ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs IRE: ಬೆಲ್‌ಫಾಸ್ಟ್‌ನಲ್ಲಿ ಟಾಸ್‌ಗೆ ಬಂದು ರೋಹಿತ್‌ ಶರ್ಮಾರ ದಾಖಲೆ ಮುರಿದ ಶ್ರೇಯಸ್‌ ಅಯ್ಯರ್‌!

IND vs IRE: ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ ಶ್ರೇಯಸ್‌ ಅಯ್ಯರ್‌, ಮಾಜಿ ನಾಯಕ ರೋಹಿತ್‌ ಶರ್ಮಾ ಅವರ ನಾಯಕತ್ವದ ದಾಖಲೆಯನ್ನು ಮುರಿದಿದ್ದಾರೆ. ಈ ದಾಖಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ರೋಹಿತ್‌ ಶರ್ಮಾರ ದೊಡ್ಡ ದಾಖಲೆ ಮುರಿದ ಶ್ರೇಯಸ್‌ ಅಯ್ಯರ್‌!

ರೋಹಿತ್‌ ಶರ್ಮಾ ದಾಖಲೆ ಮುರಿದ ಶ್ರೇಯಸ್‌ ಅಯ್ಯರ್‌. -

Profile
Ramesh Kote Jun 26, 2026 9:16 PM

ಬೆಲ್‌ಫಾಸ್ಟ್‌: ಇಲ್ಲಿನ ಸಿವಿಲ್‌ ಸರ್ವೀಸ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿಯ ಮೊದಲನೇ ಪಂದ್ಯದಲ್ಲಿ(IND vs IRE) ಕಣಕ್ಕೆ ಇಳಿಯುವ ಮೂಲಕ ಶ್ರೇಯಸ್‌ ಅಯ್ಯರ್‌ (Shreyas Iyer) ಭಾರತ ತಂಡದ ನಾಯಕನಾಗಿ ಪದಾರ್ಪಣೆ ಮಾಡಿದರು. ಇದರೊಂದಿಗೆ ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾರ (Rohit Sharma) ದಾಖಲೆಯನ್ನು ಮುರಿದಿದ್ದಾರೆ. ಅತಿ ಹೆಚ್ಚು ಟಿ20 ಪಂದ್ಯಗಳನ್ನು ನಾಯಕತ್ವ ವಹಿಸಿದ ಬಳಿಕ ಭಾರತ ತಂಡವನ್ನು ಟಿ20ಐ ಪಂದ್ಯದಲ್ಲಿ ಮುನ್ನಡೆಸಿದ ಮೊದಲ ನಾಯಕ ಎಂಬ ದಾಖಲೆಯನ್ನು ಶ್ರೇಯಸ್‌ ಅಯ್ಯರ್‌ ಬರೆದಿದ್ದಾರೆ.

ಶ್ರೇಯಸ್‌ ಅಯ್ಯರ್‌ ಅವರು ಭಾರತ ತಂಡದ ನಾಯಕತ್ವಕ್ಕೆ ಪದಾರ್ಪಣೆ ಮಾಡುವುದಕ್ಕೂ ಮುನ್ನ 114 ಟಿ20 ಪಂದ್ಯಗಳಲ್ಲಿ ವಿಭಿನ್ನ ತಂಡಗಳನ್ನು ಮುನ್ನಡೆಸಿದ್ದಾರೆ. ಇವರು ಡೆಲ್ಲಿ ಕ್ಯಾಪಿಟಲ್ಸ್‌, ಕೋಲ್ಕತಾ ನೈಟ್‌ ರೈಡರ್ಸ್‌, ಪಂಜಾಬ್‌ ಕಿಂಗ್ಸ್‌ ಹಾಗೂ ಮುಂಬೈ ತಂಡಗಳನ್ನು ಟಿ20 ಕ್ರಿಕೆಟ್‌ನಲ್ಲಿ ಮುನ್ನಡೆಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರೋಹಿತ್‌ ಶರ್ಮಾ 2017ರಲ್ಲಿ ಭಾರತ ತಂಡವನ್ನು ಮುನ್ನಡೆಸುವುದಕ್ಕೂ ಮುನ್ನ ಟಿ20 ಕ್ರಿಕೆಟ್‌ನಲ್ಲಿ 80 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸಿದ್ದಾರೆ. ಮುಂಬೈ ಇಂಡಿಯನ್ಸ್‌ ಬಿಟ್ಟರೆ ಬೇರೆ ಯಾವುದೇ ಟಿ20 ತಂಡವನ್ನು ಮುನ್ನಡೆಸಿಲ್ಲ.

IND vs IRE: ವೈಭವ್‌ ಸೂರ್ಯವಂಶಿಗೆ ಚಾನ್ಸ್‌ ನೀಡದೇ ಇರಲು ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್‌!

ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತ ಟಿ20ಐ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕನಾಗುವುದಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 72 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. 2013ರಲ್ಲಿಯೇ ಭಾರತದ ಒಡಿಐ ನಾಯಕತ್ವಕ್ಕೆ ಪದಾರ್ಪಣೆ ಮಾಡಿದ್ದರೂ ವಿರಾಟ್‌ ಕೊಹ್ಲಿ 2017ರವರೆಗೂ ಭಾರತ ತಂಡವನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮುನ್ನಡೆಸಲು ಸಾಧ್ಯವಾಗಲಿಲ್ಲ. ಕೆಎಲ್‌ ರಾಹುಲ್‌ (42 ಪಂದ್ಯಗಳು) ಹಾಗೂ ರಿಷಭ್‌ ಪಂತ್‌ (30 ಪಂದ್ಯಗಳು) ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನಗಳಲ್ಲಿದ್ದಾರೆ.



ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದ ಪಯಣ

2018ರಲ್ಲಿ ಮಧ್ಯದಲ್ಲಿ ಗೌತಮ್‌ ಗಂಭೀರ್‌ ನಾಯಕತ್ವವನ್ನು ತೊರೆದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶ್ರೇಯಸ್‌ ಅಯ್ಯರ್‌ ನಾಯಕರಾಗಿದ್ದರು. 2019ರಲ್ಲಿ ಅವರು ತಮ್ಮ ನಾಯಕತ್ವದಲ್ಲಿ ಡೆಲ್ಲಿ ತಂಡವನ್ನು ಎರಡನೇ ಸುತ್ತಿಗೆ ತಲುಪಿಸಿದ್ದರು. ಇದಕ್ಕೂ ಮುನ್ನ ಡಿಸಿ, 2012ರಲ್ಲಿ ನಾಕ್‌ಔಟ್‌ ಸುತ್ತಿಗೆ ಕೊನೆಯ ಬಾರಿ ತಲುಪಿತ್ತು. 2020ರಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಫೈನಲ್‌ಗೆ ಮೊಟ್ಟ ಮೊದಲ ಬಾರಿ ತಲುಪಿತ್ತು, ಆದರೆ ಮುಂಬೈ ಇಂಡಿಯನ್ಸ್‌ ಎದುರು ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.



2022ರಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ನಾಯಕತ್ವಕ್ಕೆ ಶ್ರೇಯಸ್‌ ಅಯ್ಯರ್‌ ಮರಳಿದ್ದರು. 2024ರಲ್ಲಿ ಅವರು ಕೆಕೆಆರ್‌ ತಂಡವನ್ನು 10 ವರ್ಷಗಳ ಬಳಿಕ ಚಾಂಪಿಯನ್‌ ಮಾಡಿದ್ದರು. ಇನ್ನು 2025ರ ಮೆಗಾ ಆಕ್ಷನ್‌ನಲ್ಲಿ ಅವರು ಪಂಜಾಬ್‌ ಕಿಂಗ್ಸ್‌ಗೆ ಮರಳುವ ಮೂಲಕ ನಾಯಕತ್ವವನ್ನು ತೆಗೆದುಕೊಂಡಿದ್ದರು. ಆ ಮೂಲಕ ಮೊದಲ ಬಾರಿ ಫೈನಲ್‌ಗೆ ತಲುಪಿಸಿದ್ದರು. ಆದರೆ, ಆರ್‌ಸಿಬಿ ವಿರುದ್ಧ ಸೋಲುವ ಮೂಲಕ ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ, 2026ರ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್‌ ಪ್ಲೇಆಫ್ಸ್‌ಗೆ ತಲುಪುವಲ್ಲಿ ವಿಫಲವಾಗಿತ್ತು.