IND vs SA: ಭಾರತದಲ್ಲಿ 27 ಟೆಸ್ಟ್ ವಿಕೆಟ್ ಕಿತ್ತು ವಿಶ್ವದಾಖಲೆ ಬರೆದ ಸೈಮನ್ ಹಾರ್ಮರ್!
ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಸರಣಿ ಗೆಲುವಿನಲ್ಲಿ ಸೈಮನ್ ಹಾರ್ಮರ್ ಪ್ರಮುಖ ಪಾತ್ರವನ್ನು ವಹಿಸಿದರು. ಈ ಸರಣಿಯಲ್ಲಿ ಇವರು ಎರಡು ಪಂದ್ಯಗಳಿಂದ17 ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ಇವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆ ಮೂಲಕ ಭಾರತದಲ್ಲಿ ಒಟ್ಟು 27 ವಿಕೆಟ್‌ಗಳ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ಭಾರತದಲ್ಲಿ 27 ಟೆಸ್ಟ್ ವಿಕೆಟ್ ಕಿತ್ತಿರುವ ಸೈಮನ್ ಹಾರ್ಮರ್. -
ಗುವಾಹಟಿ: ಭಾರತದ ವಿರುದ್ಧಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs SA) ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಸೈಮನ್ ಹಾರ್ಮರ್ (Simon Harmer) ಅವರು ಒಟ್ಟು 17 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಹರಿಣ ಪಡೆ (South Africa) ಟೆಸ್ಟ್ ಸರಣಿಯನ್ನು 2-0 ಅಂತರದ ಗೆಲುವಿನಲ್ಲಿ ಹಾರ್ಮರ್ ಪ್ರಮುಖ ಪಾತ್ರವಹಿಸಿದರು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಹಾರ್ಮರ್, 9 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಪ್ರವಾಸಿಗರು 408 ರನ್‌ಗಳ ಗೆಲುವಿಗೆ ನೆರವಾಗಿದ್ದರು.
ಭಾರತ ಹಾಗೂ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಸೈಮನ್ ಹಾರ್ಮರ್ 8.94ರ ಸರಾಸರಿಯಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರು ಒಟ್ಟಾರೆ ಭಾರತದಲ್ಲಿ ಒಟ್ಟು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ 15.03ರ ಸರಾಸರಿ ಮತ್ತು 36.1ರ ಸ್ಟ್ರೈಕ್ ರೇಟ್‌ನಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಆ ಮೂಲಕ ಭಾರತದ ನೆಲದಲ್ಲಿ ಅವರು ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ ಬೌಲರ್‌ಗಳ ಪೈಕಿ ಅತ್ಯುತ್ತಮ ಸರಾಸರಿಯನ್ನು ಹೊಂದಿದ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಅಲಾನ್ ಡೇವಿಡ್ಸನ್ ಅವರ ದಾಖಲೆಯನ್ನು ಮುರಿದಿದ್ದಾರೆ. 1960ರಲ್ಲಿ ಅಲಾನ್ ಭಾರತದಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯವನ್ನು ಆಡಿದ್ದರು ಹಾಗೂ ಭಾರತದಲ್ಲಿ 16 ಕ್ಕಿಂತ ಕಡಿಮೆ ಟೆಸ್ಟ್ ಬೌಲಿಂಗ್ ಸರಾಸರಿ ಹೊಂದಿರುವ ಮೊದಲ ಬೌಲರ್ ಆಗಿದ್ದರು.
IND vs SA: ʻಹೆಡ್ ಕೋಚ್ ಹುದ್ದೆಯಿಂದ ಕಿತ್ತಾಕಿʼ-ಗೌತಮ್ ಗಂಭೀರ್ ವಿರುದ್ಧ ಫ್ಯಾನ್ಸ್ ಆಕ್ರೋಶ!
ಭಾರತದಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ಬೌಲರ್‌ಗಳು
ಸೈಮನ್ ಹಾರ್ಮರ್: 27 ವಿಕೆಟ್, 15.68ರ ಸರಾಸರಿ
ಅಲಾನ್ ಡೇವಿಡ್ಸನ್: 30 ವಿಕೆಟ್, 15.76ರ ಸರಾಸರಿ
ರಾಯ್ ಗಿಲ್‌ಕ್ರಿಸ್ಟ್: 26 ವಿಕೆಟ್, 16.11ರ ಸರಾಸರಿ
ರಿಚೀ ಬೆನಾಡ್: 52 ವಿಕೆಟ್, 18.38ರ ಸರಾಸರಿ
ಕರ್ಟ್ನಿ ವಾಲ್ಷ್: 43 ವಿಕೆಟ್, 18.55ರ ಸರಾಸರಿ
Series brilliance from Simon Harmer! 🏅
— Proteas Men (@ProteasMenCSA) November 26, 2025
With 17 wickets in the two-match showdown, Harmer is crowned Player of the Series. 👑
An outstanding contribution that powered #TheProteas Men to historic success. 👏🇿🇦 pic.twitter.com/9xVnObA4fC
ಗೌತಮ್ ಗಂಭೀರ್ ಮೇಲೆ ಟೀಕಾ ಪ್ರಹಾರ
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಟೆಸ್ಟ್ ಸರಣಿ ಸೋಲಿನ ಬಳಿಕ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. 2024ರಲ್ಲಿ ಭಾರತ ತಂಡದ ಹೆಡ್ ಕೋಚ್ ಆಗಿ ನೇಮಕವಾದ ಬಳಿಕ ಗೌತಮ್ ಗಂಭೀರ್, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸಕ್ಸಸ್ ಕಂಡಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ವಿಫಲರಾಗಿದ್ದಾರೆ. ಇವರು ಕೋಚ್ ಆದ ಬಳಿಕ ಭಾರತ ತಂಡ ಐದು ಸರಣಿಗಳನ್ನು ಆಡಿತ್ತು. ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಆಘಾತ ಅನುಭವಿಸಿತ್ತು. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಡ್ರಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು. ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.
IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ವೈಟ್‌ವಾಶ್ ಮುಖಭಂಗ
ತಮ್ಮ ಭವಿಷ್ಯವನ್ನು ಬಿಸಿಸಿಐ ನಿರ್ಧರಿಸಲಿದೆ: ಗಂಭೀರ್
ಗುವಾಹಟಿ ಟೆಸ್ಟ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ಟೀಕೆಗಳಿಗೆ ತಕ್ಕೆ ಉತ್ತರ ನೀಡಿದರು. "ಹೆಡ್ ಕೋಚ್ ಆಗಿ ನನ್ನ ಭವಿಷ್ಯವನ್ನು ಬಿಸಿಸಿಐ ನಿರ್ಧರಿಸಲಿದೆ. ಭಾರತೀಯ ಕ್ರಿಕೆಟ್ ನನಗೆ ಮುಖ್ಯ, ನಾನು ಮುಖ್ಯವಲ್ಲ ಎಂಬುದನ್ನು ಈ ಹಿಂದೆಯೂ ಹೇಳಿದ್ದೇನೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ, ಏಷ್ಯಾ ಕಪ್ ಗೆದ್ದ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿ ಡ್ರಾ ಮಾಡಿಕೊಂಡಾಗಲೂ ನಾನೇ ಕೋಚ್ ಆಗಿದ್ದೆ. ಆದರೆ, ಈ ಸರಣಿಯನ್ನು ಕಲಿಕೆಯಾಗಿ ತೆಗೆದುಕೊಳ್ಳುತ್ತೇನೆ," ಎಂದು ಗೌತಮ್ ಗಂಭೀರ್ ತಿಳಿಸಿದ್ದರು.