ಸೂರ್ಯಕುಮಾರ್ ಯಾದವ್‌ರನ್ನು ಔಟ್ ಮಾಡಲು ಪಾಕ್ ವೇಗಿಗಳಿಗೆ ರಣತಂತ್ರ ಹೇಳಿಕೊಟ್ಟ ವಸೀಮ್ ಅಕ್ರಮ್!
IND vs PAK: ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ. ಈ ಪಂದ್ಯಕೂ ಮುನ್ನ ಪಾಕ್ ದಿಗ್ಗಜ ವಸೀಮ್ ಅಕ್ರಂ, ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡಲು ತಮ್ಮ ತಂಡದ ಬೌಲರ್‌ಗಳಿಗೆ ಅಗತ್ಯ ಸಲಹೆಯನ್ನು ನೀಡಿದ್ದಾರೆ.

ಸೂರ್ಯಕುಮಾರ್ ಯಾದವ್ ಬಗ್ಗೆ ಪಾಕ್ ವೇಗಿಗಳಿಗೆ ವಸೀಮ್ ಅಕ್ರಮ್ ಎಚ್ಚರಿಕೆ. -

ದುಬೈ: ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ (Asia Cup 2025) ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಭಾರತ ತಂಡ, ಯುಎಇ ವಿರುದ್ಧ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಸೆಪ್ಟೆಂಬರ್ 14 ರಂದು ದುಬೈನಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ (IND vs PAK) ಟೀಮ್ ಇಂಡಿಯಾ ಕಾದಾಟ ನಡೆಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗುತ್ತಿವೆ. ಇದರ ನಡುವೆ ಪಂದ್ಯಕ್ಕೂ ಮುನ್ನ ಪಾಕ್ ವೇಗಿ ವಸೀಮ್ ಅಕ್ರಮ್ (Wasim Akram), ಸೂರ್ಯಕುಮಾರ್ ಯಾದವ್‌ರವರನ್ನು ಕಟ್ಟಿ ಹಾಕುವ ಕುರಿತು ತಮ್ಮ ವೇಗದ ಬೌಲರ್‌ಗಳಿಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ.
ಟೀಮ್ ಇಂಡಿಯಾದ ವಿರುದ್ದದ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ದ ತಮ್ಮ ತಂತ್ರಗಾರಿಕೆ ಹೇಗಿರಬೇಕೆಂದು ತಮ್ಮ ಬೌಲರ್‌ಗಳಿಗೆ ವಸೀಮ್ ಅಕ್ರಮ್ ಎಚ್ಚರಿಕೆ ನೀಡಿದ್ದಾರೆ. ಪಾಕ್ ವಿರುದ್ದ ಭಾರತ ತಂಡವನ್ನು ಸೂರ್ಯ ಮೊದಲ ಬಾರಿ ಮುನ್ನಡೆಸುತ್ತಿದ್ದಾರೆ. ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಾಂಜ್ರೇಕರ್, ಸೂರ್ಯಕುಮಾರ್ ಶಾರ್ಟ್ ಬಾಲ್‌ಗಳ ವಿರುದ್ಧ ಅತ್ಯುತ್ತಮವಾಗಿ ಬ್ಯಾಟ್ ಬೀಸುತ್ತಾರೆ ಮತ್ತು ಪಾಕ್ ಬೌಲರ್‌ಗಳ ಶಾರ್ಟ್ ಬಾಲ್ ತಂತ್ರವನ್ನು ಸುಲಭವಾಗಿ ಎದುರಿಸಲಿದ್ದಾರೆಂದು ಹೇಳಿದ್ದಾರೆ.
Asia Cup 2025: ತಮ್ಮ ನೆಚ್ಚಿನ ಇಬ್ಬರು ಕ್ರಿಕೆಟಿಗರನ್ನು ಬಹಿರಂಗಪಡಿಸಿದ ಶುಭಮನ್ ಗಿಲ್!
ಈ ಬಗ್ಗೆ ಸೋನಿ ಸ್ಪೋರ್ಟ್‌ನಲ್ಲಿ ಮಾತನಾಡಿದ ಸಂಜಯ್ ಮಾಂಜ್ರೇಕರ್, "ಸೂರ್ಯಕುಮಾರ್ ಯಾದವ್ ಉತ್ತಮ ಲೆನ್ತ್ ಮತ್ತು ಕಡಿಮೆ ಲೆನ್ತ್ ಇರುವ ಎಸೆತಗಳಲ್ಲಿ ಚೆನ್ನಾಗಿ ಆಡುತ್ತಾರೆ, ಏಕೆಂದರೆ ಅವರ ಸಾಮಾನ್ಯ ಸ್ಕೋರಿಂಗ್ ಪ್ರದೇಶಗಳು ವಾಸ್ತವವಾಗಿ ಅವರ ಹಿಂದೆ ಇವೆ. ಆದ್ದರಿಂದ ಹ್ಯಾರಿಸ್ ರೌಫ್‌ನಂತಹ ವೇಗದ ಬೌಲರ್, ವೇಗವಾಗಿ ಬಂದು ಚೆಂಡನ್ನು ಎಸೆಯುವಾಗ, ಸೂರ್ಯ ಸ್ಟಂಪ್ಸ್‌ನ ಬಲಗಡೆಗೆ ತೆರಳಿ ಸಣ್ಣ ಆಂಗಲ್ ಅನ್ನು ಮಾಡಿಕೊಂಡು ಆಡುತ್ತಾರೆ," ಎಂದು ತಿಳಿಸಿದ್ದಾರೆ.
ಈ ಹೇಳಿಕೆಯನ್ನ ಗಮನಿಸಿದ ತಕ್ಷಣ ಎಚ್ಚೆತ್ತುಕೊಂಡ ಪಾಕ್ ದಿಗ್ಗಜ ವಸೀಮ್ ಅಕ್ರಮ್, ಸಂಜಯ್ ಮಾಂಜ್ರೇಕರ್ ಮಾತಿಗೆ ಬೆಂಬಲ ಸೂಚಿಸಿದರು ಹಾಗೂ ತಮ್ಮ ಬೌಲರ್‌ಗಳಿಗೆ ಸೂರ್ಯಕುಮಾರ್ ಯಾದವ್ ವಿರುದ್ಧ ಶಾರ್ಟ್ ಬಾಲ್ ಮಾಡದಂತೆ ಸೂಚನೆ ನೀಡಿದ್ದಾರೆ. "ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಹ್ಯಾರಿಸ್ ರೌಫ್ ಅರಿತುಕೊಳ್ಳಬೇಕಾದ ಸಂಗತಿ ಇದು. ಈ ಬಗ್ಗೆ ಅವರು ಮತ್ತು ವಿಕೆಟ್ ಕೀಪರ್ ನಡುವೆ ಸಂವಹನ ಇರಬೇಕು. ಅವರು (ಸೂರ್ಯಕುಮಾರ್ ಯಾದವ್) ತನ್ನ ಕ್ರೀಸ್ ಅನ್ನು ಚೆನ್ನಾಗಿ ಬಳಸುತ್ತಿದ್ದಾರೆ," ಎಂದು ವಸೀಮ್ ಅಕ್ರಮ್ ಹೇಳಿದ್ದಾರೆ.
IND vs AUS: ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಸಂಭಾವ್ಯ ಆಟಗಾರರ ತಂಡ!
ಸೂರ್ಯಕುಮಾರ್ ಯಾದವ್ ಅವರನ್ನು ಟಿ20ಐ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದ್ದರೂ, ಪಾಕಿಸ್ತಾನ ವಿರುದ್ಧ ಐದು ಇನಿಂಗ್ಸ್‌ಗಳಲ್ಲಿ ಕೇವಲ 64 ರನ್ ಗಳಿಸಿರುವ ಅವರ ದಾಖಲೆ ಸ್ಮರಣೀಯವಾಗಿಲ್ಲ. ಅವರು ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ 18 ರನ್‌ಗಳ ಅತ್ಯಧಿಕ ಸ್ಕೋರ್ ಹೊಂದಿದ್ದಾರೆ ಮತ್ತು ಮುಂಬರುವ ಪಂದ್ಯದಲ್ಲಿ ತಮ್ಮ ದಾಖಲೆಯನ್ನು ಸುಧಾರಿಸಲು ಉತ್ಸುಕರಾಗಿದ್ದಾರೆ.
ಇದರ ನಡುವೆ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ತಮ್ಮ ಅಭಿಯಾನಕ್ಕೆ ಅದ್ಭುತ ಆರಂಭವನ್ನು ನೀಡಿವೆ. ಭಾರತ ತಂಡ, ಯುಎಇಯನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದರೆ, ಪಾಕಿಸ್ತಾನವು ಒಮನ್ ತಂಡವನ್ನು 93 ರನ್‌ಗಳಿಂದ ಸೋಲಿಸಿತ್ತು. ಆದ್ದರಿಂದ, ಎರಡೂ ತಂಡಗಳು ಪಂದ್ಯಕ್ಕೂ ಮುನ್ನ ಅತ್ಯುತ್ತಮ ಫಾರ್ಮ್‌ನಲ್ಲಿವೆ ಮತ್ತು ಮುಂಬರುವ ಪಂದ್ಯದಲ್ಲಿ ಗೆಲುವು ಸಾಧಿಸಲು ಎದುರು ನೋಡುತ್ತಿವೆ.