ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಿಳಾ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಕಿವೀಸ್‌ ವಿರುದ್ಧ ಭಾರತ ಎ ತಂಡಕ್ಕೆ ಜಯ!

2025ರ ಮಹಿಳಾ ಒಡಿಐ ವಿಶ್ವಕಪ್‌ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ಎ ಮಹಿಳಾ ತಂಡ 4 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 50 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 273 ರನ್‌ಗಳನ್ನು ಕಲೆ ಹಾಕಿತು. ಬಳಿಕ ಭಾರತ ಎ ತಂಡಕ್ಕೆ 40 ಓವರ್‌ಗಳಿಗೆ 224 ರನ್‌ ಗುರಿಯನ್ನು ನೀಡಲಾಯಿತು. ಭಾರತ 6 ವಿಕೆಟ್‌ ನಷ್ಟಕ್ಕೆ ಗೆಲುವಿನ ದಡ ಸೇರಿತು.

ನ್ಯೂಜಿಲೆಂಡ್‌ ವಿರುದ್ಧ ಅಭ್ಯಾಸ ಪಂದ್ಯ ಗೆದ್ದ ಭಾರತ ವನಿತೆಯರು!

ನ್ಯೂಜಿಲೆಂಡ್‌ ಎದುರು ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಶಫಾಲಿ ವರ್ಮಾ. -

Profile Ramesh Kote Sep 25, 2025 9:02 PM

ಬೆಂಗಳೂರು: ಶಫಾಲಿ ವರ್ಮಾ (Shafali Verma) ಅವರ ಸ್ಪೋಟಕ ಅರ್ಧಶತಕದ ಬಲದಿಂದ ಭಾರತ ಎ ಮಹಿಳಾ (India A Women) ತಂಡ, ಮಹಿಳಾ ವಿಶ್ವಕಪ್‌ (Womens ODI World Cup 2025) ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ದ 4 ವಿಕೆಟ್‌ಗಳ ಗೆಲುವು ಪಡೆಯಿತು. ಇಲ್ಲಿನ ಬಿಸಿಸಿಐನ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಬಿ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್‌ (New Zealand Women) ವನಿತೆಯರು ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 273 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಮಳೆ ಅಡ್ಡಿ ಉಂಟು ಮಾಡಿದ್ದರಿಂದ ಭಾರತ ಎ ತಂಡಕ್ಕೆ 40 ಓವರ್‌ಗಳಿಗೆ 224 ರನ್‌ಗಳ ಗುರಿಯನ್ನು ನೀಡಲಾಗಿತ್ತು. ಡಿಎಲ್‌ಎಸ್‌ ನಿಯಮದ ಪ್ರಕಾರ ಭಾರತ ಎ ತಂಡ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿ ಗೆದ್ದು ಬೀಗಿತು.

ಭಾರತ ತಂಡದ ಚೇಸಿಂಗ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಶಫಾಲಿ ವರ್ಮಾ. ಅವರು ಭಯಮುಕ್ತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಆಡಿದ ಕೇವಲ 49 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ 70 ರನ್‌ಗಳನ್ನು ಬಾರಿಸಿದರು. ಆ ಮೂಲಕ ಭಾರತ ಎ ಮಹಿಳಾ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಶಫಾಲಿ ವರ್ಮಾಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ್ದ ಮಿನ್ನು ಮಣಿ ಅಜೇಯ 39 ರನ್‌ ಗಳಿಸಿದರೆ, ಮಡಿವಾಳ ಮಮತಾ ಅಜೇಯ 56 ರನ್‌ಗಳನ್ನು ಬಾರಿಸಿದರು. ಭಾರತ ಮಹಿಳಾ ತಂಡ, ದಿನೇಶ್‌ ವೃಂದಾ, ಧಾರಾ ಗುಜ್ಜಾರ್‌ ಹಾಗೂ ತೇಜಲ್‌ ಹಸನ್ಬಿಸ್‌ ಅವರು ಬಹುಬೇಗ ಔಟ್‌ ಆಗಿದ್ದರು. ಆ ಮೂಲಕ ಭಾರತ ಮಹಿಳಾ ತಂಡ 121 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಅಪ್ರತಿಮ ಆಟವನ್ನು ಆಡಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು.

IND vs SL: ಶ್ರೀಲಂಕಾ ವಿರುದ್ದ ಸೂಪರ್‌-4ರ ಪಂದ್ಯಕ್ಕೆ ಭಾರತ ಸಜ್ಜು, ಪಿಚ್‌ ರಿಪೋರ್ಟ್‌, ಮುಖಮುಖಿ ದಾಖಲೆ!

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್‌ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಸೂಝಿ ಬೇಟ್ಸ್‌ ಹಾಗೂ ಜಾರ್ಜಿಯಾ ಪ್ಲಿಮರ್‌ ಅವರು ಬಹುಬೇಗ ಔಟ್‌ ಆಗಿದ್ದರು. ನಾಯಕಿ ಸೋಫಿಯಾ ಡಿವೈನ್‌ (34) ಹಾಗೂ ಮ್ಯಾಡಿ ಗ್ರೀನ್‌ (30) ಅವರು ಅಲ್ಪ ಪ್ರತಿರೋಧ ತೋರಿದರೂ ಭಾರತದ ಬೌಲರ್‌ಗಳನ್ನು ನಿಯಂತ್ರಿಸುವಲ್ಲಿ ವಿಫಲರಾದರು. ಭಾರತದ ಎ ಪರ ಸಯಾಲಿ ಸಾತ್ಘರೆ ಅವರು 45 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಕಿವೀಸ್‌ ಆಟಗಾರ್ತಿ ಇಸಾಬೆಲ್ಲಾ ಗಾಝೆ (101 ರನ್‌) ಅವರ ಶತಕದ ಬಲದಿಂದ ಪ್ರವಾಸಿ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 273 ರನ್‌ಗಳನ್ನು ಕಲೆ ಹಾಕಿತು. ಭಾರತದ ಪರ ಟಿಟಾಸ್‌ ಸಧು, ಸೈಮಾ ಠಾಕೂರ್‌ ಹಾಗೂ ಪ್ರಿಯಾ ಮಿಶ್ರಾ ಪರಿಣಾಮಕಾರಿಯಾಗಿ ಬೌಲ್‌ ಮಾಡಿದ್ದರು.

ಸ್ಕೋರ್‌ ವಿವರ

ನ್ಯೂಜಿಲೆಂಡ್‌: 50 ಓವರ್‌ಗಳಲ್ಲಿ 273/9 (ಇಸಾಬೆಲ್ಲಾ ಗಾಝೆ 101*, ಜೆಸ್‌ ಕೆರ್‌ 36; ಸಯಾಲಿ ಸಾತ್ಘಾರೆ 3/45, ಪ್ರಿಯಾ ಮಿಶ್ರಾ 1/24

ಭಾರತ ಎ ಮಹಿಳಾ ತಂಡ: 39.3 ಓವರ್‌ಗಳಿಗೆ 226/6 (ಶಫಾಲಿ ವರ್ಮಾ 70, ಮಡಿವಾಳ ಮಮತಾ 56*; ಜೆಸ್‌ ಕೆರ್‌ 2/15, ಅಮೇಲಿಯಾ ಕೆರ್‌ 2/26

ಫಲಿತಾಂಶ: ನ್ಯೂಜಿಲೆಂಡ್‌ ಎದುರು ಭಾರತ ಎ ಮಹಿಳಾ ತಂಡಕ್ಕೆ 4 ವಿಕೆಟ್‌ ಜಯ