ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಭಾರತ ತಂಡದಲ್ಲಿರುವ ರಾಹುಲ್‌ ದ್ರಾವಿಡ್‌ ಅನ್ನು ಹೆಸರಿಸಿದ ಸುನೀಲ್‌ ಗವಾಸ್ಕರ್‌!

Sunil Gavaskar Praised on KL Rahul: ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಕೆಎಲ್‌ ರಾಹುಲ್‌ ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಶ್ಲಾಘಿಸಿದ್ದಾರೆ. ಅಲ್ಲದೆ, ಕೆಎಲ್‌ ರಾಹುಲ್‌ ಅವರನ್ನು ದಿಗ್ಗಜ ರಾಹುಲ್‌ ದ್ರಾವಿಡ್‌ಗೆ ಹೋಲಿಸಿದ್ದಾರೆ.

ಕೆಎಲ್‌ ರಾಹುಲ್‌ರನ್ನು ರಾಹುಲ್‌ ದ್ರಾವಿಡ್‌ಗೆ ಹೋಲಿಸಿದ ಗವಾಸ್ಕರ್‌!

ಕೆಎಲ್‌ ರಾಹುಲ್‌ ಅವರನ್ನು ಶ್ಲಾಘಿಸಿದ ಸುನೀಲ್‌ ಗವಾಸ್ಕರ್‌. -

Profile
Ramesh Kote Jan 14, 2026 9:12 PM

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ (IND vs NZ) ಶತಕ ಬಾರಿಸಿದ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ (KL Rahul) ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ರಾಹುಲ್‌ ದ್ರಾವಿಡ್‌ ಅವರ ರೀತಿ ಯಾವುದೇ ಪಾತ್ರ ಕೊಟ್ಟರೂ ಕೆಎಲ್‌ ರಾಹುಲ್‌ ನಿರ್ವಹಿಸಲಿದ್ದಾರೆಂದು ಅವರು ಹೇಳಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರೂ ರಾಹುಲ್‌ ಶತಕದ ಮೂಲಕ ಭಾರತ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 284 ರನ್‌ಗಳನ್ನು ಕಲೆ ಹಾಕಿತ್ತು.

ಬುಧವಾರ ರಾಜ್‌ಕೋಟ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ಕೆಎಲ್‌ ರಾಹುಲ್‌, ಅಜೇಯ 112 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಐದನೇ ಕ್ರಮಾಂಕದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಈ ಬಗ್ಗೆ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

IND vs NZ: ರಾಜ್‌ಕೋಟ್‌ನಲ್ಲಿ ಶತಕ ಬಾರಿಸಿ ಕ್ವಿಂಟನ್‌ ಡಿ ಕಾಕ್‌ ದಾಖಲೆ ಮುರಿದ ಕೆಎಲ್ ರಾಹುಲ್!

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌, "ಕ್ಲಾಸ್ ಆಕ್ಟ್" ಮತ್ತು ಭಾರತದ ಆಧುನಿಕ ಬಿಕ್ಕಟ್ಟಿನ ಮನುಷ್ಯ, ತಂಡಕ್ಕೆ ಪರೀಕ್ಷಾ ಕ್ಷಣಗಳಲ್ಲಿ ಒಮ್ಮೆ ದ್ರಾವಿಡ್ ಇದ್ದಂತೆ ಎಂದು ಹೊಗಳಿದ್ದಾರೆ. ಆ ಮೂಲಕ ಕೆಎಲ್‌ ರಾಹುಲ್‌ ಅವರನ್ನು ರಾಹುಲ್‌ ದ್ರಾವಿಡ್‌ಗೆ ಸನ್ನಿ ಹೋಲಿಕೆ ಮಾಡಿದ್ದಾರೆ.

"ನೋಡಿ, ಅವರು ಯಾವಾಗಲೂ ಕ್ಲಾಸ್‌ ರೀತಿ ಆಡುತ್ತಾರೆ. ಅವರು ಯಾವಾಗಲೂ ಅದ್ಭುತ ಹಾಗೂ ಅವರ ಬ್ಯಾಟಿಂಗ್‌ ನೋಡುವುದು ಅದ್ಭುತವಾಗಿರುತ್ತದೆ. ಅವರು ಪುಸ್ತಕದಲ್ಲಿ ಎಲ್ಲವನ್ನೂ ಹೊಂದಿದ್ದಾರೆ ಹಾಗೂ ಅವರು ತಂತ್ರವನ್ನು ಹೊಂದಿದ್ದಾರೆ, ಅವರು ಉತ್ತಮ ಮನೋಧರ್ಮವನ್ನು ಹೊಂದಿದ್ದಾರೆ ಹಾಗೂ ಒಂದು ರೇಂಜ್‌ನ ಶಾಟ್‌ಗಳನ್ನು ಹೊಂದಿದ್ದಾರೆ," ಎಂದು ಹೊಗಳಿದ್ದಾರೆ.

IND vs NZ: ಎಂಟನೇ ಒಡಿಐ ಶತಕ ಸಿಡಿಸಿ ವಿಭಿನ್ನವಾಗಿ ಸಂಭ್ರಮಿಸಿದ ಕನ್ನಡಿಗ ಕೆಎಲ್‌ ರಾಹುಲ್!

"ಅವರು ಬಿಕ್ಕಟ್ಟಿನ ಮನಷ್ಯ, ಕರ್ನಾಟಕದ ಮತ್ತೊಬ್ಬ ರಾಹುಲ್ ದ್ರಾವಿಡ್ ಅವರ ರೀತಿ ಇದೀಗ ರಾಹುಲ್‌ ಮೂಡಿ ಬಂದಿದ್ದಾರೆ. ತೊಂದರೆ ಬಂದಾಗಲೆಲ್ಲಾ ನೀವು ಅವರ ಮೇಲೆ ಅವಲಂಬಿತರಾಗಬಹುದು. ಏನು ನಡೆಯುತ್ತಿದ್ದರೂ ಅವರು ನೋಡಿಕೊಳ್ಳುತ್ತಾರೆ ಎಂದು ತಿಳಿದು ನೀವು ನಿರಾಳವಾಗಿ ಉಸಿರಾಡುತ್ತಿದ್ದೀರಿ," ಎಂದಿದ್ದಾರೆ.

ಕೆಎಲ್‌ ರಾಹುಲ್ ಅವರ ರಾಜ್‌ಕೋಟ್ ಇನಿಂಗ್ಸ್‌ ಆ ಹೋಲಿಕೆಗೆ ಸೂಕ್ತವಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ವಿಫಲರಾದರು. ಆ ಮೂಲಕ ಭಾರತ ಕಡಿಮೆ ಮೊತ್ತವನ್ನು ಕಾಯ್ದುಕೊಳ್ಳುತ್ತಿತ್ತು. ಒತ್ತಡದಲ್ಲಿ 5ನೇ ಸ್ಥಾನದಲ್ಲಿ ಆಡಿದ ರಾಹುಲ್, ಆರಂಭಿಕ ಹಿನ್ನಡೆಯನ್ನು ಮೆಟ್ಟಿ ನಿಂತರು, ಆ ಮೂಲಕ ಇನಿಂಗ್ಸ್‌ ಅನ್ನು ಪುನರ್ನಿರ್ಮಿಸಿದರು ಮತ್ತು ನಂತರ ಸರಾಗವಾಗಿ ತಮ್ಮ ವೇಗವನ್ನು ಬದಲಾಯಿಸಿದರು. ಅವರ ಶತಕ ಕೇವಲ 87 ಎಸೆತಗಳಲ್ಲಿ ಬಂದಿತು ಮತ್ತು ಅಂತಿಮವಾಗಿ ಅವರು 92 ಎಸೆತಗಳಲ್ಲಿ 112 ರನ್ ಗಳಿಸಿ ಅಜೇಯರಾಗುಳಿದರು.