ಭಾರತ ತಂಡದಲ್ಲಿ ಮೊಹಮ್ಮದ್ ಶಮಿ ವೃತ್ತಿಜೀವನ ಅಂತ್ಯ?; ಬಿಗ್ ಅಪ್‌ಡೇಟ್ ಕೊಟ್ಟ ಗಿಲ್
Mohammed Shami: ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಆಕಾಶ್ ದೀಪ್ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ಹಿರಿಯ ಬೌಲರ್‌ಗೆ ಉಳಿದಿರುವುದು ಏಕದಿನ ಮಾದರಿ. ಆದರೆ ಭಾರತ ಮುಂದಿನ (2027ರ) ಏಕದಿನ ವಿಶ್ವಕಪ್ ಆಡುವಾಗ ಶಮಿಗೆ 37 ವರ್ಷಗಳಾಗಲಿವೆ. ಮೊಣಕಾಲು ನೋವು ಸೇರಿದಂತೆ ಮರುಕಳಿಸುತ್ತಿರುವ ಗಾಯದ ಇತಿಹಾಸ ನೋಡಿದರೆ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಶಮಿ ಈ ಋತುವಿನಲ್ಲಿ ಬಂಗಾಳಕ್ಕೆ ಮೂರು ರಣಜಿ ಪಂದ್ಯಗಳನ್ನಾಡಿದ್ದಾರೆ.
ಮೊಹಮ್ಮದ್ ಶಮಿ ಕಮ್‌ಬ್ಯಾಕ್ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ಗಿಲ್ -
ಕೋಲ್ಕತಾ: ನವೆಂಬರ್ 14 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್(Eden Gardens)ನಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ(India vs South Africa) ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ, ಭಾರತ ತಂಡದ ನಾಯಕ ಶುಭ್‌ಮನ್ ಗಿಲ್(Shubman Gill) ಅವರು ಸ್ಟಾರ್ ವೇಗಿ ಮೊಹಮ್ಮದ್ ಶಮಿ(Mohammed Shami) ಅನುಪಸ್ಥಿತಿಯ ಬಗ್ಗೆ ಮಹತ್ವದ ಮಾಹಿತಿ ನೀಡಿದರು.
"ಶಮಿ ಭಾಯ್‌ರಂತಹ ಗುಣಮಟ್ಟದ ಬೌಲರ್‌ಗಳು ಹೆಚ್ಚು ಇಲ್ಲ. ಆದರೆ ಆಕಾಶ್ ದೀಪ್ ಮತ್ತು ಪ್ರಸಿದ್ಧ್ ಅವರಂತಹ ಆಟಗಾರರ ಪ್ರದರ್ಶನವನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಾವು ನೋಡಿದಂತೆ ಬುಮ್ರಾ ಮತ್ತು ಸಿರಾಜ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಮುಂದಿನ ಟೆಸ್ಟ್ ಸರಣಿಯನ್ನು ಎಲ್ಲಿ ಆಡುತ್ತಿದ್ದೇವೆ ಎಂಬುದರ ಮೇಲೂ ನಮಗೆ ಸ್ಪಷ್ಟತೆ ಇದೆ. ಆಯ್ಕೆದಾರರು ಅದಕ್ಕೆ ಉತ್ತರಿಸಲು ಉತ್ತಮ ಸ್ಥಾನದಲ್ಲಿರುತ್ತಾರೆ ”ಎಂದು ಸುದ್ದಿಗೋಷ್ಠಿಯಲ್ಲಿ ಗಿಲ್ ಹೇಳಿದರು.
"ನಮ್ಮಲ್ಲಿ ಉತ್ತಮ ಆಲ್‌ರೌಂಡರ್‌ಗಳು ಇರುವುದು ನಿಜಕ್ಕೂ ಅದೃಷ್ಟ. ಅವರೆಲ್ಲರೂ ಬಲವಾದ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಖಲೆಗಳನ್ನು ಹೊಂದಿದ್ದಾರೆ. ವಿಶೇಷವಾಗಿ ಭಾರತೀಯ ಪರಿಸ್ಥಿತಿಗಳಲ್ಲಿ. ನಾಯಕನಾಗಿ, ಯಾರನ್ನು ಬಿಡಬೇಕೆಂದು ನಿರ್ಧರಿಸುವುದು ಯಾವಾಗಲೂ ಕಷ್ಟ" ಎಂದು ಅವರು ಹೇಳಿದರು.
ಗಿಲ್ ಹೇಳಿಕೆ ನೋಡುವಾಗ ದೇಶ ಕಂಡ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಶಮಿ ಸದ್ಯ ಟೆಸ್ಟ್ ತಂಡದಲ್ಲಿ ಆಡುವ ಅಥವಾ ಮುಂದೆ ಏಕದಿನ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕ್ಷೀಣವಾಗಿದೆ. 35 ವರ್ಷ ವಯಸ್ಸಿನ ಶಮಿ ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಬಾರಿ ಭಾರತಕ್ಕೆ ಆಡಿದ್ದರು. ನಂತರ ಯಾವುದೇ ಮಾದರಿಯ ಸರಣಿಗೆ ಅವರನ್ನು ಪರಿಗಣಿಸಿಲ್ಲ. 2023ರಲ್ಲಿ ಏಕದಿನ ವಿಶ್ವಕಪ್ ವೇಳೆ ಆದ ಪಾದದ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ದೀರ್ಘ ಕಾಲ ಆಟದಿಂದ ವಿರಾಮ ಪಡೆದಿದ್ದರು.
ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಆಕಾಶ್ ದೀಪ್ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ಹಿರಿಯ ಬೌಲರ್‌ಗೆ ಉಳಿದಿರುವುದು ಏಕದಿನ ಮಾದರಿ. ಆದರೆ ಭಾರತ ಮುಂದಿನ (2027ರ) ಏಕದಿನ ವಿಶ್ವಕಪ್ ಆಡುವಾಗ ಶಮಿಗೆ 37 ವರ್ಷಗಳಾಗಲಿವೆ. ಮೊಣಕಾಲು ನೋವು ಸೇರಿದಂತೆ ಮರುಕಳಿಸುತ್ತಿರುವ ಗಾಯದ ಇತಿಹಾಸ ನೋಡಿದರೆ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಶಮಿ ಈ ಋತುವಿನಲ್ಲಿ ಬಂಗಾಳಕ್ಕೆ ಮೂರು ರಣಜಿ ಪಂದ್ಯಗಳನ್ನಾಡಿದ್ದಾರೆ.
ಆಲ್‌ರೌಂಡರ್‌ಗಳ ಬಗ್ಗೆ ಸಂತಸ
ಭಾರತ ತಂಡವು ಆಲ್‌ರೌಂಡರ್‌ಗಳ ಶ್ರೇಣಿಯಲ್ಲಿ ಹೇರಳ ಪ್ರತಿಭೆಯನ್ನು ಹೊಂದಿದೆ ಎಂದು ಗಿಲ್ ಸಂತೋಷ ವ್ಯಕ್ತಪಡಿಸಿದರು. ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಅವರು ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾವನ್ನು ಸೋಲಿಸಿ ಅಪೇಕ್ಷಿತ ಟೆಸ್ಟ್ ಗದೆಯನ್ನು ತಮ್ಮ ಕೈಗೆತ್ತಿಕೊಂಡ ವಿಶ್ವ ಚಾಂಪಿಯನ್‌ಗಳ ಬಲವನ್ನು ಕೂಡ ಗಿಲ್ ಶ್ಲಾಘಿಸಿದರು.
ಇದನ್ನೂ ಓದಿ IND vs SA: ದಕ್ಷಿಣ ಆಫ್ರಿಕಾ ಸರಣಿಗೆ ಸ್ಪಿನ್ ಪಿಚ್ ಸಾಹಸ ಕೈಬಿಟ್ಟ ಭಾರತ
"ಹರಿಣ ಪಡೆ ಪಾಕಿಸ್ತಾನದಲ್ಲಿ ಸರಣಿಯನ್ನು ಡ್ರಾ ಮಾಡಿಕೊಂಡಿದ್ದಾರೆ. ಅವರು ಟೆಸ್ಟ್‌ಗಳಲ್ಲಿ ವಿಶ್ವ ಚಾಂಪಿಯನ್‌ಗಳು. ಏಷ್ಯಾದ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ತಂಡಗಳು ಎದುರಿಸಲು ಯಾವಾಗಲೂ ಕಠಿಣ. ಆದರೆ ನಾವು ಸವಾಲಿಗೆ ಸಿದ್ಧರಿದ್ದೇವೆ" ಎಂದು ಗಿಲ್ ಹೇಳಿದರು.