ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ: 38 ವಿಕೆಟ್‌ಗಳೊಂದಿಗೆ ಭುವನೇಶ್ವರ್‌ ಕುಮಾರ್‌ ದಾಖಲೆ ಮುರಿದ ಅರ್ಷದೀಪ್‌ ಸಿಂಗ್!

ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಎಡಗೈ ವೇಗಿ ಅರ್ಷದೀಪ್‌ ಸಿಂಗ್‌ ಎರಡು ವಿಕೆಟ್‌ ಕಿತ್ತರು. ಆ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ ಒಟ್ಟು 38 ವಿಕೆಟ್‌ಗಳನ್ನು ಕಬಳಿಸಿ, ಭುವನೇಶ್ವರ್‌ ಕುಮಾರ್‌ (37 ವಿಕೆಟ್‌) ಅವರ ದಾಖಲೆಯನ್ನು ಮುರಿದಿದ್ದಾರೆ.

ಕ್ಯಾಲೆಂಡರ್‌ ವರ್ಷದಲ್ಲಿ 38 ವಿಕೆಟ್‌ ಕಿತ್ತ ಭುವನೇಶ್ವರ್‌ ಕುಮಾರ್‌!

ಭುವನೇಶ್ವರ್‌ ಕುಮಾರ್‌ ದಾಖಲೆ ಮುರಿದ ಅರ್ಷದೀಪ್‌ ಸಿಂಗ್‌. -

Profile
Ramesh Kote Oct 24, 2026 3:00 PM

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ (IND vs NZ) ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಭಾರತದ ವೇಗಿ ಅರ್ಷದೀಪ್‌ ಸಿಂಗ್‌ (Arshdeep Singh) ಎರಡು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಏಕೈಕ ಕ್ಯಾಲೆಂಡರ್‌ ವರ್ಷದಲ್ಲಿ 38 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಈ ಹಿಂದೆ ಏಕೈಕ ಕ್ಯಾಲೆಂಡರ್‌ ವರ್ಷದಲ್ಲಿ 37 ವಿಕೆಟ್‌ಗಳನ್ನು ಕಬಳಿಸಿದ್ದ ಹಿರಿಯ ವೇಗಿ ಭುವನೇಶ್ವರ್‌ ಕುಮಾರ್‌ ದಾಖಲೆಯನ್ನು ಮುರಿದಿದ್ದಾರೆ. ಭುವನೇಶ್ವರ್‌ ಅವರು 2022ರಲ್ಲಿ 37 ಟಿ20ಐ ವಿಕೆಟ್‌ಗಳನ್ನು ಕಬಳಿಸಿದ್ದರು.

ಶನಿವಾರ ಇಲ್ಲಿನ ಹ್ಯಾಗ್ಲಿ ಓವಲ್‌ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಅರ್ಷದೀಪ್‌ ಸಿಂಗ್‌ ಈ ದಾಖಲೆಯನ್ನು ಬರೆದಿದ್ದಾರೆ. ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಅರ್ಷದೀಪ್‌ ಸಿಂಗ್‌ 33 ರನ್‌ ನೀಡಿ ಎರಡು ವಿಕೆಟ್‌ಗಳನ್ನು ಕಿತ್ತರು. ನ್ಯೂಜಿಲೆಂಡ್‌ ತಂಡ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 181 ರನ್‌ಗಳನ್ನು ಕಲೆ ಹಾಕಿತು.

ನ್ಯೂಜಿಲೆಂಡ್ ತಂಡದ ಇನಿಂಗ್ಸ್‌ಗೆ ಗ್ಲೆನ್ ಫಿಲಿಪ್ಸ್ ಮತ್ತು ಬೆವನ್ ಜೇಕಬ್ಸ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಪ್ರಮುಖ ಕೊಡುಗೆ ನೀಡಿತು. ಈ ಜೋಡಿ 76 ಎಸೆತಗಳಲ್ಲಿ 116 ರನ್‌ಗಳ ಅಮೋಘ ಜೊತೆಯಾಟವಾಡಿ ಆತಿಥೇಯ ತಂಡದ ಮೊತ್ತವನ್ನು ಬಲಿಷ್ಠಗೊಳಿಸಿತು. ಫಿಲಿಪ್ಸ್ ಆಕ್ರಮಣಕಾರಿ ಆಟ ಪ್ರದರ್ಶಿಸಿ 43 ಎಸೆತಗಳಲ್ಲಿ 70 ರನ್ ಗಳಿಸಿದರೆ, ಜೇಕಬ್ಸ್ 46 ಎಸೆತಗಳಲ್ಲಿ 58 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ಇವರಿಬ್ಬರ ಬ್ಯಾಟಿಂಗ್‌ನಿಂದ ನ್ಯೂಜಿಲೆಂಡ್, ಭಾರತಕ್ಕೆ ಸವಾಲಿನ ಗುರಿ ನೀಡಿತು.

ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ತಿಲಕ್‌ ವರ್ಮಾ

ಭಾರತದ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ 31 ರನ್ ನೀಡಿ ಒಂದು ವಿಕೆಟ್ ಪಡೆದರು. ಪ್ರಿನ್ಸ್ ಯಾದವ್ 30 ರನ್‌ಗೆ ಒಂದು ವಿಕೆಟ್ ಕಬಳಿಸಿದರೆ, ಭುವನೇಶ್ವರ್ ಕುಮಾರ್ 50 ರನ್ ನೀಡಿ ಒಂದು ವಿಕೆಟ್ ಪಡೆದರು.

2026ರ ಕ್ಯಾಲೆಂಡರ್ ವರ್ಷದಲ್ಲಿ ಅರ್ಷದೀಪ್ ಸಿಂಗ್ 38 ವಿಕೆಟ್‌ಗಳನ್ನು ಕಬಳಿಸುವ ಮೂಲಕ, ಒಂದೇ ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಸಾಧನೆಯೊಂದಿಗೆ ಅವರು ಸಾರ್ವಕಾಲಿಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ 2022ರಲ್ಲಿ ಪಡೆದಿದ್ದ 37 ವಿಕೆಟ್‌ಗಳು ಇದೀಗ ಎರಡನೇ ಸ್ಥಾನಕ್ಕೆ ಕುಸಿದಿವೆ. ಅರ್ಷದೀಪ್ ಅವರ ಈ ಸಾಧನೆ ಭಾರತದ ಟಿ20 ಬೌಲಿಂಗ್‌ನಲ್ಲಿ ಅವರ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತದೆ.



ಈ ಪಟ್ಟಿಯಲ್ಲಿ ಅರ್ಷದೀಪ್ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಾರೆ. 2024ರಲ್ಲಿ ಅವರು ಪಡೆದ 36 ವಿಕೆಟ್‌ಗಳು ಹಾಗೂ ವರುಣ್ ಚಕ್ರವರ್ತಿ 2025ರಲ್ಲಿ ಕಬಳಿಸಿದ 36 ವಿಕೆಟ್‌ಗಳು ಜಂಟಿಯಾಗಿ ಮೂರನೇ ಸ್ಥಾನದಲ್ಲಿವೆ. ಅಲ್ಲದೆ, ಅರ್ಷದೀಪ್ 2022ರಲ್ಲಿ ಪಡೆದಿದ್ದ 33 ವಿಕೆಟ್‌ಗಳ ಸಾಧನೆಯೂ ಪಟ್ಟಿಯಲ್ಲಿದೆ. ಹಲವು ವರ್ಷಗಳಿಂದ ಟಿ20 ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಅರ್ಷದೀಪ್ ಅವರ ಸಾಮರ್ಥ್ಯಕ್ಕೆ ಈ ಅಂಕಿಅಂಶಗಳು ಸಾಕ್ಷಿಯಾಗಿವೆ.

ಏಕೈಕ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ಟಿ20ಐ ವಿಕೆಟ್‌ ಕಿತ್ತ ಭಾರತೀಯ ಬೌಲರ್‌ಗಳು

ಅರ್ಷದೀಪ್ ಸಿಂಗ್ (2026: 38

ಭುವನೇಶ್ವರ್ ಕುಮಾರ್ (2022): 37

ಅರ್ಷದೀಪ್ ಸಿಂಗ್ (2024): 36

ವರುಣ್ ಚಕ್ರವರ್ತಿ (2025): 36

ಅರ್ಷದೀಪ್ ಸಿಂಗ್ (2022): 33