ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2026ರ ಟಿ20 ವಿಶ್ವಕಪ್‌ ಫೈನಲ್‌ಗೇರಬಲ್ಲ 2 ತಂಡಗಳನ್ನು ಆರಿಸಿದ ಸೂರ್ಯಕುಮಾರ್‌ ಯಾದವ್‌!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೆ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು, ಮುಂಬರುವ ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವ ಎರಡು ತಂಡಗಳನ್ನು ಆರಿಸಿದ್ದಾರೆ. ಇದೇ ವೇಳೆ ತಮ್ಮ ಪಕ್ಕದಲ್ಲಿ ಕುಳಿತಿದ್ದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರ ಕಾಲೆಳೆದಿದ್ದಾರೆ.

ಟಿ20 ವಿಶ್ವಕಪ್‌ ಫೈನಲ್‌ಗೇರಬಲ್ಲ ಎರಡು ತಂಡಗಳನ್ನು ಆರಿಸಿದ ಸೂರ್ಯ.

ನವದೆಹಲಿ: ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೆ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರು, ಈ ಚುಟುಕು ವಿಶ್ವಕಪ್‌ ಟೂರ್ನಿಯ ಫೈನಲ್‌ಗೆ ಯಾವ ಎರಡು ತಂಡಗಳು ತಲುಪಲಿವೆ ಎಂದು ಭವಿಷ್ಯ ನುಡಿದಿದ್ದರೆ. ಫೆಬ್ರವರಿ 7 ರೆಂದು ಆರಂಭವಾಗುವ ಟಿ20 ವಿಶ್ವಕಪ್‌ ಟೂರ್ನಿಯು, ಮಾರ್ಚ್‌ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಮೂಲಕ ಅಂತ್ಯವಾಗಲಿದೆ. ಈ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವನ್ನು ಎದುರಿಸಲು ಆಸ್ಟ್ರೇಲಿಯಾ (Australia) ತಯಾರಿ ನಡೆಸಬೇಕೆಂದು ಸೂರ್ಯಕುಮಾರ್‌ ತಿಳಿಸಿದ್ದಾರೆ. ಕಳೆದ ವರ್ಷ ರೋಹಿತ್‌ ಶರ್ಮಾ ನಾಯಕತ್ವದ ಭಾರತ, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ಎರಡನೇ ಟಿ20 ವಿಶ್ವಕಪ್‌ ಗೆದ್ದಿತ್ತು.‌

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯ ಕೂಡ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ವೇಳೆಯೂ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ನಲ್ಲಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟ್ರಾವಿಸ್‌ ಹೆಡ್‌ ಶತಕ ಬಾರಿಸಿ ಆಸ್ಟ್ರೇಲಿಯಾ ತಂಡಕ್ಕೆ 7 ವಿಕೆಟ್‌ ಗೆಲುವು ತಂದುಕೊಟ್ಟಿದ್ದರು. ಈ ಪಂದ್ಯವನ್ನು ಸೂರ್ಯಕುಮಾರ್‌ ಯಾದವ್ ನೆನಪಿಸಿಕೊಂಡಿದ್ದಾರೆ.

IND vs SA: ʻನೆಪ ಹೇಳಬೇಡಿ, ಉತ್ತರ ಕೊಡಿʼ-ಗೌತಮ್‌ ಗಂಭೀರ್‌ ವಿರುದ್ಧ ಕ್ರಿಸ್‌ ಶ್ರೀಕಾಂತ್‌ ಕಿಡಿ!

ಕ್ರಿಕೆಟ್‌ ನಿರೂಪಕ ಜತಿನ್‌ ಸಪ್ರು ಅವರು, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಯಾವ ತಂಡವನ್ನು ಭಾರತ ಎದುರಿಸಬೇಕೆಂದು ಕೇಳಿದರು. ಈ ವೇಳೆ ಸೂರ್ಯಕುಮಾರ್‌ ಯಾದವ್‌, ಆಸ್ಟ್ರೇಲಿಯಾ ತಂಡ ಎಂದು ಹೇಳಿದರು. "ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್‌. ಖಚಿತವಾಗಿಯೂ ಆಸ್ಟ್ರೇಲಿಯಾ," ಎಂದು ಸೂರ್ಯಕುಮಾರ್‌ ಯಾದವ್‌ ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ತಿಳಿಸಿದರು.

ಟಿ20 ವಿಶ್ವಕಪ್‌ ಟೂರ್ನಿಗೆ ರೋಹಿತ್‌ ಶರ್ಮಾ ರಾಯಭಾರಿ

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ರೋಹಿತ್‌ ಶರ್ಮಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಐಸಿಸಿ ಅಧ್ಯಕ್ಷ ಜಯ ಶಾ ಅವರು ಇದೇ ಕಾರ್ಯಕ್ರಮದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದರು. ರೋಹಿತ್‌ ಶರ್ಮಾ 2007ರ ಐಸಿಸಿ ಟಿ20 ವಿಶ್ವಕಪ್‌ ಗೆದ್ದಿದ್ದ ಭಾರತ ತಂಡದಲ್ಲಿ ಆಡಿದ್ದರು. ಕಳೆದ ವರ್ಷ ತಮ್ಮದೇ ನಾಯಕತ್ವದಲ್ಲಿ ರೋಹಿತ್‌ ಶರ್ಮಾ ಟಿ20 ವಿಶ್ವಕಪ್‌ ಗೆದ್ದಿದ್ದರು.

T20 World Cup: 2026ರ ಐಸಿಸಿ ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ, ಫೆ 15ಕ್ಕೆ ಭಾರತ vs ಪಾಕಿಸ್ತಾನ ಪಂದ್ಯ!

ಆಸ್ಟ್ರೇಲಿಯಾವನ್ನು ಸೋಲಿಸಬೇಕು

"ಖಂಡಿತ, ನಾನು ಭಾರತ ಫೈನಲ್‌ಗೆ ಬರಬೇಕೆಂದು ಬಯಸುತ್ತೇನೆ. ನಾನು ನಿಜವಾಗಿಯೂ ಬೇರೆ ತಂಡದ ಮೇಲೆ ಬೆರಳು ಇಟ್ಟು ಇದೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ. ಹಿಂದೆ ನಡೆದದ್ದು ಈಗಾಗಲೇ ನಡೆದಿದೆ. ಸೂರ್ಯ ಅದನ್ನು ತುಂಬಾ ಉತ್ಸಾಹ ಮತ್ತು ಭಾರವಾದ ಹೃದಯದಿಂದ ಹೇಳಿದ್ದಾನೆಂದು ನನಗೆ ತಿಳಿದಿದೆ - ಆಸ್ಟ್ರೇಲಿಯಾ ಅಲ್ಲಿಗೆ ಬಂದು ಅದೇ ಕ್ರೀಡಾಂಗಣದಲ್ಲಿ ಅವರನ್ನು ಸೋಲಿಸಿತು," ಎಂದು ರೋಹಿತ್ ಹೇಳಿದರು.

"ಆದರೆ ಭಾರತ ಯಾವುದೇ ತಂಡದ ವಿರುದ್ಧ ಫೈನಲ್ ಆಡುವುದನ್ನು ಮತ್ತು ಭಾರತವು ಮೇಲುಗೈ ಸಾಧಿಸುವುದನ್ನು ನಾನು ನೋಡಲು ಇಷ್ಟಪಡುತ್ತೇನೆ ಎಂದು ನಾನು ಭಾವಿಸುತ್ತೇನೆ. ಇತರರು ಏನು ಬಯಸುತ್ತಾರೆಂದು ನನಗೆ ಖಚಿತವಿಲ್ಲ, ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ನಿಜವಾಗಿಯೂ ಎದುರಾಳಿಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ನಾನು ಭಾರತ ಅಲ್ಲಿ ಇರಬೇಕೆಂದು ಬಯಸುತ್ತೇನೆ ಮತ್ತು ನಂತರ ಏನಾಗುತ್ತದೆ ಎಂದು ನೋಡೋಣ," ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.