ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ʻನೆಪ ಹೇಳಬೇಡಿ, ಉತ್ತರ ಕೊಡಿʼ-ಗೌತಮ್‌ ಗಂಭೀರ್‌ ವಿರುದ್ಧ ಕ್ರಿಸ್‌ ಶ್ರೀಕಾಂತ್‌ ಕಿಡಿ!

ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಸೋಲಿನ ಭೀತಿಯಲ್ಲಿದೆ. ಈ ಕುರಿತು ಪ್ರಶ್ನಿಸಿರುವ ಕ್ರಿಸ್‌ ಶ್ರೀಕಾಂತ್‌ ಗಂಭೀರ್‌ ಮುಖ್ಯ ಕೋಚ್‌ ಆದ ಬಳಿಕ ಭಾರತ ಟೆಸ್ಟ್‌ ಕ್ರಿಕೆಟ್‌ ಮಾದರಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿಲ್ಲ. ಆಟಗಾರರಿಗೆ ನಿಯಮಿತ ಅವಕಾಶಗಳನ್ನು ಏಕೆ ನೀಡುತ್ತಿಲ್ಲ. ಆಯ್ಕೆ ಸಮಿತಿ ಆಟಗಾರರಿಗೆ ನಿಯಮಿತವಾಗಿ ಅವಕಾಶ ನೀಡದ ಪರಿಣಾಮ ತಂಡ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

IND vs SA: ಗೌತಮ್‌ ಗಂಭೀರ್‌ ವಿರುದ್ಧ ಕ್ರಿಸ್‌ ಶ್ರೀಕಾಂತ್‌ ಆಕ್ರೋಶ!

ಗೌತಮ್‌ ಗಂಭೀರ್‌ ವಿರುದ್ಧ ಕೃಷ್ಣಮಾಚಾರಿ ಶ್ರೀಕಾಂತ್‌ ಕಿಡಿ. -

Profile
Ramesh Kote Nov 25, 2025 6:39 PM

ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ದದ (IND vs SA) ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್‌ ಇಂಡಿಯಾ ಬ್ಯಾಟರ್‌ಗಳ ಕಳಪೆ ಬ್ಯಾಟಿಂಗ್‌ ಪ್ರದರ್ಶನದ ಪರಿಣಾಮವಾಗಿ ಆತಿಥೇಯ ತಂಡ ಸೋಲಿನ ಸುಳಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐನ ಮಾಜಿ ಸೆಲೆಕ್ಟರ್‌ ಕ್ರಿಸ್‌ ಶ್ರೀಕಾಂತ್‌ (Kris Srikkanth) ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ. ತಂಡದ ವೈಫಲ್ಯದ ಕುರಿತು ಆಡಳಿತ ಮತ್ತು ಆಯ್ಕೆ ಮಂಡಳಿಯ ನೆಪಗಳನ್ನು ಕೇಳಲು ನಾವು ಸಿದ್ದರಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ದ 0-3 ಅಂತರದಲ್ಲಿ ಸೋಲು ಕಂಡ ಬಳಿಕ ಪುನಃ ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಭಾರತ ವೈಟ್‌ವಾಷ್‌ ಮುಜುಗರ ಎದುರಿಸುವ ಸಾಧ್ಯತೆಯಿದೆ. ಕೊಲ್ಕತ್ತಾದ ಪಿಚ್‌ನಲ್ಲಿ ಸರಣಿಯ ಮೊದಲ ಪಂದ್ಯ ಸೋತ ನಂತರ ಗುವಾಹಟಿಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ಟೀಮ್‌ ಇಂಡಿಯಾ ಬ್ಯಾಟಿಂಗ್‌ ಸ್ನೇಹಿಯಾಗಿರುವ ಇಲ್ಲಿಯೂ ಹಿನ್ನಡೆ ಅನುಭವಿಸಿರುವುದು ಆತಿಥೇಯರಿಗೆ ಸಂಕಷ್ಟ ತಂದಿದೆ.

ಈ ಕುರಿತು ಮಾತನಾಡಿರುವ ಟೀಮ್‌ ಇಂಡಿಯಾ ಮುಖ್ಯ ಆಯ್ಕೆದಾರ ಕ್ರಿಸ್‌ ಶ್ರೀಕಾಂತ್‌, " ಪ್ರತಿ ಪಂದ್ಯದಲ್ಲೂ ಯಾರಾದರೂ ಪದಾರ್ಪಣೆ ಮಾಡುತ್ತಿದ್ದಾರೆ. ಅವರು ಟ್ರಯಲ್ ಅಂಡ್ ಎರರ್ ಎಂದು ಹೇಳಬಹುದು. ಗೌತಮ್ ಗಂಭೀರ್ ಏನು ಬೇಕಾದರೂ ಹೇಳಬಹುದು. ನನಗೆ ಚಿಂತೆ ಇಲ್ಲ. ನಾನು ಮಾಜಿ ನಾಯಕ ಮತ್ತು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ. ನಾನು ಏನು ಮಾತನಾಡುತ್ತಿದ್ದೇನೆಂದು ನನಗೆ ತಿಳಿದಿದೆ. ನಿಮಗೆ ಸ್ಥಿರತೆ ಬೇಕು," ಎಂದು ಕಿಡಿಕಾರಿದ್ದಾರೆ.

IND vs SA: ತವರಿನಲ್ಲಿ ಮತ್ತೊಂದು ಟೆಸ್ಟ್‌ ಸರಣಿ ವೈಟ್‌ವಾಷ್‌ ಭೀತಿಯಲ್ಲಿ ಭಾರತ ತಂಡ!

ಮುಖ್ಯವಾಗಿ ಗೌತಮ್ ಗಂಭೀರ್ ಅವರು ಆಟಗಾರರನ್ನು ಕೈಬಿಡುವುದಿಲ್ಲ, ಗೆಲ್ಲಲು ಉತ್ತಮ ತಂಡವನ್ನು ಆಯ್ಕೆ ಮಾಡುವತ್ತ ಗಮನಹರಿಸುತ್ತವೆ ಎಂದು ಹೇಳಿದ್ದರು. ಆದಾಗ್ಯೂ, ಅಂಕಿ ಅಂಶಗಳನ್ನು ಗಮನಿಸಿದರೆ ಗಂಭೀರ್ ಅಧಿಕಾರ ವಹಿಸಿಕೊಂಡ ನಂತರ ಕೇವಲ ಒಂದು ವರ್ಷದಲ್ಲಿ ಭಾರತ ಟೆಸ್ಟ್ ಪಂದ್ಯಗಳಲ್ಲಿ 24 ಆಟಗಾರರನ್ನು ಬಳಸಿಕೊಂಡಿದೆ. ಈ ಹಿಂದೆ ಗಮನಿಸುವುದಾದರೆ, ವಿರಾಟ್ ಕೊಹ್ಲಿ ನಾಯಕರಾಗಿದ್ದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 41 ಆಟಗಾರರನ್ನು ಮಾತ್ರ ಬಳಸಿಕೊಂಡಿದ್ದರು. ಇನ್ನು ಮೊದಲ ಟೆಸ್ಟ್‌ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಕಳುಹಿಸಲಾಯಿತು. ಆದರೆ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತ ಅವರನ್ನು 8ನೇ ಕ್ರಮಾಂಕಕ್ಕೆ ಇಳಿಸಿತು. ಸಾಯಿ ಸುದರ್ಶನ್‌ ಅವರು ಉತ್ತಮ ಫಾರ್ಮ್‌ನಲ್ಲಿದ್ದರೂ, ಅವರನ್ನು ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೈ ಬಿಡಲಾಯಿತು, ಪುನಃ ಗುವಾಹಟಿಯ ಟೆಸ್ಟ್‌ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ನೀಡಲಾಯಿತು. ಈ ರೀತಿಯ ಆಯ್ಕೆ ಸಮಿತಿಯ ಕೆಲ ನಡೆಗಳು ಯಾವುದೇ ಆಟಗಾರನ ಸ್ಥಿರತೆ ಮೇಲೆ ನೇರ ಪರಿಣಾಮ ಬೀರುತ್ತವೆ.

IND vs SA: ʻಭಾರತ ತಂಡ 201ಕ್ಕೆ ಆಲೌಟ್‌ʼ-ಬ್ಯಾಟ್ಸ್‌ಮನ್‌ಗಳ ಬಗ್ಗೆ ಬೇಸರ ಹೊರಹಾಕಿದ ರವಿಶಾಸ್ತ್ರಿ!

201 ರನ್‌ಗಳಿಗೆ ಆಲ್‌ಔಟ್‌ ಆಗಿದ್ದ ಭಾರತ

ಅನುಕೂಲಕರ ಬ್ಯಾಟಿಂಗ್ ಪರಿಸ್ಥಿತಿಯಲ್ಲಿ, ಭಾರತ ಕೇವಲ 201 ರನ್‌ಗಳನ್ನು ಕಲೆ ಹಾಕಲಷ್ಟೇ ಶಕ್ತವಾಯಿತು. ವಾಷಿಂಗ್ಟನ್ ಸುಂದರ್ (48) ಮತ್ತು ಯಶಸ್ವಿ ಜೈಸ್ವಾಲ್ (58) ಹೊರತುಪಡಿಸಿ, ಉಳಿದೆಲ್ಲರೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಕೊಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ತಂಡಕ್ಕೆ ಮರಳಿದ್ದ ಅಕ್ಷರ್ ಪಟೇಲ್ ಅವರನ್ನು ತಂಡದಲ್ಲಿ ಏಕೆ ಆಡಿಸಲಿಲ್ಲ ಎಂದು ಭಾರತದ ಮಾಜಿ ಆಟಗಾರ ಪ್ರಶ್ನಿಸಿದರು. ನಿತೀಶ್‌ ರೆಡ್ಡಿ ಅವರ ಆಯ್ಕೆಯನ್ನೂ ಶ್ರೀಕಾಂತ್‌ ಪ್ರಶ್ನಿಸಿದ್ದು, ಅವರು ಯುವ ಆಟಗಾರ ಇನ್ನೂ ಭಾರತದ ಟೆಸ್ಟ್ XI ನಲ್ಲಿ, ವಿಶೇಷವಾಗಿ ತವರಿನಲ್ಲಿ ಆಡಲು ಸಾಕಷ್ಟು ಸಮರ್ಥರಲ್ಲ. ಭಾರತವು ನಿತೀಶ್ ರೆಡ್ಡಿ ಬದಲಿಗೆ ಸರ್ಫರಾಜ್ ಖಾನ್ ಅವರಂತಹ ಸ್ಪೆಷಲಿಸ್ಟ್ ಹಿಟ್ಟರ್ ಅನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌!

ನಿತೀಶ್‌ ರೆಡ್ಡಿ ಉತ್ತಮ ಆಲ್‌ರೌಂಡರ್‌ ಅಲ್ಲವೇ ಅಲ್ಲ

"ನಿತೀಶ್ ರೆಡ್ಡಿಯನ್ನು ಆಲ್‌ರೌಂಡರ್ ಎಂದು ಯಾರು ಕರೆಯುತ್ತಾರೆ? ಯಾರಾದರೂ ಅವರ ಬೌಲಿಂಗ್ ನೋಡಿ ಅವರು ಆಲ್‌ರೌಂಡರ್ ಎಂದು ಹೇಳಲು ಸಾಧ್ಯವೇ? ಅವರು ಎಂಸಿಜಿಯಲ್ಲಿ ಶತಕ ಬಾರಿಸಿದರು, ಆದರೆ ಅದರ ನಂತರ ಅವರು ಏನು ಮಾಡಿದ್ದಾರೆ? ನಿತೀಶ್ ರೆಡ್ಡಿ ಆಲ್‌ರೌಂಡರ್ ಅಲ್ಲ. ಅವರ ಬೌಲಿಂಗ್‌ ಚಲನೆಯಲ್ಲಿ ವೇಗವಿಲ್ಲ. ಅವರು ಸ್ಪೋಟಕ ಬ್ಯಾಟ್ಸ್‌ಮನ್‌ ಕೂಡ ಅಲ್ಲ. ನಿತೀಶ್ ಏಕದಿನ ತಂಡದಲ್ಲೂ ಹೇಗಿದ್ದಾರೆ? ಅವರು ಏನು ಮಾಡಿದ್ದಾರೆ? ಹಾರ್ದಿಕ್ ಪಾಂಡ್ಯ ಬದಲಿಗೆ ನಿತೀಶ್ ಒಬ್ಬರೇ? ಅಕ್ಷರ್ ಪಟೇಲ್ ಏಕೆ ಬೇಡ?" ಎಂದು ಟೀಮ್‌ ಇಂಡಿಯಾ ಮಾಜಿ ನಾಯಕ ಪ್ರಶ್ನಿಸಿದರು.

ಎರಡನೇ ಟೆಸ್ಟ್‌ನಲ್ಲಿ 500 ರನ್‌ಗಳ ತೀವ್ರ ಹಿನ್ನಡೆ ಅನುಭವಿಸುತ್ತಿರುವ ಭಾರತ ತಂಡ ಕಮ್‌ಬ್ಯಾಕ್‌ ಮಾಡಲು ಯತ್ನಿಸುತ್ತಿದೆ. ಪಂದ್ಯ ಗೆದ್ದು ತವರಿನಲ್ಲಿ ವೈಟ್‌ವಾಷ್‌ ಮುಜುಗರದಿಂದ ಪಾರಾಗಲು ಭಾರತ ತಂಡ ಎದುರು ನೋಡುತ್ತಿದೆ.