ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಸಂಭಾವ್ಯ ಆಟಗಾರರ ತಂಡ!

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಸಮಿತಿಯು ಬಲಿಷ್ಠ ಭಾರತ ತಂಡವನ್ನು ಕಟ್ಟಲು ಯೋಜನೆ ಹಾಕಿಕೊಳ್ಳುತ್ತಿದೆ. ಇದರ ಜೊತೆಗೆ 2027ರ ಏಕದಿನ ವಿಶ್ವಕಪ್‌ ಮೇಲೂ ಆಯ್ಕೆ ಸಮಿತಿಯ ಗಮನವಿದೆ. ಈ ದೃಷ್ಟಿಯಿಂದ ರೋಹಿತ್‌ ಶರ್ಮಾ ಅವರ ಬದಲಿ ನಾಯಕತ್ವದ ಹೊಣೆ ಶುಭಮನ್‌ ಗಿಲ್‌ ಹೆಗಲೇರಬಹುದು.

ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಸಂಭಾವ್ಯ ಆಟಗಾರರ ತಂಡ!

ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತ ಸಂಭಾವ್ಯ ಆಟಗಾರರ ತಂಡ. -

Profile Ramesh Kote Sep 13, 2025 7:53 PM

ಬರಹ: ಕೆ. ಎನ್‌. ರಂಗು, ಚಿತ್ರದುರ್ಗ

ದುಬೈ: ಭಾರತ ತಂಡ ಅಕ್ಟೋಬರ್‌ 9 ರಂದು ಆಸ್ಟ್ರೇಲಿಯಾ ವಿರುದ್ದ ಮೂರು ಪಂದ್ಯಗಳ ಏಕದಿನ ಸರಣಿಯನ್ನು (IND vs AUS) ಆಡಲಿದೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ, ಆಸ್ಟ್ರೇಲಿಯಾಗೆ ಪ್ರವಾಸ ಮಾಡಲಿದೆ. ಇದರೊಂದಿಗೆ 2027ರ ಏಕದಿನ ವಿಶ್ವಕಪ್‌ಗೆ (ODI World Cup 2027) ಪೂರ್ವ ಸಿದ್ದತೆಯನ್ನು ಆರಂಭಿಸಲಿದೆ. ಫೆಬ್ರವರಿಯಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಜಯ ಗಳಿಸಿದ ಬಳಿಕ ಭಾರತ, ಇಲ್ಲಿಯವರೆಗೂ ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ. ಮತ್ತೊಂದು ಕಡೆ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಮತ್ತು ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ (Rohit Sharma) ಸತತ ಎಂಟು ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ ಎನ್ನಲಾಗಿದೆ.

ಇನ್ನು ರೋಹಿತ್‌ ಶರ್ಮಾ ಅತೀ ಶೀಘ್ರದಲ್ಲೇ ಏಕದಿನ ಕ್ರಿಕೆಟ್‌ಗೂ ವಿದಾಯ ಘೋಷಿಸುತ್ತಾರೆ ಎನ್ನುವ ವದಂತಿಗಳಿಗೆ ಸ್ವತಃ ಏಕದಿನ ತಂಡದ ನಾಯಕ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಅಭ್ಯಾಸದ ಫೋಟೋಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತೆರೆ ಎಳೆದಿದ್ದಾರೆ. ಇನ್ನು ವಿರಾಟ್‌ ಕೊಹ್ಲಿಯವರು ಸರಣಿಯಲ್ಲಿ ಕಣಕ್ಕಿಳಿಯುವುದು ಖಚಿತ.

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರು. ಆದೆರೆ 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಆಡಲು ಅವರು ಬಯಸಿದ್ದರು. ಆದರೆ ಅವರಿಗೆ ತಂಡದಲ್ಲಿ ಸ್ಥಾನ ಖಚಿತವಿಲ್ಲ. ಹಾಗಾಗಿ ವಿಶ್ವಕಪ್‌ಗೂ ಮುನ್ನ ಎದುರಾಗುವ ಸರಣಿಗಳಲ್ಲಿ ಸ್ಥಿರ ಪ್ರದರ್ಶನ ತೋರಿ ಅವರು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅದ್ಬುತ ಪ್ರದರ್ಶನ ತೋರಿದರೆ, ವಿಶ್ವಕಪ್‌ ಆಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಆಸೀಸ್‌ ವಿರುದ್ದ ಅಕ್ಟೋಬರ್‌ 19, 23, ಮತ್ತು 25 ರಂದು ಏಕದಿನ ಪಂದ್ಯಗಳು ನಡೆಯಲಿವೆ. ಬಳಿಕ ಐದು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಹಾಗಾಗಿ ಏಕದಿನ ತಂಡದ ಸಂಭಾವ್ಯ ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ENG vs SA: ದಕ್ಷಿಣ ಆಫ್ರಿಕಾ ವಿರುದ್ಧ 304 ರನ್‌ ಗಳಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್‌!

ರೋಹಿತ್‌ ಶರ್ಮಾ ಬದಲಿಗೆ ಶುಭಮನ್‌ ಏಕದಿನ ನಾಯಕ?

ಏತನ್ಮಧ್ಯೆ, ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಏಕದಿನ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಾಗುವುದಿಲ್ಲ ಎನ್ನಲಾಗಿದೆ. ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ಗೆ ಏಕದಿನ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಏಕೆಂದರೆ ರೋಹಿತ್‌ ಶರ್ಮಾ ಅವರು ವಿಶ್ವಕಪ್‌ ಆಡುವುದು ಖಚಿತವಿಲ್ಲ ಮತ್ತು ಶುಭಮನ್‌ ಗಿಲ್‌ ಅವರಿಗೆ ಈ ಸರಣಿಯಲ್ಲಿ ನಾಯಕತ್ವ ಹೆಗಲೇರಿಸಿದರೆ ಮುಂದಿನ ವಿಶ್ವಕಪ್‌ಗೆ ಅವರು ಹೊಂದಿಕೊಳ್ಳುತ್ತಾರೆ ಎನ್ನುವುದು ಬಿಸಿಸಿಐ ಲೆಕ್ಕಾಚಾರವಾಗಿದೆ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಶುಭಮನ್‌ ಗಿಲ್‌, ಕೆ ಎಲ್‌ ರಾಹುಲ್ ತಂಡದಲ್ಲಿ ಸ್ಥಾನ ಪಡೆಯಲು ಯಾವುದೇ ತೊಂದರೆಗಳಾಗಬಾರದು. ರಿಷಭ್‌ ಪಂತ್‌ ಕಳೆದ ಇಂಗ್ಲೆಂಡ್‌ ಪ್ರವಾಸದಲ್ಲಿ ಗಾಯಕ್ಕೆ ತುತ್ತಾಗಿರುವುದರಿಂದ ಇಶಾನ್‌ ಕಿಶನ್‌ ತಂಡಕ್ಕೆ ಮರಳಲು ಅನುವಾಗಬಹುದು ಮತ್ತು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅಕ್ಷರ್‌ ಪಟೇಲ್‌ ಮತ್ತು ರವೀಂದ್ರ ಜಡೇಜಾ ಸ್ಪಿನ್ನರಗಳಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಆಸೀಸ್‌ ನೆಲದಲ್ಲಿ ಸರಣಿ ನಡೆಯುವುದರಿಂದ ಮತ್ತು ವಿಶ್ವಕಪ್‌ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯದಲ್ಲಿ ನಡೆಯುವದರಿಂದ ಇಬ್ಬರಲ್ಲಿ ತಂಡದಿಂದ ಒಬ್ಬರಿಗೆ ಕೊಕ್‌ ಕೊಡುವ ಸಾಧ್ಯತೆ ಹೆಚ್ಚಿದೆ.

IND vs PAK: ಭಾರತದ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆಯ ವಿವರ!

ಒಂದು ವೇಳೆ ಆಯ್ಕೆ ಸಮಿತಿ ಈ ನಿರ್ಧಾಕ್ಕೆ ಬಂದರೆ ನಿತೀಶ್‌ ಕುಮಾರ್‌ ರೆಡ್ಡಿ ತಂಡಕ್ಕೆ ಮರಳಬಹುದು. ವಾಷಿಂಗ್ಟನ್‌ ಸುಂದರ್‌ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭಿರ್‌ ಅವರ ನೆಚ್ಚಿನ ಆಟಗಾರ ಹಾಗಾಗಿ, ಅವರಿಗೆ ತಂಡದಲ್ಲಿ ಸ್ಥಾನ ಲಭಿಸಬಹುದು. ಕುಲ್ದೀಪ್‌ ಅವರು ಕೂಡ ತಂಡದಲ್ಲಿ ಕಾಣಿಸಿಕೊಳ್ಳಬಹುದು. ಭಾರತಕ್ಕೆ ಹೆಚ್ಚುವರಿ ವೇಗದ ಬೌಲರ್‌ಗಳ ಅಗತ್ಯವಿರುವುದರಿಂದ ವರುಣ್‌ ಚಕ್ರವರ್ತಿ ತಂಡದಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಜಸ್‌ಪ್ರೀತ್‌ ಬುಮ್ರಾ ತಮ್ಮ ಕೆಲಸದ ಹೊರೆಯನ್ನು ಸಮತೋಲನವಾಗಿ ನಿರ್ವಹಿಸುವ ಅನಿವಾರ್ಯತೆ ಕಾರಣ ಟೂರ್ನಿಯುದ್ದಕ್ಕೂ ಆಡುವುದು ಅನುಮಾನ. ಹಾಗಾಗಿ ವೇಗದ ಬೌಲಿಂಗ್‌ ವಿಭಾಗವನ್ನು ಮೊಹಮ್ಮದ್‌ ಸಿರಾಜ್‌ ಮುನ್ನಡೆಸಬಹುದು. ಮೊಹಮ್ಮದ್‌ ಶಮಿ ತಂಡಕ್ಕೆ ಮರಳಬಹುದು ಮತ್ತು ಅರ್ಷದೀಪ್‌ ಸಿಂಗ್‌, ಹರ್ಷಿತ್‌ ರಾಣಾ, ಪ್ರಸಿದ್ಧ್‌ ಕೃಷ್ಣ ತಂಡದ ಇತರ ವೇಗಿಗಳಾಗಿ ಕಾಣಿಸಿಕೊಳ್ಳಬಹುದು.

ಆಸ್ಟ್ರೇಲಿಯಾ ವಿರುದ್ದದ ಸರಣಿಗೆ ಭಾರತದ ಸಂಭಾವ್ಯ ಆಟಗಾರರ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿ. ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಹರ್ಷಿತ್‌ ರಾಣಾ/ಪ್ರಸಿಧ್‌ ಕೃಷ್ಣ