ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ʻಭಾರತ ಟೆಸ್ಟ್‌ ತಂಡಕ್ಕೆ ಹೊಸ ಕೋಚ್‌ ನೇಮಿಸಬೇಕುʼ-ಬಿಸಿಸಿಐಗೆ ಡಿ.ಸಿ ಮಾಲೀಕ ಮನವಿ!

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಸೋತ ಬೆನ್ನಲ್ಲೇ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಭಾರತೀಯ ಟೆಸ್ಟ್‌ ತಂಡದ ಕಳಪೆ ಪ್ರದರ್ಶನ ದಿಗ್ಗಜರ ಅಸಮಧಾನಕ್ಕೆ ಕಾರಣವಾಗಿದೆ. ಈ ಕುರಿತು ಪೋಸ್ಟ್‌ ಹಂಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿಯ ಮಾಲೀಕ ಪಾರ್ಥ್‌ ಜಿಂದಾಲ್‌, ಭಾರತ ಟೆಸ್ಟ್‌ ತಂಡಕ್ಕೆ ಹೊಸ ಕೋಚ್‌ ನೇಮಿಸಬೇಕೆಂದು ಆಗ್ರಹಿಸಿದ್ದಾರೆ.

ಟೆಸ್ಟ್‌ ತಂಡಕ್ಕೆ ನೂತಕ ಕೋಚ್‌ ನೇಮಿಸಬೇಕೆಂದ ಪಾರ್ಥ್‌ ಜಿಂದಾಲ್‌.

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿ (IND vs SA) ಸೋತ ಬೆನ್ನಲ್ಲೇ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಗೌತಮ್‌ ಗಂಭೀರ್‌ ಭಾರತ ತಂಡಕ್ಕೆ ಮುಖ್ಯ ಕೋಚ್‌ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತ ತಂಡದ ಗೆಲುವಿನ ಅಂಕಿ ಅಂಶಗಳು ಕುಸಿದಿವೆ. ತಂಡದಲ್ಲಿ ಸ್ಥಿರತೆ ಕಾಪಾಡಿಕೊಳ್ಳದೆ ನಿರಂತರವಾಗಿ ಬದಲಾವಣೆಯ ಪ್ರಯೋಗ ಮಾಡುತ್ತಿರುವ ಅವರ ನಿರ್ಧಾರಗಳು ಪಂದ್ಯದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಇದು ದಿಗ್ಗಜರ ಅಸಮಧಾನಕ್ಕೆ ಕಾರಣವಾಗಿದೆ. ಈ ಕುರಿತು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಹ ಮಾಲೀಕ ಪಾರ್ಥ್‌ ಜಿಂದಾಲ್‌ (Parth Jindal), ಗೌತಮ್‌ ಗಂಭೀರ್‌ ಅವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, ಟೆಸ್ಟ್‌ ತಂಡಕ್ಕೆ ಹೊಸ ಕೋಚ್‌ ನೇಮಿಸಬೇಕೆಂದು ಆಗ್ರಹಿಸಿದ್ದಾರೆ.

ಗೌತಮ್‌ ಗಂಭೀರ್‌ ಅವಧಿಯಲ್ಲಿ ಭಾರತ ಟೆಸ್ಟ್‌ ತಂಡದ ಪ್ರದರ್ಶನ ಕುಸಿದಿದೆ. ತವರಿನಲ್ಲಿ ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ವಿರುದ್ದ ಸತತ ಎರಡು ವೈಟ್‌ವಾಷ್‌ ಆಘಾತ ಅನುಭವಿಸಿದೆ. ಒಂದು ದಶಕದ ಬಳಿಕ ಭಾರತ, ಆಸೀಸ್‌ ವಿರುದ್ದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಸರಣಿಯಲ್ಲಿ ಸೋಲು ಕಂಡಿತು. ತವರಿನಲ್ಲಿ ಭಾರತ ತಂಡ ಇಷ್ಟೊಂದು ಕಳಪೆ ಪ್ರದರ್ಶನ ನೀಡಿದ್ದು ತಾನು ನೋಡಿಯೇ ಇಲ್ಲ. ಭಾರತೀಯ ರೆಡ್‌ ಬಾಲ್‌ ಕ್ರಿಕೆಟ್‌ ಹೆಡ್‌ ಕೋಚ್‌ ಸ್ಥಾನದಿಂದ ಗೌತಮ್‌ ಗಂಭೀರ್‌ ಅವರನ್ನು ಕೆಳಗಿಳಸುವ ಸಮಯ ಬಂದಿದೆ ಎಂದು ಅವರು ಡೆಲ್ಲಿ ಕ್ಯಾಪಿಟಲ್ಸ್‌ ಓನರ್‌ ತಿಳಿಸಿದ್ದಾರೆ.

IND vs SA: ʻಕುಳ್ಳʼ ಎಂದು ನಿಂದಿಸಿದ್ದ ಜಸ್‌ಪ್ರೀತ್‌ ಬುಮ್ರಾಗೆ ತಿರುಗೇಟು ಕೊಟ್ಟ ತೆಂಬಾ ಬವೂಮ!

ಟೆಸ್ಟ್‌ ತಂಡದ ಹೆಡ್‌ ಕೋಚ್‌ ಬದಲಿಸುವ ಸಮಯ ಬಂದಿದೆ: ಪಾರ್ಥ್‌ ಜಿಂದಾಲ್‌

ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪಾರ್ಥ್‌ ಜಿಂದಾಲ್‌, "ಭಾರತ ತಂಡ ಕನಿಷ್ಠ ಗೆಲುವಿನ ಸನಿಹಕ್ಕೂ ಬರಲಿಲ್ಲ, ತವರಿನಲ್ಲೇ ಎಂತಹ ಸೋಲು! ನಮ್ಮ ಟೆಸ್ಟ್‌ ತಂಡ ತವರಿನಲ್ಲಿ ಇಷ್ಟೊಂದು ದುರ್ಬಲವಾಗಿರುವುದನ್ನು ನಾನೆಂದೂ ನೋಡಿಲ್ಲ! ಸರಿಯಾದ ರೆಡ್‌ ಬಾಲ್‌ ಕ್ರಿಕೆಟ್‌ ತಜ್ಙರನ್ನು ಆಯ್ಕೆ ಮಾಡದಿದ್ದಾಗ ಹೀಗಾಗುತ್ತದೆ. ಈ ತಂಡವು ರೆಡ್‌ ಬಾಲ್‌ ಸ್ವರೂಪದಲ್ಲಿ ನಾವು ಹೊಂದಿರುವ ಶಕ್ತಿಯನ್ನು ಪ್ರತಿಬಿಂಬಿಸುವಷ್ಟು ಹತ್ತಿರದಲ್ಲಿಲ್ಲ. ಟೆಸ್ಟ್‌ ಕ್ರಿಕೆಟ್‌ಗಾಗಿ ರೆಡ್‌ ಬಾಲ್‌ ಕೋಚ್‌ ನೇಮಿಸಿಕೊಳ್ಳುವ ಸಮಯ ಬಂದಿದೆ," ಎಂದು ಬರೆದಿದ್ದಾರೆ.

IND vs SA: ಎರಡನೇ ಟೆಸ್ಟ್‌ ಸೋಲಿನ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ರಿಷಭ್‌ ಪಂತ್!‌ ವಿಡಿಯೊ

ಗೌತಮ್‌ ಗಂಭೀರ್‌ ವಿರುದ್ಧ ಫ್ಯಾನ್ಸ್‌ ಕಿಡಿಕಾರಲು ಕಾರಣವೇನು?

ಸೋಲು-ಗೆಲುವುಗಳು ಪಂದ್ಯದ ಒಂದು ಭಾಗ, ಆದರೆ ಗಂಭೀರ್‌ ಅವರ ನಿಷ್ಠುರತೆ ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳುವಂತೆ ಮಾಡಿದೆ. ಮೊಹಮ್ಮದ್‌ ಶಮಿ, ಸರ್ಫರಾಜ್‌ ಖಾನ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರಂತಹ ಅನುಭವಿ ಆಟಗಾರರನ್ನು ನಿರ್ಲಕ್ಷಿಸುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅವರು ಹೆಡ್‌ ಕೋಚ್‌ ಆಗಿ ತೆಗೆದುಕೊಂಡಿರುವ ಬಹುತೇಕ ನಿರ್ಧಾರಗಳು ತಂಡದ ಮೇಲೆ ನಕರಾತ್ಮಕ ಪರಿಣಾಮಗಳು ಬೀರಿವೆ. ಅವರು ಟೆಸ್ಟ್‌ ಕ್ರಿಕೆಟ್‌ ತಂಡವನ್ನು ಟಿ20 ಕ್ರಿಕೆಟ್‌ಗೆ ಸಿದ್ದಪಡಿಸುವಂತೆ ಕಾಣುತ್ತಿದೆ. ಈ ವಿಷಯ ಅವರ ಗಮನಕ್ಕೆ ಬಂದರೂ, ಅವರು ಸರಿಪಡಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಗಂಭೀರ್‌ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದು, ಇಂಗ್ಲೆಂಡ್‌ನಲ್ಲಿ ಸರಣಿ ಸಮಬಲಗೊಳಿಸಿದ ಮತ್ತು ಏಷ್ಯಾಕಪ್‌ ಗೆದ್ದ ಅದೇ ತರಬೇತಿ ಇಲ್ಲೂ ಮಾಡಿದ್ದೇನೆ ಎಂದು ಹೇಳಿದ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

IND vs SA: ಭಾರತದಲ್ಲಿ 27 ಟೆಸ್ಟ್‌ ವಿಕೆಟ್‌ ಕಿತ್ತು ವಿಶ್ವದಾಖಲೆ ಬರೆದ ಸೈಮನ್‌ ಹಾರ್ಮರ್‌!

ಗಂಭೀರ್‌ ಹೇಳಿದ್ದೇನು?

ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 408 ರನ್‌ಗಳ ಹೀನಾಯ ಸೋಲು ಕಂಡ ಬಳಿಕ ಮಾತನಾಡಿದ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌, "ಇದು ಬಿಸಿಸಿಐ ನಿರ್ಧಾರಕ್ಕೆ ಬಿಟ್ಟದ್ದು. ʻಭಾರತೀಯ ಕ್ರಿಕೆಟ್‌ ಮುಖ್ಯ, ನಾನು ಮುಖ್ಯ ಅಲ್ಲʼ ಎಂದು ನಾನು ಮುಖ್ಯ ಕೋಚ್‌ ಆಗಿ ಅಧಿಕಾರ ವಹಿಸಿಕೊಂಡಾಗ ನನ್ನ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ್ದೆ. ಈಗಲೂ ನಾನು ಇಲ್ಲಿ ಕುಳಿತು ಅದೇ ಮಾತನ್ನು ಹೇಳುತ್ತಿದ್ದೇನೆ," ಎಂದು ಗೌತಮ್‌ ಗಂಭೀರ್‌ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

"ಜನರು ಅದನ್ನು ಮರೆಯುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ಯುವ ತಂಡದೊಂದಿಗೆ ಉತ್ತಮ ಫಲಿತಾಂಶ ಪಡೆದಿದ್ದೇವೆ. ನೀವು ಬೇಗನೆ ಮರೆತು ಬಿಡುತ್ತೀರಿ. ಬಹಳ ಜನ ನ್ಯೂಜಿಲೆಂಡ್‌ ಸರಣಿ ಬಗ್ಗೆ ಮಾತನಾಡುತ್ತಿದ್ದಾರೆ. ಚಾಂಪಿಯನ್ಸ್‌ ಟ್ರೋಫಿ ಮತ್ತು ಏಷ್ಯಾಕಪ್‌ ಗೆದ್ದ ಅದೇ ವ್ಯಕ್ತಿ ನಾನು. ಇದು ಕಡಿಮೆ ಅನುಭವ ಹೊಂದಿದ ತಂಡ. ನಾನು ಮೊದಲೇ ಹೇಳಿದ್ದೇನೆ. ಅವರು ಅಭ್ಯಾಸ ಮಾಡುತ್ತಲೇ ಇರಬೇಕು," ಎಂದು ಗೌತಮ್‌ ಗಂಭೀರ್‌ ಹೇಳಿದ್ದಾರೆ.