ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDA vs AUSA: ಕೆಎಲ್ ರಾಹುಲ್ ವೈಫಲ್ಯ, ಭಾರತ ʻಎʼ ತಂಡ 196ಕ್ಕೆ ಆಲ್‌ಔಟ್!

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ಆಡುತ್ತಿರುವ ಭಾರತ ಎ ತಂಡ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಕೆಎಲ್ ರಾಹುಲ್, ಧ್ರುವ್ ಜುರಲ್‌, ದೇವದತ್‌ ಪಡಿಕ್ಕಲ್ ಅವರ ಬ್ಯಾಟಿಂಗ್‌ ವೈಫಲ್ಯದಿಂದ ಭಾರತ ಎ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 196 ರನ್‌ಗಳಿಗೆ ಆಲ್‌ಔಟ್ ಆಗಿದೆ.

ಆಸ್ಟ್ರೇಲಿಯಾ ಎ ಎದುರಿನ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ವೈಫಲ್ಯ!

ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ವೈಫಲ್ಯ. -

Profile Ramesh Kote Sep 24, 2025 10:54 PM

ಬರಹ: ಕೆ. ಎನ್. ರಂಗು, ಚಿತ್ರದುರ್ಗ

ಲಕನೌ: ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ (INDA vs AUSA) ಭಾರತ ಎ ತಂಡ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಟೀಮ್‌ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್(KL Rahul), ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಈ ಹಿನ್ನೆಲೆಯಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ಪ್ರವಾಸಿ ಆಸ್ಟ್ರೇಲಿಯಾ ಎ (Australia A) ತಂಡ ಪ್ರಥಮ ಇನಿಂಗ್ಸ್‌ನಲ್ಲಿ 420 ರನ್‌ಗಳನ್ನು ಕಲೆ ಹಾಕಿತ್ತು. ಇದಕ್ಕೆ ಪ್ರತಿಯಾಗಿ ಪ್ರಥಮ ಇನಿಂಗ್ಸ್‌ ಆರಂಭಿಸಿದ ಭಾರತ ಎ ತಂಡ ಕೇವಲ 196 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಆತಿಥೇಯರು 226 ರನ್‌ಗಳ ಭಾರಿ ಹಿನ್ನಡೆಯನ್ನು ಅನುಭವಿಸಿದ್ದಾರೆ. ನಂತರ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಆಸೀಸ್ ಬ್ಯಾಟ್ಸ್‌ಮನ್‌ಗಳು ತಮ್ಮ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಪಂದ್ಯದ ಮೊದಲ ದಿನದಂದು ಬಿರುಸಿನ ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ಎ ತಂಡವು ಭಾರತದ ಬೌಲಿಂಗ್ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ತೋರಿತು. ನಂತರ ಬೌಲಿಂಗ್‌ನಲ್ಲೂ ಭಾರತದ ಅಗ್ರ ಮತ್ತು ಮಧ್ಯಮ ಕ್ರಮಾಂಕವನ್ನು ಉರುಳಿಸುವಲ್ಲಿ ಯಶಸ್ವಿಯಾಯಿತು. ಬಳಿಕ ಸಾಯಿ ಸುದರ್ಶನ್ ಅವರ ನಿರ್ಣಾಯಕ 75 ರನ್‌ಗಳ ಪ್ರದರ್ಶನ ಮೂಡಿ ಬಂದರೂ, ಇನ್ನೊಂದು ಬದಿಯಲ್ಲಿ ಯಾರೂ ಎಡಗೈ ಆಟಗಾರನಿಗೆ ಸಾಥ್ ನೀಡಲಿಲ್ಲ. ಇದರ ಕಾರಣ ಭಾರತ ಎ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ.

Asia Cup: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವಿರುದ್ಧ ಕ್ರಮ ಜರುಗಿಸುವಂತೆ ಸುನೀಲ್‌ ಗವಾಸ್ಕರ್‌ ಆಗ್ರಹ!

ಕೆಎಲ್‌ ರಾಹುಲ್‌ ವೈಫಲ್ಯ

ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಕನ್ನಡಿಗ ಕೆಎಲ್ ರಾಹುಲ್ ಕೇವಲ 24 ಎಸೆತಗಳಲ್ಲಿ 11 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ವೆಸ್ಟ್‌ ಇಂಡೀಸ್‌ ಸರಣಿಗೂ ಮುನ್ನ ಬಿಸಿಸಿಐ ಆಯ್ಕೆದಾರರಿಗೆ ಕನ್ನಡಿಗ ನಿರಾಶೆ ಮೂಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್ ಬಹುಬೇಗನೆ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ 1 ರನ್ ಗಳಿಸಿ ಆಸ್ಟ್ರೇಲಿಯಾ ಎ ತಂಡದ ಮಾರಕ ಬೌಲಿಂಗ್ ದಾಳಿಯ  ಸುಳಿಗೆ ಸಿಲುಕಿ ಪೆವಿಲಿಯನ್ ಕಡೆ ಸಾಗಿದರು.

ಇನ್ನು ಅಕ್ಟೋಬರ್ 2 ರಂದು ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸ ಪಂದ್ಯವೆನ್ನಲಾಗಿತ್ತು. ವೆಸ್ಟ್ ಇಂಡೀಸ್ ಸರಣಿಯಲ್ಲಿ ರಾಹುಲ್ ನಿರ್ಣಾಯಕ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ. ಯಾಕೆಂದರೆ, ರಿಷಭ್ ಪಂತ್ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಕ್ಕೆ ತುತ್ತಾಗಿ ತಂಡದಿಂದ ದೂರ ಉಳಿದಿದ್ದಾರೆ. ಹಾಗಾಗಿ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ ಕಠಿಣ ಸವಾಲು ಎದುರಿಸಬೇಕಿದೆ. ಆದರೆ ರಾಹುಲ್ ಅವರ ಈ ಪ್ರದರ್ಶನ ಮುಂದಿನ ವಿಂಡಿಸ್ ವಿರುದ್ಧದ ಸರಣಿಗೆ ಆತ್ಮವಿಶ್ವಾಸ ಕುಗ್ಗಿಸುವಂತಿದೆ.

ಭಾರತ ಎ ತಂಡಕ್ಕೆ ದೊಡ್ಡ ಹಿನ್ನಡೆ

ಪ್ರಸಿಧ್‌ ಕೃಷ್ಣ ಅವರಿಗೆ ಹೆಲ್ಮೆಟ್ ಬಡಿದು ಆಘಾತಕ್ಕೊಳಗಾಗಿದ್ದು ತಂಡಕ್ಕೆ ತುಂಬಲಾರದ ನಷ್ಟ ಎನ್ನಬಹುದು. ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಪೂರ್ಣ ಫಿಟ್ನೆಸ್‌ಗೆ ಮರಳಲು ಶ್ರಮಿಸುತ್ತಿದ್ದ ವೇಗಿ ಗಾಯಗೊಂಡು ತಂಡದಿಂದ ಹೊರಗೂಳಿಯಬೇಕಾಯಿತು. ಅವರ ಅನುಪಸ್ಥಿತಿಯು ಭಾರತ ಎ ತಂಡದ ವೇಗದ ವಿಭಾಗವನ್ನು ಹಿನ್ನಡೆಯನ್ನು ತಂದುಕೊಟ್ಟಿದೆ.

Asia Cup 2025: 2007ರ ಘಟನೆ ನೆನೆದ ಪಾಕಿಸ್ತಾನವನ್ನು ಟೀಕಿಸಿದ ಇರ್ಫಾನ್‌ ಪಠಾಣ್!

ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ 'ಎ' ತಂಡದ ಬ್ಯಾಟ್ಸ್‌ಮನ್‌ಗಳು ಸಿರಾಜ್ ಮತ್ತು ಪ್ರಸಿಧ್‌ ಕೃಷ್ಣ ಅವರ ಸವಾಲನ್ನು ಮೆಟ್ಟಿ ನಿಂತಿದ್ದರು. ಅವರು ದುಬಾರಿಯಾದರು. ಈ ಕಾರಣ ಮೊದಲ ಇನಿಂಗ್ಸ್‌ನಲ್ಲಿ ಆಸೀಸ್‌ ಎ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು. ಸಿರಾಜ್ 13 ಓವರ್‌ಗಳಲ್ಲಿ 73 ರನ್‌ಗಳನ್ನು ನೀಡಿದರೆ, ಪ್ರಸಿಧ್‌ ಕೃಷ್ಣ 14 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ಗೆ 63 ರನ್‌ಗಳನ್ನು ಬಿಟ್ಟುಕೊಟ್ಟರು. ಮಾನವ್ ಸುತಾರ್ 77 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದು ಭಾರತದ ಪರ ಯಶಸ್ವಿ ಬೌಲರ್‌ ಎನಿಸಿಕೊಂಡರು.

ಆದರೆ ಆಸೀಸ್ ತಂಡದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಮೂಲಕ ಉತ್ತಮ ಜೊತೆಯಾಟ ಮೂಡಿಬಂದಿತ್ತು. ಜ್ಯಾಕ್ ಎಡ್ವರ್ಡ್ಸ್ 78 ಎಸೆತಗಳಲ್ಲಿ ಆಕ್ರಮಣಕಾರಿ 88 ರನ್ ಮತ್ತು ನಾಯಕ ನೇಥನ್ ಮೆಕ್‌ಸ್ವೀನಿ ಅವರ 74 ರನ್‌ಗಳ ಇನಿಂಗ್ಸ್‌ ಆಡಿದರು. ನಂತರ ಕೆಳ ಕ್ರಮಾಂಕವು ಅಮೂಲ್ಯವಾದ ರನ್‌ಗಳನ್ನು ಸೇರಿಸಿದ್ದರು.