ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಭಾರತದ ವಿರುದ್ಧ ಟೆಸ್ಟ್‌ ಸರಣಿ ಗೆದ್ದು ದೊಡ್ಡ ದಾಖಲೆ ಬರೆದ ತೆಂಬಾ ಬವೂಮ!

ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಿರುದ್ಧ 408 ರನ್‌ಗಳ ಅಂತರದಲ್ಲಿ ಗೆಲುವು ಪಡೆಯಿತು. ಆ ಮೂಲಕ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಆ ಮೂಲಕ 25 ವರ್ಷಗಳ ಬಳಿಕ ಭಾರತದಲ್ಲಿ ಹರಿಣ ಪಡೆ ಟೆಸ್ಟ್‌ ಸರಣಿಯನ್ನು ಮುಡಿಗೇರಿಸಿಕೊಂಡಿತು. ಅಂದ ಹಾಗೆ ಈ ಸರಣಿಯ ಗೆಲುವಿನ ಬಳಿಕ ಪ್ರವಾಸಿ ತಂಡದ ನಾಯಕ ತೆಂಬಾ ಬವೂಮ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಭಾರತದಲ್ಲಿ ಟೆಸ್ಟ್‌ ಸರಣಿ ಗೆದ್ದು ವಿಶೇಷ ದಾಖಲೆ ಬರೆದ ತೆಂಬಾ ಬವೂಮ!

ಭಾರತ ಟೆಸ್ಟ್‌ ಸರಣಿ ಗೆದ್ದ ಬಳಿಕ ವಿಶೇಷ ದಾಖಲೆ ತೆಂಬಾ ಬವೂಮ. -

Profile
Ramesh Kote Nov 26, 2025 9:34 PM

ಗುವಾಹಟಿ: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ (IND vs SA 2nd Test Highlights) 408 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಹರಿಣ ಪಡೆ (South Africa) 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಇದರೊಂದಿಗೆ 25 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಬಳಿಕ ಮೊದಲ ದಕ್ಷಿಣ ಆಫ್ರಿಕನ್‌ ತಂಡ ಎಂಬ ಸಾಧನೆಗೆ ತೆಂಬಾ ಬವೂಮ (Temba Bavuma) ಪಡೆ ಭಾಜನವಾಯಿತು. ಈ ಐತಿಹಾಸಿಕ ಟೆಸ್ಟ್‌ ಸರಣಿ ಗೆಲುವಿನಲ್ಲಿ ತೆಂಬಾ ಬವೂಮ ತಮ್ಮ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ ಟೆಸ್ಟ್‌ ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ನಾಯಕನಾಗಿ ತೆಂಬಾ ಬವೂಮ ಮೂಡಿ ಬಂದಿದ್ದಾರೆ ಹಾಗೂ ದಕ್ಷಿಣ ಆಫ್ರಿಕಾ ಪರ ನಾಯಕನಾಗಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.

ದಕ್ಷಿಣ ಆಫ್ರಿಕಾ ಟೆಸ್ಟ್‌ ತಂಡದ ನಾಯಕನಾದ ಬಳಿಕ ತೆಂಬಾ ಬವೂಮ ಇಲ್ಲಿಯವರೆಗೂ 12 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 11ರಲ್ಲಿ ಗೆಲುವು ಪಡೆದಿದ್ದರೆ, ಒಂದರಲ್ಲಿ ಡ್ರಾ ಸಾಧಿಸಿದ್ದಾರೆ. ಆದರೆ ಅವರು ಇಲ್ಲಿಯವರೆಗೂ ಟೆಸ್ಟ್‌ ಪಂದ್ಯವನ್ನು ಸೋತೇ ಇಲ್ಲ. ಇದರಲ್ಲಿ ವಿಶೇಷವಾಗಿ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದಿದೆ. ಅಷ್ಟೇ ಅಲ್ಲದೆ ಟೆಸ್ಟ್‌ ತಂಡದ ನಾಯಕನಾದ ಬಳಿಕ ಸೋಲು ಕಾಣದೆ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಮೊದಲ ನಾಯಕ ಎಂಬ ದಾಖಲೆಯನ್ನು ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್‌ ತಂಡದ ಮೈಕ್‌ ಬ್ರೇರ್ಲೆ ಅವರ ಹೆಸರಿನಲ್ಲಿತ್ತು. ಅವರು ಟೆಸ್ಟ್‌ ನಾಯಕನಾದ ಬಳಿಕ ಸೋಲು ಕಾಣದೆ ಸತತವಾಗಿ 10 ಪಂದ್ಯಗಳನ್ನು ಗೆದ್ದಿದ್ದರು.

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ವೈಟ್‌ವಾಶ್‌ ಮುಖಭಂಗ

ಭಾರತದ ವಿರುದ್ಧ ದಾಖಲೆಯ ಜಯ ಪಡೆದ ಹರಿಣ ಪಡೆ

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು 408 ರನ್‌ಗಳ ಮೂಲಕ ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಇತಿಹಾಸವನ್ನು ಸೃಷ್ಟಿಸಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ರನ್‌ಗಳ ಲೆಕ್ಕದಲ್ಲಿ ಇದು ಎರಡನೇ ದೊಡ್ಡ ಗೆಲುವಾಗಿದೆ. ಅಂದ ಹಾಗೆ ಗುವಾಹಟಿ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ 547 ರನ್‌ಗಳ ಗುರಿಯನ್ನು ನೀಡಿತ್ತು. ಅಂತಿಮ ಇನಿಂಗ್ಸ್‌ನಲ್ಲಿ ಭಾರತ ಡ್ರಾಗಾಗಿ ಕಠಿಣ ಹೋರಾಟ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಭಾರತ ತಂಡ ಸೈಮನ್‌ ಹಾರ್ಮರ್‌ ಅವರ ಸ್ಪಿನ್‌ ಮೋಡಿಗೆ ನಲುಗಿ ಕೇವಲ 140 ರನ್‌ಗಳಿಗೆ ಆಲ್‌ಔಟ್‌ ಆಯಿತು.



ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿಯೂ ಎಲ್ಲಾ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿತು. ರಿಷಭ್‌ ಪಂತ್‌ ನಾಯಕತ್ವದ ಟೀಮ್‌ ಇಂಡಿಯಾದ ಇದು ಅತ್ಯಂತ ದೊಡ್ಡ ಅಂತರದ ಸೋಲಾಯಿತು. ಭಾರತ ತಂಡವನ್ನು ಟೆಸ್ಟ್‌ ಪಂದ್ಯದಲ್ಲಿ400ಕ್ಕೂ ಅಧಿಕ ರನ್‌ಗಳ ಅಂತರದಲ್ಲಿ ಸೋಲಿಸಿದ ಮೊದಲ ತಂಡ ಎಂಬ ಖ್ಯಾತಿಗೆ ಹರಿಣ ಪಡೆ ಭಾಜನವಾಯಿತು. ಇದಕ್ಕೂ ಆಸ್ಟ್ರೇಲಿಯಾ ನಾಗ್ಪುರದಲ್ಲಿ ಭಾರತವನ್ನು 342 ರನ್‌ಗಳಿಂದ ಮಣಿಸಿತ್ತು. ಗೌತಮ್‌ ಗಂಭೀರ್‌ ಹೆಡ್‌ ಕೋಚ್‌ ಅವಧಿಯಲ್ಲಿ ಭಾರತ ತಂಡ ಎರಡನೇ ಬಾರಿ ಟೆಸ್ಟ್‌ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿದೆ. ಇದಕ್ಕೂ ಮುನ್ನ ಕಳೆದ ವರ್ಷ ನ್ಯೂಜಿಲೆಂಡ್‌ ವಿರುದ್ಧ ಭಾರತ ತವರಿನಲ್ಲಿ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಸೋಲು ಅನುಭವಿಸಿತ್ತು.