10ನೇ ಟೆಸ್ಟ್ ಶತಕ ಸಿಡಿಸಿ ರೋಹಿತ್ ಶರ್ಮಾ ಸೇರಿ ಹಲವು ದಾಖಲೆಗಳನ್ನು ಮುರಿದ ಶುಭಮನ್ ಗಿಲ್!
ವೆಸ್ಟ್ ಇಂಡೀಸ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಆಕರ್ಷಕ ಶತಕವನ್ನು ಸಿಡಿಸಿದ್ದಾರೆ. ತಮ್ಮ ಟೆಸ್ಟ್ ವೃತ್ತಿ ಜೀವನದ 10ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ಪ್ರಮುಖ ದಾಖಲೆಗಳನ್ನು ಮುರಿದಿದ್ದಾರೆ.

10ನೇ ಶತಕ ಬಾರಿಸಿ ರೋಹಿತ್ ಶರ್ಮಾ ದಾಖಲೆ ಮುರಿದ ಶುಭಮನ್ ಗಿಲ್. -

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ (IND vs WI) ಪ್ರಥಮ ಇನಿಂಗ್ಸ್‌ನಲ್ಲಿ ಶುಭಮನ್ ಗಿಲ್ (Shubman Gill) ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಈ ಶತಕದೊಂದಿಗೆ ಶುಭಮನ್ ಗಿಲ್ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC Final) ಟೂರ್ನಿಯಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಎರಡನೇ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಗಿಲ್, 196 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 16 ಬೌಂಡರಿಗಳೊಂದಿಗೆ 129 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 518 ರನ್‌ಗಳನ್ನು ಕಲೆ ಹಾಕಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಶುಭಮನ್ ಗಿಲ್ 39 ಪಂದ್ಯಗಳಿಂದ 42.41ರ ಸರಾಸರಿಯಲ್ಲಿ 2757 ರನ್ ಕಲೆಹಾಕಿದ್ದಾರೆ. ಇದರಲ್ಲಿ 9 ಶತಕಗಳು ಮತ್ತು 9 ಅರ್ಧಶತಕಗಳು ಒಳಗೊಂಡಿವೆ. ಇದುವರೆಗಿನ ಅವರ ಡಬ್ಲ್ಯುಟಿಸಿ ವೃತ್ತಿ ಜೀವನದಲ್ಲಿ 269 ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೆಸರಿನಲ್ಲಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅವರು 38 ಪಂದ್ಯಗಳನ್ನಾಡಿದ್ದು, 67 ಇನಿಂಗ್ಸ್‌ಗಳಿಂದ 2731 ರನ್ ಕಲೆಹಾಕಿದ್ದರು. ಇದೀಗ ಪಂತ್ ಅವರನ್ನು ಗಿಲ್ ಹಿಂದಿಕ್ಕಿದ್ದಾರೆ.
IND vs WI: ಶುಭಮನ್ ಗಿಲ್ 10ನೇ ಶತಕ, 518 ರನ್‌ಗಳಿಗೆ ಡಿಕ್ಲೆರ್ ಮಾಡಿಕೊಂಡ ಭಾರತ!
ರೋಹಿತ್ ಶರ್ಮಾ ದಾಖಲೆ ಮುರಿದ ಗಿಲ್
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಶುಭಮನ್ ಗಿಲ್ ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದ ಶತಕದ ಮೂಲಕ ಶುಭಮನ್ ಗಿಲ್ 10ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ 9 ಶತಕಗಳನ್ನು ಬಾರಿಸಿದ್ದ ರೋಹಿತ್ ಶರ್ಮಾ ಅವರನ್ನು ಗಿಲ್ ಹಿಂದಿಕ್ಕಿದ್ದಾರೆ.
ಡಬ್ಲ್ಯುಟಿಸಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು
ಶುಭಮನ್ ಗಿಲ್: 10
ರೋಹಿತ್ ಶರ್ಮಾ: 09
ಯಶಸ್ವಿ ಜೈಸ್ವಾಲ್: 07
Leading from the front! 🔝
— BCCI (@BCCI) October 11, 2025
Moments to cherish for #TeamIndia and captain Shubman Gill 📸
Updates ▶ https://t.co/GYLslRzj4G#INDvWI | @IDFCFIRSTBank | @ShubmanGill pic.twitter.com/QA8S64Pb4H
ಸಚಿನ್ ದಾಖಲೆ ಮುರಿದ ಕೊಹ್ಲಿ ದಾಖಲೆ ಸರಿಗಟ್ಟಿದ ಗಿಲ್
ಏಕೈಕ ವರ್ಷದಲ್ಲಿ ಭಾರತ ಟೆಸ್ಟ್ ತಂಡದ ನಾಯಕನಾಗಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ದಾಖಲೆ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಶುಭಮನ್ ಗಿಲ್ ಸರಿದೂಗಿಸಿದ್ದಾರೆ. 2025ರ ವರ್ಷದಲ್ಲಿ ಗಿಲ್ ನಾಯಕನಾಗಿ 5 ಶತಕಗಳನ್ನು ಬಾರಿಸಿದ್ದಾರೆ. 2017 ಮತ್ತು 2018ರ ವರ್ಷದಲ್ಲಿ ಕೊಹ್ಲಿ ತಲಾ 5 ಶತಕಗಳನ್ನು ಗಳಿಸಿದ್ದಾರೆ. 2016ರಲ್ಲಿ ನಾಯಕನಾಗಿ ಕೊಹ್ಲಿ 4 ಶತಕವನ್ನು ಸಿಡಿಸಿದ್ದರು. ಗಿಲ್ ಇದೀಗ 5 ಶತಕಗಳ ಮೂಲಕ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ತೆಂಡೂಲ್ಕರ್ 1997ರಲ್ಲಿ ನಾಯಕನಾಗಿ 4 ಶತಕವನ್ನು ಗಳಿಸಿದ್ದರು. ಒಟ್ಟಾರೆ ಈ ದಾಖಲೆ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಅಗ್ರ ಸ್ಥಾನದಲ್ಲಿದ್ದಾರೆ. 2006ರಲ್ಲಿ ಪಾಂಟಿಂಗ್ 6 ಶತಕಗಳನ್ನು ಗಳಿಸಿದ್ದರು.
IND vs WI: ರನ್‌ಔಟ್ ಆದ ಬೆನ್ನಲ್ಲೆ ಶುಭಮನ್ ಗಿಲ್ ವಿರುದ್ದ ಯಶಸ್ವಿ ಜೈಸ್ವಾಲ್ ಕಿಡಿ! ವಿಡಿಯೊ
ಬಾಬರ್ ಆಝಮ್ ದಾಖಲೆ ಮುರಿದ ಶುಭಮನ್ ಗಿಲ್
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆ ಪಟ್ಟಿಯಲ್ಲಿ ಪಾಕಿಸ್ತಾನ ತಂಡದ ಬಾಬರ್‌ಆಝಮ್ ಅವರನ್ನು ಶುಭಮನ್ ಗಿಲ್ ಹಿಂದಿಕ್ಕಿದ್ದಾರೆ. ಡಬ್ಲ್ಯುಟಿಸಿಯಲ್ಲಿ ಗಿಲ್ 5ನೇ ಶತಕ ಬಾರಿಸಿದ್ದರೆ, ಆಝಮ್ 4 ಶತಕವನ್ನು ಗಳಿಸಿದ್ದಾರೆ. 8 ಶತಕಗಳ ಮೂಲಕ ಜೋ ರೂಟ್ ಅಗ್ರ ಸ್ಥಾನದಲ್ಲಿದ್ದಾರೆ.