ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹರ್ಷಿತ್‌ ರಾಣಾಗೆ ಅವಕಾಶ ನೀಡಿ ಟೀಕೆಗಳಿಗೆ ಗುರಿಯಾಗಿದ್ದ ಗೌತಮ್‌ ಗಂಭೀರ್‌ಗೆ ಬಿಸಿಸಿಐ ಬೆಂಬಲ!

ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯ ಭಾರತ ತಂಡದಲ್ಲಿ ವೇಗಿ ಹರ್ಷಿತ್‌ ರಾಣಾಗೆ ಅವಕಾಶ ನೀಡಿರುವ ಕಾರಣ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಟೀಮ್‌ ಇಂಡಿಯಾ ಹೆಡ್‌ ಕೋಚ್‌ಗೆ ಬೆಂಬಲ ಸೂಚಿಸಿದ್ದಾರೆ.

ಹರ್ಷಿತ್‌ ರಾಣಾಗೆ ಚಾನ್ಸ್‌ ಕೊಟ್ಟ ಗಂಭೀರ್‌ಗೆ ಬಿಸಿಸಿಐ ಬೆಂಬಲ!

ಹರ್ಷಿತ್‌ ರಾಣಾಗೆ ಅವಕಾಶ ನೀಡಿದ ಗೌತಮ್‌ ಗಂಭೀರ್‌ಗೆ ರಾಜೀವ್‌ ಶುಕ್ಲಾ ಬೆಂಬಲ. -

Profile Ramesh Kote Oct 14, 2025 9:12 PM

ನವದೆಹಲಿ: ಭಾರತ ತಂಡದಲ್ಲಿ ವೇಗಿ ಹರ್ಷಿತ್‌ ರಾಣಾ (Harshit Rana) ಅವರಿಗೆ ಖಾಯಂ ಸ್ಥಾನವನ್ನು ನೀಡಲಾಗುತ್ತಿದೆ. ಏಕೆಂದರೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿಯೇ ಅವರು ಫಾರ್ಮ್‌ ಹೊರತುಪಡಿಸಿ ಹರ್ಷಿತ್‌ ರಾಣಾಗೆ ಭಾರತ ತಂಡದಲ್ಲಿ ಸತತವಾಗಿ ಅವಕಾಶವನ್ನು ನೀಡಲಾಗುತ್ತಿದೆ ಎಂದು ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್‌ ದೂರಿದ್ದರು. ಈ ಬಗ್ಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ (Rajeev Shukla) ಅವರು ಪ್ರತಿಕ್ರಿಯಿಸಿದ್ದಾರೆ ಹಾಗೂ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಆಸ್ಟ್ರೇಲಿಯಾ ವಿರುದ್ದದ ಏಕದಿನ ಹಾಗೂ ಟಿ20ಐ ಸರಣಿಗಳಿಗೆ ಭಾರತ ತಂಡವನ್ನು ಪ್ರಕಟಿಸಿತ್ತು. ಇದಾದ ಬಳಿಕ ಹರ್ಷಿತ್‌ ರಾಣಾಗೆ ಭಾರತ ತಂಡದಲ್ಲಿ ಸ್ಥಾನ ನೀಡಿದ ಬಳಿಕ ಹಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಗೌತಮ್‌ ಗಂಭೀರ್‌ ಅವರ ಹೆಡ್‌ ಕೋಚ್‌ ಅವಧಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದಲ್ಲಿ ಹರ್ಷಿತ್‌ ರಾಣಾ ಆಡಿದ್ದರು. ಇದರ ಫಲವಾಗಿ ಗಂಭೀರ್‌, ಹರ್ಷಿತ್‌ಗೆ ತಂಡದಲ್ಲಿ ಸ್ಥಾನವನ್ನು ನೀಡುತ್ತಿದ್ದಾರೆಂದು ಕೆ ಶ್ರೀಕಾಂತ್‌ ಆರೋಪ ಮಾಡುತ್ತಿದ್ದಾರೆ.

IND vs AUS: ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಕೂಡ ಹರ್ಷಿತ್ ಅವರನ್ನು ʻತಂಡದಲ್ಲಿ ಒಬ್ಬ ಖಾಯಂ ಸದಸ್ಯʼ ಎಂದು ಉಲ್ಲೇಖಿಸಿ, ಅವರ ಸ್ಥಾನವನ್ನು ಫಾರ್ಮ್‌ಗಿಂತ ಪಕ್ಷಪಾತದ ಮೂಲಕವೇ ಹೆಚ್ಚು ಭದ್ರಪಡಿಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಅತ್ಯಂತ ಅನುಭವಿ ವೇಗಿಗಳಲ್ಲಿ ಒಬ್ಬರು 15 ಸದಸ್ಯರ ತಂಡದಿಂದ ಹೊರಗುಳಿದ ನಂತರ ಟೀಕೆಗಳು ತೀವ್ರಗೊಂಡವು.

ಕೆ ಶ್ರೀಕಾಂತ್‌ಗೆ ಕೌಂಟರ್‌ ಕೊಟ್ಟಿದ್ದ ಗಂಭೀರ್‌

ಇದಾದ ಬಳಿಕ ಗೌತಮ್‌ ಗಂಭೀರ್‌ ಅವರು ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕೆ ಶ್ರೀಕಾಂತ್‌ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "23ನೇ ವಯಸ್ಸಿನ ವೇಗಿಯನ್ನು ಗುರಿಯನ್ನಾಗಿ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಆಟಗಾರರ ಪ್ರದರ್ಶನವನ್ನು ನೀವು ಟೀಕಿಸಿ, ಅದರಲ್ಲಿ ನಿಮಗೆ ಹಕ್ಕಿದೆ. ಆದರೆ, ನಿಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಕ್ಲಿಕ್ಸ್‌ ಹಾಗೂ ವ್ಯೂವ್ಸ್‌ಗಾಗಿ ಈ ರೀತಿ ಟೀಕಿಸುವುದು ನ್ಯಾಯವಲ್ಲ. ಭಾರತೀಯ ಕ್ರಿಕೆಟ್‌ ನನ್ನದಲ್ಲ ಅಥವಾ ಡ್ರೆಸ್ಸಿಂಗ್‌ ರೂಂನಲ್ಲಿರುವ ಆಟಗಾರರದೂ ಅಲ್ಲ; ಭಾರತ ತಂಡ ಉತ್ತಮ ಪ್ರದರ್ಶನವನ್ನು ತೋರಬೇಕೆಂದು ಬಯಸುವ ಪ್ರತಿಯೊಂದು ಅಭಿಮಾನಿಗೂ ಸೇರುತ್ತದೆ," ಎಂದು ಕೆ ಶ್ರೀಕಾಂತ್‌ಗೆ ಕೌಂಟರ್ ಕೊಟ್ಟಿದ್ದರು.

IND vs AUS: ಭಾರತ ಎದುರಿನ ಏಕದಿನ ಸರಣಿಯ ಆರಂಭಿಕ ಪಂದ್ಯದಿಂದ ಇಂಗ್ಲಿಸ್, ಜಂಪಾ ಔಟ್‌

ಗೌತಮ್‌ ಗಂಭೀರ್‌ಗೆ ರಾಜೀವ್‌ ಶುಕ್ಲಾ ಬೆಂಬಲ

ಗಂಭೀರ್ ಅವರ ನಿಲುವನ್ನೇ ಪ್ರತಿಧ್ವನಿಸುತ್ತಾ, ಆಟಗಾರರನ್ನು ಆಯ್ಕೆ ಮಾಡುವ ತಂಡದ ಟೀಮ್‌ ಮ್ಯಾನೇಜ್‌ಮೆಂಟ್ ಹಕ್ಕನ್ನು ರಾಜೀವ್ ಶುಕ್ಲಾ ಸಮರ್ಥಿಸಿಕೊಂಡರು ಮತ್ತು ಟೀಕೆಗಳು ಯುವ ಆಟಗಾರನ ನೈತಿಕ ಸ್ಥೈರ್ಯಕ್ಕೆ ಎಂದಿಗೂ ಹಾನಿ ಮಾಡಬಾರದು ಎಂದು ಒತ್ತಿ ಹೇಳಿದರು.

"ಗೌತಮ್‌ ಗಂಭೀರ್‌ ಸರಿಯಾಗಿದ್ದಾರೆ. ಆಟಗಾರರ ಬಗ್ಗೆ ಏನಾದರೂ ದೂರುಗಳಿದ್ದರೆ, ಇದನ್ನು ಜವಾಬ್ದಾರಿಯುತವಾಗಿ ಪ್ರಶ್ನೆ ಮಾಡಬೇಕಾಗುತ್ತದೆ. ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿದರೆ, ಆಟಗಾರರ ನೈತಿಕ ಸ್ಥೈರ್ಯ ಕುಸಿಯುತ್ತದೆ. ಆಟಗಾರರನ್ನು ಆಯ್ಕೆ ಮಾಡುವುದು ತಂಡದ ಕೆಲಸ ಮತ್ತು ಅವರ ಬಗ್ಗೆ ಏನನ್ನೂ ಹೇಳುವ ಮೊದಲು, ಜನರು ತಮ್ಮ ಮಾತುಗಳು ಎಷ್ಟು ಜವಾಬ್ದಾರಿಯನ್ನು ಹೊಂದಿವೆ ಎಂದು ಯೋಚಿಸಬೇಕು," ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಹೇಳಿದ್ದಾರೆ.