ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rice Price: ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಇಳಿಕೆ; ಕಾರಣವೇನು?

ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯದಲ್ಲಿ ಹೊಸ ಸೋನಾ ಮಸೂರಿ ಅಕ್ಕಿಯ ದರ ಪ್ರತಿ ಕೆ.ಜಿಗೆ 10 ರೂ. ರಿಂದ 20 ರೂ. ವರೆಗೆ ದಿಢೀರ್ ಇಳಿಕೆಯಾಗಿದೆ. ಇನ್ನು ಸಗಟು (ಹೋಲ್‌ಸೇಲ್) ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಸುಮಾರು 8,500 ರೂ. ಇದ್ದ ಅಕ್ಕಿ ಬೆಲೆ ಇದೀಗ 6,500 ರೂ. ಕ್ಕೆ ತಲುಪಿದ್ದು, ಪ್ರತಿ ಕ್ವಿಂಟಲ್‌ಗೆ ಬರೋಬ್ಬರಿ 2,000 ರೂ. ಕಡಿಮೆಯಾಗಿದೆ.

ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಇಳಿಕೆ; ಕಾರಣವೇನು?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 19, 2026 11:37 AM

ಬೆಂಗಳೂರು: ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯದಲ್ಲಿ (Rice Price) ಹೊಸ ಸೋನಾ ಮಸೂರಿ ಅಕ್ಕಿಯ ದರ ಪ್ರತಿ ಕೆ.ಜಿಗೆ 10 ರೂ. ರಿಂದ 20 ರೂ. ವರೆಗೆ ದಿಢೀರ್ ಇಳಿಕೆಯಾಗಿದೆ. ಈ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 80 ರಿಂದ 90 ರೂ. ರವರೆಗೆ ಮಾರಾಟವಾಗುತ್ತಿದ್ದ ಹೊಸ ಸೋನಾ ಮಸೂರಿ ಅಕ್ಕಿ, ಇದೀಗ 65 ರಿಂದ 70 ರೂ. ಕ್ಕೆ ಇಳಿಕೆಯಾಗಿದೆ.

ಇನ್ನು ಸಗಟು (ಹೋಲ್‌ಸೇಲ್) ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಸುಮಾರು 8,500 ರೂ. ಇದ್ದ ಅಕ್ಕಿ ಬೆಲೆ ಇದೀಗ 6,500 ರೂ. ಕ್ಕೆ ತಲುಪಿದ್ದು, ಪ್ರತಿ ಕ್ವಿಂಟಲ್‌ಗೆ ಬರೋಬ್ಬರಿ 2,000 ರೂ. ಕಡಿಮೆಯಾಗಿದೆ. ಮಹಾರಾಷ್ಟ್ರ, ತೆಲಂಗಾಣ ಹಾಗೂ ರಾಜ್ಯದ ಕೃಷ್ಣಾ ನದಿ ಪಾತ್ರದಲ್ಲಿ ಭತ್ತದ ಕಟಾವು ಕಾರ್ಯ ಪೂರ್ಣಗೊಂಡಿದೆ. ಇದರಿಂದಾಗಿ ಮಾರುಕಟ್ಟೆ ಮತ್ತು ಅಕ್ಕಿ ಗಿರಣಿಗಳಿಗೆ ಹೊಸ ಭತ್ತದ ಪೂರೈಕೆ ಹೆಚ್ಚಾಗಿದ್ದು, ಅಕ್ಕಿ ದರ ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ.

ಇನ್ನೊಂದೆಡೆ, ರಾಜ್ಯದಲ್ಲಿ ಬೇಸಿಗೆ ಬೆಳೆ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಅಕ್ಕಿಯ ಕೊರತೆಯಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಿ ಗಿರಣಿ ಮಾಲೀಕರ ಸಂಘವು ಸರ್ಕಾರಕ್ಕೆ ದಾಸ್ತಾನು ಮಿತಿ ಹೆಚ್ಚಿಸುವಂತೆ ಮನವಿ ಮಾಡಿದೆ. ಒಂದು ವೇಳೆ ಸರ್ಕಾರ ದಾಸ್ತಾನು ಮಿತಿ ಕಡಿಮೆ ಮಾಡಿದರೆ, ಮುಂದಿನ ದಿನಗಳಲ್ಲಿ ಪೂರೈಕೆ ವ್ಯತ್ಯಯವಾಗಿ ಅಕ್ಕಿ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಗಿರಣಿ ಮಾಲೀಕರು ಎಚ್ಚರಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ; ಬೆಂಗಳೂರಿನಲ್ಲಿ ಎಷ್ಟಿದೆ ಇಂದಿನ ಬೆಲೆ?

ಅಕ್ಕಿ ಬೆಲೆ ಹೆಚ್ಚಳವಾಗಲು ಕಾರಣ ಮಳೆ ಕೊರತೆ ಮುಖ್ಯ ಕಾರಣವಾಗಿತ್ತು. ಹಾಗೇ, ವ್ಯಾಪಾರಿಗಳು ಮತ್ತು ಗಿರಾಣಿ ಮಾಲೀಕರು ಹೇಳುವ ಪ್ರಕಾರ ಕೃಷ್ಣಾ-ತುಂಗಭದ್ರಾ ಮತ್ತು ಕಾವೇರಿ ನದಿ ಜಲಾನಯನ ಪ್ರದೇಶಗಳಲ್ಲಿ ಭತ್ತದ ಕೃಷಿಗೆ ಸರಿಯಾದ ಸಮಯದಲ್ಲಿ ನೀರು ಬಿಡುಗಡೆ ಮಾಡಲಿಲ್ಲ. ನೀರು ಬಿಡುಗಡೆ ಮಾಡಲು ತುಂಬ ತಡವಾಗಿತ್ತು. ಇದರಿಂದ ಭತ್ತ ಬೆಳೆ ಇಳುವರಿ ಬಂದಿಲ್ಲ. ಅಕ್ಕಿಯ ಪೂರೈಕೆಯೂ ಆಗುತ್ತಿರಲಿಲ್ಲ.