ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ʻಕುಳ್ಳʼ ಎಂದು ನಿಂದಿಸಿದ್ದ ಜಸ್‌ಪ್ರೀತ್‌ ಬುಮ್ರಾಗೆ ತಿರುಗೇಟು ಕೊಟ್ಟ ತೆಂಬಾ ಬವೂಮ!

Temba Bavuma dig at Bumrah: ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕುಳ್ಳ ಎಂದು ನಿಂದಿಸಿದ್ದ ಭಾರತ ತಂಡದ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾಗೆ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವೂಮ ತಿರುಗೇಟು ನೀಡಿದ್ದಾರೆ. ಭಾರತ ತಂಡ, ಎರಡನೇ ಟೆಸ್ಟ್‌ ಪಂದ್ಯದಲ್ಲಿ 408 ರನ್‌ಗಳ ಸೋಲು ಅನುಭವಿಸಿತು. ಆ ಮೂಲಕ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿತು.

ಜಸ್‌ಪ್ರೀತ್‌ ಬುಮ್ರಾಗೆ ತೆಂಬಾ ಬವೂಮ ತಿರುಗೇಟು.

ಗುವಾಹಟಿ: ಭಾರತ ತಂಡವನ್ನು ಮಂಡಿಯೂರಿಸುವ ಬಗ್ಗೆ ದಕ್ಷಿಣ ಆಫ್ರಿಕಾ ಕೋಚ್ ಶುಕ್ರಿ ಕಾನ್ರಾಡ್ ಅವರ ವಿವಾದಾತ್ಮಕ ಹೇಳಿಕೆಯನ್ನು ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ (Temba Bavuma) ತಿರಸ್ಕರಿಸಿದರು ಹಾಗೂ ತಮ್ಮ ಮುಖ್ಯ ಕೋಚ್ ತಮ್ಮ ಹೇಳಿಕೆಗಳ ಬಗ್ಗೆ ಯೋಚಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಅನಿಲ್ ಕುಂಬ್ಳೆ ಮತ್ತು ಡೇಲ್ ಸ್ಟೇನ್ ಸೇರಿದಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರು ಕಾನ್ರಾಡ್ "ಎದೆಯ ಮೇಲೆ ಮಲಗುವುದು ಅಥವಾ ತೆವಳುವುದು" ಎಂಬ ಪದವನ್ನು ಬಳಸಿದ್ದರು ಎಂಬುದನ್ನು ಕೂಡ ಅವರು ಇದೇ ಸಂದರ್ಭವನ್ನು ಉಲ್ಲೇಖಿಸಿ ಟೀಕಿಸಿದ್ದರು. ಇದರ ಜೊತೆಗೆ ಎರಡನೇ ಟೆಸ್ಟ್‌ ಪಂದ್ಯದ (IND vs SA) ಸಂದರ್ಭದಲ್ಲಿ ಜಸ್‌ಪ್ರೀತ್‌ ಬುಮ್ರಾ (Jasprit Bumrah), ತಮ್ಮ ಮೇಲೆ ʻಕುಬ್ಜʼ (ಕುಳ್ಳ) ಪದ ಪ್ರಯೋಗಿಸಿದ್ದ ಪ್ರಸಂಗವನ್ನು ಕೂಡ ನೆನೆದುಕೊಂಡರು ಹಾಗೂ ಟೀಮ್‌ ಇಂಡಿಯಾ ವೇಗಿಗೆ ತಿರುಗೇಟು ನೀಡಿದರು.

ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ಬುಧವಾರ ಅಂತ್ಯವಾಗಿದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 408 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಇದರೊಂದಿಗೆ ಹರಿಣ ಪಡೆ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರವಾಸಿ ನಾಯಕ ತೆಂಬಾ ಬವೂಮ, ತಮ್ಮ ಕೋಚ್‌ ಶುಕ್ರಿ ಕಾನ್ರಾಡ್‌ ಅವರ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಜಸ್‌ಪ್ರೀತ್‌ ಬುಮ್ರಾ ಅವರ ಕುಬ್ಜ ಪದವನ್ನು ಉಲ್ಲೀಖಿಸಿ, ಜನರು ತಮ್ಮ ಎಲ್ಲೆಯನ್ನು ಮೀರಿದ್ದರು ಪ್ರವಾಸಿ ನಾಯಕ ಟೀಕಿಸಿದ್ದಾರೆ.

IND vs SA: ಭಾರತದ ವಿರುದ್ಧ ಟೆಸ್ಟ್‌ ಸರಣಿ ಗೆದ್ದು ದೊಡ್ಡ ದಾಖಲೆ ಬರೆದ ತೆಂಬಾ ಬವೂಮ!

"ಇಂದು ಬೆಳಿಗ್ಗೆಯಷ್ಟೇ ನಮ್ಮ ಕೋಚ್ ಹೇಳಿಕೆಯ ಬಗ್ಗೆ ನನ್ನ ಗಮನಕ್ಕೆ ಬಂತು. ನಾನು ಪಂದ್ಯದ ಮೇಲೆ ಗಮನಹರಿಸಿದ್ದೆ, ಆದ್ದರಿಂದ ಅವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಗಲಿಲ್ಲ. ಶುಕ್ರಿ 60 ವರ್ಷ ವಯಸ್ಸಿನ ಸನಿಹದಲ್ಲಿದ್ದಾರೆ ಮತ್ತು ಅವರು ತಮ್ಮ ಹೇಳಿಕೆಯ ಬಗ್ಗೆ ಗಮನಿಸಲಿದ್ದಾರೆ. ಆದರೆ ಈ ಸರಣಿಯಲ್ಲಿ ಕೆಲವು ಆಟಗಾರರು (ಜಸ್‌ಪ್ರೀತ್‌ ಬುಮ್ರಾ) ಕೂಡ ಗೆರೆ ದಾಟಿದ್ದಾರೆ. ಕೋಚ್ಎಲ್ಲೆ ಮೀರಿದ್ದಾರೆ ಎಂದು ನಾನು ಹೇಳುತ್ತಿಲ್ಲ, ಆದರೆ ಅವರು ತಮ್ಮ ಹೇಳಿಕೆಯ ಬಗ್ಗೆ ಯೋಚಿಸುತ್ತಾರೆ," ಎಂದು ತಿಳಿಸಿದ್ದಾರೆ.

ತೆಂಬಾ ಬವೂಮ ಅವರನ್ನು ಬುಮ್ರಾ ಏನೆಂದು ಕರೆದಿದ್ದರು?

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ 13ನೇ ಓವರ್‌ನಲ್ಲಿ ಜಸ್‌ಪ್ರೀತ್ ಬುಮ್ರಾ, ತಮ್ಮ ಎಸೆತದಲ್ಲಿ ಚೆಂಡನ್ನು ತೆಂಬಾ ಬವೂಮ ಅವರ ಪ್ಯಾಡ್‌ಗೆ ಹೊಡೆದರು. ನಂತರ ಅವರು ಎಲ್‌ಬಿಡಬ್ಲ್ಯುಗೆ ಮನವಿ ಮಾಡಿದರು, ಆದರೆ ಫೀಲ್ಡ್‌ ಅಂಪೈರ್ ತಿರಸ್ಕರಿಸಿದರು. ನಂತರ ಜಸ್‌ಪ್ರೀತ್‌ ಬುಮ್ರಾ, ರಿವ್ಯೂ ತೆಗೆದುಕೊಳ್ಳುವುದೇ ಎಂದು ರಿಷಭ್ ಪಂತ್ ಅವರನ್ನು ಕೇಳಿದರು ಮತ್ತು ಬವುಮಾ ಅವರ ಎತ್ತರ ಕಡಿಮೆ ಇದ್ದಾರೆ ಎಂದು ಹೇಳಿದ್ದರು.

IND vs SA: ಎರಡನೇ ಟೆಸ್ಟ್‌ ಸೋಲಿನ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ರಿಷಭ್‌ ಪಂತ್!‌ ವಿಡಿಯೊ

ʼಅವನು ಒಬ್ಬ ಕುಳ್ಳನೇ" ಎಂದು ಜಸ್‌ಪ್ರೀತ್‌ ಬುಮ್ರಾ, ರಿಷಭ್‌ ಪಂತ್‌ಗೆ ಹೇಳಿದ್ದು ಸ್ಟಂಪ್‌ ಮೈಕ್‌ನಲ್ಲಿ ರೆಕಾರ್ಡ್‌ ಆಗಿದೆ. ಇದಕ್ಕೆ ರಿಷಭ್‌ ಪಂತ್‌ ಪ್ರತಿಕ್ರಿಯಿಸಿ "ಹೌದು ಅವನು ಒಬ್ಬ ಕುಬ್ಜ, ಅವನು ಇಲ್ಲಿ ನಿಂತಿದ್ದಾನೆ ನೋಡಿ," ಎಂದು ಹೇಳಿದ್ದರು.

ʻಬೌನಾʼ ಎಂಬ ಪದವು ಕುಬ್ಜರಿಗೆ ಬಳಸಲ್ಪಡುತ್ತದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪ್ರತಿಕ್ರಿಯೆಗಳಿಗೆ ಇದು ಕಾರಣವಾಗಿದೆ. ಆದಾಗ್ಯೂ, ಅದು ನೇರ ಅನುವಾದವಲ್ಲ, ಇದನ್ನು ಸಾಮಾನ್ಯವಾಗಿ ಎತ್ತರ ಕಡಿಮೆ ಇರುವ ವ್ಯಕ್ತಿಗಳನ್ನು ವಿವರಿಸಲು ಗ್ರಾಮ್ಯ ಭಾಷೆಯಲ್ಲಿ ಬೌನಾ ಪದವನ್ನು ಬಳಸಲಾಗುತ್ತದೆ.