IND vs SA: ತಮಗೆ ಭೀತಿ ಹುಟ್ಟಿಸಿರುವ ಭಾರತೀಯ ಬ್ಯಾಟ್ಸ್‌ಮನ್ ಹೆಸರಿಸಿದ ಏಡೆನ್ ಮಾರ್ಕ್ರಮ್!
Aiden Markram on Abhishek Sharma: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಐದು ಪಂದ್ಯಗಳ ಟಿ20ಐ ಸರಣಿಯು ಡಿಸೆಂಬರ್ 9 ರಂದು ಆರಂಭವಾಗಲಿದೆ. ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಅಭಿಷೇಕ್ ಶರ್ಮಾ ಭೀತಿ ಮೂಡಿಸಿದ್ದಾರೆ. ಈ ಬಗ್ಗೆ ಹರಿಣ ಪಡೆದ ನಾಯಕ ಏಡೆನ್ ಮಾರ್ಕ್ರಮ್ ವಿವರಿಸಿದ್ದಾರೆ.
ಅಭಿಷೇಕ್ ಶರ್ಮಾಗೆ ಏಡೆನ್ ಮಾರ್ಕ್ರಮ್ ಮೆಚ್ಚುಗೆ. -
ನವದೆಹಲಿ: ಭಾರತ ವಿರುದ್ಧ ಮುಂಬರುವ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ (IND vs SA) ಆಡಲು ದಕ್ಷಿಣ ಆಫ್ರಿಕಾ ಸಜ್ಜಾಗುತ್ತಿದೆ. ಈ ಸರಣಿಯಲ್ಲಿ ಪ್ರವಾಸಿ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಸವಾಲಾಗಿದ್ದಾರೆ. ಮೊದಲನೇ ಪಂದ್ಯಕ್ಕೂ ಮುನ್ನ ಹರಿಣ ಪಡೆಯ ನಾಯಕ ಏಡೆನ್ ಮಾರ್ಕ್ರಮ್ (Aiden Markram) ಇದೇ ಮಾತನ್ನು ಹೇಳಿದ್ದಾರೆ. ಅಭಿಷೇಕ್ ಅದ್ಭುತ ಬ್ಯಾಟ್ಸ್‌ಮನ್ ಹಾಗೂ ಅವರು ನಮಗೆ ಸವಾಲು ನೀಡಲಿದ್ದಾರೆ. ಆದರೆ, ಆದಷ್ಟು ಬೇಗ ಅವರನ್ನು ಔಟ್ ಮಾಡುತ್ತೇವೆಂದು ಮಾರ್ಕ್ರಮ್ ಆತಿಥೇಯ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಐದು ಪಂದ್ಯಗಳ ಟಿ20ಐ ಸರಣಿಯ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಡೆನ್ ಮಾರ್ಕ್ರಮ್, "ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾಗ ಅಭಿ ಜೊತೆ ಆಡಿದ್ದೇನೆ, ಅವರು ಅದ್ಭುತ ಆಟಗಾರ ಹಾಗೂ ಚೆನ್ನಾಗಿ ಬ್ಯಾಟ್ ಮಾಡುತ್ತಾರೆ. ಹಾಗಾಗಿ ಅವರು ನಮಗೆ ದೊಡ್ಡ ವಿಕೆಟ್. ಹೊಸ ಚೆಂಡಿನಲ್ಲಿ ಯಾರೇ ಬೌಲ್ ಮಾಡಿದರೂ ಅದು ಅವರಿಗೆ ಸವಾಲು ಎದುರಾಗಲಿದೆ, ಅವರನ್ನು ಬೇಗ ಔಟ್ ಮಾಡುತ್ತೇವೆಂಬ ನಿರೀಕ್ಷೆ ಇದೆ. ಅವರು ಮ್ಯಾಚ್ ವಿನ್ನರ್ ಆಗಿದ್ದು, ಅವರ ವಿಕೆಟ್ ನಮಗೆ ತುಂಬಾ ಮುಖ್ಯವಾಗಿದೆ," ಎಂದು ತಿಳಿಸಿದ್ದಾರೆ.
IND vs SA 1st T20I: ಕಟಕ್ ಟಿ20 ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಇಲ್ಲಿದೆ
ಅಭಿಷೇಕ್ ಶರ್ಮಾ ತಮ್ಮ ಅಸಾಧಾರಣ ಲಯದೊಂದಿಗೆ ದಕ್ಷಿಣ ಆಫ್ರಿಕಾ ಟಿ20ಐ ಸರಣಿಗೆಡ ಹೆಜ್ಜೆ ಹಾಕುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಟಿ20 ಸರಣಿ ಗೆದ್ದಾಗ ಭಾರತದ ಪರ ಅಭಿಷೇಕ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಅವರು ಈ ಸರಣಿಯಲ್ಲಿ 163 ರನ್‌ಗಳನ್ನು ಕಲೆ ಹಾಕಿದರು. ಅವರ ದೇಶಿ ಕ್ರಿಕೆಟ್ ಕೂಡ ಅಸಾಧಾರಣ ದಾಖಲೆಯನ್ನು ಹೊಂದಿದೆ. ಇದೀಗ ನಡೆಯುತ್ತಿರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ 50.66ರ ಸರಾಸರಿಯಲ್ಲಿ 304 ರನ್‌ಗಳನ್ನು ಕಲೆ ಹಾಕಿದ್ದಾರೆ, ಇದರಲ್ಲಿ ಅವರ ಸ್ಟ್ರೈಕ್ ರೇಟ್ 249ಕ್ಕೂ ಜಾಸ್ತಿ ಇದೆ. ಬಂಗಾಳ ವಿರುದ್ಧದ ಪಂದ್ಯದಲ್ಲಿ ಅವರು 52 ಎಸೆತಗಳಲ್ಲಿ 148 ರನ್‌ಗಳನ್ನು ಸಿಡಿಸಿದ್ದರು. ಇವರ ಸ್ಪೋಟಕ ಶತಕದ ಬಲದಿಂದ ಪಂಜಾಬ್ 5 ವಿಕೆಟ್ ನಷ್ಟಕ್ಕೆ 310 ರನ್‌ಗಳನ್ನು ಗಳಿಸಿತ್ತು.
ಅಭಿಷೇಕ್ ಅವರ ಏರಿಕೆಯು ಆಧುನಿಕ ಟಿ20 ಬ್ಯಾಟಿಂಗ್‌ನಲ್ಲಿ ವ್ಯಾಪಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಪ್ರಪಂಚದಾದ್ಯಂತದ ಯುವಕರು ನಿರಂತರ ಉದ್ದೇಶ ಮತ್ತು ತಮ್ಮ ನೈಸರ್ಗಿಕ ಆಟದ ಭಾಗವಾಗಿ ಅಪಾಯವನ್ನು ಸ್ವೀಕರಿಸುವ ಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದು ಮಾರ್ಕ್ರಮ್ ಅಭಿಪ್ರಾಯ.
IND vs SA 1st T20I: ಕಟಕ್ ಟಿ20 ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಇಲ್ಲಿದೆ
"ಮೊದಲ ಎಸೆತದಿಂದಲೇ ಆಟವನ್ನು ಮುಂದುವರಿಸಲು ಸಂಪೂರ್ಣ ಪರವಾನಗಿ ನೀಡಿರುವುದು ಬಹುಶಃ ನಿರ್ಭಯತೆ," ಎಂದು ಹೇಳಿದ ಅವರು, "ಕೆಲವು ಆಟಗಾರರು ತಮ್ಮ ಆಟವನ್ನು ಮುಕ್ತವಾಗಿ ಮುಂದುವರಿಸಬೇಕೆಂದು ನೀವು ಬಯಸುತ್ತೀರಿ. ಅವರು ಕ್ರೀಸ್‌ನಲ್ಲಿ ನಿಂತು ಕೆಲಕಾಲ ಬ್ಯಾಟ್ ಬೀಸಿದರೆ, ತಂಡವು ನಿಜವಾಗಿಯೂ ಬಲವಾದ ಸ್ಥಾನದಲ್ಲಿದೆ. ಆಟವು ಆ ದಿಕ್ಕಿನಲ್ಲಿ ಸಾಗುತ್ತಿದೆ," ಎಂದು ಹೇಳಿದ್ದಾರೆ.
ಯುವ ಆಟಗಾರರನ್ನು ಶ್ಲಾಘಿಸಿದ ಮಾರ್ಕ್ರಮ್
"ಸ್ವಾಭಾವಿಕವಾಗಿ ಬರುವ ಕಿರಿಯ ಆಟಗಾರರು ಆಕ್ರಮಣಕಾರಿ ಆಟವನ್ನು ಆಡುತ್ತಿದ್ದಾರೆ ಏಕೆಂದರೆ ಅದು ಮನರಂಜನೆಯಾಗಿದೆ. ಆದರೆ ಇದು ಲೀಗ್‌ಗಳಿಗೆ ಪ್ರವೇಶಿಸಲು ಮತ್ತು ತಮ್ಮ ದೇಶಕ್ಕಾಗಿ ಟಿ20 ಕ್ರಿಕೆಟ್ ಆಡಲು ಅವರಿಗೆ ಅವಕಾಶಗಳನ್ನು ನೀಡುತ್ತದೆ. ಅವರು ಕೆಲವು ನಿಜವಾಗಿಯೂ ಅದ್ಭುತವಾದ ಕೆಲಸಗಳನ್ನು ಮಾಡುತ್ತಾರೆ," ಎಂದು ದಕ್ಷಿಣ ಆಫ್ರಿಕಾ ನಾಯಕ ತಿಳಿಸಿದ್ದಾರೆ.
IND vs SA: ಯಶಸ್ವಿ ಜೈಸ್ವಾಲ್ ಶತಕ, ಮೂರನೇ ಪಂದ್ಯ ಗೆದ್ದು ಏಕದಿನ ಸರಣಿ ಮುಡಿಗೇರಿಸಿಕೊಂಡ ಭಾರತ!
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಸೋಲಿನ ಬಳಿಕ ದಕ್ಷಿಣ ಆಫ್ರಿಕಾ ತಂಡ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿದೆ. ವೆಸ್ಟ್ ಇಂಡೀಸ್, ಭಾರತ, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ವಿರುದ್ಧ ವಿರುದ್ಧ ಸೋಲು ಅನುಭವಿಸಿದೆ. ಆದರೆ, ತಮ್ಮ ಹಾದಿಯನ್ನು ಬದಲಿಸುವುದಿಲ್ಲ ಎಂದು ದಕ್ಷಿಣ ಆಫ್ರಿಕಾ ನಾಯಕ ತಿಳಿಸಿದ್ದಾರೆ.
"ನಮ್ಮದು ಯಾವುದೇ ಹೆಚ್ಚುವರಿ ಯೋಜನೆಗಳು ಇಲ್ಲ. ಇದು ಟಿ20 ಕ್ರಿಕೆಟ್ ಹಾಗೂ ಮನೋರಂಜನೆ ನೀಡುವ ಸ್ವರೂಪ. ಇದೇ ನಾವು ನಾವು ಬಯಸುತ್ತಿರುವ ಬ್ರ್ಯಾಂಡ್ ಇದಾಗಿದೆ. ಮುಕ್ತವಾಗಿ ಆಡುವ ಹಾಗೂ ಆಟವನ್ನು ಆನಂದಿಸುವ ಹಾಗೂ ತಮ್ಮ ಕೌಶಲವನ್ನು ತೆರೆದಿಡುವ ಆಟಗಾರರು ನಮಗೆ ಬೇಕಾಗಿದೆ," ಎಂದು ಏಡೆನ್ ಮಾರ್ಕ್ರಮ್ ಹೇಳಿದ್ದಾರೆ.