳನ್ನು ಕಲೆ ಹಾಕಿದೆ.

‌ಶುಭಮನ್‌ ಗಿಲ್‌ ಎಸಗಿದ ತಪ್ಪನ್ನು ರಿವೀಲ್‌ ಮಾಡಿದ ರಿಕಿ ಪಾಂಟಿಂಗ್‌!

ಶುಭಮನ್‌ ಗಿಲ್‌ ಅವರ ನಾಯಕತ್ವದ ತಂತ್ರಗಾರಿಕೆಯನ್ನು ರಿಕಿ ಪಾಂಟಿಂಗ್‌ ಪ್ರಶ್ನೆ ಮಾಡಿದ್ದಾರೆ.

Profile Ramesh Kote Jul 25, 2025 4:33 PM

ಮ್ಯಾಂಚೆಸ್ಟರ್‌: ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ (IND vs ENG) ಭಾರತ ತಂಡದ ನಾಯಕ ಶುಭಮನ್‌ ಗಿಲ್‌ (SHubman Gill) ಅವರ ನಾಯಕತ್ವದ ತಂತ್ರಗಾರಿಕೆಯನ್ನು ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್‌ (Ricky Ponting) ಪ್ರಶ್ನೆ ಮಾಡಿದ್ದಾರೆ. ಪಂದ್ಯದ ಎರಡನೇ ದಿನ ಶುಭಮನ್‌ ಗಿಲ್‌ ಅವರ ಬೌಲಿಂಗ್‌ ಆಯ್ಕೆಗಳು, ಫೀಲ್ಡಿಂಗ್‌ ಬದಲಾವಣೆಗೆ ಸಂಬಂಧಿಸಿದಂತೆ ಶುಭಮನ್‌ ಗಿಲ್‌ ಅವರ ನಿರ್ಧಾರಗಳನ್ನು ಆಸೀಸ್‌ ದಿಗ್ಗಜ ಟೀಕಿಸಿದ್ದಾರೆ. ಅಂದ ಹಾಗೆ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌ ಆದ ಬಳಿಕ ಇಂಗ್ಲೆಂಡ್‌ ತಂಡ ಎರಡನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ ನಷ್ಟಕ್ಕೆ 225 ರನ್‌ಗಳನ್ನು ಕಲೆ ಹಾಕಿತ್ತು.

ಪಂದ್ಯದ ಎರಡನೇ ದಿನವಾದ ಗುರುವಾರ ಇಂಗ್ಲೆಂಡ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಬೆನ್‌ ಡಕೆಟ್‌ (94) ಹಾಗೂ ಝ್ಯಾಕ್‌ ಕ್ರಾವ್ಲಿ (84) ಅವರು ಭಾರತದ ಬೌಲರ್‌ಗಳ ಎದುರು ಪ್ರಾಬಲ್ಯ ಮೆರೆದಿದ್ದರು. ಈ ಇಬ್ಬರೂ ಆಕ್ರಮಣಕಾರಿಯಾಗಿ ಬ್ಯಾಟ್‌ ಮಾಡುವ ಮೂಲಕ ಇಂಗ್ಲೆಂಡ್‌ ತಂಡಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಆದರೆ, ಭಾರತ ತಂಡದ ನಾಯಕ ರಿಕಿ ಪಾಂಟಿಂಗ್‌ ಕೆಲವೊಂದು ಪ್ರಮುಖ ತಾಂತ್ರಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆಂದು ರಿಕಿ ಪಾಟಿಂಗ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IND vs ENG: ಭಾರತ 358 ರನ್‌ಗಳಿಗೆ ಆಲ್‌ಔಟ್‌, ಎರಡನೇ ದಿನ ಇಂಗ್ಲೆಂಡ್‌ ಮೇಲುಗೈ!

ಸ್ಕೈ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ರಿಕಿ ಪಾಂಟಿಂಗ್‌, ಜಸ್‌ಪ್ರೀತ್‌ ಬುಮ್ರಾ ಜೊತೆ ಹೊಸ ಚೆಂಡಿನಲ್ಲಿ ಬೌಲ್‌ ಮಾಡಲು ಡೆಬ್ಯೂಟಂಟ್‌ ಅನ್ಶುಲ್‌ ಕಾಂಬೋಜ್‌ಗೆ ಅವಕಾಶ ನೀಡಿದ ಗಿಲ್‌ ಅವರ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ. ತನ್ನ ಮೊದಲನೇ ಓವರ್‌ನಲ್ಲಿ ಕಾಂಬೋಜ್‌ ಲೈನ್‌ ಅಂಡ್‌ ಲೆನ್ತ್‌ ಬೌಲ್‌ ಮಾಡುವಲ್ಲಿ ಎಡವಿದ್ದರು ಹಾಗೂ ಮೂರು ಬೌಂಡರಿಗಳನ್ನು ಕೊಟ್ಟಿದ್ದರು. ಈ ಕಾರಣದಿಂದಲೇ ಇಂಗ್ಲೆಂಡ್‌ ತಂಡ ಉತ್ತಮ ಆರಂಭ ಪಡೆದಿತ್ತು ಎಂದು ಪಾಂಟಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಭಾರತ ತಂಡ ತಾಂತ್ರಿಕವಾಗಿ ಎಡವಿದೆ ಎಂದು ನಾನು ಭಾವಿಸುತ್ತೇನೆ. ಅನ್ಶುಲ್‌ ಕಾಂಬೋಜ್‌ ಹೊಸ ಚೆಂಡಿನಲ್ಲಿ ಬೌಲ್‌ ಮಾಡಬಾರದಿತ್ತು. ಆರಂಭದಲ್ಲಿಯೇ ಅವರು ಬೌಲ್‌ ಮಾಡಲು ಕಳುಹಿಸಬಾರದಿತ್ತು. ಬೆನ್‌ ಡಕೆಟ್‌ ಅವರ ಆರು ಬೌಂಡರಿಗಳ ಪೈಕಿ ಐದು ಬೌಂಡರಿಗಳು ಸ್ಕೋಯರ್‌ ಲೆಗ್‌ನಲ್ಲಿ ಬಾರಿಸಿದ್ದರು. ಇದು ತಾಂತ್ರಿಕ ವೈಫಲ್ಯವನ್ನು ತೋರಿಸುತ್ತದೆ," ಎಂದು ರಿಕಿ ಪಾಂಟಿಂಗ್‌ ತಿಳಿಸಿದ್ದಾರೆ.

IND vs ENG: ಭಾರತ ಟೆಸ್ಟ್‌ ತಂಡದಲ್ಲಿ ರಿಷಭ್‌ ಪಂತ್‌ ಸ್ಥಾನಕ್ಕೆ ಸೇರ್ಪಡೆಯಾದ ಎನ್‌ ಜಗದೀಶನ್‌!

ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ ಬಗ್ಗೆಯೂ ಪಾಂಟಿಂಗ್‌ ಪ್ರಶ್ನೆ

ಪಂದ್ಯದ ಎರಡನೇ ದಿನ ಜಸ್‌ಪ್ರೀತ್‌ ಬುಮ್ರಾ ಬೌಲ್‌ ಮಾಡಲು ಆಯ್ಕೆ ಮಾಡಿಕೊಂಡಿದ್ದ ತುದಿಯ ಬಗ್ಗೆಯೂ ರಿಕಿ ಪಾಂಟಿಂಗ್‌ ಪ್ರಶ್ನೆ ಮಾಡಿದ್ದಾರೆ. ಸ್ಟಾಥಮ್‌ ತುದಿಯಲ್ಲಿ ಬೌಲ್‌ ಮಾಡಲು ಜಸ್‌ಪ್ರೀತ್‌ ಬುಮ್ರಾಗೆ ಸೂಕ್ತವಾಗಿತ್ತು. ಏಕೆಂದರೆ ಪ್ರಥಮ ಇನಿಂಗ್ಸ್‌ನಲ್ಲಿ ಬಹಳಷ್ಟು ವಿಕೆಟ್‌ಗಳು ಅದೇ ತುದಿಯಲ್ಲಿ ಉರುಳಿವೆ ಎಂಬುದು ಪಾಂಟಿಂಗ್‌ ಅಭಿಪ್ರಾಯ.

"ಜಸ್‌ಪ್ರೀತ್‌ ಬುಮ್ರಾ ಬೌಲ್‌ ಮಾಡಿದ ತುದಿ ತಪ್ಪಾಗಿತ್ತು. ಬಹಳಷ್ಟು ವಿಕೆಟ್‌ಗಳು ಸ್ಟಾಥಮ್‌ ಎಂಡ್‌ನಲ್ಲಿ ಬಿದ್ದಿದ್ದವು. ಆದರೆ, ಜಸ್‌ಪ್ರೀತ್‌ ಬುಮ್ರಾ ಅವರು ಆಂಡರ್ಸನ್‌ ಎಂಡ್‌ನಿಂದಲೇ ತಮ್ಮ ಬಹುತೇಕ ಓವರ್‌ಗಳನ್ನು ಬೌಲ್‌ ಮಾಡಿದ್ದಾರೆ," ಎಂದು ರಿಕಿ ಪಾಂಟಿಂಗ್‌ ಹೇಳಿದ್ದಾರೆ.